Monday, July 07, 2008

ಬೆಂಗಳೂರಿನಲ್ಲಿ ನಾಯಿಗಳ ಕಾಟ (ನಾಲ್ಕು ಕಾಲಿನ)


ಬೆಂಗಳೂರು ಜುಲೈ 07 : ಬೆಂಗಳೂರಿನಲ್ಲಿ ನಾಯಿಗಳ ಕಾಟ ಜಾಸ್ತಿಯಾಗಿದೆ. ಇದಕ್ಕೆ ಕಾರಣ ಎರಡು ಕಾಲಿನ ನಾಯಿಗಳೆಂದು ಬೆಂಗಳೂರು ತುಂಬಾ ಹಬ್ಬಿದೆ.
ಅಲ್ಲ ಮಾರಯ್ರೆ...ಬೆಳಿಗ್ಗೆ ಎದ್ದು ಹಾಲು ತರಲು ಹೋದರೆ ನಾಯಿಗಳು ಅಟ್ಟಿಸಿಕೊಂಡು ಬರುವುದಾ?....ಅದನ್ನು ಸಾಕಿದ ಎರಡು ಕಾಲಿನ ನಾಯಿಗಳು ಕೂಡಾ ನಾಲ್ಕು ಕಾಲಿನ ನಾಯಿಗಳಿಗೇ ಸಪೋರ್ಟು...
"ಏನಾಯ್ತ್ರೀ ಈಗ?..ಯಾಕ್ರೀ ಹಾಗಾಡ್ತೀರಾ?...ನಾಯಿ ಏನಾದ್ರೂ ಕಚ್ಚಿತಾ?...ಅಟ್ಟಿಸಿಕೊಂಡು ಬಂತು ಅಷ್ಟೇ ತಾನೇ?.." ಎಂಬ ಹುಚ್ಚು ಉತ್ತರ. ಕಂಗಾಲಾದೆ ನಾನು ಈ ಉತ್ತರದಿಂದ. ಅಲ್ಲ ನಾಯಿ ಕಚ್ಚಿದರೆ ಮಾತ್ರ ಇವರಿಗೆ ಲೆಕ್ಕ...ಇಲ್ಲದಿದ್ದಲ್ಲಿ ಲೆಕ್ಕಕ್ಕಿಲ್ಲ.
ಅಲ್ಲರೀ ನಿಮಗೆ ನಾಯಿ ಸಾಕಬೇಕೆಂದರೆ ನಿಮ್ಮ ಬೆಡ್ ರೂಮಿನಲ್ಲಿ ಇಟ್ಟುಕೊಂಡು ಮುದ್ದು ಮಾಡ್ರೀ...ಯಾರು ಬೇಡ ಅಂತಾರೆ?. ಇದನ್ನು ಹೊರಗೆ ಬಿಟ್ಟು ಇದ್ದವರಿಗೆಲ್ಲ ತೊಂದರೆ ಕೊಟ್ಟು ಮಜಾ ಅನುಭವಿಸುವ ಈ ನಾಲ್ಕು ಕಾಲಿನ ನಾಯಿಗಳನ್ನು ಯಾಕೆ ಕಾರ್ಪೋರೇಷನ್ ನಾಯಿ ಹಿಡಿಯುವ ತಂಡ ಹಿಡಿದು ಹಾಕಬಾರದು.

"ಬೆಂಗಳೂರಿನಲ್ಲಿ ಈ ನಾಲ್ಕು ಕಾಲಿನ ನಾಯಿಗಳ ಕಾಟಕ್ಕೆ ಕಾರಣ ಅದನ್ನು ಸಾಕುವ ಎರಡು ಕಾಲಿನ ನಾಯಿಗಳು"

ಎರಡು ಹಾಗೂ ನಾಲ್ಕು ಕಾಲಿನ ನಾಯಿಗಳ ಹೋಲಿಕೆಯನ್ನು ನೀವು ಈ ಪೇಜಿನಲ್ಲಿ ನೋಡಬಹುದು.....(ಹ್ಹ ಹ್ಹ ಹ್ಹಾ)

6 comments:

sunaath said...

ಗುರು,
ಬಾಲವಿರುವ ನಾಯಿಗಳನ್ನು ಕಂಟ್ರೋಲ್ ಮಾಡಬಹುದು. ಎರಡು ಕಾಲಿನ ನಾಯಿಗಳಿಗೆ ಬಾಲದ ಜಾಗದಲ್ಲಿ ತಲೆ ಇದೆ.

ಅಸತ್ಯ ಅನ್ವೇಷಿ said...

