Friday, October 31, 2008

ಕನ್ನಡಿಗರಿಗೆ ಪುಳಕ...ದೇಶದ್ರೋಹಿಗಳಿಗೆ ಮತ್ಸರ

ಬೆಂಗಳೂರು ಅಕ್ಟೋಬರ್ ೩೧: ಇಂದು ನಿಜಕ್ಕೂ ಕನ್ನಡಿಗರಿಗೆ ಅತ್ಯಂತ ಖುಷಿಯ ದಿನ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ ದಿನ. ಏಕೆಂದರೆ ಕನ್ನಡಿಗರ ಬಹಳ ದಿನಗಳ ಕನಸು ನನಸಾಗಿದೆ. ಆದರೆ ಅದಕ್ಕಾಗಿ ಇಷ್ಟೊಂದು ಹೋರಾಟ ಮಾಡಬೇಕಾಗಿ ಬಂದದ್ದು ನೋವಿನ ಸಂಗತಿ.
ಕನ್ನಡ ಏನೆ ಕುಣಿದಾಡುವುದೆನ್ನೆದೆ....ಕನ್ನಡ ಎನೆ ಕಿವಿ ನಿಮಿರುವುದು.....ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ----ಈ ತರಹದ ಕವಿ ವಾಣಿಗಳು ಇಂದು ನಿಜವಾಗಿಯೂ ಹೃದಯದ ಒಳಗೆ ಹೊಕ್ಕು, ಒಂದು ತರಹದ ಅವ್ಯಕ್ತ ಆನಂದವನ್ನು ಉಂಟುಮಾಡುತ್ತಿವೆ. ನಿಜವಾಗಿಯೂ ಪ್ರತೀ ಕನ್ನಡಿಗನೂ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಬೇಕಾಗಿದೆ.
ಆದರೆ ಅದೇ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಕೊಡುವುದರ ವಿರುದ್ಧ ಕೆಲ ದೇಶದ್ರೋಹಿಗಳು ಮದರಾಸು ಹೈಕೋರ್ಟಿನಲ್ಲಿ ದಾವೆ ಹೂಡಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ನಮ್ಮ ದೇಶದಿಂದ ಹೊರಗಟ್ಟಬೇಕು. ಈ ದೇಶದ್ರೋಹಿಗಳ ಹಿನ್ನೆಲೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಅವರಿಗೂ ಪಾಕಿಸ್ತಾನೀ ಭಯೋತ್ಪಾದಕರಿಗೂ ಸಂಬಂಧ ಇರುವ ಬಗ್ಗೆ ತನಿಖೆ ಮಾಡಬೇಕು.

ಇದೆಲ್ಲ ಇರಲಿ .....ಈ ಬಾರಿಯ ಕನ್ನಡ ರಾಜ್ಯೊತ್ಸವಕ್ಕೆ ಹೊಸ ಕಳೆ ಬಂದಿದೆ. ಅದನ್ನು ಹೆಮ್ಮೆಯಿಂದ ಆಚರಿಸೋಣ

