Tuesday, March 24, 2009

ಕರ್ನಾಟಕದ ದುರಾದೃಷ್ಟ...ಎಲ್ಲರೂ ಕೀಚಕರೇ...

ಬೆಂಗಳೂರು ಮಾರ್ಚ್ ೨೨: ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಎಂಬವರು ಕನ್ನಡದ್ರೋಹದ ಕೆಲಸವನ್ನು ಮಾಡಿರುವುದು ಕಳವಳಕಾರಿ ಘಟನೆಯಾಗಿದೆ. ಇದನ್ನು ಸಮರ್ಥಿಸಿಕೊಂಡ ಮಾನ್ಯ ಮುಖ್ಯಮಂತ್ರಿಗಳ ವೈಖರಿ ನೋಡಿದರೆ ಬಿ.ಜೆ.ಪಿ.ಯ ಕರ್ನಾಟಕ ದ್ರೋಹ ನಿಧಾನವಾಗಿ ಬಯಲಾಗುತ್ತಿದೆ.

ಕರ್ನಾಟಕದಲ್ಲಿ ಸದಾ ಅಧಿಕಾರ ಸವಿ ಸವಿದು ಖಜಾನೆ ಲೂಟಿ ಹೊಡೆದು ಚಿಕ್ಕಾಸಿನ ಕೆಲಸ ಮಾಡದ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷಕ್ಕೆ ಸಡ್ಡು ಹೊಡೆಯುವ ಮತ್ತೊಂದು ಪಕ್ಷ ಇಲ್ಲದಿದ್ದುದು ನಮ್ಮ ಕನ್ನಡಿಗರಿಗೆ ಒಂದು ನಿರಾಸೆಯ ವಿಷಯವಾಗಿತ್ತು. ಆದರೆ ಭಾರತೀಯ ಜನತಾ ಪಾರ್ಟಿ ಮರೀಚಿಕೆಯಂತೆ ಮೈಕೊಡವಿ ಎದ್ದು ಬಂದು ರಾಜ್ಯದ ಗದ್ದುಗೆ ಹಿಡಿದಾಗ ಎಲ್ಲರಿಗಿಂತ ಸಂತಸ ಪಟ್ಟವ ನಾನು. ಸದ್ಯ ಈಗಲಾದರೂ ಕರ್ನಾಟಕದ, ಕನ್ನಡದ ಅಭಿವೃದ್ದಿ ಖಂಡಿತಾ ಸಾಧ್ಯವಾಗುತ್ತದೆ ಎಂಬ ನನ್ನ ಕನಸು ಇತ್ತೀಚೆಗೆ ಸುಳ್ಳಾಗತೊಡಗಿದೆ. ಏಕೆಂದರೆ ಇತ್ತೀಚೆಗೆ ಬಿ.ಜೆ.ಪಿ. ಮಂದಿ ರಾಷ್ಟ್ರೀಯ ದೃಷ್ಟಿಕೋನದ ನೆಪದಲ್ಲಿ ಕರ್ನಾಟಕ ಹಾಗೂ ಕನ್ನಡವನ್ನು ಮರೆತು ಈ ರಾಜ್ಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಕಳವಳಕಾರಿಯಾಗಿದೆ.

