Sunday, March 15, 2009

ಸರಕಾರೀ ಆಸ್ಪತ್ರೆಗಳು ಎಷ್ಟು ಅಸ(ಹ್ಯ)ಹಕಾರಿ?

ಬೆಂಗಳೂರು ಮಾರ್ಚ್ ೧೫: ನಮ್ಮ ಮಹಾ ಘನ ಸರಕಾರವು ಸರಕಾರೀ ಆಸ್ಪತ್ರೆಗಳಿಂದ ಜನ ಸಾಮಾನ್ಯರಿಗೆ ಸಹಾಯವಾಗಲೆಂದು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಎಷ್ಟರ ಮಟ್ಟಿಗೆ ಇದು ಜನಸಾಮಾನ್ಯರನ್ನು ಮುಟ್ಟಿದೆ ಎನ್ನುವುದು ಸಂದೇಹವಾಗಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ನಾನು ಸರಕಾರೀ ಆಸ್ಪತ್ರೆಯಾದ ಹೆಸರುವಾಸಿ ’ವಿಕ್ಟೋರಿಯ ಆಸ್ಪತ್ರೆ’ ಯನ್ನು ಸಂದರ್ಶಿಸಿದೆ. ನನ್ನ ಮಗನ ಕಾಲಿನ ಚರ್ಮ ಒಡೆದು ಹೋಗಿತ್ತು, ಹೇಗೂ ಚರ್ಮ ವೈದ್ಯರೂ ಇರುತ್ತಾರೆಂದು ಒಳಗೆ ಕಾಲಿಟ್ಟಾಗಲೇ, ಒಂಥರಾ ಅಸಹ್ಯ ಅನುಭವ ಎದುರಾಯಿತು.
ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಸ್ವಚ್ಚತೆ ಎನ್ನುವುದನ್ನು ಭೂತಕನ್ನಡಿ ಹಿಡಿದು ಹುಡುಕಬೇಕು. ಧೂಳು ತುಂಬಿರುವ ಕಡತಗಳು, ಬಂಗಲೆ ನೋಡಿದರೇನೆ ಭೂತ ಬಂಗಲೆ ಥರಾ ಅನುಭವ....

ಹೇಗೂ ಒಳನುಗ್ಗಿದ್ದಾಯಿತು ಅಂತ ರೂ.೧೦ ಕೊಟ್ಟು ಒಂದು ಚೀಟಿ ತೆಗೆದುಕೊಂಡೆ. ಮೊದಲನೇ ಮಹಡಿಯಲ್ಲಿ ಚರ್ಮವೈದ್ಯರಿದ್ದಾರೆ ಎಂದು ತಿಳಿದಾಗ, ಮಹಡಿ ಹತ್ತಿದೆ.....ಭೂತ ಬಂಗಲೆಯಾದರೂ ಸ್ವಲ್ಪ ಸ್ವಚ್ಚ ಇರುತ್ತಿತ್ತೇನೋ....ಭಯದಿಂದಲೇ ಒಳನುಗ್ಗಿದಾಗ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಕೂತಿದ್ದರು...ಬಹುಶಃ ಅವರು ತರಬೇತಿಗೆಂದು ಬಂದಿರಬೇಕು. ನಾನು ನನ್ನ ಮಗನ ಕಾಲು ತೋರಿಸಿದೆ. ಅವರು ತಮ್ಮ ತಮ್ಮಲ್ಲೇ ಚರ್ಚಿಸಿ...ಸ್ವಲ್ಪ ಹೊತ್ತಾದ ಮೇಲೆ ...ಇದು crack heal ಇದಕ್ಕೆ ನೀವು ದಿನಾ ಕಾಲನ್ನು ತೊಳೆದು CRACK Cream ಹಚ್ಚಿರಿ ಎಂದಾಗ ನನಗೆ ನಾನೆಲ್ಲಾದರೂ CRACK ಆಸ್ಪತ್ರೆಗೆ ಬಂದೆನಾ ಎಂದು ಸಂದೇಹವಾಯಿತು. ಅಲ್ಲರೀ ಇವರ ಹತ್ರ ಈ CRACK Cream ಹಚ್ಚಿ ಅಂತ ಹೇಳಿಸಿಕೊಳ್ಳಲು ನಾನು ಬೈಕ್‌ನ ಪೆಟ್ರೋಲ್ ಸುಟ್ಟುಕೊಂಡು, ಪಾರ್ಕಿಂಗ್ ಚಾರ್ಜ್ ಕೊಟ್ಟು, ಚೀಟಿಗೆ ಹತ್ತು ರೂ. ಕೊಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಹೋಗಬೇಕಿತ್ತಾ?.

