Sunday, August 03, 2008

ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!


ಬೆಂಗಳೂರು ಆಗಸ್ಟ್ ೩:
ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರಿಂದ ಸಹಾಯ ಪಡೆದು ತಮಿಳುನಾಡಿನಲ್ಲಿ ಸುಪರ್‌‌ಸ್ಟಾರ್ ಆಗಿ ಮೆರೆದು ಈಗ ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ದಾರ್ಷ್ಟ್ಯ ಇರುವಂತಹ ಒಂದು ಪ್ರಾಣಿ ಎಂದರೆ ಅದು ದುಡ್ಡಿಗಾಗಿ ತಾಯಿಯನ್ನೇ ಕಾಲಲ್ಲಿ ಒದೆಯಲೂ ಹಿಂಜರಿಯದ, ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಒಬ್ಬ ಖಳನಟ "ರಜನಿಕಾಂತ್ ಉರ್ಫ್ ಶಿವಾಜಿ".
ಇಂತಹ ಕನ್ನಡದ್ರೋಹಿಗಳಿಂದ ಇಂದು ಕನ್ನಡ ತಾಯಿ ಒಳಗೊಳಗೇ ಅಳುತ್ತಿದ್ದಾಳೆ. "ಎಂತಹ ಮಕ್ಕಳನ್ನು ಹೆತ್ತೆನಪ್ಪಾ? " ಎಂದು. ತಾನೊಬ್ಬ ಸೂಪರ್‌ಸ್ಟಾರ್ ಆಗಿರಬಹುದು, ಅದು ತಮಿಳರಿಗೆ ಮಾತ್ರ, ಆದರೆ ಕನ್ನಡಿಗರಿಗೆ, ಕನ್ನಡತಾಯಿಗೆ, ಕರ್ನಾಟಕಕ್ಕೆ ಇವನು ನೀಡಿದ ಕೊಡುಗೆ ಏನು?. ಇವನ ಕನ್ನಡದ್ರೋಹಿತನಕ್ಕೆ ಅವನ ಕೆಲ ನುಡಿಮುತ್ತುಗಳೇ ಸಾಕ್ಷಿ,
ಎಪ್ರಿಲ್ ೪: " ತಮಿಳಿನಾಡಿನಲ್ಲಿ ಹರಿಯುತ್ತಿರುವ ನೀರನ್ನು ಬಳಸಿಕೊಳ್ಳಲು ನಾವು ಯೋಜನೆ ಹಾಕಿಕೊಂಡರೆ ಅದನ್ನು ಬಳಸಿಕೊಳ್ಳಬೇಡಿ ಎಂದು ಹೇಳುವ ಕನ್ನಡಿಗರಿಗೆ ಒದೆಯಬೇಕೋ ಬೇಡವೋ....."
ಎಪ್ರಿಲ್ ೬: " ಕ್ಷಮೆ ಕೇಳುವವರೆಗೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕೆಲವರು ಬೆದರಿಕೆ ಹಾಕಿದ್ದಾರೆ. ಕರ್ನಾಟಕದಲ್ಲಿ ತಮಿಳರಿಗಿಂತ ಹೆಚ್ಚಾಗಿ ಕನ್ನಡಿಗರೇ ನನ್ನ ಚಿತ್ರವನ್ನು ನೋಡುತ್ತಾರೆ. ಇದರಿಂದ ಅವರಿಗೇ ನಷ್ಟ...."
ಜುಲೈ ೨೭: " ಹೊಗೇನಕಲ್ ಚರ್ಚೆಯ ಸಂದರ್ಭದಲ್ಲಿ ನಾನು ಮಾತನಾಡಿದ್ದು ಕರ್ನಾಟಕದಲ್ಲಿ ಕೆಲವರಿಗೆ ನೋವುಂಟುಮಾಡಿದೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಸ್ವಭಾವಕ್ಕೆ ವಿರುದ್ಧವಾದುದು. ಎಲ್ಲರೂ ನನ್ನ ಚಿತ್ರ ಬಿಡುಗಡೆಗೆ ಸಹಕರಿಸಿ..."
ಜುಲೈ ೩೧: " ನಾನು ದುರಹಂಕಾರಿ ಅಲ್ಲ. ಕನ್ನಡ ಹೋರಾಟಗಾರರ ಬಗ್ಗೆ ನನಗೆ ಗೌರವವಿದೆ. ನನ್ನಿಂದ ತಪ್ಪಾಗಿರುವುದು ನಿಜ.ಮುಂದೆ ಹೀಗೆ ಮಾಡುವುದಿಲ್ಲ. ಕನ್ನಡದ ಮಕ್ಕಳಿಂದ ಪಾಠ ಕಲಿತಿದ್ದೇನೆ. ಕುಚೇಲನ್ ಬಿಡುಗಡೆಗೆ ಸಹಕಾರ ನೀಡಿ..."
ಆಗಸ್ಟ್ ೨: " ಕುಚೇಲನ್ ಬಿಡುಗಡೆಗೆ ತಡೆಯೊಡ್ಡಬಾರದೆಂಬ ಕಾರಣಕ್ಕೆ ನಾನು ಕನ್ನಡಿಗರಿಗೆ ಮನವಿ ಮಾಡಿಕೊಂಡೆ ಅಷ್ಟೆ. ಆದರೆ ಇದನ್ನು ಕ್ಷಮೆ ಯಾಚನೆ ಎಂದು ತಪ್ಪಾಗಿ ಭಾವಿಸಬಾರದು....."