ಬಳ್ಳಾರಿಯಲ್ಲಿ ಆಂಧ್ರದ ಪ್ರಖ್ಯಾತ ಖದೀಮರಾದ ರೆಡ್ಡಿ ಸಹೋದರರು ಗಣಿ ಲೂಟಿ ಮಾಡಿ, ಕನ್ನಡದ ನೆಲವನ್ನು ಆಂಧ್ರಕ್ಕೆ ಮಾರುವಷ್ಟರ ಮಟ್ಟಿಗೆ ಬೆಳೆದಿರುವುದು ಹಾಗೂ ಜನರ ಹಿತಕ್ಕೆ ವಿರುದ್ಧವಾದ ಕೆಲಸ ( ಇಂಜಿನಿಯರಿಂಗ್ ಕಾಲೇಜನ್ನು ಸ್ಥಳಾಂತರ ಮಾಡಿದ್ದು ಮೊದಲಾದ) ಮಾಡುತ್ತಿರುವುದು ಇದರಲ್ಲಿ ಪ್ರಮುಖವಾಗಿದೆ. ಹಾಗೂ ಬೆಳಗಾವಿಯಲ್ಲಿ ಕೇವಲ ಪುಟಗೋಸಿ ಮರಾಠಿ ವೋಟಿಗಾಗಿ ಅವರ ಕಾಲು ನೆಕ್ಕಿ ಬೆಳಗಾವಿ ನಗರಪಾಲಿಕೆಯಲ್ಲಿ ಮರಾಠಿ ಧ್ವಜ ಹಾರುವಂತೆ ಮಾಡಿದ ಬಿ.ಜೆ.ಪಿ. ಸಂಸದ, ಕನ್ನಡ ದ್ರೋಹಿ, ಕರ್ನಾಟಕ ದ್ರೋಹಿ ಸುರೇಶ್ ಅಂಗಡಿ ಹಾಗೂ ಸಂಜಯ ಪಾಟೀಲ್ ಎಂಬ ದುಷ್ಟರಿಗೆ ಮುಖ್ಯಮಂತ್ರಿಗಳೇ ಬೆಂಬಲದ ಮಾತಾಡಿದರೆ ವೀರ ಕನ್ನಡಿಗರ ರಕ್ತ ಕುದಿಯದಿರುತ್ತದೆಯೇ?.

ರಾಷ್ಟ್ರೀಯವಾಗಿ ಚಿಂತನೆ ಮಾಡಬೇಕೆಂಬ ಕೆಲವರ ವಾದ ನಿಜವಾಗಿರಬಹುದು, ಆದರೆ ಇಂದು ಎನ್.ಸಿ.ಪಿ ಹಾಗೂ ಶಿವಸೇನೆ ಮಾಡುತ್ತಿರುವುದು ಏನು?. ಕೇವಲ ಪ್ರಾದೇಶಿಕ ಚಿಂತನೆಯ ಮಟ್ಟಕ್ಕೆ ಈ ಪಕ್ಷಗಳು ಇಳಿದಿರುವುದು ಅವುಗಳ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ, ಹಾಗೂ ಅವುಗಳ ಜನಪ್ರಿಯತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಈಗ ಕರ್ನಾಟಕದ ಬಿ.ಜೆ.ಪಿ.ಯೂ ಅದೇ ಹಾದಿಯನ್ನು ಹಿಡಿದಿರುವುದು, ಓಟು ಕೊಟ್ಟು ಗೆಲ್ಲಿಸಿದ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಲ್ಲದೆ ಮತ್ತೇನು?. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ......ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಬಿ.ಜೆ.ಪಿ. ಮಂದಿ ಕನ್ನಡಿಗರಿಗೆ ಅನ್ಯಾಯ ಮಾಡುವುದಿಲ್ಲ ಎಂಬುದು ಯಾವ ಖಾತರಿ?. ಈ ಮುಖ್ಯಮಂತ್ರಿಯಂತೂ ತನ್ನ ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಸುರಿಯುತ್ತಿರುವುದು, ತನ್ನ ಬುಡ ಗಟ್ಟಿ ಮಾಡಿಕೊಳ್ಳುವ ತಂತ್ರವಲ್ಲದೇ ಮತ್ತೇನು?.

