Tuesday, September 02, 2008

"ಮಾಲ್‌ಗಳ-ಹಗಲು ದರೋಡೆ" ಹಾಗೂ ಐಟಿ-ಬಿಟಿಗಳ ಪರ್ಯಾಯ ಕರೆನ್ಸಿ

ಬೆಂಗಳೂರು ಸೆಪ್ಟೆಂಬರ್ ೨ : ಇಂದು ಎಲ್ಲಾ ಪ್ರಮುಖ ನಗರಗಳಲ್ಲಿ ಮಾಲ್ ಸಂಸ್ಕೃತಿ ತಲೆ ಎತ್ತಿರುವುದು ಒಂದು ದೊಡ್ಡ ಆತಂಕದ ಸಂಗತಿಯಾಗಿದೆ. ಏಕೆಂದರೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಮೂರ್ಖರಿಗೆ ಮಾತ್ರ ಇದು ಸಿಹಿಯಾದ ಸುದ್ದಿಯಾಗಿದೆ.

ನಾನು ಏಕೆ ಈ ವಿಷಯ ಹೇಳುತ್ತಿದ್ದೇನೆ ಎಂದರೆ, ಮೊನ್ನೆ ಖುದ್ದಾಗಿ ಬಿಗ್‌ಬಜಾರಿನಲ್ಲಿ ನನಗೆ ಅನುಭವವಾಯಿತು. ಎಲ್ಲ ಆಹಾರೋತ್ಪನ್ನಗಳಲ್ಲಿ ಈ ತರಹದ ಮಾಲ್‌ಗಳು ಯಾವತರಹ ಗ್ರಾಹಕರನ್ನು ಹಗಲುದರೋಡೆ ಮಾಡುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.


೧ ಕೆ.ಜಿ ಸಕ್ಕರೆ ೨೫ ರೂ.(ಬಿಗ್ ಬಜಾರ್ ಬೆಲೆ) ೨೨ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೨ ಕೆ.ಜಿ ಸಕ್ಕರೆ ೫೪ ರೂ.(ಬಿಗ್ ಬಜಾರ್ ಬೆಲೆ) ೪೪ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೫ ಕೆ.ಜಿ. ಸಕ್ಕರೆ ೧೧೩ ರೂ.ಬಿಗ್ ಬಜಾರ್ ಬೆಲೆ) ೧೦೫ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೫೦೦ ಮಿ.ಲೀ. ಎಳ್ಳೆಣ್ಣೆ ೮೦ ರೂ.(ಬಿಗ್ ಬಜಾರ್ ಬೆಲೆ) ೩೬ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)

ಇದು ಕೇವಲ ಉದಾಹರಣೆಯಷ್ಟೇ....ಬಿಗ್‌ಬಜಾರ್, ರಿಲಯನ್ಸ್ ಫ್ರೆಶ್, ಫೇರ್ ಪ್ರೈಸ್, ಮೋರ್ ಮುಂತಾದ ಮಳಿಗೆಗಳಲ್ಲಿ ಸಾಮಾನ್ಯವಾಗಿ ಜನರನ್ನು ಹಾಡುಹಗಲೇ ದೋಚಲಾಗುತ್ತದೆ. ಆದರೆ ಮಧ್ಯಮವರ್ಗದ ಜನ ಲೆಕ್ಕಾಚಾರದಲ್ಲಿ ಬದುಕುವುದರಿಂದ ಅವರಿಗೆ ಬೆಲೆಗಳ ವ್ಯತ್ಯಾಸ ಗೊತ್ತಾಗುತ್ತದೆ. ನಾನೂ ಒಬ್ಬ ಲೆಕ್ಕಾಚಾರದ ಮನುಷ್ಯ, ಅಂದರೆ ಎಲ್ಲ ಕಡೆ ಬೆಲೆ ವಿಚಾರಿಸಿ ಎಲ್ಲಿ ಕಡಿಮೆ ಬೆಲೆಗೆ ಉತ್ತಮ ಪದಾರ್ಥಗಳು ದೊರೆಯುತ್ತವೆಯೋ ಅಲ್ಲೇ ನನ್ನ ಖರೀದಿ. ಆದರೆ ನಮ್ಮಂತಹ ಮಧ್ಯಮವರ್ಗದ ಜನರಿಗೆ ಟೋಪಿ ಹಾಕುವ ಇಂತಹ "ಟೋಪಿ ಮಳಿಗೆ"ಗಳ ಬಗ್ಗೆ ಎಲ್ಲರೂ ಎಚ್ಚರವಾಗಿರಬೇಕು.