Wednesday, October 29, 2008

ರಾಜ್ಯೋತ್ಸವ ಪ್ರಶಸ್ತಿ ಬಿಕರಿ..ಕನ್ನಡಿಗರ ಮಾನ ಉಳಿಸಿ

ಬೆಂಗಳೂರು ಅಕ್ಟೋಬರ್ ೨೯: ನವೆಂಬರ್ ಹತ್ತಿರ ಬರುತ್ತಿದ್ದಂತೆ ನಮಗೆ ನೆನಪಾಗುವುದು ಕರ್ನಾಟಕ ರಾಜ್ಯೋತ್ಸವ. ಕರ್ನಾಟಕದಲ್ಲಿ ಪ್ರತೀ ವರ್ಷ ಕೆಲವು (ನ)ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಸನ್ಮಾನಿಸುವುದು ವಾಡಿಕೆ. ಆದರೆ ಇದರಲ್ಲಿ ಕೂಡಾ ಲಾಬಿ, ಮೀಸಲಿನ ಹೊಗೆಯಾಡುತ್ತಿರುವುದು ಕನ್ನಡಾಂಬೆಗೆ ಆಗುತ್ತಿರುವ ಅವಮಾನ.
ನಿಜವಾಗಿಯೂ ಪ್ರಶಸ್ತಿ ಪಡೆಯುವ ಅರ್ಹತೆಯಿರುವವರಿಗೆ ಪ್ರಶಸ್ತಿ ಸಿಗದೆ ಕೇವಲ ರಾಜಕಾರಣಿಗಳ ಬೆಂಬಲ ಇರುವ ಹಾಗೂ ಹಣಬಲ ಇರುವ ಹಾಗೂ ಮೀಸಲು ವರ್ಗದ ಜರಿಗೆ ಮಾತ್ರ ಈ ಪ್ರಶಸ್ತಿ ಸಿಗುತ್ತಿರುವುದು ಕನ್ನಡಾಂಬೆಯ ಮುಖಕ್ಕೆ ರಾಡಿ ಎರಚಿದಂತೆ ಆಗಿದೆ. ಇಂದು ಪ್ರಶಸ್ತಿಗಳು ರಾಜಕೀಯ ಪ್ರತಿಷ್ಠೆ, ಧನಬಲ ಹಾಗೂ ಮೀಸಲಾತಿಯ ಗೊಂದಲದ ಗೂಡಾಗಿದೆ. ಈ ಪ್ರಶಸ್ತಿ ಸಿಗಲು ಒಬ್ಬ ವ್ಯಕ್ತಿ ಸಾವಿರಾರು ರೂಪಾಯಿ ಖರ್ಚು ಮಾಡಿ ಅರ್ಜಿ ಹಾಕುವಂತಹ ಕೀಳು ಮಟ್ಟಕ್ಕೆ ತಲುಪಿದೆ. ಭ್ರಷ್ಟರೇ ತುಂಬಿರುವ ರಾಜಕೀಯದ ವ್ಯಕ್ತಿಗಳಿಗೆ, ಹಿಂದೂಗಳ ವಿರುದ್ಧ ಕತ್ತಿ ಮೆಸೆಯುವ ದೇಶದ್ರೋಹಿಗಳಿಗೆ, ನಕ್ಸಲರ ಪರ ವಾದಿಗಳಿಗೆ, ಕನ್ನಡ ವಿರೋಧಿಗಳಿಗೆ,ಕರ್ನಾಟಕದ ಸಮಗ್ರತೆಗೆ ಭಂಗ ತರುವವರಿಗೆ ಇಂದು ಪ್ರಶಸ್ತಿಗಳು ಬಿಕರಿಯಾಗುತ್ತಿವೆ ಎಂದರೆ ಆ ಪ್ರಶಸ್ತಿಯ ಮೌಲ್ಯ ಎಂತಹ ಕೀಳು ಮಟ್ಟದಲ್ಲಿದೆ ಎಂದು ಎಲ್ಲರಿಗೂ ಮನದಟ್ಟಾಗಿದೆ.
ಈ ಪ್ರಶಸ್ತಿಯ ಆಯ್ಕೆಯೇ ಗೊಂದಲದ ಗೂಡಾಗಿದೆ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದವ ಶ್ರೇಷ್ಠ ಬರಹಗಾರನನ್ನು ಚುನಾಯಿಸುತ್ತಾನೆ. ಒಬ್ಬ ಪರರಾಜ್ಯದವ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ ಗಣ್ಯನನ್ನು ಈ ಪ್ರಶಸ್ತಿಗೆ ಆರಿಸುತ್ತಾನೆ. ಮಾನ್ಯ ಮುಖ್ಯಮಂತ್ರಿಗಳಲ್ಲಿ ಎಲ್ಲ ಕನ್ನಡಿಗರ ಒಕ್ಕೊರಲ ಮನವಿ ಎಂದರೆ ದಯವಿಟ್ಟು ಈ ಪ್ರಶಸ್ತಿ ಬಿಕರಿಯನ್ನು ನಿಲ್ಲಿಸಿ. ಈ ಪ್ರಶಸ್ತಿಗೆ ಮೂರುಕಾಸಿನ ಬೆಲೆ ಇಲ್ಲದಾಗಿದೆ. ಇದೇ ಹಣವನ್ನು ಬಡವರ ಉದ್ಧಾರಕ್ಕಾಗಿ ಖರ್ಚು ಮಾಡಿ, ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಖರ್ಚು ಮಾಡಿ. ಈ ತರಹ ಪೋಲು ಮಾತ್ರ ಮಾಡಬೇಡಿ.ನಮ್ಮ ರಾಜ್ಯದಲ್ಲೇ ಇರುವ,ಅನೇಕ ವರ್ಶಗಳಿಂದ ನಮ್ಮ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ಸಾಹಿತ್ಯ, ಜಾನಪದ, ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಇಂದು ಎಲೆ ಮರೆಯ ಕಾಯಿಯಾಗಿಯೇ ಇದ್ದಾರೆ. ನೆನ್ನೆ ಮೊನ್ನೆ ಈ ಕ್ಷೇತ್ರಕ್ಕೆ ಬಂದವರು ಲಾಬಿ ಮಾಡಿ ಪ್ರಶಸ್ತಿಯನ್ನು ಗಿಟ್ಟಿಸುತ್ತಾನೆ. ಈ ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಾನವನ್ನು ಬದಲಾಯಿಸಬೇಕಾಗಿದೆ. ಇದಕ್ಕೆ ಅರ್ಜಿ ಹಾಕುವ ಸಂಪ್ರದಾಯವನ್ನು ಕೈಬಿಡಬೇಕು.
ಕರ್ನಾಟಕ್ದಲ್ಲಿ ಬಿ.ಜೆ.ಪಿ ಸರಕಾರ ಈಗ ಇದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಿಂದಿನ ಜನವಿರೋಧಿ ಸರಕಾರಗಳ ದಾರಿಯೇ ತುಳಿದರೆ ಅವರಿಗೂ ಹೊಸ ಸರಕಾರಕ್ಕೂ ಏನು ವ್ಯತ್ಯಾಸ?. ಈ ಪ್ರಶಸ್ತಿ ಬಿಕರಿ ನಿಲ್ಲಿಸಿ.....ನಿಜವಾದ ಅರ್ಹರಿಗೆ ಪ್ರಶಸ್ತಿ ಕೊಡಿ....ಈವರೆಗೆ ಪ್ರಶಸ್ತಿ ಪಡೆದ ಎಲ್ಲರ ಬಗ್ಗೆ ಕೂಲಂಕುಶ ತನಿಖೆ ನಡೆಸಿ.....ಲಾಬಿ ಮಾಡಿರುವುದು ಸಾಬೀತಾದಲ್ಲಿ ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಿ...ಪ್ರಶಸ್ತಿಯ ಮಾನ ಉಳಿಸಿ..ಕರ್ನಾಟಕದ ಮಾನ ಉಳಿಸಿ...ಕನ್ನಡಿಗರ ಮಾನ ಉಳಿಸಿ....

