Sunday, February 22, 2009

ಬೆಂಗಳೂರಿನಲ್ಲಿ ಹಗಲು ದರೋಡೆಕೋರರ ಹೆಚ್ಚಳ

ಬೆಂಗಳೂರಿನಲ್ಲಿ ಈಗ ದ್ವಿಚಕ್ರ ಸವಾರರು ಹಾಗೂ ಲಗ್ಗೇಜ್ ತುಂಬಿದ ಆಟೊ, ಲಾರಿಗಳು ಓಡಾಡುವುದು ತ್ರಾಸದಾಯಕವಾಗಿದೆ. ಏಕೆಂದರೆ ಬೆಂಗಳೂರಿನ ರಸ್ತೆಗಳಲ್ಲಿ ಮೈಲಿಗೋದರಂತೆ ಅಡ್ಡಗಟ್ಟುವ ಸರಕಾರೀ ದರೋಡೆಕೋರರು (ಕಳ್ಳ ಕಾಕರು) ಜಾಸ್ತಿಯಾಗಿದ್ದಾರೆ.

ಅಂದರೆ ಎಲ್ಲಿಯಾದರೂ ಸ್ವಲ್ಪ ಸಂದೇಹದಿಂದ ಗಾಡಿ ಓಡಿಸಿದಿರೋ...ನಿಮ್ಮ ದ್ವಿಚಕ್ರ ವಾಹನವನ್ನು ಆಡ್ಡ ಹಾಕಿ ಯಾವುದೇ ದಾಖಲೆಗಳಿದ್ದರೂ ಸಹ ಯಾವುದೋ ಕುಂಟುನೆಪ ತೆಗೆದು ಜೇಬಿನಲ್ಲಿರುವುದನ್ನೆಲ್ಲಾ ದೋಚುವ ಈ ಮಂದಿಯ ಬಗ್ಗೆ ಎಲ್ಲರೂ ಜಾಗರೂಕರಾಗಿರುವುದು ಒಳಿತು. ಹಾಗಂತ ಇವರ ಕೈಯಿಂದ ಪಾರಾಗಲು ಸಾಧ್ಯವೇ ಇಲ್ಲ. ಏಕೆಂದರೆ ರಕ್ತ ಹೀರುವ ಜಿಗಣೆಗಳಂತೆ ಹಣದ ರುಚಿ ಹತ್ತಿರುವ ಈ ಖದೀಮರು ದಿನಕ್ಕೆ ಏನಿಲ್ಲವೆಂದರೂ ಐದು ಸಾವಿರದವರೆಗೂ ದೋಚುತ್ತಿದ್ದಾರೆ. ಹಾಗಂತ ಇವರ ಗುಂಪಿನಲ್ಲಿ ಸಾಚಾಗಳು ತುಂಬಾ ಕಡಿಮೆ. ಬೆಂಗಳೂರಿನ ಗಬ್ಬು ರಸ್ತೆಗಳು, ಹದಗೆಟ್ಟ ಟ್ರಾಫಿಕ್ ವ್ಯವಸ್ಥೆಯನ್ನು ಮೊದಲು ಸರಿ ಮಾಡಿ ನಂತರ ಈ ಕೆಲಸ ಮಾಡುವುದೊಳಿತು. ಎಕೆಂದರೆ Signal ಕೇರ್ ಮಾಡದೆ ಗಾಡಿ ಓಡಿಸುವವರು, wheeling ಮಾಡುವವರು, ಭರೋ....ಎಂದು ಜೋರಾಗಿ ಗಾಡಿ ಓಡಿಸುವ ಕೆಲ ಕಾಲೇಜು ವಿದ್ಯಾರ್ಥಿಗಳು...ಮೊದಲು ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಎಲ್ಲರನ್ನೂ ರಕ್ತ ಹೀರಿದಂತೆ ಹಣಕ್ಕಾಗಿ ಪೀಡಿಸುವುದು ಯಾವ ನ್ಯಾಯ?. ಮಾಡಿದರೆ ಎಲ್ಲವೂ ಸರಿ ಇರಬೇಕು.

ಇದರ ಬಗೆ ಕ್ರಮ ತೆಗೆದುಕೊಳ್ಳುವವರು ಯಾರು?.

1 comment:

Anonymous said...

ದರೋಡೆಕೋರರಿಗೂ ಪೋಲಿಸರಿಗೂ ಸಂಬಂಧ ಇರುವುದರಿಂದಲೇ ಬೆಂಗಳೂರಿನಲ್ಲಿ ಕೊಲೆ, ದರೋಡೆಗಳು ಹೆಚ್ಚಾಗುತ್ತಿವೆ. ಏಕೆಂದರೆ ಅವರಿಗೂ ಅದರಲ್ಲಿ ಪ್ರತಿಶತ ಪಾಲು ಇದೆ.