Friday, May 02, 2008

ಕನ್ನಡ ಬ್ಲಾಗಿಸ್ಟ್ ಸಮ್ಮೇಳನ ಮತ್ತೊಮ್ಮೆ ಯಾವಾಗ?

ಬೆಂಗಳೂರು ಮೇ.೨: ಎಲ್ಲ ಕನ್ನಡಿಗರಿಗೂ ನನ್ನ ನಮಸ್ಕಾರ. ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದು ಬ್ಲಾಗಿಸ್ಟ್ ಸಮ್ಮೇಳನ ನಡೆಯಿತು. ಅದು ತುಂಬಾ ಯಶಸ್ವಿಯಾಗಿ ನಡೆದದ್ದು ಎಲ್ಲ ಬ್ಲಾಗಿಗರಿಗೂ ಸಂತೋಷ ತಂದ ವಿಚಾರ. ಆದರೆ ಅಲ್ಲೇನೋ ಕೊರತೆ ಇತ್ತು ಅನಿಸಿತ್ತು...ಅಲ್ವಾ?. ಎಲ್ಲರೂ ತಮ್ಮ ಕೈಯಿಂದಾದ ಸಹಾಯ ಮಾಡಿ...ಒಂದು ದೊಡ್ಡ ಸಮ್ಮೇಳನವನ್ನೇ ಮಾಡಿದರೆ ಹೇಗೆ?.
ಈ ವಿಚಾರದಲ್ಲಿ ನಾನು ತುಂಬಾ ತಲೆಕೆಡಿಸಿಕೊಂಡು ಈ ಒಂದು ಪ್ರಸ್ತಾಪ ತಮ್ಮ ಮುಂದಿಡುತ್ತಿದ್ದೇನೆ. ಎಲ್ಲಾ ಕನ್ನಡ ಬ್ಲಾಗಿಗರು ಒಂದಾಗಿ ಸೇರಿ, ತಮ್ಮ ಬಲಪ್ರದರ್ಶನ ಮಾಡಿ, ಬ್ಲಾಗ್ ಜಗತ್ತಿನಲ್ಲಿ ಕನ್ನಡಿಗರ ಪ್ರಾಬಲ್ಯವನ್ನು ಎತ್ತಿ ಹಿಡಿದು, ತಾವೇನೂ ಯಾರಿಗೂ ಕಮ್ಮಿ ಇಲ್ಲ ಎಂದು ಇತರರಿಗೆ ತೋರಿಸುವ ಹಾಗೆ...ಹ್ಯಾಗೆ?. ಇದನ್ನು ರಾಷ್ಟ್ರೀಯವಾಗಿ, ಅಂತರರಾಷ್ಟ್ರೀಯವಾಗಿಯೂ ಮಾಡಬಹುದಲ್ಲ?.
ಆದರೆ ಮೊದಲು ರಾಜ್ಯಮಟ್ಟದಲ್ಲಿ ಸಂಘಟಿಸಿ ನಂತರ ಅದು ಯಶಸ್ವಿಯಾದರೆ ಮುಂದುವರಿಯುವುದು ಒಂದು ಉತ್ತಮ ನಡೆಯಾಗಬಲ್ಲುದು.
"ಕೂಡಲೇ ಈ ವಿಚಾರವಾಗಿ ತಾವ್ಯಾರಾದರೂ ಚಿಂತಿಸಿ ಕಮೆಂಟಿಸಿದಲ್ಲಿ ಒಂದು ಪ್ರಯತ್ನ ಮಾಡಬಹುದು"

2 comments:

Anonymous said...

ಇನ್ನೊಮ್ಮೆ ಬ್ಲಾಗಿಗರ ಸಮ್ಮೇಳನ ನೆಡೆಯಬೇಕು. ನೆಡೆಯುತ್ತಲೇ ಇರಬೇಕು. ಇದಕ್ಕೆ ಸೂಕ್ತ ಸಂದರ್ಭವನ್ನ ಹುಡುಕಬೇಕು. ಎಲ್ಲ ಬ್ಲಾಗಿಗರ ಪರಿಚಯವಾಗಬೇಕು. ಹೋದ ಬ್ಲಾಗು ಮೀಟಿನಲ್ಲಿ ಇದು ಬಿಟ್ಟು ಹೋಗಿತ್ತು ಅಂತಾ ಅನ್ಸುತ್ತೆ. ಬ್ಲಾಗುಗಳ ಪರಿಚಯವಾಗಬೇಕು. ಬರೀ ಚರ್ಚೆ, ಸಂವಾದ ನೆಡೆದರೆ ಸಾಲದು. ವಸ್ತುನಿಷ್ಟ ವಿಮರ್ಶೆ ಕೂಡಾ ನೆಡೆಯಬೇಕು.

ಇವೆಲ್ಲವಕ್ಕಾಗಿ ಒಂದು ದಿನಾಂಕವನ್ನ ನಿಗದಿಪಡಿಸುವುದು ಅವಶ್ಯಕ. ಒಮ್ಮೆ ಈಮೇಲಿನಲ್ಲಿ ಚರ್ಚಿಸಿ ದಿನಾಂಕ ನಿಗದಿಪಡಿಸುವುದು ಉತ್ತಮ

rakee said...

Do you still use free service like blogspot.com or wordpress.com but
they have less control and less features.
shift to next generation blog service which provide free websites for
your blog at free of cost.
get fully controllable (yourname.com)and more features like
forums,wiki,CMS and email services for your blog and many more free
services.
hundreds reported 300% increase in the blog traffic and revenue
join next generation blogging services at www.hyperwebenable.com
regards
www.hyperwebenable.com