Sunday, May 23, 2010

ಸಿಕ್ಸ್ ಒ ಕ್ಲಾಕ್ ಎಂಬ ಮಕ್ಮಲ್ ಟೋಪಿ ಸಂಸ್ಥೆ

ಇತ್ತೀಚೆಗೆ ಅನೇಕ ಮಕ್ಮಲ್ ಟೋಪಿ ಸಂಸ್ಥೆಗಳು ಜನರಿಂದ ಹಣ ವಸೂಲಿ ಮಾಡಿ ಬೆಂಗಳೂರಿನಿಂದ ಪರಾರಿಯಾಗಿವೆ. ಅದರಲ್ಲಿ ಇತ್ತೀಚೆಗೆ ಜನರಿಗೆ ಟೋಪಿ ಹಾಕಿ ಪರಾರಿಯಾಗಿರುವ “ಸಿಕ್ಸ್ ಒ ಕ್ಲಾಕ್” ಎಂಬ ಖದೀಮ ಸಂಸ್ಥೆ ಕೂಡಾ ಒಂದು.
ಜನರಿಗೆ ಪುಟಗೋಸಿ ಚಿಲ್ಲರೆ ಕಾಫಿ ಪುಡಿ ಕೊಟ್ಟು ನೂರು ರೂಪಾಯಿ ಕಟ್ಟಿಸಿಕೊಂಡು ಜನರಿಗೆ ವಾರದ ಆದಾಯದ ಆಸೆ ತೋರಿಸಿ ಕೋಟಿ ಆದಾಯಗಳಿಸಿ ಇದ್ದಕ್ಕಿದ್ದಂತೆ ಪಕ್ಕದ ಆಂಧ್ರದ ಒಬ್ಬ ಸೆಟ್ಟಿ ಬೆಂಗಳೂರಿನಿಂದ ಪರಾರಿಯಾಗಿದ್ದಾನೆ. ಅವನ ಜೊತೆ ಇದ್ದ ಇನ್ನೊಬ್ಬ ಸ್ಥಳೀಯ ನಿವಾಸಿ ಹೆಂಗಸು ಕೂಡಾ ನಾಪತ್ತೆಯಾಗಿದ್ದಾಳೆ.
ಜನ ಹಣ ಕೇಳಲು ಹೋದಾಗ ನನ್ನ ತಂದೆ ತೀರಿಹೋದರು, ನನ್ನ ತಮ್ಮ ತೀರಿ ಹೋದ ಎಂದು ಸುಳ್ಳು ಹೇಳಿ ಇಲ್ಲದ ಕಥೆ ಕಂತೆ ಕಟ್ಟಿ ಎಲ್ಲರನ್ನು ಸಾಗಹಾಕಿ ಜನರಿಗೆ ಚೆನ್ನಾಗಿ ಟೋಪಿ ಹಾಕಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ರೀತಿ ಮೋಸ ಮಾಡುವವರು ಹೆಚ್ಚಾಗಿ ಪಕ್ಕದ ಆಂಧ್ರ, ತಮಿಳುನಾಡಿನಿಂದ ವಲಸೆ ಬಂದವರು. ಇಲ್ಲಿ ಹಣ ಮಾಡಿ ಎಲ್ಲರಿಗೆ ಟೋಪಿ ಹಾಕಿ ಮತ್ತೆ ತಮ್ಮೂರಿಗೆ ಪಲಾಯನಗೈಯುವುದು ಇವರಿಗೆ ನೀರು ಕುಡಿದಷ್ಟು ಸಲೀಸು. ಇದಕ್ಕೆ ಉದಾಹರಣೆ ಎಂದರೆ “ವಿನಿವಿಂಕ್ ಖದೀಮ ಶಾಸ್ತ್ರಿ” ಮತ್ತು “ದಾರ್ಶನಿಕ ಫೌಂಡೇಶನ್‌ನ ಖದೀಮ ಕಳ್ಳ ಕೃಷ್ಣಮೂರ್ತಿ”. ಇವರೆಲ್ಲ ಮಾವಾಡು, ಮೀವಾಡು ಎಂದು ಮೊದಲು ಅವರ ಜಾತಿಯವರನ್ನು ಸೇರಿಸಿಕೊಂಡು ನಂತರ ಮಿಕ್ಕವರಿಗೆ ಸರಿಯಾಗಿ ಟೋಪಿ ಹಾಕಿ ಪರಾರಿಯಾಗುತ್ತಾರೆ. ಇದರಲ್ಲಿ ಸಿಕ್ಸ್ ಒ ಕ್ಲಾಕ್ ಸಂಸ್ಥೆಯ ಕಳ್ಳ ಖದೀಮನಾದ ಮಲ್ಲಿಕಾರ್ಜುನ ಸೆಟ್ಟಿ ಕೂಡಾ ಒಬ್ಬ. ಇವನು ಸ್ಥಳೀಯ ಮಹಿಳೆಯೊಬ್ಬಳೊಂದಿಗೆ ಸೇರಿಕೊಂಡು ಜನರಿಗೆ ಕಾಫಿಕುಡಿಸಿ ಚೆನ್ನಾಗಿ ಟೋಪಿ ಹಾಕಿದ್ದಾನೆ.
ಅಂದರೆ ನೂರು ರೂಪಾಯಿ ಕೊಟ್ಟು ಸದಸ್ಯರಾದರೆ ನೂರು ಗ್ರಾಂ ಕಾಫಿಪುಡಿ ಕೊಟ್ಟು ಮಿಕ್ಕಿದ ಹಣವನ್ನು ತಾನೇ ಇಟ್ಟುಕೊಂಡು ರೊಟೇಷನ್ ಮಾಡಿ ಕೆಲ ಜನರಿಗೆ ಕಮಿಷನ್ ಕೊಟ್ಟು ಆಸೆ ತೋರಿಸಿ, ಅನೇಕ ಜನರಿಂದ ಲಕ್ಷಗಟ್ಟಲೆ ಹಣ ಪಡೆದು, ಒಂದು ಕೋಟಿ ಆಗುವವರೆಗೂ ಕಾದು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಇವನನ್ನು ನಂಬಿ ಕರ್ನಾಟಕದಲ್ಲೇ ಅಲ್ಲದೆ ದೂರದ ಆಂಧ್ರ ಹಾಗೂ ತಮಿಳ್ನಾಡುಗಳಲ್ಲಿಯೂ ಜನ ಹಣ ವಿನಿಯೋಗಿಸಿ, ಮೂರು ನಾಮ ಹಾಕಿಸಿಕೊಂಡಿದ್ದಾರೆ.

ಈ ಕೆಳಗಿನ ವಿಳಾಸದಲ್ಲಿ ತಮ್ಮ ಕಛೇರಿ ತೆರೆದು ಜನರಿಗೆ ಟೋಪಿ ಹಾಕಿರುತ್ತಾರೆ.

Six ‘O’ Clock Enterprises
#50/1,1st Floor, 18th Main Road,
Muneswara Block, Bengaluru-26.
Ph:9964912581 / 9343711672

2 comments:

Anonymous said...

There are so many companies in Bangalore are doing this type of business. Around 85 companies closed as of now. There are some IDIOT Companies like Symcon Network, Tricube.....closing nearby.

Lxchat said...

Free Kannada Chat Rooms, www.Lxchat.com , Free Fun chat rooms Kannada chat