Tuesday, August 26, 2008

"ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ




ಬೆಂಗಳೂರೂ ಆಗಸ್ಟ್ ೨೬:

ಭೂಮಿಯ ತಾಪಮಾನದ ಹೆಚ್ಚಳ ಈಗ ಎಲ್ಲರನ್ನೂ ಕಂಗೆಡಿಸುತ್ತಿರುವ ವಿಚಾರವಾಗಿದೆ. ಅಂದರೆ ಈ ಭೂಮಿಯ ತಾಪಮಾನದ ಕಾರಣದಿಂದ ಹವಾಮಾನದಲ್ಲಿ ಬದಲಾವಣೆಗಳು ಅಂದರೆ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದು, ಬೇಸಿಗೆಯಲ್ಲಿ ಅತೀ ಸೆಕೆ, ಚಳಿಗಾಲದಲ್ಲಿ ಅತೀ ಚಳಿ, ಮಳೆಗಾಲದಲ್ಲಿ ಅತೀ ಮಳೆ, ಭೂಕಂಪಗಳು, ಚಂಡಮಾರುತಗಳು, ಸಮುದ್ರ ಉಕ್ಕಿ ಹರಿಯುವುದು ಮುಂತಾದವುಗಳು ಸಂಭವಿಸುತ್ತವೆ.
ಅಂದರೆ ಇದಕ್ಕೆ ಕಾರಣ ಹೆಚ್ಚುತ್ತಿರುವ ಹೊಗೆಕಾರುವ ಕೈಗಾರಿಕೆಗಳು, ಹೆಚ್ಚುತ್ತಿರುವ ವಾಹನಗಳು, ಬರಿದಾಗುತ್ತಿರುವ ಅರಣ್ಯಪ್ರದೇಶಗಳು ಬಹಳ ಕಾರಣವಾಗಿವೆ. ಇದನ್ನು ತಡೆಗಟ್ಟುವ ಉಪಾಯಗಳನ್ನು ಆದಷ್ಟು ಬೇಗ ಹುಡುಕಬೇಕಾಗಿದೆ. ವಾಹನಗಳ ಇಂಧನಕ್ಕೆ ಪರ್ಯಾಯವಾದ ಇಂಧನವನ್ನು ನಾವು ಹುಡುಕಬೇಕಾಗಿದೆ. ಅರಣ್ಯಪ್ರದೇಶಗಳ ನಾಶವನ್ನು ನಾವು ತಡೆಯಬೇಕಾಗಿದೆ. ಹಾಗೂ ಮರಗಳನ್ನು ಬೆಳೆಸುವ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ, ಅದರ ಅನಿವಾರ್ಯತೆಯ ಬಗ್ಗೆ ತಿಳಿಹೇಳಬೇಕಾಗಿದೆ.

ನಾವು ಪ್ರಾಕೃತಿಕ ಇಂಧನದ ಮೂಲವನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಅಂದರೆ ನಾವು ಆದಷ್ಟೂ ಸೌರಶಕ್ತಿಯ ಬಳಕೆಯ ಬಗ್ಗೆ ಎಲ್ಲರಲ್ಲೂ ಒಂದು ಪರಿವರ್ತನೆ ಉಂಟುಮಾಡುವಲ್ಲಿ ಚಿಂತನೆ ಮಾಡಬೇಕಾಗಿದೆ. ಅಂದರೆ ವಿದ್ಯುತ್, ವಾಹನದ ಪರ್ಯಾಯ ಇಂಧನವಾಗಿ ಬಳಸಿ ಆದಷ್ಟೂ ಭೂತಾಪಮಾನಕ್ಕೆ ಕಾರಣವಾಗುವಂತಹ ವಸ್ತುಗಳನ್ನು ದೂರವಿಡಬೇಕು. ಅಂದರೆ ಇದರ ಪರಿಣಾಮವನ್ನು "The Day After Tomorrow" ಎಂಬ ಆಂಗ್ಲ ಚಲನಚಿತ್ರದಲ್ಲಿ ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿ ಸುನಾಮಿಯ ದೃಶ್ಯವಂತೂ ಬಹಳ ಸಹಜವಾಗಿ ಮೂಡಿಬಂದಿದೆ.

