
ಬೆಂಗಳೂರು ನವೆಂಬರ್ ೩೦: ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸ ಖಂಡನಾರ್ಹ ಮಾತ್ರವಲ್ಲ ಶಿಕ್ಷಾರ್ಹ ಕೂಡಾ. ಇದು ಭಾರದಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಉತ್ತಮ ನಿದರ್ಶನ. ಈ ರೀತಿಯ ಘಟನೆಗಳು ಪುನರಾವರ್ತಿಸುತ್ತಿದ್ದರೂ ಭಾರತ ಸರಕಾರ(ಕಾಂಗ್ರೆಸ್) ಪದೇ ಪದೇ ಹಳೇ ಹೇಳಿಕೆಗಳನ್ನು ಬಾಯಿಪಾಠ ಮಾಡಿದಂತೆ ಕೊಡುತ್ತಿರುವುದು ಭಾರತೀಯರ ಪಾಲಿನ ದುರ್ದೈವ. ಒಬ್ಬ ಅಯೋಗ್ಯ ಪ್ರಧಾನಿ (ದುರ್ಬಲ) ಹಾಗೂ ನಾಲಾಯಕ್ ಗೃಹಸಚಿವ ಈ ಹುದ್ದೆಯಲ್ಲಿ ಮುಂದುವರಿಯಲು ತಮ್ಮ ಅರ್ಹತೆಗಳನ್ನು ಕಳೆದುಕೊಂಡಿದ್ದಾರೆ ಎನ್ನಬಹುದು.
ಕೆಲವು ತಿಂಗಳುಗಳ ಹಿಂದೆಯೇ ಈ ಘಟನೆ ನಡೆಯುವ ಬಗ್ಗೆ ನಾರಾಯಣ್ರವರು ಎಚ್ಚರಿಸಿದ್ದರೂ, ಕೇಂದ್ರವಾಗಲೀ, ರಾಜ್ಯ ಸರಕಾರವಾಗಲೀ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸಂಶಯಕ್ಕೆಡೆಮಾಡುತ್ತಿದೆ. ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿತೋ ಎನ್ನುವ ಸಂಶಯ ಬರುವುದು ಸಹಜ. ಏಕೆಂದರೆ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂ ಸಂಘಟನೆಗಳ ಕೆಲವರನ್ನು ಭಯೋತ್ಪಾದಕರೆಂದು ಬಿಂಬಿಸಿ ಅವರನ್ನು ಚಿತ್ರಹಿಂಸೆ ಕೊಟ್ಟು ತಪ್ಪನ್ನು ಒಪ್ಪಿಕೊಳ್ಳುವಂತೆ ಎ.ಟಿ.ಎಸ್. (ಭಯೋತ್ಪಾದನಾ ನಿಗ್ರಹ ದಳ) ಮೇಲೆ ಒತ್ತಡ ಹಾಕಿದ ಕೇಂದ್ರ ಸರಕಾರ, ಇವತ್ತು ಷಂಡನಂತೆ ಹೇಳಿಕೆಗಳನ್ನು ಕೊಡುತ್ತಿರುವುದು ಭಾರತ ತನ್ನ ಜಾತ್ಯಾತೀತತೆಯ ಉಚ್ಛ್ರಾಯ ಸ್ಥಿತಿಯಲ್ಲಿದೆ ಎನ್ನಲಡ್ಡಿಯಿಲ್ಲ. ಏಕೆಂದರೆ ಕಾಂಗ್ರೆಸ್ನ ರಾಜಕೀಯಕ್ಕೆ ನಾವು ಇಂದು ಹತ್ತಾರು ದಕ್ಷ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ.
ಅಮೆರಿಕಾ, ಇಸ್ರೇಲ್, ರಶ್ಯಾ ಅಥವಾ ಬ್ರಿಟನ್ನಲ್ಲಿ ಈ ಥರದ ಘಟನೆಗಳೇನಾದರೂ ನಡೆದಿದ್ದರೆ ಇವತ್ತು ಪಾಕಿಸ್ತಾನದಂತಹ ಭಯೋತ್ಪಾದಕ ರಾಷ್ಟ್ರ ನಮ್ಮ ಭೂಪಟದಲ್ಲಿ ಕಾಣಸಿಗುತ್ತಿರಲಿಲ್ಲ. ಭಾರತದಲ್ಲಿ ಮಾತ್ರ ಏಕೆ ಹೀಗೆ?. ನಾವು ದೇಶದ ರಕ್ಷಣೆಗಾಗಿ, ಇಂತಹ ಭಯೋತ್ಪಾದಕ ಘಟನೆಗಳನ್ನು ನಿಭಾಯಿಸುವುದಕ್ಕಾಗಿ ಪ್ರತೀ ಸಲ ಹಣ ವ್ಯಯಿಸುವ ಬದಲು, ಭಯೋತ್ಪಾದನೆಯ ಮೂಲವಾದ ಪಾಕಿಸ್ತಾನದ ಮೇಲೆ ದಾಳಿ ಮಾಡಿ, ಅಲ್ಲಿನ ಎಲ್ಲ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿ ಒಂದೇ ಸಲ ಹಣ ವ್ಯಯಿಸುವುದು ಸೂಕ್ತವೆನಿಸುತ್ತದೆ. ಈ ಥರದ ಭಯೋತ್ಪಾದನೆಗಳನ್ನು ತಡೆಯಲು, ನಿಲ್ಲಿಸಲು ಭಾರತ ಇನ್ನೆಷ್ಟು ಬಲಿ ನೀಡಬೇಕಾಗುವುದೋ?.