Sunday, October 26, 2008

ಪುಕ್ಕಟೆ ಪ್ರಚಾರಪ್ರಿಯರು

ಬೆಂಗಳೂರು ಅಕ್ಟೋಬರ್ ೨೬ : ನೀವು ಇತ್ತೀಚಿನ ಕೆಲವು ಪತ್ರಿಕೆಗಳನ್ನು ತಿರುವಿ ಹಾಕಿದಾಗ ನಿಮ್ಮ ಕಣ್ಣಿಗೆ "ಪ್ರಶಸ್ತಿ ಪ್ರದಾನ ಸಮಾರಂಭ" ಎಂಬ ಅಂಕಣ ಕಣ್ಣಿಗೆ ಬಿದ್ದಿರಬಹುದು. ನೀವು ಸೂಕ್ಷ್ಮವಾಗಿ ಪ್ರತೀ ದಿನ ಪತ್ರಿಕೆ ಓದುವವರಾಗಿದ್ದರೆ ಪ್ರಶಸ್ತಿ ಪಡೆದವರೇ ಮತ್ತೆ ಮತ್ತೆ ಪ್ರಶಸ್ತಿ ಪಡೆಯುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು. ನಿಮಗೆ ಗೊತ್ತೇ?...ಈ ಪ್ರಶಸ್ತಿ ಪ್ರದಾನ ಸಮಾರಂಭಗಳು ನಿಜವಾಗಿ ಪ್ರಶಸ್ತಿ ಪಡೆಯುವವರೇ ಕೆಲ ಖಾಸಗಿ ಸಂಸ್ಥೆಗಳಿಗೆ ಹಣ ಕೊಟ್ಟು ಆಯೋಜಿತವಾದವೆಂದು?.
ಕೆಲವರಿಗೆ ಪ್ರಶಸ್ತಿಯ ಹಸಿವು ಎಷ್ಟಿರುತ್ತದೆಯೆಂದರೆ ಪುಟಗೋಸಿ ಬೆಲೆಯ (ಅಂದರೆ ಒಣಗಿದ ಹಣ್ಣುಗಳು, ಹಳೇ ಹಾರ) ಪ್ರಶಸ್ತಿ ಪಡೆಯಲು ಹತ್ತುಸಾವಿರದವರೆಗೆ ತಮ್ಮ ಕೈಯಿಂದಲೇ ಖರ್ಚು ಮಾಡಿ ಎಲ್ಲರ ಸಮ್ಮುಖದಲ್ಲಿ ಬೀಗುವುದು ಇಲ್ಲಿ ಸಾಮಾನ್ಯವಾಗಿದೆ. ಅದೂ ಕೆಲವು ಖಾಸಗಿ ಸಂಸ್ಥೆಗಳು ಈ ಸಮಾರಂಭಕ್ಕೆ ಚಿತ್ರನಟ ಹಾಗೂ ನಟಿಯರು, ಬುದ್ದಿ (ಇಲ್ಲದ) ಜೀವಿಗಳನ್ನು ಕರೆಸಿ ಅವರಿಗೂ ಒಣಹಾರ ಹಾಕಿ ಒಂಥರಾ ಪುಕ್ಕಟೆ ಪ್ರಚಾರ ಪಡೆಯುದನ್ನು ಆಗಾಗ ಮಾಡುತ್ತಿರುತ್ತವೆ.
ಪ್ರಶಸ್ತಿ ಪ್ರದಾನ ವಿಧಾನ
ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಪ್ರಶಸ್ತಿ ಪಡೆಯಬಹುದು.ಸಮಾಜದಲ್ಲಿ ಉತ್ತಮ ಹೆಸರು ಹೊಂದಿರಲೇಬೇಕೆಂಬ ನಿಯಮವಿಲ್ಲ. ಒಂದು ಪ್ರಶಸ್ತಿಗೆ ಕನಿಷ್ಠ ೨೫ ಸಾವಿರ ರೂಪಾಯಿ ನೀಡಬೇಕು. ಅದರಲ್ಲಿ ಕೇವಲ ೫ ಸಾವಿರ ರೂಪಾಯಿ ನಿಮ್ಮ ಪ್ರಶಸ್ತಿಗೆ ಬಳಕೆಯಾಗುತ್ತದೆ. ಮಿಕ್ಕ ಹಣ ಸಂಸ್ಥೆಗೆ ಸೇರುತ್ತದೆ.ಹೆಚ್ಚು ಲಾಭ ಬೇಕೆಂದರೆ ಹೆಚ್ಚು ಹೆಚ್ಚು ಜನರಿಗೆ ಪ್ರಶಸ್ತಿ ನೀಡುವುದು ಅನಿವಾರ್ಯ.

ಈ ಪ್ರಶಸ್ತಿ ಪ್ರದಾನ ಸಮಾರಂಭಗಳು ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ನಿಜವಾದ ಸಾಧನೆಗೈದವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಸಂಪ್ರದಾಯ ಮರೆಯಾಗಿ, ಏನೂ ಸಾಧನೆಮಾಡದಿದ್ದವರೂ ತಮ್ಮ ಹಣಬಲದಿಂದ ಎಂತಹಾ ದೊಡ್ಡ ಪ್ರಶಸ್ತಿಯನ್ನು ಪಡೆಯುವುದೂ ಈಗಿನ ಕಾಲದಲ್ಲಿ ಸಾಧ್ಯ. ಈ ಖಾಸಗಿ ಆಯೋಜಕರು ಕೆಲವೊಮ್ಮೆ ನೇರವಾಗಿ ಸಾಧಕರಿಗೆ ಕರೆಮಾಡಿ ನಿಮಗೆ ಪ್ರಶಸ್ತಿ ಬಂದಿದೆ, ನೀವು ಇಂತಿಷ್ಟು ಹಣ ನೀಡಬೇಕೆಂದು ನೇರವಾಗಿ ಕೇಳುತ್ತಾರೆ. ನೀವು ಒಪ್ಪಿದರೆ ನಿಮಗೆ ಪ್ರಶಸ್ತಿ ಗ್ಯಾರಂಟಿ. ಈಗ ಸಿಗುವ ಕೇಂದ್ರ ಸರಕಾರದ "ಭಾರತ ರತ್ನ", ಪದ್ಮಶ್ರೀ ಮೊದಲಾದ ಪ್ರಶಸ್ತಿಗಳನ್ನೂ ಸಂಶಯದಿಂದ ನೋಡುವಂತಾಗಿದೆ.
ಫ್ಲೆಕ್ಸ್ ಸಂಸ್ಕೃತಿ
ಇನ್ನೂ ಕೆಲವರು ಸಾಧನೆ ಮಾಡದಿದ್ದರೂ ಸಮಾಜದಲ್ಲಿ ಹೆಸರು ಪಡೆಯಬೇಕೆಂಬ ಹುಚ್ಚು ಆಸೆಯಿಂದ ಫ್ಲೆಕ್ಸ್ ಬ್ಯಾನರ್‌ಗಳನ್ನು ಗಲ್ಲಿ ಗಲ್ಲಿಯಲ್ಲಿ ಹಾಕಿ ಅದರಲ್ಲಿ ತಮ್ಮ ಫೋಟೋ ಬರುವಂತೆ ನೋಡಿಕೊಳ್ಳುತ್ತಾರೆ. ಇದು ಸಾಮನ್ಯವಾಗಿ "ಹುಟ್ಟು ಹಬ್ಬದ ಶುಭಾಶಯ", "ಅಣ್ಣಮ್ಮ ದೇವಿಯ ಉತ್ಸವ", ಕನ್ನಡ ರಾಜ್ಯೋತ್ಸವ, "ಗಣೇಶೋತ್ಸವ" ದ ಬ್ಯಾನರ್‌ಗಳಲ್ಲಿ ಸಾಮಾನ್ಯವಾಗಿದೆ. ಹುಟ್ಟಾ ಲಫಂಗರು, ಬೀದಿ ರೌಡಿಗಳು, ಸಮಾಜ ಘಾತುಕರು ಈ ಫ್ಲೆಕ್ಸ್ ಬ್ಯಾನರ್‌ಗಳಲ್ಲಿ ರಾರಾಜಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಈ ತರಹ ಅತೀ ಕಡಿಮೆ ಖರ್ಚಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುವುದು ಕೆಲವು ಸಮಾಜಘಾತುಕ ಶಕ್ತಿಗಳ ಒಂದು ತಂತ್ರವಾಗಿದೆ.