ಆಗಲೇ ನನಗೆ ಈ ಆಸ್ಪತ್ರೆಯ ನರಕ ಸದೃಶ ದೃಶ್ಯಗಳು ಕಾಣಸಿಕ್ಕವು. ಹೊರಗಡೆ ಎಲ್ಲೆಂದರಲ್ಲಿ ಮಲಗಿದ ರೋಗಿಗಳು, ಸ್ವಚ್ಚತೆಯಿಲ್ಲದ ಆವರಣ, ಸಿಬ್ಬಂದಿಗಳಿಲ್ಲದೆ ಖಾಲಿ ಹೊಡೆಯುತ್ತಿರುವ ಕೊಠಡಿಗಳು, ರೋಗಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಲು ಇಲ್ಲದ ಜನಗಳು....ಇಂಥಹಾ ಅಸಹ್ಯ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಎಷ್ಟು ಪಾಡು ಪಡುತ್ತಿರುವುದೆಂಬುದು ತಿಳಿದು ವೇದನೆಯಾಯಿತು. ಸರಕಾರೀ ವೈದ್ಯರು ತಮ್ಮ ಕಾರ್ಯ ಬಿಟ್ಟು ಖಾಸಗಿ ವ್ಯಾಪಾರ ಮಾಡುತ್ತಿರುವುದರಿಂದ ಸರಿಯಾದ ವೈದ್ಯರ ಕೊರತೆ ಇಲ್ಲಿ ಕಾಣುತ್ತಿದೆ. ಸರಕಾರವೂ ಇತ್ತ ಗಮನ ಕೊಡದಿರುವುದು ಅದರ ಕಾರ್ಯ ದಕ್ಷತೆಯನ್ನು ಪ್ರಶ್ನಾರ್ಹವಾಗಿಸಿದೆ.
ನನಗನಿಸಿದ ಮಟ್ಟಿಗೆ ಎಲ್ಲಾ ಸರಕಾರೀ ಆಸ್ಪತ್ರೆಗಳ ಹಣೆಬರಹ ಇಷ್ಟೇ ಎಂದು ಕಾಣುತ್ತದೆ. ಸರಕಾರ ಯಾಕೆ ಇತ್ತ ಗಮನ ಕೊಡುತ್ತಿಲ್ಲ?. ಚರ್ಚು, ಮಸೀದಿ, ದೇವಳ ನಿರ್ಮಾಣಕ್ಕೆ ಕೋಟಿ, ಕೋಟಿ ಸುರಿಯುವ ಈ ಸರಕಾರಗಳು ಜನರಿಗೆ ಅತೀ ಅಗತ್ಯವಾದ ವೈದ್ಯಕೀಯ ನೆರವು, ಉತ್ತಮ ಶಿಕ್ಷಣಕ್ಕೆ ಯಾಕೆ ಹಣ ಖರ್ಚು ಮಾಡುತ್ತಿಲ್ಲ?.......

ಇದು ಒಂದು ಕೋಟಿ ಡಲರ್ ಪ್ರಶ್ನೆ....ಯಾರಾದರೂ ಉತ್ತರಿಸುವುರಾ?

1 comment:

Anonymous said...

ಮಸೀದಿ ನಿರ್ಮಾಣ ಮಾಡಿದರೆ ಲಕ್ಷ ವೋಟು ಸಿಗುತ್ತದೆ...ಚರ್ಚ್ ನಿರ್ಮಾಣ ಮಾಡಿದರೆ ಲಕ್ಷ ವೋಟು ಸಿಗುತ್ತದೆ....ದೇವಳ ನಿರ್ಮಾಣ ಮಾಡಿದರೆ ಜನರ ದುಡ್ಡು ದೋಚಬಹುದು....ಇದೆಲ್ಲಾ ಆಸ್ಪತ್ರೆ, ಶಾಲೆ ಕಟ್ಟುವುದರಿಂದ ಸಾಧ್ಯವಿಲ್ಲ....ಇಂಥಹಾ ದರಿದ್ರ ಸರಕಾರಗಳನ್ನು ಕಿತ್ತೊಗೆಯಬೇಕು.