Tuesday, April 08, 2008

ಮಧ್ಯಮ ವರ್ಗದವರೇ...ಎರಡು ಬಾರಿ ಯೋಚಿಸಿ ಮತ ನೀಡಿ

ಬೆಂಗಳೂರು ಎಪ್ರಿಲ್ ೧೫: ಮತದಾರರೇ ಈಗ ಎಚ್ಚರದಿಂದಿರಿ.....ನೀವು ಮತ ಹಾಕುವ ಮುನ್ನ ತಮ್ಮ ಅತ್ಮ ಸಾಕ್ಷಿಯಿಂದ ಅಭ್ಯರ್ಥಿಯನ್ನು ಚುನಾಯಿಸಿ. ಇಲ್ಲದಿದ್ದಲ್ಲಿ ನೀವು ಟೋಪಿ ಬೀಳುವ ಸಾಧ್ಯತೆಗಳಿವೆ. ಕಲರ್ ಟಿ.ವಿ, ೨ ರೂಗೆ ಅಕ್ಕಿ, ಎಲ್ಲರಿಗೂ ಕೆಲಸ, ಕೆಲಸ ಇಲ್ಲದಿದ್ದವರಿಗೂ ಸಂಬಳ.....ಮುಂತಾದ ಆಶ್ವಾಸನೆಗಳನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ. ಆದರೆ ಅವರಪ್ಪನ ಗಂಟು ಏನು ಹೋಗಬೇಕು?.....ಅವರು ಕಿತ್ತು ಕೊಡುವುದು ಮಧ್ಯಮವರ್ಗದ ಜನರ ರಕ್ತವನ್ನು ಮಾರಿ. ಇಲ್ಲಿ ಕೇವಲ ಉನ್ನತ ವರ್ಗ ಮತ್ತು ಕೆಳವರ್ಗದ ಜನರಿಗೆ ರಾಜಕೀಯ ಪಕ್ಷಗಳು ಸಹಾಯ ಮಾಡುತ್ತವೆ. ಕೆಳವರ್ಗದವರಿಗೆ ಆಮಿಷ, ಉನ್ನತ ವರ್ಗದವರಿಗೆ ಸಚಿವ ಸ್ಥಾನ, ಮತ್ತು ಉನ್ನತ ಹುದ್ದೆಗಳು. ಆದರೆ ಮಧ್ಯಮ ವರ್ಗದ ಜನತೆ ಕೇವಲ ಓಟು ಪಡೆಯಲು ಮಾತ್ರ. ನಂತರ ಅವರನ್ನು ಕಿತ್ತು ತಿನ್ನುವುದೇ ರಾಜಕೀಯ ಪಕ್ಷಗಳ ನಿಜ ರೂಪ.
ಕಾಂಗ್ರೆಸ್ ಪಕ್ಷದಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನ ವಿಲ್ಲದವರು, ಕೇವಲ ಅಧಿಕಾರ, ಹಣದಾಹಿಗಳಿದ್ದರೆ, ಬಿ.ಜೆ.ಪಿಯಲ್ಲಿ ಭೂಗಳ್ಳರು, ರಿಯಲ್ ಎಸ್ಟೇಟ್ ಮಾಫಿಯಾಗಳು, ರೌಡಿ, ದರೋಡೆಕೋರರು ಇದ್ದರೆ, ಜೆ.ಡಿ.ಎಸ್ ನಲ್ಲಿ ಗಣಿ ಮಾಫಿಯಾಗಳು, ರೌಡಿಗಳು, ರಿಯಲ್ ಎಸ್ಟೇಟ್ ದೊರೆಗಳು ಇದ್ದರೆ...ಇನ್ನುಳಿದ ಪಕ್ಷಗಳು ಲೆಕ್ಕಕ್ಕಿಲ್ಲದೆ ಇದ್ದಾವೆ. ಅವುಗಳೂ ಕೂಡಾ ರೌಡಿಗಳ ವಿರುದ್ದ ರೌಡಿ, ದರೋಡೆಕೋರರ ವಿರುದ್ದ ದರೋಡೆಕೋರರು, ಗಣಿಗಳ್ಳರ ವಿರುದ್ದ ಗಣಿಗಳ್ಳರು, ಭೂಗಳ್ಳರ ವಿರುದ್ದ ಭೂಗಳ್ಳರು, ಮಾಫಿಯಾ ದೊರೆಗಳ ವಿರುದ್ದ ಮಾಫಿಯಾ ದೊರೆಗಳನ್ನು ನಿಲ್ಲಿಸಿ ತಾವೂ ಎನೂ ಕಡಿಮೆ ಇಲ್ಲವೆಂಬಂತೆ ವರ್ತಿಸುತ್ತಿವೆ.
ದಯವಿಟ್ಟು ಯೋಚಿಸಿ ಮತ ನೀಡಿ. ನಿಮ್ಮ ಮತ ಪೋಲಾಗದಂತೆ ನೋಡಿಕೊಳ್ಳಿ, ಯಾವುದೇ ಪಕ್ಷಕ್ಕೆ ಮತ ನೀಡಬೇಡಿ. ಅಭ್ಯರ್ಥಿಯ ಹಿನ್ನೆಲೆ ವಿಚಾರಿಸಿ ಮತ ನೀಡಿ. ಉದಾಹರಣೆಗೆ ಕಾಂಗ್ರೆಸ್ ಪಕ್ಷದಿಂದ ಬಸವನಗುಡಿ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ.ಚಂದ್ರಶೇಖರ್ ಅಂತಹ ಜನಪ್ರೇಮಿ ನಾಯಕರನ್ನು ಆರಿಸಿ (ನಾನು ಕಾಂಗ್ರೆಸ್ ಅಥವಾ ಯಾವುದೇ ಪಕ್ಷದ ಬೆಂಬಲಿಗನಲ್ಲ). ಸೂಕ್ತ ಅಭ್ಯರ್ಥಿ ಯಾರೂ ಇಲ್ಲದಿದ್ದಲ್ಲಿ ...ಪಕ್ಷೇತರರನ್ನು ಆರಿಸಿ. ಆದರೆ ಕಳ್ಳಕಾಕರಿಗೆ ಮತ ನೀಡಬೇಡಿ.
"ದಯವಿಟ್ಟು ಯೋಚಿಸಿ ಮತನೀಡಿ....ಏನೇ ಆಮಿಷ ಒಡ್ಡಿದರೂ ತೆಗೆದುಕೊಳ್ಳಿ, ಆದರೆ ಮತ ಮಾತ್ರ ಯೋಚಿಸಿ ನೀಡಿ....ನೀವು ನೀಡುತ್ತಿರುವ ಮತ- ಕನ್ನಡಾಂಬೆಯ ಉದ್ದಾರಕ್ಕಾಗಿ, ಸುವರ್ಣ ಕರ್ನಾಟಕಕ್ಕಾಗಿ, ಕನ್ನಡಿಗರ ಉಳಿವಿಗಾಗಿ"