ರಾಜ್ಯದ ರಾಜಧಾನಿಯಲ್ಲಿ ಈ ಥರ ಹಣ ಮಾಡುವ ಸಂಸ್ಥೆಗಳು ತುಂಬಾ ಹುಟ್ಟಿಕೊಂಡಿವೆ. ಆದರೆ ಇದರ ನಿಯಂತ್ರಣಕ್ಕೆ ಸರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ, ಏಕೆಂದರೆ ಈ ಸಂಸ್ಥೆಗಳ ವಿರುದ್ದ ಒಂದೇ ಒಂದು ದೂರು ದಾಖಲಾಗದಿರುವುದು ಸರಕಾರಕ್ಕೆ ಮತ್ತೊಂದು ಹಿನ್ನಡೆ. ಆದ್ದರಿಂದ ನೀವು ಮುಂದೆ ವೃತ್ತಪತ್ರಿಕೆ ಓದುವಾಗ ಈ ಥರಹದ ಕೆಲವು ಸುದ್ದಿಗಳನ್ನು ಓದೀರಾ, ಓದಿ ನಕ್ಕೀರ ಜೋಕೆ....ನಾಳೆ ನಿಮಗೂ ಕರೆ ಬರಬಹುದು..."ಸಾರ್ ನಿಮ್ಮ ಸಾಧನೆಯನ್ನು ಪರಿಗಣಿಸಿ, ನಿಮಗೆ ಪ್ರಶಸ್ತಿ ಕೊಡಬೇಕೆಂದಿದ್ದೇವೆ...." ಎಂದು. ಜಾಗ್ರತೆ....