ಓ... ನಿಮ್ಮ ವರದ್ದಿಯಿಂದಾಗಿಯೇ ತಿಳೀತು...
ನಾನೂ ಆವತ್ತೊಮ್ಮೆ ಬೆಂಗಾಡೂರಿಗೆ ಬಂದಿದ್ದಾಗ, ಹಲವು ನಾಯಿಗಳು ಅಟ್ಟಿಸಿಕೊಂಡು ಬಂದಿದ್ವು.. ಅದ್ರಲ್ಲಿ ಕೆಲವಕ್ಕೆ ಎರಡೇ ಕಾಲು... ಎಲ್ಲೋ ಯಾರೋ ಮುರಿದಿರ್ಬೇಕು ಅನ್ಕೊಂಡಿದ್ದೆ... ಅಬ್ಬ... ಅಂತೂ ಈಗ ಗೊತ್ತಾಯ್ತು....

ಗುರು said...

ಸುನಾಥರೇ, ಎರಡು ಕಾಲಿನ ನಾಯಿಗಳಿಗೆ ಬಾಲದ ಜಾಗದಲ್ಲಿ ತಲೆ ಇದೆ ಅಂದ್ರಲ್ಲಾ, ಹ್ಯಾಗೆ? ಸ್ವಲ್ಪ ತಿಳಿಸುತ್ತೀರಾ....

ಗುರು said...

ಅನ್ವೇಷಿಯವರೇ, ನಿಮ್ಮ ಏಕ ಸದಸ್ಯ ಬ್ಯೂರೋಗೆ ಈ ಎರಡು ಕಾಲಿನ ನಾಯಿಗಳ ಬಗ್ಗೆ ಅರಿವಿಲ್ಲದಿರುವುದು ಖೇದಕರ. ಬೆಂಗಳೂರಿನಲ್ಲಿ ಎರಡೂ ನಾಯಿಗಳಿಗೆ ವ್ಯತ್ಯಾಸವೇ ಇಲ್ಲ, ಏಕೆಂದರೆ ಇಲ್ಲಿರುವುದು ಬೆರಕೆ ಸಂತಾನಗಳು......ಎಲ್ಲ ಹೊರರಾಜ್ಯದಿಂದ ಬಂದು ಇಲ್ಲಿ ಹುಟ್ಟಿಸಿಹಾಕುತ್ತಾರೆ, ಬೀದಿಗೆ ಬಿಟ್ಟುಬಿಡುತ್ತಾರೆ...ಅವುಗಳು ಇಲ್ಲಿನ ಸುಸಂಸ್ಕೃತ ಜನಕ್ಕೆ ಕಚ್ಚಲು ಶುರುಮಾಡುತ್ತವೆ. ಇವುಗಳ ನಿರ್ಮೂಲನಕ್ಕೆ ಒಂದು ಐಡಿಯಾ ಕೊಡಿ.....

ತೇಜಸ್ವಿನಿ ಹೆಗಡೆ- said...

ಗುರು ಅವರೆ,

ಹೋಲಿಕೆಯ ಚಿತ್ರಗಳನ್ನು ನೋಡಿ ನಗು ಉಕ್ಕಿ ಬಂತು :) ನನಗೂ ಈ ನಾಲ್ಕು ಕಾಲಿನ ನಾಯಿಗಳಿಂದ ತುಂಬಾ ತೊಂದರೆ ಆಗಿದೆ. ಅದಕ್ಕೆ ಸಾಕಷ್ಟು ಕಾರಣಕರ್ತರು ಆ ನಾಯಿಗಿಂತಲೂ ಕೊಂಚ ಬುದ್ಧಿ ಜಾಸ್ತಿ(?) ಇರುವವರೇ. ನಿಮ್ಮ URL ‘ಮಾನಸ’ದಲ್ಲಿ ಸೇರಿಸಲ್ಪಟ್ಟಿದೆ :)

ಗುರು said...

ವಂದನೆಗಳು ತೇಜಸ್ವಿನಿಯವರೇ,
ನನ್ನ ಈ ಬ್ಲಾಗನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಏರಿಸಲು ನಾನು ಶ್ರಮ ಪಡುತ್ತಿದ್ದೇನೆ(?????:)..ಇದಕ್ಕೆ ಎಲ್ಲರ ಸಹಾಯ ಅಗತ್ಯ. ಶ್ರೀಮಾನ್ ಅಸತ್ಯ ಅನ್ವೇಷಿಯವರಿಗೆ ಇದಕ್ಕಾಗಿ ಗಾಳ ಹಾಕಲಾಗಿದೆ.