Thursday, May 20, 2010

ಯೆಡಿಯೂರಪ್ಪ ಮತ್ತು ಅನಾಥ ಕರ್ನಾಟಕ

ನಮ್ಮ ಕರ್ನಾಟಕದ ದುಸ್ಥಿತಿಯನ್ನು ಕಂಡು ದೇಶದ ಎಲ್ಲೆಡೆ ಮುಸಿಮುಸಿ ನಗುತ್ತಿರುವುದು ನನ್ನ ಹೊಟ್ಟೆ ಕಿವುಚಿದ ಹಾಗಾಗುತ್ತಿದೆ. ಗುಜರಾತ್ ಮಾದರಿ ಎಂದು ಕರ್ನಾಟಕವನ್ನು ದೇಶದ ಅತೀ ಕೀಳು ಮಟ್ಟದ ರಾಜ್ಯವನ್ನಾಗಿ ಮಾಡಿದ ಕೀರ್ತಿ ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಯೆಡಿಯೂರಪ್ಪನಿಗೆ ಸಲ್ಲಬೇಕು.

ಈ ರಾಜ್ಯವನ್ನು ಬಳ್ಳಾರಿಯ ಗಣಿ ರೌಡಿಗಳ ಕೈಗೆ ಒತ್ತೆ ಇಟ್ಟು, ರಾಜ್ಯದ ಚುನಾವಣೆ ಗೆದ್ದು, ಬಿ.ಬಿ.ಎಂ.ಪಿ.ಯನ್ನೂ ಬುಟ್ಟಿಗೆ ಹಾಕಿಕೊಂಡು ರಾಜ್ಯವನ್ನು ಇನ್ನಿಲ್ಲದಂತೆ ದೋಚುತ್ತಿರುವ ಈ ಬಿ.ಜೆ.ಪಿ. ಮಂದಿಯನ್ನು ನೋಡಿದಾಗ ನನಗೆ ದಂತೇವಾಡದಲ್ಲಿ ನಕ್ಸಲರು ಮುಗ್ದ ಜನರ ಹತ್ಯೆ ಮಾಡಿದ್ದರ ಬದಲಾಗಿ ಇಲ್ಲಿನ ಈ ಭ್ರಷ್ಟ ರಾಜಕಾರಣಿಗಳನ್ನಾದರೂ ಬಲಿತೆಗೆದುಕೊಳ್ಳಬಾರದಿತ್ತೇ ಎಂಬ ಯೋಚನೆ ಬಂದಿದ್ದಂತೂ ನಿಜ.

ಒಬ್ಬ ಅಯೋಗ್ಯ ( ಆ ಹುದ್ದೆಗೇ ಅಯೋಗ್ಯ) ಮುಖ್ಯಮಂತ್ರಿ, ನಾಲಾಯಕ್ ಗೃಹಸಚಿವ, ಕ್ರಿಮಿನಲ್ ಹಾಲಪ್ಪ, ರಾಜ್ಯದ ಗಣಿ ಲೂಟಿ ಮಾಡುತ್ತಿರುವ ರೆಡ್ಡಿ ಸಹೋದರರು,ನಮ್ಮ ರಾಜ್ಯದ ಹೆಮ್ಮೆಯಾದ ಕೆ.ಎಂ.ಎಫ್.ನ್ನೂ ಬಿಡದೆ ಅಲ್ಲೂ ರೈತರ ಹೆಸರಿನಲ್ಲಿ ಸ್ವಾಹಾ ಮಾಡುತ್ತಿರುವ ಮಂತ್ರಿಗಳು ಮೊದಲಾದವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡು ರಾಜ್ಯದ ಜನತೆ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವಂತೆ ಆಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ "ಕನ್ನಡ ವಿರೋಧಿ" ಸರಕಾರ ಅಧಿಕಾರಕ್ಕೆ ಬಂದಿದೆ. ನಾನು ಒಬ್ಬ ಆರ್.ಎಸ್.ಎಸ್. ಬೆಂಬಲಿಗನಾಗಿ, ಕನ್ನಡ ಪ್ರೇಮಿಯಾಗಿ ಈ ಮತನ್ನು ಬಹಳ ವಿಷಾದದಿಂದ ಹೇಳಬೇಕಾಗಿದೆ. ಮೊದಲಿನಿಂದಲೂ ಕನ್ನಡ ವಿರೋಧಿ ನೀತಿ, ತಮಿಳು, ತೆಲುಗು ಪರ ಬೆಂಬಲ ಸೂಚಿಸುವ ಪ್ರಥಮ ಸರಕಾರ ಈ ಬಿ.ಜೆ.ಪಿ. ಸರಕಾರ ಎಂಬುದು ಖೇದಕರ ವಿಷಯ. ಕನ್ನಡ ಪರ ಸಂಘಟನೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಹೋರಾಟವನ್ನು ಹತ್ತಿಕ್ಕಿ ತಾನು ಮಾತ್ರ ನಿಜವಾದ ಜಾತ್ಯಾತೀತ ಎಂಬುದನ್ನು ತೋರಿಸುವ ನಾಮರ್ದ ಭಂಡತನ ಪ್ರದರ್ಶಿಸಿದೆ. ಕನ್ನಡಿಗರೇ ಎದ್ದೇಳಿ...ಕನ್ನಡ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಿರಿ...ಪೊರಕೆ ಸೇವೆ ಮಾಡಿ....
ಹೊಗೇನಕಲ್ ವಿಚಾರದಲ್ಲಿ ನಮ್ಮ ಸರಕಾರ ಶಿಖಂಡಿತನ ಪ್ರದರ್ಶಿಸಿದೆ. ಅಲ್ಲದೆ ಬೆಳಗಾವಿ ವಿಚಾರದಲ್ಲಿ ತನ್ನ ನಾಮರ್ದತನವನ್ನು ಎಲ್ಲರಿಗೂ ತೋರಿಸಿದೆ. ಕರ್ನಾಟಕದಲ್ಲಿ ಹುಟ್ಟಿ, ಕರ್ನಾಟಕದ ಅನ್ನ ತಿಂದು, ಇಲ್ಲಿನ ಕಾವೇರಿ ನೀರು ಕುಡಿದು ಇಲ್ಲಿನ ಜನರಿಗೇ ದ್ರೋಹ ಬಗೆಯುತ್ತಿರುವ ಬಿ.ಜೆ.ಪಿ. ಸರಕಾರವನ್ನು ಕಿತ್ತೊಗೆಯಬೇಕು. ಪುಟಗೋಸಿ ತಮಿಳರ ಓಟಿಗಾಗಿ ಕರುಣಾನಿಧಿಯ ಕಾಲು ನೆಕ್ಕುವ ಈ ರಾಜಕಾರಣಿಗಳನ್ನು ಮೆಟ್ಟಲ್ಲಿ ಹೊಡೆಯಿರಿ...