ಇತ್ತೀಚೆಗೆ ಬಿ.ಜೆ.ಪಿ ಮಂದಿ ಪದ್ಮನಾಭನಗರ ಕ್ಷೇತ್ರದಲ್ಲಿ "ಜನಪದ ಜಾತ್ರೆ" ನಡೆಸಿದ್ದರು. ಅಲ್ಲಿ ಎಲ್ಲ ಬಿ.ಜೆ.ಪಿ. ಮಂದಿ ತಾವು ಮಾತ್ರ ರಾಷ್ಟ್ರ ಭಕ್ತರೆಂದು ತೋರಿಸಿಕೊಳ್ಳುತ್ತಾ, ಮೊದಲು ದೇಶ..ಆಮೇಲೆ ಕರ್ನಾಟಕ ಎಂಬ "ತಿಕ್ಕಲು" ಮಾತು ಆಡಿದರು. ಮೊದಲು ರಾಜ್ಯ, ಆಮೇಲೆ ದೇಶ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದ ಈ ಮಂದಿಯಿಂದ ಕನ್ನಡದ, ಕರ್ನಾಟಕದ ಉದ್ದಾರ ಹೇಗೆ ಸಾಧ್ಯ?. ಜನರಲ್ಲಿ ಪ್ರಾದೇಶಿಕ ಭಾವನೆ ಬಲವಾಗಿ ಬೇರೂರಿದಾಗಲೇ ಆ ರಾಜ್ಯದ ಅಭಿವೃದ್ದಿ ಆಗಲು ಸಾಧ್ಯ. ನೆರೆಯ ತಮಿಳುನಾಡು, ಆಂಧ್ರದಲ್ಲಿ ಆದಂತೆ ನಮ್ಮ ರಾಜ್ಯದಲ್ಲಿ ಕೂಡಾ ಪ್ರಾದೇಶಿಕ ಮಟ್ಟದಲ್ಲಿ ಚಿಂತನೆ ನಡೆಯಬೇಕಾದ ಅಗತ್ಯವಿದೆ. ಹಾಗಾಗಿ ಬಿ.ಜೆ.ಪಿ. ಮಂದಿ ಇದೇ ಥರಾ ಮುಂದುವರಿದರೆ ಮುಂದೆ ಮತ್ತೆ ಕಾಂಗ್ರೆಸ್‌ಗೆ ಅಧಿಕಾರವನ್ನು ಬೆಳ್ಳಿತಟ್ಟೆಯಲ್ಲಿ ಇಟ್ಟು ಕೊಟ್ಟ ಹಾಗಾಗುತ್ತದೆ. ಅಲ್ಲದೆ ಸದ್ಯಕ್ಕೆ ಪ್ರಾದೇಶಿಕ ಪಕ್ಷವೆಂದೇ ಗುರುತಿಸಿಕೊಂಡಿರುವ ಜೆ.ಡಿ.ಎಸ್. ಎಂಬ ಪಕ್ಷ ಅಪ್ಪ-ಮಕ್ಕಳ ಪಕ್ಷವಾಗಿ...ಸರಿಯಾದ ಗುರಿ ಇಲ್ಲದೆ ಕೇವಲ ಸ್ವಂತ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಗುರುತಿಸಿಕೊಂಡಿದೆ.

ಈ ಬಿ.ಜೆ.ಪಿ. ತನ್ನ ಕೈಯಾರೆ ತನ್ನ ಪಕ್ಷವನ್ನು ಕಿಚ್ಚಿಟ್ಟು ಸಾಯಿಸುತ್ತಿದೆ. ಮುಖ್ಯಮಂತ್ರಿಯ ಗೊತ್ತುಗುರಿಯಿಲ್ಲದ ಕೆಲವು ನಿರ್ಧಾರಗಳು, ಹೊಗೇನಕಲ್ ವಿವಾದದಲ್ಲಿ ತೋರಿಸಲಾಗದ ಕಠೋರತೆ, ಗಣಿ ಲೂಟಿಯನ್ನು ತಡೆಯಲಾಗದ ನಾಮರ್ದತೆ, ನಗರದಲ್ಲಿ ಭಯೋತ್ಪಾದನೆ ಪರ ತಮಿಳರ ಜಾಥಾಗೆ ಅವಕಾಶ ಮಾಡಿಕೊಟ್ಟು ನಗರದಲ್ಲಿ ತಮಿಳರ ಪ್ರಭಾವ ಹೆಚ್ಚುವಂತೆ ಮಾಡಿದ್ದು...ಈ ಸರಕಾರದ ನಿರ್ವೀರ್ಯತೆಯನ್ನು ತೋರಿಸುತ್ತದೆ. ಇದೇ ರೀತಿ ಕರ್ನಾಟಕದ ವಿರುದ್ದ ಈ ಮಂದಿ ಕಾರ್ಯ ಕೈಗೊಂಡರೆ ಮುಂದೊಂದು ದಿನ ಕರ್ನಾಟಕದಲ್ಲಿ ಬಿ.ಜೆ.ಪಿ. ಇತ್ತು ಎನ್ನುವುದು ಇತಿಹಾಸವಾಗಬೇಕಾಗುತ್ತದೆ.

1 comment:

Anonymous said...

ಈ ಬಿ.ಜೆ.ಪಿ. ಮಂದಿ ಕೂಡಾ ಈಗ ಮುಸ್ಲಿಮರ, ಕರ್ನಾಟಕ ದ್ರೋಹಿಗಳ ಕಾಲು ನೆಕ್ಕುವುದರಲ್ಲಿ ತಾವೇನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.