Wednesday, October 22, 2008

ಲಾಲೂ ಎಂಬ ಮತಿಗೇಡಿ ಹಾಗೂ ಧೀರ ರಾಜ್ ಠಾಕ್ರೆ

ಬೆಂಗಳೂರು ಅಕ್ಟೋಬರ್ ೨೨ :ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಬಂಧನದ ಸುದ್ದಿ ಎಲ್ಲರಿಗೂ ತಿಳಿದ ವಿಷಯ. ಆದರೆ ಇದೊಂದು ಖಂಡಿತವಾಗಿ ಖಂಡಿಸಬೇಕಾದ ವಿಷಯ. ರಾಜ್ ಠಾಕ್ರೆ ಮಾಡಿದ್ದರಲ್ಲಿ ಖಂಡಿತಾ ತಪ್ಪಿಲ್ಲ.
ಈ ಲಾಲೂಪ್ರಸಾದ್ ಎಂಬ ಅಧಮ ರೈಲ್ವೇ ಮಂತ್ರಿಯಾದ ಮೇಲೆ ಆ ಇಲಾಖೆಯ ನೇಮಕಾತಿಯಲ್ಲಿ ಸದಾ ಮೂಗು ತೂರಿಸುತ್ತಿದ್ದಾನೆ. ರೈಲ್ವೇ ಇಲಾಖೆಯೇನು ಇವನಪ್ಪನ ಸ್ವತ್ತೇ?. ಪ್ರತೀ ರಾಜ್ಯದಲ್ಲಿಯೂ ನೇಮಕಾತಿ ನಡೆಯುವ ಬಗ್ಗೆ ಯಾವುದೇ ಸೂಚನೆ ನೀಡದೆ, ಕೇವಲ ಬಿಹಾರದ ದಿನಪತ್ರಿಕೆಗಳಲ್ಲಿ ಮಾತ್ರ ನೇಮಕಾತಿಯ ಬಗ್ಗೆ ಜಾಹೀರಾತು ಪ್ರಕಟಿಸಲಾಗುತ್ತದೆ. ಅಂದರೆ ಈ ನೇಮಕಾತಿ ಆಗಲೇ "ಡೀಲ್" ಆಗಿರುತ್ತದೆ. ಬಿಹಾರದಿಂದ ನೇಮಕಾತಿ ಸ್ಥಳಕ್ಕೆ ಆ ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಬೇರೆ. ಈ ಥರದ ಒಂದು ಪ್ರಾದೇಶಿಕ ಅಸಮಾನತೆ ಕೇವಲ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯ. ಭಿಕ್ಷೆ ಬೇಡುವ ವೃತ್ತಿಗೂ ನಾಲಾಯಕ್ಕಾದ ಒಬ್ಬ ವ್ಯಕ್ತಿ ರೈಲ್ವೇ ಮಂತ್ರಿಯಾದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ. ಕರ್ನಾಟಕದಲ್ಲಿ ಆಗಿದ್ದೂ ಇದೇ. ಕನ್ನಡಿಗರನ್ನು ಸಂಪೂರ್ಣ ನಿರ್ಲಕ್ಷಿಸಿ, ಕೇವಲ ಬಿಹಾರಿಗಳಿಗೆ ನೇಮಕಾತಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆದೇಶ ನೀಡಿದ ಈ ಭಿಕಾರಿ ಮಂತ್ರಿ. ಆದರೆ ಕನ್ನಡಿಗರು ಎಚ್ಚೆತ್ತು ಪ್ರತಿಭಟಿಸಿದಾಗ, ಹುಚ್ಚರ ತರಹ ಸದನದಲ್ಲಿ ಬಡಬಡಾಯಿಸಿದ ಈ ಲಾಲೂ. ಕನ್ನಡಿಗರು ಶಾಂತ ರೀತಿಯಲ್ಲಿ ಪ್ರತಿಭಟಿಸಿದರೂ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲಾಯಿತು.
ಮಹಾರಾಷ್ಟ್ರದಲ್ಲಿ ನಡೆದಿದ್ದೂ ಅದೇ. ರೈಲ್ವೇ ನೇಮಕಾತಿಯಲ್ಲಿ ಮರಾಠಿಗರನ್ನು ಕಡೆಗಣಿಸಿ, ಬಿಹಾರಿಗಳಿಗೆ ಮಣೆ ಹಾಕಿದ ಇಲಾಖೆ, ಮತ್ತೆ ಅದೇ ತಪ್ಪು ಮಾಡಿತು. ರಾಜ್ ಠಾಕ್ರೆ ತನ್ನ ಕಾರ್ಯಕರ್ತರ ಜೊತೆ ಇದನ್ನು ಪ್ರತಿಭಟಿಸಿದ್ದರಿಂದ ಬಿಹಾರಿಗಳು ಪಲಾಯನ ಗೈದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ, ರಾಜ್ಯಸರಕಾರದ ಮೇಲೆ ಒತ್ತಡ ತಂದು ರಾಜ್ ಠಾಕ್ರೆಯನ್ನು ಬಂಧಿಸಲಾಯಿತು. ಆದರೆ ಇದು ಖಂಡಿತಾ ಸ್ವಾತಂತ್ರ್ಯದ ಹರಣವಷ್ಟೇ.ಪ್ರಾದೇಶಿಕವಾಗಿ ಅಸಮಾನತೆ ಉಂಟಾದಾಗ ಪ್ರತಿಭಟಿಸುವ ಹಕ್ಕನ್ನೂ ಕಸಿದುಕೊಂಡ ಕೇಂದ್ರ ಸರಕಾರ ಏನನ್ನು ಸಾಧಿಸಲು ಹೊರಟಿದೆ?. ಇದು ಕೇವಲ ಸೋನಿಯಾಳ ಷಡ್ಯಂತ್ರವೇ ಸರಿ. ಮತಾಂತರದ ವಿರುದ್ದ ಹಿಂದೂಗಳು ಒಗ್ಗಟ್ಟಾಗಿರುವುದು, ಕೇಂದ್ರ ಸರಕಾರಕ್ಕೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಹಿಂದೂಗಳ ಒಗ್ಗಟ್ಟನ್ನು ಮುರಿದು, ಮತ್ತೆ ಮತಾಂತರವನ್ನು ಹಿಂದೂಗಳ ಮೇಲೆ ಹೇರಿ, ಸೋನಿಯಾ ಯಾವ ಒಂದು ಉದ್ಧೇಶದಿಂದ ಈ ದೇಶಕ್ಕೆ ಬಂದಳೋ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅವಳ ಜೊತೆ ಕೈಜೋಡಿಸಿದೆ. ಇದಕ್ಕಾಗಿಯೇ ಸೋನಿಯಾ ತನ್ನ ಆಪ್ತರನ್ನಾಗಿ ಆಸ್ಕರ್, ಆಂಟೋನಿ, ರಾಜಶೇಖರ ರೆಡ್ಡಿ ಮೊದಲಾದ ಕ್ರಿಶ್ಚಿಯನ್ನರನ್ನು ಆಯ್ಕೆ ಮಾಡಿದ್ದು. ಅಲ್ಲದೆ ಹಿಂದೂ ವಿರೋಧಿಗಳಾದ ಲಾಲೂ, ಅರ್ಜುನ್ ಸಿಂಗ್, ಅಂಬಿಕಾ ಸೋನಿ, ಶಿವರಾಜ್ ಪಾಟಿಲ್ ಮೊದಲಾದವರಿಗೆ ಆಯಕಟ್ಟಿನ ಸ್ಥಾನ ಕೊಟ್ಟಿದ್ದು.
ಖಂಡಿತಾ ರಾಜ್ ಠಾಕ್ರೆಗೆ ಅಭಿನಂದನೆ ಹೇಳಲೇಬೇಕು. ಇಂತಹ ಒಬ್ಬ ನಾಯಕ ಪ್ರತೀ ರಾಜ್ಯದಲ್ಲೂ ಪ್ರಾದೇಶಿಕ ಅಸಮಾನತೆಯ ವಿರುದ್ದ ಹೋರಾಡಬೇಕು. ಆಗಲೇ ಈ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲು ಸಾಧ್ಯ.
ಈ ಬಿಹಾರಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕರ್ನಾಟಕದಲ್ಲಿ ನಡೆವ ದರೋಡೆ, ಹತ್ಯೆ, ಮಾನಭಂಗ, ಕಳ್ಳತನ, ಸುಲಿಗೆ ಹೆಚ್ಚಾಗಲು ಇವರ ಕೊಡುಗೆ ಕಮ್ಮಿಯೇನಿಲ್ಲ. ಒಬ್ಬರ ಬದುಕನ್ನು ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದು ಯಾವ ನ್ಯಾಯ?. ಇಂತಹ ಒಂದು ನಾಮರ್ದ ಕೆಲಸ ಕೇವಲ ಈ ಲಾಲೂ ಎಂಬ ಅನಕ್ಷರಸ್ಥ, ಲಜ್ಜಾಹೀನ, ಮತಿಗೇಡಿ, ಅಸಂಸ್ಕೃತ ವ್ಯಕ್ತಿ ಮಾತ್ರ ಮಾಡಲು ಸಾಧ್ಯ. ಮೊದಲು ಇಂತಹವರನ್ನು ನಡುಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಬೇಕು. ರಾಜ್ಯ-ರಾಜ್ಯಗಳ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಕೆಡಿಸುತ್ತಿರುವ ಈ ದುರುಳರನ್ನು ಮೊದಲು ಗಡೀಪಾರು ಮಾಡಬೇಕು.
ಎಲ್ಲರೂ ರಾಜ್ ಠಾಕ್ರೆಗೆ ಬೆಂಬಲ ನೀಡಿ....ಈ ಬೆಂಬಲ ಕೇವಲ ರಾಜ್ ಠಾಕ್ರೆಗಲ್ಲ...ಪ್ರಾದೇಶಿಕ ಅಸಮಾನತೆಯ ವಿರುದ್ಧ....ದೇಶದ್ರೋಹಿ ರಾಜಕಾರಣಿಗಳ ವಿರುದ್ಧ...

Friday, October 10, 2008

ಭಜರಂಗ ದಳ ಮಾತ್ರ ನಿಷೇಧ ಏಕೆ? ಸಿಮಿ ಏಕಿಲ್ಲ?