1 comment:

Anveshi said...

ವೀರ ಕನ್ನಡಿಗರೆ,
ಕರೆಂಟಿಲ್ಲದಿದ್ದರೂ ಬಣ್ಣಗೆಟ್ಟ ಟಿವಿ, ತಿನ್ನಲು ಹುಳಹುಪ್ಪಟೆಗಳಿರುವ ಹಳಸಲು ಅಕ್ಕಿ, ಕುಡಿಯಲು ನೀರಿಲ್ಲದಿದ್ದರೂ ಒಂದಷ್ಟು ಹೆಂಡ ಇವೆಲ್ಲಾ ಕೊಟ್ಟರೆ ಮಾತ್ರ ಓಟು ಬೀಳುತ್ತದೆ ಅಂದ್ಕೊಂಡಿದ್ದಾರೆ ರಾಜಕಾರಣಿಗಳು.

ಇಂತಹ ಆಮಿಷಗಳಿಗೆ ಬಲಿಯಾಗುವವರು ಹೆಚ್ಚಾಗಬೇಕು. ಹಾಗಾದರೆ ಅವರು ಸಂಪಾದಿಸಿದ ಕಾಳಧನ ಎಲ್ಲವೂ ಸ್ವಲ್ಪಮಟ್ಟಿಗೆ ಕರಗಬಹುದು. ಜನರ ಬದುಕೂ ಉದ್ಧಾರವಾಗಬಹುದು. ಆದರೆ ಓಟು ಮಾತ್ರ ನಿಷ್ಠಾವಂತರಿಗೇ ನೀಡಬೇಕು.