ಕನ್ನಡಿಗರೇ ಎದ್ದೇಳಿ...ನಮ್ಮ ಐಕ್ಯತೆಯನ್ನು ಪ್ರದರ್ಶಿಸಿ...ಈ ಕನ್ನಡ ವಿರೋಧಿ ಸರಕಾರವನ್ನು ಕಿತ್ತೊಗೆಯಿರಿ...ಇಲ್ಲದಿದ್ದಲ್ಲಿ ನಿಮ್ಮ ಮುಂದಿನ ಪೀಳಿಗೆ ನಿಮ್ಮನ್ನು ಕ್ಷಮಿಸಲಾರದು. ಇದೇ ಸರಕಾರ ಇನ್ನು ಐದು ವರ್ಷ ಇದ್ದರೆ ಖಂಡಿತಾ ಕನ್ನಡಿಗ ಅನಾಥನಾಗುತ್ತಾನೆ ಕಾಶ್ಮೀರದ ಹಿಂದೂಗಳಂತೆ. ಕಾಂಗ್ರೆಸ್ ಮತ್ತು ಜಾ.ದಳಕ್ಕೆ ಇದು ಸಕಾಲ, ನೀವಾದರೂ ನಿಜವಾದ ಕನ್ನಡಪ್ರೇಮವನ್ನು ತೋರಿಸಿ...ಕನ್ನಡದ ಉಳಿವಿಗಾಗಿ ಹೋರಾಡಿ...ಒಬ್ಬ ಕನ್ನಡಿಗನಾಗಿ, ಒಬ್ಬ ನೈಜ ಹಿಂದೂವಾಗಿ, ಒಬ್ಬ ಬ್ರಾಹ್ಮಣನಾಗಿ...ನಾನು ಯಾವತ್ತೂ ಬಿ.ಜೆ.ಪಿ. ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕದವನಾಗಿ...ಮುಂದೆ ಕನ್ನಡದ ಹಿತ ಕಾಯುವ ಪಕ್ಷಕ್ಕೆ ಮತ ಹಾಕುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ಅದು ಯಾರೇ ಇರಲಿ...ಮುಸ್ಲಿಂ ಲೀಗ್ ಆದರೂ ಸರಿ...ಕನ್ನಡದ ಹಿತ ಕಾಯುವವರಿಗೇ ನನ್ನ ಮತ...ನಿಮ್ಮ ಮತ ಯಾರಿಗೆ?......

1 comment:

geleya said...

sariyagi helidderi,
brashta yeddi mattu avana himbalakarannu matte adikarakke tarabedi. kannadakke namma mata.