ಬೆಂಗಳೂರು ಅಕ್ಟೋಬರ್ ೧೦: ಕೇಂದ್ರ ಸರಕಾರದ ಕೆಲವು ಅಲ್ಪಸಂಖ್ಯಾತರ ಏಜೆಂಟ್‌ಗಳು ಹಿಂದೂ ಸಂಘಟನೆಗಳಾದ , ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತುಗಳನ್ನು ನಿಷೇಧ ಮಾಡುವ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರುತ್ತಿರುವುದು ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಕಳವಳಕಾರಿಯಾಗಿದೆ.
ಇದು ನಿಜಕ್ಕೂ ಹಿಂದೂಗಳ ಏಕತೆಯನ್ನು, ಸಮಗ್ರತೆಯನ್ನು ಪ್ರಶ್ನಿಸುವ ಒಂದು ಸವಾಲಾಗಿದೆ. ಕೇವಲ ಜುಜುಬಿ, ಪುಡಿ ಮತಗಳ ಆಸೆಗೆ ಸಮಗ್ರ ಹಿಂದೂಗಳ ಏಕತೆಯನ್ನೇ ಒಡೆಯುವ ಈ ಹುನ್ನಾರವನ್ನು ಎಲ್ಲರೂ ಖಂಡಿಸಲೇಬೇಕು. ಲಾಲೂಪ್ರಸಾದ್ ಯಾದವ್,ದೇವೇಗೌಡ, ಅರ್ಜುನ್ ಸಿಂಗ್, ಅಮರ್ ಸಿಂಗ್‌ರಂತಹ ಕೆಲ ಕುಟಿಲ ನೀತಿಯ ರಾಜಕಾರಣಿಗಳು ಇಂದು ದೇಶದ ಸಮಗ್ರತೆಗೆ ಸವಾಲಾಗಿದ್ದಾರೆ.
ದೇಶದೆಲ್ಲೆಡೆ ಬಾಂಬ್ ಸ್ಪೋಟವಾಗಿ ನೂರಾರು ಜನ ಪ್ರಾಣ ತೆತ್ತಾಗ, ಅದರ ಬಗ್ಗೆ ಕವಡೆ ಕಿಮ್ಮತ್ತು ಪ್ರದರ್ಶಿಸದ ಈ ರಾಜಕಾರಣಿಗಳು ಚರ್ಚ್ ಮೇಲೆ ಧಾಳಿಯಾದಾಗ ಬಾಯಿ ಬಡಿದುಕೊಳ್ಳಲು ಶುರುಮಾಡುತ್ತವೆ. ಆದರೆ ದೇವಾಲಯಗಳ ಮೇಲೆ ಧಾಳಿಯಾದಾಗ ಈ ತಿಪ್ಪೆ ರಾಜಕಾರಣಿಗಳು ಬಾಯಿಗೆ ಬೀಗ ಹಾಕಿಕೊಂಡಿರುತ್ತವೆ. ಬಾಂಬ್ ಸ್ಪೋಟಕ್ಕೆ ಕಾರಣವಾದ ಸಿಮಿ, ಲಷ್ಕರ್ ಎ ತೋಯ್ಬಾ ಮುಂತಾದ ಮುಸ್ಲಿಮ್ ಸಂಘಟನೆಗಳೇ ಕಾರಣವೆಂದು ಎಲ್ಲರಿಗೂ ತಿಳಿದಿದ್ದರೂ ಕೂಡಾ ಅವರ ವಿರುದ್ದ ದನಿಯೆತ್ತುವ ತಾಕತ್ತು ಈ ರಾಜಕಾರಣಿಗಳಿಗಿಲ್ಲ. ಎಕೆಂದರೆ ಅದನ್ನು ಮಾಡಿದ್ದು ಅಲ್ಪ ಸಂಖ್ಯಾತರು. ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕ್ರಿಶ್ಚಿಯನ್ ಭಯೋತ್ಪಾದಕರು ಹತ್ಯೆ ಮಾಡಿರುವುದು ಸಾಬೀತಾದರೂ ಕೂಡಾ ಅಲ್ಲಿ ನಡೆಯುವ ಗಲಭೆಗೆ ಕೇವಲ ಭಜರಂಗದಳ ಹಾಗೂ ವಿ.ಎಚ್.ಪಿ.ಯನ್ನು ಹೊಣೆಮಾಡುವುದು ಎಷ್ಟು ಸಮಂಜಸ?. ನಮ್ಮ ದೇಶದ ಎಲ್ಲ್ಲ ರಾಜ್ಯಗಳನ್ನು ಒಂದೊಂದಾಗಿ ಕ್ರಿಶ್ಚಿಯನ್ ರಾಜ್ಯವನ್ನಾಗಿ ಮಾಡಲು ಪಣತೊಟ್ಟಿರುವ ಈ ಕ್ರಿಶ್ಚಿಯನ್ ಮತಾಂಧರು ಈಗ ಇದುವರೆಗೂ ಶಾಂತವಾಗಿದ್ದ ದಕ್ಷಿಣ ಭಾರತದತ್ತ ಕಣ್ಣು ಹಾಯಿಸಿರುವುದು ಕಳವಳಕಾರಿ. ಇದಕ್ಕೆ ಕೇಂದ್ರದ ಕೆಲವು ರಾಜಕಾರಣಿಗಳ ಕುಮ್ಮಕ್ಕು ಇರುವುದು ಎಲ್ಲರಿಗೂ ತಿಳಿದ ವಿಷಯ.
ಹಿಂದೂಗಳೇ ಒಗ್ಗಟ್ಟಾಗಿ.....ನಿಮ್ಮ ಧರ್ಮವನ್ನು ನೀವೇ ರಕ್ಷಿಸಬೇಕು.....

