Monday, March 29, 2010

ಮತದಾನ ಕಡ್ಡಾಯ ಮಾಡಿ

ಇತ್ತೀಚೆಗೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲು ನಿರುತ್ಸಾಹ ತೋರಿದ ಬೆಂಗಳೂರಿನ ಮತದಾರ ತಾನು ಒಬ್ಬ ಶತ ಮೂರ್ಖ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಮತದಾನ ಕಡಿಮೆಯಾದಷ್ಟು ಕಳ್ಳ ಖದೀಮರು ಆಯ್ಕೆಯಾಗುವ ಅವಕಾಶ ಜಾಸ್ತಿ. ಆದ್ದರಿಂದ ಈ ಮತದಾನ ಮಾಡದ ಮೂರ್ಖ ಮಂದಿ ಈ ಕಳ್ಳ ಖದೀಮರ ಆಯ್ಕೆಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ.

ಇದಕ್ಕೆಲ್ಲ ಒಂದೇ ಪರಿಹಾರ ಎಂದರೆ ಮತದಾನ ಕಡ್ಡಾಯ ಮಾಡುವುದು. ಮತದಾನ ಮಾಡದ ಈ ಸೋಂಬೇರಿಗಳಿಗೆ ಮತದಾನದ ಮಹತ್ವ ಗೊತ್ತಿಲ್ಲದಿರುವುದು ಈ ದೇಶದ ದುರಂತ. ಬೆಂಗಳೂರಿನಲ್ಲಿ ಅನಕ್ಷರತೆ ಇನ್ನೂ ಪ್ರತಿಶತ ೫೦ರಷ್ಟು ಇದೆ ಎಂಬುದನ್ನು ಇದು ತೋರಿಸುತ್ತದೆ. ಈ ಮತದಾನ ಮಾಡದ ಅನಕ್ಷರಸ್ಥ (?) ಮಂದಿಗೆ ಬೆಂಗಳೂರಿನಲ್ಲೂ ಸಂಜೆ ತರಗತಿಗಳನ್ನು ನಡೆಸಿ, ಅಕ್ಷರಾಭ್ಯಾಸ ಮಾಡಿಸಿ, ಈ ಮತದಾನದ ಬಗ್ಗೆ ಅವರಿಗೆ ತಿಳಿಸಿ ಹೇಳುವ ಅಗತ್ಯತೆ ಇವತ್ತು ಖಂಡಿತಾ ಇದೆ ಎಂಬುದು ನನ್ನ ಅಭಿಮತ.

ಈ ಮತದಾನವನ್ನು ಕಡ್ಡಾಯ ಮಾಡುವುದು ಇದಕ್ಕೆಲ್ಲಾ ಒಂದು ಪರಿಹಾರ. ಮತದಾನ ಮಾಡದ ಮಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿನ ಕ್ರಮ ತೆಗೆದುಕೊಳ್ಳಬೇಕಾದ್ದು ಸರಕಾರದ ಕರ್ತವ್ಯ. ಹೀಗಾದರೂ ಒಬ್ಬ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗುವುದು ಸಾಧ್ಯವೋ ಏನೋ?. ಮತದಾನ ಮಾಡದ ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅವರ ರೇಷನ್ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ಕಠಿನ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಕತ್ತೆಯ ಮೆದುಳಿನ ಮಂದಿಗೆ ಇದರ ಮಹತ್ವ ತಿಳಿಯುವುದು ಕಷ್ಟ.

1 comment:

msmanjunatha said...

ಮತದಾನವನ್ನ ಚಲಾಯಿಸಲಾಗದ ಮಂದಿ ರಾಜಕೀಯವಾಗಿ ದೇಶದ ಪ್ರಜೆಯಾಗಲು ಹೇಗೆ ಸಾಧ್ಯ? ಇಂಥಹವರಿಗೆ ತಿಳಿಹೇಳುವವರು ಯಾರು?