Sunday, December 28, 2008

ಬೆಂಗಳೂರು ನಗರ ಪೊಲೀಸ್ ಅಪರಾಧ ತಡೆ ಮಾಸ ಡಿಸೆಂಬರ್ ೨೦೦೮



ಬೆಂಗಳೂರು ದಶಂಬರ ೨೮ : ನೀವು ನಗರದ ಯಾವುದೇ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದರೆ ನಿಮಗೆ "ಜಯ ಕರ್ನಾಟಕ" ಸಂಘಟನೆಯ ಈ ಪತಾಕೆಗಳು ಕಾಣಸಿಗುತ್ತವೆ. ಅಂದರೆ ಬೆಂಗಳೂರಿನ ನಾಗರಿಕರಿಗೆ ಸಮಾಜಘಾತುಕರ ಬಗ್ಗೆ ಎಚ್ಚರಿಕೆ ನೀಡುವಂತಹ ಒಂದು ಉತ್ತಮ ಕಾರ್ಯವನ್ನು ಈ ಸಂಘಟನೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಬೆಂಗಳೂರಿನಲ್ಲಿ ಇತ್ತೀಚೆಗೆ ಪರ ರಾಜ್ಯದಿಂದ ಬರುತ್ತಿರುವ ವಲಸಿಗರಿಂದ ಕೊಲೆ, ದರೋಡೆ, ಸುಲಿಗೆ, ಕಳ್ಳತನಗಳಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೆಂಗಳೂರಿನ ಶಾಂತಿಪ್ರಿಯ ವಾತಾವರಣಕ್ಕೆ ಒಂದು ಶಾಪವೇ ಸರಿ. ನಾನೇ ಕಣ್ಣಾರೆ ನೋಡಿದ ಹಾಗೆ ಕಾರ್ಡ್ ರಸ್ತೆಯಲ್ಲಿ ಹಾಡುಹಗಲೇ ತಮಿಳಿನ ಚಿಂದಿ ಆಯುವವರು ರಸ್ತೆ ವಿಭಜಕಕ್ಕೆ ಹಾಕಿದ ಕಬ್ಬಿಣದ ಬೇಲಿಯನ್ನು ಎಬ್ಬಿಸಿ ತೂಕಕ್ಕೆ ಮಾರಿ ದುಡ್ಡು ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಹಾರಾಷ್ಟ್ರದಿಂದ ವಲಸೆ ಬಂದಿರುವ "ಮರಾಠಿ" ಮಾತಾಡುವ ಹತ್ತಾರು ಮಹಿಳೆಯರು ಕಂಕುಳಲ್ಲಿ ಮಗುವನ್ನು ಹಿಡಿದುಕೊಂಡು ಸುತ್ತಾಡುತ್ತಿರುತ್ತಾರೆ. ಯಾವುದೇ ಮನೆಗೆ ಬೀಗ ಹಾಕಿದೆ ಎಂದ ಕೂಡಲೇ ನುಗ್ಗಿ ಬಿಡುತ್ತಾರೆ, ಹಾಗೂ ಮನೆಯ ಹೊರಗಿರುವ ವಸ್ತುಗಳನ್ನು ಸರಾಗವಾಗಿ ಎತ್ತಿಕೊಂಡು ಹೋಗುತ್ತಾರೆ. ಅಲ್ಲದೆ ಚಿನ್ನ ಬೆಳ್ಳಿ ಪಾಲಿಶ್ ಮಾಡುವ ನೆಪದಲ್ಲಿ ಮಹಿಳೆಯರು ಮನೆಗೆ ಬಂದು ಚಿನ್ನ ಬೆಳ್ಳಿ ಎತ್ತ್ತಿಕೊಂಡು ಹೋಗುತ್ತಾರೆ. ಅಲ್ಲದೆ ವಿಳಾಸ ಕೇಳುವ ನೆಪದಲ್ಲಿ, ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಯಾರೂ ಇಲ್ಲದಿದ್ದಲ್ಲಿ ಹಲ್ಲೆ ನಡೆಸಿ ಮನೆ ದೋಚುವ ಕಳ್ಳರು ಆಂಧ್ರ, ತಮಿಳುನಾಡಿನಿಂದ ನೇರವಾಗಿ ಬಂದು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ.

ಪರ ಊರಿನಿಂದ ಬಂದರೂ ಸರಾಗವಾಗಿ ಕನ್ನಡ ಮಾತಾಡುವ ಈ ಮಂದಿ, ಸುತ್ತ ಮುತ್ತಲಿನ ಮನೆಯವರ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಬೆಂಗಳೂರು ಈಗ ವಲಸಿಗರ ತಾಣವಾಗಿದೆ. ಎಲ್ಲ ರೀತಿಯ ಮಂದಿ ಇಲ್ಲಿ ಬಂದು ಸೇರುತ್ತಿದ್ದಾರೆ. ಇಲ್ಲಿ ಜೀವನ ಮಾಡುತ್ತಿರುವವರು ಹೆಚ್ಚಾಗಿ ಸಿರಿವಂತರು ಎಂಬ ಭಾವನೆ ಈ ಮಂದಿಯಲ್ಲಿ ಬೇರೂರಿಬಿಟ್ಟಿದೆ. ಅದಕ್ಕಾಗಿಯೇ ಈ ಮಂದಿ ದೂರದ ತಮಿಳುನಾಡು, ಆಂಧ್ರದಿಂದ ಬಂದು ಕೊಲೆ, ದರೋಡೆ, ಸುಲಿಗೆ ಮಾಡಿ ಮತ್ತೆ ತಮ್ಮ ಊರು ಸೇರಿಕೊಂಡು ಬಿಡುತ್ತಾರೆ. ಮತ್ತೆ ಸ್ವಲ್ಪ ಸಮಯ ಕಳೆದ ಮೇಲೆ ಪುನಃ ಹಳೇ ಚಾಳಿ ಶುರು.