ಇಂತಹ ಹೇಳಿಕೆಗಳಿಂದ ರಜನೀಕಾಂತ್ ತನ್ನ ನಿಜವಾದ ಕನ್ನಡದ್ರೋಹಿತನವನ್ನು ತೋರ್ಪಡಿಸಿಕೊಂಡಿದ್ದಾನೆ. ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರ ಸಹಕಾರ ಪಡೆದು, ತಮಿಳುನಾಡಿನಲ್ಲಿ ಸುಪರ್‌ಸ್ಟಾರ್ ಆದ ಈ ಹುಂಬ ಇಂದು ತಾನು ಹತ್ತಿದ ಏಣಿಯನ್ನೇ ಒದೆಯುವಷ್ಟು ದಾರ್ಷ್ಟ್ಯ ತೋರಿಸುತ್ತಿದ್ದಾನೆಂದರೆ ಅವನಿಗೆಷ್ಟು ಕೊಬ್ಬಿರಬೇಕು?. ಕೇವಲ ಕೈಕಾಲು ಆಡಿಸುವುದೇ ನಟನೆ, ತಾನು ಮಾಡಿದ್ದೇ ನಿಜವಾದ ನಟನೆ, ನನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ ಎಂಬ ಒಣಜಂಬ ಇವನ ತಲೆ ಹೊಕ್ಕಿದೆ. ಆದರೆ ಒಬ್ಬ ಕನ್ನಡಿಗನಾಗಿ ನಾನು ಹೇಳುವ ಮಾತೆಂದರೆ....ತಾಕತ್ತಿದ್ದರೆ ಧೈರ್ಯವಾಗಿ ಎದುರಿಸು...ಅದು ಬಿಟ್ಟು ಶಿಖಂಡಿ ತರಹ ಗಳಿಗೆಗೊಮ್ಮೆ ಗೋಸುಂಬೆ ತರಹ ಬಣ್ಣ ಬದಲಾಯಿಸುವ ಬುದ್ದಿ ಮಾತ್ರ ಬೇಡ. ಇದರಿಂದ ನಮ್ಮ ಕನ್ನಡಿಗರಿಗೇ ಅವಮಾನ. ಅಲ್ಲದೆ ನಿನ್ನ ಡಬ್ಬಾ ಚಿತ್ರವನ್ನು ನೋಡದಿದ್ದರೆ ಕನ್ನಡಿಗರಿಗೇನೂ ನಷ್ಟವಿಲ್ಲ. ಟಿಕೆಟ್‌ನ ದುಡ್ಡು ಉಳಿಯುತ್ತದೆ ಅಷ್ಟೆ.
ಒಬ್ಬ ಕನ್ನಡಿಗನಾಗಿ ಹುಟ್ಟಿ, ಕನಿಷ್ಟ ಮಾತೃಭಾಷೆಗೆ ಗೌರವ ಕೊಡದ ಈ ಮಂದಿ ತನ್ನ ಹೆತ್ತ ತಾಯಿಗೆ ಎಷ್ಟು ಗೌರವ ಕೊಡಬಲ್ಲರು?. ಕನ್ನಡಿಗರ ಶಾಂತಿಪ್ರಿಯತೆಯನ್ನೇ ಬಂಡವಾಳಮಾಡಿಕೊಂಡ ಕೆಲವು ಕನ್ನಡದ್ರೋಹಿಗಳು ಈಗ ಕರ್ನಾಟಕದ ವಿರುದ್ಧ, ಕನ್ನಡಿಗರ ವಿರುದ್ಧ, ಕನ್ನಡದ ವಿರುದ್ಧ ಕತ್ತಿ ಮೆಸೆಯುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳನ್ನು ಮಟ್ಟಹಾಕಬೇಕಾಗಿದೆ.
ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!

1 comment:

Anonymous said...

I am in Tamilnadu...But why these bloody people are behind this rubbish fellow?. He is not at all a actor, he thinks just by shaking his hand and leg with rubbish smoking he could become a good actor...but never......he is not fit for side actor also....