ಎಲ್ಲರಲ್ಲೂ ಈ ಮೂಲಕ ನಿವೇದನೆ ಎಂಡರೆ ಆದಷ್ಟು ಮರಗಳನ್ನು ಬೆಳೆಸಿ. ಆದಷ್ಟು ಹೊಗೆ ಉಗುಳುವ ವಾಹನಗಳನ್ನು ಉಪಯೋಗಿಸಬೇಡಿ.
ಎಲ್ಲರೂ GREEN EARTH ಹಸಿರು ಭೂಮಿಗಾಗಿ ಶ್ರಮಿಸಿ....ಭೂಮಿಯ ತಾಪಮಾನ ಕಡಿಮೆ ಮಾಡಿ.

3 comments:

Anonymous said...

ತಾಪಮಾನಕ್ಕೆ ಕಾರಣವಾಗುವ ಎಲ್ಲ ಹಳೆಯ ವಾಹನಗಳನ್ನು ಮೊದಲು ನಿಷೇಧಿಸಬೇಕು. ಅಲ್ಲದೆ ಮಕ್ಕಳಲ್ಲಿ ಈ ಬಗ್ಗೆ ಈಗಲೇ ತಿಳುವಳಿಕೆ ಮೂಡಿಸಬೇಕು. ಆದರೆ ಈ ದರಿದ್ರ ರಾಜಕಾರಣಿಗಳ ಕಪಿಮುಷ್ಟಿಯಿಂದ (ಅಕ್ರಮ ಗಣಿಗಾರಿಕೆ, ಅರಣ್ಯ ನಾಶ ಮೊದಲಾದುವು) ಕೆಲವು ಅಕ್ರಮಗಳನ್ನು ಹೇಗೆ ತಡೆಯುವುದು?

Harisha - ಹರೀಶ said...

>> ಮರಗಳನ್ನು ಬೆಳೆಸುವ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ, ಅದರ ಅನಿವಾರ್ಯತೆಯ ಬಗ್ಗೆ ತಿಳಿಹೇಳಬೇಕಾಗಿದೆ

ನಾವು ಮಾಡಿ ತೋರಿಸಿದರೆ ತಾನೆ ಮಕ್ಕಳು ಮಾಡುವುದು? ನಮ್ಮ ಪೀಳಿಗೆಯ ಪೂರ್ತಿ ಕಡಿಯುತ್ತೇವೆ, ನಿಮ್ಮ ಪೀಳಿಗೆಯವರು ನಡಿ ಎಂದರೆ ಹೇಗೆ?

Anonymous said...

ಹರೀಶರೇ....ಎಲ್ಲರೂ ಈ ಥರಾ ವಿಚಾರ ಮಾಡಬೇಕು ತಾನೆ?. ಗಣಿ ಮಾಲೀಕರೇ ಸರಕಾರದ ಜುಟ್ಟು ಕೈಯಲ್ಲಿ ಹಿಡಿದಿರುವಾಗ ಇದನ್ನು ತಡೆಗಟ್ಟಿ ಎಂಡರೆ ಹೇಗೆ?. ಈ ಗಣಿ ಧಣಿಗಳಿಂದ ಇನ್ನು ಕೆಲವರ್ಷಗಳಲ್ಲೇ ಕರ್ನಾಟಕದ ಗಣಿ, ಅರಣ್ಯವೂ ನಾಶವಾಗಲಿದೆ. ಈ ದೇಶದ್ರೋಹಿಗಳನ್ನು ಮೊದಲು ಹೊರಗಟ್ಟಿ.