ಕರ್ನಾಟಕ ಸರಕಾರ ಈಗ ಈ ವಲಸಿಗರಿಗಾಗಿ ಕಠಿಣ ಕಾನೂನು ತರುವಂತಹ ಅಗತ್ಯವಿದೆ. ಹೆಚ್ಚಾಗಿ ಈ ಕೊಲೆ, ದರೋಡೆ ಮಾಡುವವರು ಆಂದ್ರ, ತಮಿಳುನಾಡು, ಬಿಹಾರದಿಂದ ವಲಸೆ ಬಂದಿರುವವರು. ಕೂಲಿ ಕೆಲಸಕ್ಕಾಗಿ ಇಲ್ಲಿ ಬಂದು, ಹಗಲೆಲ್ಲ ದುಡಿದು, ರಾತ್ರಿಯಾಗುತ್ತಲೇ ತಮ್ಮ ಎರಡನೇ ವೃತ್ತಿ ಶುರು ಮಾಡಿಕೊಳ್ಳುತ್ತಾರೆ. ಬೆಂಗಳೂರಿನ ಪೋಲಿಸರು ಈ ಮಂದಿಯ ಮೇಲೆ ಸದಾ ಒಂದು ಕಣ್ಣು ಇಟ್ಟರೆ ವಾಸಿ.

ಇಂದು ಪಾಕಿಸ್ತಾನ, ಬಾಂಗ್ಲಾ ದೇಶದ ನುಸುಳುಕೋರರು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಹಾಗೆ ಈ ಪರರಾಜ್ಯದ ನುಸುಳುಕೋರರು ಬೆಂಗಳೂರಿನಲ್ಲಿ ಅರಾಜಕತೆ, ಭೀತಿ ಸೃಷ್ಟಿಸುತ್ತಿದ್ದಾರೆ. ಇಂತಹ ಸಮಾಜಘಾತುಕರನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿ ಸೂಕ್ತ ಶಿಕ್ಷೆ ವಿಧಿಸಬೇಕು. ಅಲ್ಲದೆ ಕರ್ನಾಟಕ ಸರಕಾರ ಈ ಬಗ್ಗೆ ಗಮನ ಹರಿಸಿ, ಈ ವಲಸಿಗರಿಗೆ ಪರಿಚಯ ಪತ್ರ ಕೊಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ವಲಸಿಗರೂ ಅಲ್ಲದೆ ಬೇರೆ ರಾಜ್ಯದಿಂದ ಇಲ್ಲಿಗೆ ಕಲಿಯಲು ಬರುವಂತಹ ವಿದ್ಯಾರ್ಥಿಗಳ ಬಗ್ಗೆಯೂ ಸೂಕ್ತ ಕ್ರಮ ತೆಗೆದುಕೊಂಡು ಅವರ ಮೇಲೆಯೂ ಒಂದು ಕಣ್ಣಿಟ್ಟಿರಬೇಕು. ಏಕೆಂದರೆ ಹೆಚ್ಚಾಗಿ ಸರಗಳ್ಳತನ ಮಾಡುತ್ತಿರುವುದು ಈ ಉತ್ತರಭಾರತದಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳೆ ಆಗಿರುವುದು ಕಳವಳಕಾರಿಯಾಗಿದೆ.

"ಕನ್ನಡಿಗರೇ...ಎಚ್ಚರ ನಾಳೆ ನಿಮ್ಮ ಮನೆಗೂ ಈ ಕಳ್ಳ ಕಾಕರು ನುಗ್ಗಬಹುದು. ಜಾಗ್ರತೆಯಾಗಿರಿ....ನಿಮ್ಮ ಸುತ್ತ ಮುತ್ತಲ ಜನರ ಬಗ್ಗೆ ಒಂದು ಕಣ್ಣು ಸದಾ ಇಟ್ಟಿರಿ..ಯಾವುದೇ ಅನುಮನಾಸ್ಪದ ವ್ಯಕ್ತಿ ಕಂಡರೂ ಕೂಡಲೇ ಪೋಲಿಸರಿಗೆ ತಿಳಿಸಿ..."

1 comment:

Anonymous said...

ಬೆಂಗಳೂರು ಇವತ್ತು ಈ ತೆಲುಗು, ತಮಿಳು, ಮಲೆಯಾಳಿ, ಬಿಹಾರಿಗಳಿಂದ ನರಕ ಸದೃಶವಾಗಿದೆ. ರೌಡಿಯಿಸಂ, ಹಲ್ಲೆ, ಕೊಲೆ, ಸುಲಿಗೆ ಎಲ್ಲ ಹೆಚ್ಚಾಗಲು ಕಾರಣ ಅನಿಯಂತ್ರಿತ ವಲಸೆ. ಇದನ್ನು ತಡೆಗಟ್ಟಲು ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಇಲ್ಲೊಬ್ಬ ರಾಜ್ ಠಾಕ್ರೆ ಗರ್ಜಿಸಬೇಕಾದೀತು.