Tuesday, December 02, 2008

ತುಳುವೆರೆಂಕುಲು




ಡಿಸೆಂಬರ್ ೧: ನಿನ್ನೆ ಭಾನುವಾರ ಅಂದರೆ ನವೆಂಬರ್ ಮಾಸದ ಕೊನೆಯ ದಿನ ಅರ್.ವಿ.ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ವಿನೂತನ ಪ್ರಯೋಗ ತುಳುವೆರೆಂಕುಲು ಬೆಂಗಳೂರು (ರಿ) ಅವರಿಂದ ನಡೆಯಿತು. ಇಲ್ಲಿ ನಡೆದ ವಿಶೇಷವೆಂದರೆ ನಾವು ಆಚರಿಸುವ ಬಲೀಂದ್ರ ಹಬ್ಬದ ಆಚರಣೆಯ ಒಂದು ರೀತಿಯನ್ನು ರಂಗದಲ್ಲಿ ತೋರಿಸಲಾಯಿತು ಮತ್ತು ಸಮಾಜಕ್ಕೆ ನಾನಾ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ತುಳುನಾಡಿನ ಮೂವರನ್ನು ಬಲಿಂದ್ರ ಪುರಸ್ಕಾರ ಕೊಟ್ಟು ಸನ್ಮಾನಿಸಲಾಯಿತು.
ಶರತ್ ಪಿ. ಕಾಳಿಂಗ ರಾವ್‌ರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮ ಕೆ.ಎನ್. ಅಡಿಗರ ವೇದಿಕೆ ನಿರ್ವಹಣೆಯಲ್ಲಿ ಉತ್ತಮವಾಗಿ ಮೂಡಿ ಬಂತು. ಖ್ಯಾತ ಸಮಾಜಸೇವಕರಾದ ಪ್ರೊ. ಕೆ. ಪಿ. ಪುತ್ತೂರಾಯರು, ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹಾಗೂ ತುಳು ಸಾಹಿತಿ ಹಾಗೂ ಸಮಾಜ ಸೇವಕರಾದ ಎಂ.ಬಿ ಅಬ್ದುಲ್ ರೆಹಮಾನ್‌ರನ್ನು ಈ ವೇದಿಕೆಯಲ್ಲಿ ಪ್ರತೀ ವರ್ಷದ ಸಂಪ್ರದಾಯದಂತೆ ಸನ್ಮಾನಿಸಲಾಯಿತು.
ಅಲ್ಲದೆ ನಾನಾ ರೀತಿಯ ಮನರಂಜನೆ, ನೃತ್ಯ ಮೊದಲಾದುವುಗಳಿಂದ ಪ್ರೇಕ್ಷಕರ ಮನ ರಂಜನೆಯಾಯಿತು. ಇದರಲ್ಲಿ ಗಮನ ಸೆಳೆದದ್ದು ರಮೇಶ್ ಭಟ್ ತಂಡದ ಮೂಕಾಭಿನಯ….ನಕ್ಕು ನಕ್ಕು ಸಾಕಾಯಿತು.
ಇಂತಹ ಕಾರ್ಯಕ್ರಮಗಳಿಂದ ವಾರವೆಲ್ಲ ಕತ್ತೆ ಥರಾ ದುಡಿದ ಮನಸ್ಸಿಗೆ ಒಂಥರಾ ನೆಮ್ಮದಿ ಸಿಗುವುದಂತೂ ನಿಜ. ಈ ರೀತಿಯ ಕಾರ್ಯಕ್ರಮಗಳು ಆಗಾಗ ನಡೆಯಬೇಕಾಗಿದೆ. ಅದೂ ಬೆಂಗಳೂರಿನಲ್ಲಿರುವ ತುಳುಜನರು ಒಗ್ಗಟ್ಟಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ, ಹೊಸ ಮಿತ್ರರು, ಹಳೆ ಮಿತ್ರರುಗಳನ್ನು ಭೇಟಿ ಮಾಡುವ ಸುಯೋಗ ನಮಗಾಗುತ್ತದೆ.
ತುಳುನಾಡಿನ ಮಹನೀಯರು ಯಾರಾದರೂ ಈ ಸಂಘದ ಸದಸ್ಯರಾಗಬಯಸಿದಲ್ಲಿ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸುವುದು.

ತುಳುವೆರೆಂಕುಲು ಬೆಂಗಳೂರು (ರಿ).
ನಂ.೩೪/೨,ಶ್ರೀ ಹರಿರಾಮ ಕಾಂಪ್ಲೆಕ್ಸ್, ಕೆ.ಜಿ. ರಸ್ತೆ
ಗಾಂಧಿನಗರ, ಬೆಂಗಳೂರು-೫೬೦೦೦೯. ದೂರವಾಣಿ:೦೮೦-೨೨೨೬೭೯೯೦-೯೩

2 comments:

Anonymous said...

Nice Report...

Anonymous said...

This organisation helps Tulu community to be united and go with Kannada too.