Sunday, October 05, 2008

ಮಂಗಳೂರಿನ ಲಜ್ಜೆಗೇಡಿ ರಾಜಕಾರಣಿಗಳು ಮತ್ತು ಭಯೋತ್ಪಾದಕರು

ಬೆಂಗಳೂರು ಅಕ್ಟೋಬರ್ ೦೫ : ಇತ್ತೀಚೆಗೆ ಮಂಗಳೂರಿನಲ್ಲಿ ಭಯೋತ್ಪಾದಕರು ಸಿಕ್ಕಿಬಿದ್ದಿರುವುದು ಕರ್ನಾಟಕಕ್ಕೆ ಒಂದು ಕಪ್ಪುಚುಕ್ಕೆಯಾಗಿದೆ. ಇದರ ಹಿಂದೆ ಒಂದು ಭಯಂಕರ ಷಡ್ಯಂತ್ರವೇ ಇರುವ ಸಂಭವವಿದೆ.
ಈ ವಿಷಯದಲ್ಲಿ ಸರಕಾರವು ಖಡಕ್ ನಿರ್ಧಾರ ತೆಗೆದುಕೊಂಡು, ಇದರ ಹಿಂದೆ ಇರುವ ರಾಜಕೀಯ ಶಕ್ತಿಗಳನ್ನು ಪತ್ತೆ ಹಚ್ಚಿ, ಅವರನ್ನು ಗಲ್ಲಿಗೇರಿಸಲು ಪಣತೊಡಬೇಕಾಗಿದೆ. ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಈ ಭಯೋತ್ಪಾದಕರು ಮಂಗಳೂರಿನಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ತಾವು ಅಲ್ಪಸಂಖ್ಯಾತರ ಪ್ರತಿನಿಧಿಗಳು, ಅವರ ರಕ್ಷಕರು ಎಂದು ಬಹಿರಂಗವಾಗಿ ಫೋಸು ಕೊಡುವ ರಾಜಕಾರಣಿಗಳ ಮೇಲೆ ರಾಜ್ಯದ ಗುಪ್ತದಳ ಖಂಡಿತಾ ಒಂದು ಕಣ್ಣಿಡಬೇಕಾಗಿದೆ. ಏಕೆಂದರೆ ಭಯೋತ್ಪಾದಕರಿಗಿಂತ ಈ ದೇಶದ್ರೋಹಿಗಳೇ ನಮ್ಮ ದೇಶದ ಅಖಂಡತೆಗೆ ಸವಾಲಾಗಿ ಪರಿಣಮಿಸಿದ್ದಾರೆ.
ಇನ್ನೊಂದು ಘಟನೆ ಕಣ್ಣಮುಂದೆ ನಡೆದರೂ ಪೋಲೀಸರು ಏನೂ ಗೊತ್ತಿಲ್ಲದವರಂತೆ ಇದ್ದದ್ದು ಅಪಾಯದ ಮುನ್ಸೂಚನೆಯಾಗಿದೆ. ಏಕೆಂದರೆ ಪೋಲಿಸರು ಭಯೋತ್ಪಾದಕರನ್ನು ಬಂಧಿಸಿ ಕರೆತಂದಾಗ ಅವರಿಗೆ ಪ್ರತಿರೋಧವಾಗಿ ರಸ್ತೆಯಲ್ಲಿ ಟೈರ್ ಸುಟ್ಟು, ಅವರನ್ನು ಅಡ್ಡಹಾಕಿ ಬಂಧನಕ್ಕೆ ತಡೆಯೊಡ್ಡಿದ ಕೆಲವು ಮತಾಂಧ ದೇಶದ್ರೋಹಿಗಳನ್ನು ಬಂಧಿಸದೆ ಬಿಟ್ಟಿದ್ದು ಘೋರ ಅಪರಾಧವಾಗಿದೆ. ಇದೇ ಕಿಡಿಗೇಡಿಗಳನ್ನು ಹಾಗೆಯೇ ಬಿಟ್ಟಿದ್ದು ಈ ಭಯೋತ್ಪಾದಕತೆಯನ್ನು ಅವರು ಮತ್ತೆ ಮುಂದುವರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರು ಮುಸ್ಲಿಮರು ಎಂಬ ಒಂದು ಕಾರಣಕ್ಕಾಗಿ ಅವರನ್ನು ಬಂಧಿಸದೆ ಬಿಟ್ಟದ್ದು ಈ ಪೋಲಿಸರ ಷಂಡತನವನ್ನು ತೋರಿಸುತ್ತದೆ. ಇದು ರಾಜಕೀಯ ಪಕ್ಷಗಳ ಒತ್ತಡದಿಂದ ನಡೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಮಂಗಳೂರಿನಲ್ಲಿ ಕಾಂಗ್ರೆಸ್‌ನ ರಾಜಕಾರಣಿಗಳು ಹಿಂದಿನಿಂದಲೂ ಮುಸ್ಲಿಮರಿಗೆ ಹಾಗೂ ಕ್ರಿಸ್ಚಿಯನ್ನರಿಗೆ ಮೊದಲ ಮಣೆ ಹಾಕಿ ಅವರನ್ನು ತಮ್ಮ ದೇವರೆಂದು ತಿಳಿದು ಅವರ ಕಾಲು ನೆಕ್ಕುವ ಒಂದು ಹೀನ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಕೇವಲ ಬಿ.ಜೆ.ಪಿ.ಯ ಪ್ರಬಲತೆಯನ್ನು ಸಹಿಸದೆ ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುವಷ್ಟರ ಮಟ್ಟಿಗೆ ಈ ಕಾಂಗ್ರೆಸ್‍ನ ಕೆಲವು ರಾಜಕಾರಣಿಗಳು ಮುಂದುವರಿದಿದ್ದಾರೆ ಎಂದರೆ ನಮ್ಮ ದೇಶದ ಬಗ್ಗೆ ಇವರಿಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದನ್ನು ತಿಳಿಯಬಹುದು.
ಇಂದು ಹಿಂದುಗಳು ಎಷ್ಟರ ಮಟ್ಟಿಗೆ ಮಂಗಳೂರಿನಲ್ಲಿ ಅಭದ್ರತೆಯನ್ನು ಹೊಂದಿದ್ದಾರೆ ಎಂದರೆ, ಈ ಲಜ್ಜೆಗೇಡಿ ರಾಜಕಾರಣಿಗಳು ಬಹಿರಂಗವಾಗಿಯೇ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುತ್ತಿರುವುದನ್ನು ನೋಡಿಯೂ ಏನೂ ಹೇಳದ ಸ್ಥಿತಿಯಲ್ಲಿದ್ದಾರೆ. ಟೆಂಪೋದಲ್ಲಿ ದನಕರುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಅಪರಾಧವಲ್ಲ, ಅದನ್ನು ತಡೆಯುವುದು ಅಪರಾಧವಾಗಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಮೆರವಣಿಗೆಯನ್ನು ಅಬ್ಬರದಿಂದ ಮಾಡುವಂತಿಲ್ಲ, ಆದರೆ ಮದರಸಾಗಳಲ್ಲಿ ದಿನಾಲೂ ಗಟ್ಟಿಯಾಗಿ ಮೈಕ್ ಹಾಕಿ ಜನಗಳಿಗೆ ತೊಂದರೆ ಕೊಡುವುದು ಅಪರಾಧವಲ್ಲ. ಬಲವಂತದ, ಆಮಿಷದ ಮತಾಂತರ ಮಾಡುವುದು ತಪ್ಪಲ್ಲ, ಅದನ್ನು ವಿರೋಧಿಸುವುದು ತಪ್ಪು. ಮಠಾಧೀಶರುಗಳು ಹಿಂದೂಗಳ ರಕ್ಷಣೆಗೆ ಮೆರವಣಿಗೆ ಮಾಡಿದರೆ ತಪ್ಪು, ಆದರೆ ಮುಸ್ಲಿಮರ, ಕ್ರಿಶ್ಚಿಯನ್ನರು ಬೀದಿಗಿಳಿದು ಹಿಂಸಾಚಾರದ ಮೂಲಕ ಪ್ರತಿಭಟಿಸಿದರೆ ತಪ್ಪಿಲ್ಲ. ಹಿಂದೂಗಳು ಪ್ರತಿಭಟಿಸಿದರೆ ಕೋಮುವಾದ, ಅಲ್ಪಸಂಖ್ಯಾತರು ಪ್ರತಿಭಟಿಸಿದರೆ ದೇಶಪ್ರೇಮ. ಹೇಗಿದೆ ನೋಡಿ ನಮ್ಮ ದೇಶದ ಸಂವಿಧಾನ, ನಮ್ಮ ದೇಶದ ರಾಜಕಾರಣಿಗಳ ರೌದ್ರ, ಕರಾಳ, ಹೀನ ಮುಖ?. ಹಿಂದೂಗಳ ಪವಿತ್ರ ಕ್ಷೇತ್ರಗಳಿಂದ ಸಂಗ್ರಹಿಸಿದ ಹಣ ಇಂದು ಚರ್ಚ್ ನಿರ್ಮಾಣಕ್ಕೆ, ಮಸೀದಿ, ಮದರಸಾಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಆದರೆ ಶಿಥಿಲಾವಸ್ಥೆಯಲ್ಲಿರುವ ಯಾವುದೇ ಹಿಂದೂ ದೇವಳಗಳನ್ನು ಜೀರ್ಣೋದ್ದಾರ ಮಾಡಲು ಯಾವುದೇ ಸಹಾಯವಿಲ್ಲ.
ಹಿಂದೂಗಳು ಇಂದು ಭಾರತದಲ್ಲಿ ಅಭದ್ರತೆಯ ನೆರಳಲ್ಲಿ ಬದುಕುತ್ತಿದ್ದಾರೆ. ಈಗ ಅಲ್ಲಲ್ಲಿ ಇಂತಹ ಅಭದ್ರತೆಯ ಭಯದಿಂದ ಹೊರಬರಲು ಹಿಂದೂಗಳು ಬಹಿರಂಗವಾಗಿಯೇ ಪ್ರತಿಭಟನೆ ಮಾಡುತ್ತಿರುವುದು, ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಅಲ್ಲಾಡಲು ಶುರುವಾಗಿದೆ. ಇದೇ ರೀತಿ ಈ ಕಾಂಗ್ರೆಸ್‌ನ ಕೆಲ ರಾಜಕಾರಣಿಗಳ ಬೆಂಬಲ ಈ ಭಯೋತ್ಪಾದಕರಿಗೆ ಮುಂದುವರಿದರೆ, ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಧರ್ಮಯುದ್ಧದ ಘೋಷಣೆ ಮಾಡಿದರೆ ಈ ದೇಶದಲ್ಲಿ ಅರಾಜಕತೆ ಉಂಟಾಗಿ ಅಲ್ಪಸಂಖ್ಯಾತರ ರಕ್ಷಣೆ ಕಷ್ಟವಾಗಲಿದೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಹಿಂದೂಗಳ ಮನೋಭಾವನೆಯನ್ನು ಅರ್ಥಮಾಡಿಕೊಂಡು , ಅಲ್ಪಸಂಖ್ಯಾತರಿಗೆ ಮನ್ನಣೆ ಕೊಡುವುದನ್ನು ನಿಲ್ಲಿಸಿ, ಎಲ್ಲರೂ ಸಮಬಾಳ್ವೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಈಗಿನ ಸದ್ಯದ ಅವಶ್ಯಕತೆಯಾಗಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ " ಧರ್ಮೋ ರಕ್ಷತಿ ರಕ್ಷಿತಃ" - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ.
"ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್!!"- ಅಂದರೆ ಧರ್ಮವು ನಷ್ಟವಾಗಿ ಅಧರ್ಮವು ಅಭಿವೃದ್ದಿಯಾದಾಗ ನಾನು ಜನ್ಮವನ್ನು ಎತ್ತುತ್ತೇನೆ.
"ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್! ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ!!"- ಅಂದರೆ ಸಾಧುಗಳ ಸಂರಕ್ಷಣೆಗಾಗಿ-ದುಷ್ಟರ ಸಂಹಾರಕ್ಕಾಗಿ-ಧರ್ಮ ಸಂಸ್ಥಾಪನೆಗೋಸ್ಕರ ನಾನು ಯುಗಯುಗಗಳಲ್ಲಿಯೂ ಹುಟ್ಟುತ್ತೇನೆ.

ಆದರೆ ಕಲಿಯುಗದಲ್ಲಿ ಭಗವಂತ ಕಲ್ಕಿ ಅವತಾರ ತಾಳುತ್ತಾನೆ ಹಾಗೂ ದುಷ್ಟರನ್ನು ಸಂಹರಿಸುತ್ತಾನೆ. ಅಂದರೆ ಅವನು ಧರ್ಮ ಸಂರಕ್ಷಕ ಯೋಧರ ದೇಹದಲ್ಲಿ ಹೊಕ್ಕು ದುಷ್ಟರ ಸಂಹಾರ ಮಾಡುತ್ತಾನೆ. ಇದನ್ನು ಈ ದುಷ್ಟ ರಾಜಕಾರಣಿಗಳು ಅರ್ಥ ಮಾಡಿಕೊಂಡರೆ ಸಾಕು.