ಬೆಂಗಳೂರು ಜನವರಿ ೧೧: ಮೈನಡುಗುವ ಚಳಿಯಲ್ಲಿ ಭಾನುವಾರ ಸಂಜೆ ಆರು ಗಂಟೆಗೆ ಪರಿವಾರ ಸಮೇತ ಗಿರಿನಗರ ವಿವೇಕಾನಂದ ಪಾರ್ಕ್‌ಗೆ ಹೀಗೇ ಒಂದು ಸವಾರಿ ಹೊರಟಾಗ, ಪಕ್ಕದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ "ಜನಪದ ಜಾತ್ರೆ ಮತ್ತು ನಗೆ ಹಬ್ಬ ೨೦೦೯" ಕಣ್ಣಿಗೆ ಬಿದ್ದಾಗ ಮನಸ್ಸು ಹಗುರ ಮಾಡಿಕೊಳ್ಳಲು ಅತ್ತ ಧಾವಿಸಿದೆ.
ಕರ್ನಾಟಕದ ಜನಪದ ನೃತ್ಯ ಡೊಳ್ಳುಕುಣಿತದೊಂದಿಗೆ ಆರಂಭವಾದ ಹಬ್ಬ ಮುಂದೆ ಕಂಸಾಳೆ ನೃತ್ಯ, ಚೆನ್ನಪಟ್ಟಣದ ಸಹೋದರಿಯರ "ಹಚ್ಚೇವು ಕನ್ನಡದ ದೀಪ" ಎಂಬ ಹಾಡಿಗೆ ಮಾಡಿದ ನೃತ್ಯ ಮನಸೆಳೆಯಿತು. ವಿ.ವಿ.ಪುರಂ ಕಾಲೇಜಿನ ವಿದ್ಯಾರ್ಥಿಗಳಿಂದ ಮನಮೋಹಕ ಪಟ ನೃತ್ಯ, ಕಂಸಾಳೆ ನೃತ್ಯ, ಜೋಗಿ ಚಿತ್ರದ ಹಾಡಿನ ನೃತ್ಯ, ಕೈಲಾಸಂ ಅವರ "ಕೊ ಕೊ ಕೊ ಕೋಳಿಕೆ ರಂಗ" ಎಂಬ ಹಾಡು....ಅದಾದ ಮೇಲೆ ಮಿಮಿಕ್ರಿ ಪಟು ಮೈಸೂರಿನ ರಮೇಶ್ ಬಾಬು ಅವರ ಕಾಮಿಡಿ ಕೂಡಾ ನಕ್ಕು ನಗಿಸುವಂತೆ ಮಾಡಿತು.
ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು (ಶಿವರಾಮೇ ಗೌಡರು), ಕಾರ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ಕನ್ನಡಿಗರ ಪರವಾಗಿ ಜೋರಾಗಿ ಗುಡುಗಿದರು. ಪರಭಾಷಾ ಅಧಮರಿಗೆ ಎಚ್ಚರಿಕೆಯನ್ನೂ ನೀಡಲಾಯಿತು.ಅಂತೂ ಭಾನುವಾರ ಒಂದು ಉತ್ತಮ ಕಾರ್ಯಕ್ರಮಕ್ಕೆ ಹಾಜರಾತಿ ಹಾಕಿದ್ದಕ್ಕೆ ಮನ ಹಗುರಾಯಿತು.ಇನ್ನೊಂದು ಬಹಳ ಸಂತಸದ ವಿಷಯವೆಂದರೆ ನನ್ನ ಮಗಳು ಪ್ರಥಮ ಬಾರಿಗೆ ಕನ್ನಡ ಸಂಘಟನೆಯೊಂದರ ಕಾರ್ಯಕ್ರಮದ ರಂಗಸ್ಥಳದಲ್ಲಿ ಎರಡು ಹಾಡು ಹಾಡಿದ್ದು. ಅಲ್ಲದೆ ಕನ್ನಡದ ಜನಪದ ನೃತ್ಯಗಳು, ಸಂಸ್ಕೃತಿಯ ಬಗ್ಗೆ ಜನರಿಗೆ ರಕ್ಷಣಾವೇದಿಕೆಯ ಅಧ್ಯ್ಕಕ್ಷರು, ಕಾರ್ಯದರ್ಶಿಗಳು ವಿದ್ಯಾವಂತ ಜನರಿಗೆ "ಬುದ್ದಿ" ಹೇಳಿದರು. Convent ಸಂಸ್ಕೃತಿ ಹೆಚ್ಚುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಒಂದು ಸುಂದರ ಸಂಜೆಯನ್ನು ಕಳೆದ ಅನುಭವ ಮನಕ್ಕೆ ಮುದ ನೀಡಿತು.
1 comment:
Marathi Goondas are playing their politics in Belagavi. That coward Raj Thakre and Uddav Thakre as well as Bal Thakrey are becoming Anti-Nationals now. They should be kicked out of this country.
Post a Comment