ಇವುಗಳು ಕೇವಲ ಶೋಕಿ ಜನರ ಮಾಲ್‌ಗಳಾಗಿದ್ದು, ಐಟಿ-ಬಿಟಿಯಲ್ಲಿ ಕೆಲಸಮಾಡುತ್ತಿರುವ ಜನರಿಗೆ ಇಂತಹ ಮಾಲ್‌ಗಳಲ್ಲಿ ಖರೀದಿ ಮಾಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುವುದು ಖೇದಕರ. ಸಾಮಾನ್ಯವಾಗಿ ಇಂತಹ ಜನರೇ ಮೊದಲು ಬಕ್ರಾಗಳಾಗುತ್ತಾರೆ. ಅವರಿಗೆ ದುಡ್ಡಿನ ಬೆಲೆ ಗೊತ್ತಿರುವುದಿಲ್ಲ, ಐದು ದಿನ ಓತ್ಲ ಕೆಲಸ ಮಾಡಿ, ಎರಡು ದಿನ ಮಜಾ ಉಡಾಯಿಸುವ ಬಾಹ್ಯ ಸಂಸ್ಕೃತಿಗೆ ಒಗ್ಗಿಕೊಂಡಿರುವ ಈ ಮೊದ್ದು ಜನಗಳು ಆಹಾರ ಪದಾರ್ಥಗಳ ಬೆಲೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಎಷ್ಟು ಬೆಲೆ ತೆತ್ತಾದರೂ ಕೊಳ್ಳುವ ಅಧಮರಾಗಿರುವುದರಿಂದ, ನಮ್ಮಂತಹ ಮಧ್ಯಮವರ್ಗದ ಜನ ಯಾವ ಪದಾರ್ಥ ಕಡಿಮೆಬೆಲೆಗೆ ಇಂತಹ ಮಾಲ್‌ಗಳಲ್ಲಿ ಸಿಗುತ್ತದೋ ಅದನ್ನು ಮಾತ್ರ ಕೊಳ್ಳಬೇಕಾದ ಪರಿಸ್ಥಿತಿ, ಇಲ್ಲದಿದ್ದರೆ ಸುಮ್ಮನೇ ಎಲ್ಲವಸ್ತುಗಳನ್ನು ನೋಡಿ ಬರಿಗೈಲಿ ಬಂದು ದಿನಸಿ ಅಂಗಡಿಯಲ್ಲಿ ಕೊಳ್ಳಬೇಕಾದ ಪರಿಸ್ಥಿತಿ.

ಈ ಐಟಿ-ಬಿಟಿ ಜನಗಳಿಂದಾಗಿ ಸಾಮಾನ್ಯ ಜನರಿಗೆ ತುಂಬಾ ತೊಂದರೆಯಾಗಿದೆ ಈ ಬೆಂಗಳೂರಿನಲ್ಲಿ. ಇವರ ವೀಕೆಂಡ್ ಪಾರ್ಟಿಗಳಲ್ಲಿ ನಡೆಯುವ ಮಾದಕ ವಸ್ತುಗಳ ಬಳಕೆ, ವೇಶ್ಯಾವಾಟಿಕೆ ದಂಧೆ, ದರಿದ್ರ ಸಂಗೀತ ಹಾಕಿಕೊಂಡು ಶನಿವಾರದ ದಿನಗಳಲ್ಲಿ ಅಸಹ್ಯಕರ ನರ್ತನ. ಇವುಗಳಿಂದ ಆನಂದ ಪಡುವ ಈ ಮೂರ್ಖ ಜನ, ಬೇರೆ ದಿನಗಳಲ್ಲಿ ಸಾಚಾಗಳಂತೆ ಮಾಲ್‌ಗಳಲ್ಲಿ ಭಿಕಾರಿಗಳ ತರಹ ವೇಷ ಹಾಕಿಕೊಂಡು (ಒಂದು ದಿನ ನೀವೇ ಭೇಟಿ ನೀಡಿ, ಎಮ್.ಜಿ. ರಸ್ತೆ ಅಥವಾ ಬ್ರಿಗೇಡ್ ರಸ್ತೆಗಳಿಗೆ- ಅವರ ವೇಷ ಯಾವ ಭಿಕ್ಷುಕನಿಗೂ ಕಮ್ಮಿ ಇಲ್ಲ...ಹರಿದು ಹೋಗಿರುವ ಪ್ಯಾಂಟ್, ಹರಿದ ಬನಿಯನ್ ಅಥವಾ ಹರಿದ ಅರ್ಧ ಚಡ್ಡಿ) ಖರೀದಿಗೆ ಬರುವುದನ್ನು ನೋಡಲೇ ಒಂದು ಮಜಾ.....