ಕೇಂದ್ರ ಸರಕಾರ ಇವತ್ತು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಮತಾಂಧರ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವುದು ಈ ಎಲ್ಲಾ ಘಟನೆಗಳಿಗೆ ಕಾರಣ. ಮುಂಬೈ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ತಳ್ಳಿಹಾಕುವಂತಿಲ್ಲ. ಏಕೆಂದರೆ ದಾವೂದ್ ಇಬ್ರಾಹಿಂ ಎಂಬ ಭಯೋತ್ಪಾದಕ ಕರಾಚಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಇದ್ದರೂ, ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳು ಇರುವ ಮಾಹಿತಿ ಇದ್ದರೂ, ಭಾರತದ ಪೋಲಿಸ್, ಸಾಫ್ಟ್ವೇರ್ ಕಂಪೆನಿ, ಪೋಲಿಸ್ ಇಲಾಖೆ, ಮಿಲಿಟರಿಯಲ್ಲಿ ಭಯೋತ್ಪಾದಕರು ಕೆಲಸ ಮಾಡುತ್ತಿದ್ದರೂ, ಅವರು ಮುಸಲ್ಮಾನರೆಂಬ ಒಂದೇ ಕಾರಣಕ್ಕೆ ಕ್ರಮ ತೆಗೆದುಕೊಳ್ಳದಿರುವುದು ಈ ಕಾಂಗ್ರೆಸ್ ಸರಕಾರದ ದೇಶದ್ರೋಹಿತನವನ್ನು ಸೂಚಿಸುತ್ತದೆ. ನಾನು ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಮಾತ್ರ ದೂರುತ್ತಿಲ್ಲ, ಈ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಕಮ್ಯೂನಿಷ್ಟರು, ಬುದ್ದಿಜೀವಿಗಳು ಹಾಗೂ ಜಾತ್ಯಾತೀತ ಸೋಗಿನ ರಾಜಕಾರಣಿಗಳನ್ನು ಕೂಡಾ ಇದೇ ಸಾಲಿನಲ್ಲಿ ಸೇರಿಸಬಹುದು.
ಈಗ ನಾವು ಕಠಿನ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ಇಂತಹ ಅನೇಕ ಘಟನೆಗಳು ನಡೆಯುವುದರಲ್ಲಿ ಸಂಶಯವಿಲ್ಲ. ಈಗ ಭಯೋತ್ಪಾದಕ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶಗಳ ಮೇಲೆ ಧಾಳಿ ಮಾಡಿ, ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮಟ್ಟ ಹಾಕಿ, ಅಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಕೆಲಸ ಆಗಬೇಕು. ಈ ಎರಡೂ ರಾಷ್ಟ್ರಗಳ ಪ್ರಧಾನಿಗಳಿಗೆ, ಅಧ್ಯಕ್ಷರಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಬೇಕು. “ನೀವು ಮಾಡಿ…..ಇಲ್ಲಾ ನಾವು ಮಾಡುತ್ತೇವೆ”. ಇದು ನಮ್ಮ ಅತೀ ಬಲಹೀನ ಪ್ರಧಾನಿಗೆ ಸಾಧ್ಯವೇ?.
ಸಾಕು……ಇವತ್ತಿಗೆ…..ಇಂದೇ ನಿರ್ಧಾರ ತೆಗೆದುಕೊಳ್ಳಿ…ಇಂದಿಲ್ಲದಿದ್ದರೆ ಮುಂದಿಲ್ಲ……..ಇದು ಭಾರತ ಸರಕಾರಕ್ಕೆ ಎಚ್ಚರಿಕೆ, ಸಕಲ ಭಾರತೀಯರಿಗೆ ಎಚ್ಚರಿಕೆ….ಮುಂದಿನ ಮತದಾನದಲ್ಲಿ ಭಯೋತ್ಪಾದಕರನ್ನು ಚುನಾಯಿಸಬೇಡಿ. ದೇಶದ್ರೋಹಿ ರಾಜಕಾರಣಿಗಳನ್ನು ಚುನಾಯಿಸದಿರಿ. ಮತ್ತೆ ನೀವು ಈ ಮಿಥ್ಯ ಜಾತ್ಯಾತೀತರನ್ನು ಚುನಾಯಿಸಿದರೆ, ಇವತ್ತು ಮುಂಬೈನಲ್ಲಿ ನಡೆದದ್ದು ನಾಳೆ ದೇಶದ ಎಲ್ಲ ನಗರಗಳಲ್ಲಿ ನಡೆಯುವುದರಲ್ಲಿ ಯಾವ ಸಂಶಯವಿಲ್ಲ.
ಧಿಕ್ಕಾರವಿರಲಿ ಈ ರಾಜಕಾರಣಿಗಳಿಗೆ…..ದೇಶದ್ರೋಹಿಗಳಿಗೆ…..ಭಯೋತ್ಪಾದಕರಿಗೆ…….