Friday, February 06, 2009

ಸಚಿವೆ ರೇಣುಕಾ ಚೌಧರಿ ಮತ್ತು ’ವ್ಯಾ’ಲೆಂಟೈನ್ಸ್ ಡೇ

ಇವತ್ತಿನ DNA ದಿನಪತ್ರಿಕೆಯ ತಲೆಬರಹದಲ್ಲಿ ರೇಣುಕಾ ಚೌಧರಿ ಎನ್ನುವ ಒಬ್ಬ ಮಹಿಳೆಯ ಹೇಳಿಕೆಯನ್ನು ಈ ರೀತಿ ಪ್ರಕಟಿಸಲಾಗಿತ್ತು.
ಈ ಹೇಳಿಕೆಯನ್ನು ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರಿಗೆ ಹೇಳಿದ್ದು.
"He is not married. He doesn't know what to do. That's his problem. I might land where he is on Feb 14...and give him more than just roses".
ಇದರ ಒಳಾರ್ಥ ಏನು?. And give him more than just roses ಅಂದರೆ ಏನು?. ಅವಳು ಕ್ರಿಶ್ಚಿಯನ್ ಆಗಿ ಪರಿವರ್ತನೆ ಆದರೆ ಎಲ್ಲರೂ ಅದೇ ರೀತಿ ಆಗಬೇಕಿಲ್ಲವಲ್ಲ?. ಇಂತಹ ಹೇಳಿಕೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಎಂಥಹ ಭಾವನೆಗಳನ್ನು ಹುಟ್ಟು ಹಾಕುತ್ತವೆ ಎಂಬುದು ಈ ಮಹಿಳೆಗೆ ತಿಳಿದಿದೆಯೇ?. ಅಂದರೆ ವೇಶ್ಯಾವಾಟಿಕೆಯನ್ನು ಅವಳು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ. ಒಬ್ಬ ಮಹಿಳೆ ಬಹಿರಂಗವಾಗಿ ಇಂತಹ ಹೇಳಿಕೆಯನ್ನು ಕೊಡುತ್ತಿದ್ದರೆ ವ್ಯಾಲೆಂಟೈನ್ಸ್ ಡೇ ಎಂಬ ವೇಶ್ಯಾವಾಟಿಕೆಯನ್ನು ಪ್ರೋತ್ಸಾಹಿಸುವ ಆಚರಣೆಗಳು ನಮ್ಮ ದೇಶದಲ್ಲಿ ಹೆಚ್ಚಾಗುತ್ತವೆ.

ವ್ಯಾಲೆಂಟೈನ್ಸ್ ಡೇ ಬೇಕೇ?

ಈ ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ವನ್ನು ನಮ್ಮ ದೇಶದಲ್ಲಿ ಆಚರಿಸುವ ಪ್ರಮೇಯವಿದೆಯೇ?. ಪಾಶ್ಚಾತ್ಯ ದೇಶಗಳಲ್ಲಿ ಪ್ರೀತಿ ಮಾಡಲೂ ಪುರುಸೊತ್ತು ಸಿಗದ ಕಾರಣ ಅವರು Father's Day, Mother's Day, Grand Father's Day, Grand mother's Day, Valentain's Day ಮುಂತಾದ ದಿನಗಳನ್ನು ಆಚರಿಸುತ್ತಾರೆ. ಅವರು ವರ್ಷಕ್ಕೆ ಒಂದೇ ದಿನ ಪ್ರೀತಿಸುವುದು. ಆದರೆ ವರ್ಷವಿಡೀ ಪ್ರೀತಿಸುವ ನಮಗೆ ಈ ಅಸಭ್ಯ ಸಂಸ್ಕೃತಿ ಬೇಕೆ?. ಇದು ನಮ್ಮ ದೇಶದಲ್ಲಿ ಕೇವಲ ಶೋಕಿಯ, ವೇಶ್ಯಾವಾಟಿಕೆಯನ್ನು ಪ್ರಚೋದಿಸುವ, ವ್ಯಭಿಚಾರವನ್ನು ಪ್ರಚೋದಿಸುವ, ಕಾಮುಕತೆಯನ್ನು ತೋರ್ಪಡಿಸುವ ಒಂದು ದಿನವಾಗಿದೆ.

ಈಗ ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಇದರಲ್ಲಿ ಎಲ್ಲಾ ಮಹಿಳೆಯರೂ, ಪುರುಷರೂ ಕೈಜೋಡಿಸಬೇಕಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗದಿದ್ದರೂ ಕನಿಷ್ಠ ಪಕ್ಷ ಗರಿಷ್ಠ ಮಟ್ಟದಲ್ಲಿ ಭಾಗಿಯಾಗಬೇಕಾಗಿದೆ. ಆದರೆ ಇದರಲ್ಲಿ ಯಾರನ್ನೂ ನಾವು ಬಲವಂತ ಮಾಡಲಾಗುವುದಿಲ್ಲ, ಏಕೆಂದರೆ ಇದು ಭಾರತ ಸ್ವಾಮೀ....ಎಲ್ಲರಿಗೂ ಇಲ್ಲಿ ಎನು ಮಾಡಲೂ ಸ್ವಾತಂತ್ರ್ಯವಿದೆ.

2 comments:

Anonymous said...

ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಸೂಳೆಗಾರಿಗೆ ಮಾಡುವ ಈ ಮಂದಿಯನ್ನು ಬೂಟುಗಾಲಲ್ಲಿ ಒದೆಯಬೇಕು. ಈ ಕಮಂಗಿಗಳಿಂದ ನಮ್ಮ ದೇಶದಲ್ಲಿ ಏಡ್ಸ್ ಎಂಬ ಮಹಾಮಾರಿ ಅತಿಯಾಗಿ ಹರಡುತ್ತಿದೆ. ಈ ಕ್ರಿಶ್ಚಿಯನ್ ಸಂಸ್ಕೃತಿ ನಮ್ಮ ಮನೆ ಹೆಣ್ಮಕ್ಕಳನ್ನು ಬಲಿತೆಗೆದುಕೊಳ್ಳುವುದಂತೂ ಸತ್ಯ.

Mediapepper said...

ವ್ಯಾಲೆಂಟೈನ್ಸ್ ಡೇ ಆಚರಣೆ ನಮ್ಮ ಸ0ಸ್ಕೃತಿ ಅಲ್ಲ. ತಮ್ಮ ಸರಕನ್ನು ಮಾರಲು ವಿದೇಶಿ ಕಂಪನಿಗಳು ಹೂಡಿರುವ ತ0ತ್ರಗಾರಿಕೆ. ಇದು ನಮ್ಮ ಶೋಕಿವಾಲಾ ಯುವಜನರಿಗೆ ಅರ್ಥವಾಗುತ್ತಿಲ್ಲ. ಬ್ರೆಜೀಲ್ ನಲ್ಲಿ ಇತ್ತಿಚೆಗೆ ನಡೆದ ಒಳಉಡುಪುಗಳ ದಿನ ಆಚರಿಸಲಾಯಿತು ಮು0ದೋ0ದು ದಿನ ಇದು ಕೂಡ ನಮ್ಮ ಸ0ಸ್ಕೃತಿ ಎಂದು ರೇಣುಕಾ ಚೌದ್ರಿ ಸಮರ್ಥಿಸಿ ಕೊ0ದರೆ ಆಶ್ಚರ್ಯ ಪಡಬೇಕಾಗಿಲ್ಲ.
ಮೇರಾ ಭಾರತ್ ಮಹಾನ್.