ಪರ್ಯಾಯ ಕರೆನ್ಸಿ?:
ಬೆಂಗಳೂರಿನಲ್ಲಿ ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಲು ಇಂತಹ ಕೊಳ್ಳುಬಾಕರೇ ನೇರ ಕಾರಣ. ಯಾವುದೇ ವಸ್ತುವಾಗಲೀ ಅದರ ಬೆಲೆ ಎಷ್ಟೇ ಆಗಿರಲಿ ಯಾವುದೇ ಚರ್ಚೆ ಮಾಡದೆ, ಮುದ್ರಿತ ಬೆಲೆ ಕೂಡಾ ನೋಡದೆ ಕೊಳ್ಳುವ ಈ ಮಂದಿ ಇಂದು ಈ ಶಾಪಿಂಗ್ ಮಾಲ್‌ಗಳ ಮೊದಲ ಬಕ್ರಾಗಳು. ಅಲ್ಲದೆ ತಾವು ಕೆಲಸ ಮಾಡುವ ಸಂಸ್ಥೆ ಊಟಕ್ಕೆ ಕೊಡಮಾಡಿದ ಚೀಟಿಗಳನ್ನೇ ಈ ಮಾಲ್‌ಗಳಲ್ಲಿ ಕೊಟ್ಟು ,(ಭಿಕಾರಿಗಳ ತರಹ) ಪರ್ಯಾಯ ಕರೆನ್ಸಿಯಾಗಿ ಉಪಯೋಗಿಸುತ್ತಿರುವುದು ಇವರ ಕಾನೂನು ಉಲ್ಲಂಘನೆಗೆ ಸಾಕ್ಷಿ. ಈ ಊಟದ ಚೀಟಿಗಳನ್ನು ಪರ್ಯಾಯ ಕರೆನ್ಸಿಗಳಾಗಿ ಪಡೆಯುವ ಈ ಮಾಲ್‌ಗಳು ನಮ್ಮ ದೇಶದ ಕಾನೂನಿಗೇ ಸಡ್ಡು ಹೊಡೆದು ಇಂದು ತಮ್ಮ ದೇಶದ್ರೋಹಿತನವನ್ನು ಪ್ರದರ್ಶಿಸುತ್ತಿವೆ. ಇದು ನಮ್ಮ "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ"ಗೆ ನಮ್ಮ ಈ ಐಟಿ-ಬಿಟಿಯ ಜನ ಮಾಡುತ್ತಿರುವ ಒಂದು ಸವಾಲು.

ಸವಾಲ್:
ಬೆಂಗಳೂರಿನಲ್ಲಿ ಭಿಕ್ಷುಕರು ಜಾಸ್ತಿಯಾಗಿದ್ದಾರಂತೆ?

ಈ ಐಟಿ ಬಿಟಿ ಜನಗಳಿಂದಾಗಿ, ನಿಜವಾದ ಭಿಕ್ಷುಕರು ಪರ ರಾಜ್ಯಗಳಿಗೆ ಓಡಿಹೋಗಿದ್ದಾರಂತೆ.

ಬೆಂಗಳೂರಿನಲ್ಲಿ ಐಟಿ-ಬಿಟಿ ಜನಕ್ಕೂ ಭಿಕ್ಷುಕರಿಗೂ ವ್ಯತ್ಯಾಸವೇ ಗೊತ್ತಾಗುವುದೇ ಇಲ್ಲವಂತೆ???????????????

2 comments:

Anonymous said...

ಈ ದರಿದ್ರ ಐಟಿ-ಬಿಟಿ ಮಂದಿಯನ್ನು ಬೆಂಗಳೂರಿನಿಂದಲೇ ಓಡಿಸಿದರೆ ಸಾಮಾನ್ಯ ಜನ ಇಲ್ಲಿ ಜೀವನ ಮಾಡಬಹುದಷ್ಟೆ...ಇಲ್ಲದಿದ್ದಲ್ಲಿ ಸಾಮನ್ಯ ಜನರೇ ಈ ಊರು ಬಿಟ್ಟು ಹೋಗಬೇಕಷ್ಟೆ.

Ravi Kumar Anantha said...

ಇಟಿ ಬಿಟಿ ಜನಕ್ಕು ನಿಂಗು ಯಾಕಪ್ಪ ಕಿರಿಕ್ಕು. ಅವರನ್ನೇನು ಭಯೋತ್ಪಾದಕರು ಅನ್ಕೊಂಡ. ಭಾರತ ಅರ್ಥಿಕವಾಗಿ ಮುನ್ನಡೆಯಲು ಬೇಕಾಗಿರುವ ವಿದೇಶಿ ವಿನಿಮಯ ಬರುತ್ತಿರುವುದೇ ಅದರಿಂದ. ಬೆಂಗಳೂರಿನ ಸ್ವಂತ ಜನ ಸ್ವಲ್ಪ ಬಣ್ಣಗಟ್ಟಿದ್ದಾರೆ ಅಂದರೆ ಅದಕ್ಕು ಅವರೇ ಕಾರಣ. ಇದೊಂದು ಅಪ್ಪಟ ಪೂರ್ವಾಗ್ರಹ ಪೀಡಿತ ಬರಹ, ಇದನ್ನು ಓದಲು ಕಾಮೆಂಟಿಸಲು, ಬಳಸಿದ ಸಮಯ ವ್ಯರ್ಥ.