Wednesday, October 29, 2008

ರಾಜ್ಯೋತ್ಸವ ಪ್ರಶಸ್ತಿ ಬಿಕರಿ..ಕನ್ನಡಿಗರ ಮಾನ ಉಳಿಸಿ

ಬೆಂಗಳೂರು ಅಕ್ಟೋಬರ್ ೨೯: ನವೆಂಬರ್ ಹತ್ತಿರ ಬರುತ್ತಿದ್ದಂತೆ ನಮಗೆ ನೆನಪಾಗುವುದು ಕರ್ನಾಟಕ ರಾಜ್ಯೋತ್ಸವ. ಕರ್ನಾಟಕದಲ್ಲಿ ಪ್ರತೀ ವರ್ಷ ಕೆಲವು (ನ)ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಸನ್ಮಾನಿಸುವುದು ವಾಡಿಕೆ. ಆದರೆ ಇದರಲ್ಲಿ ಕೂಡಾ ಲಾಬಿ, ಮೀಸಲಿನ ಹೊಗೆಯಾಡುತ್ತಿರುವುದು ಕನ್ನಡಾಂಬೆಗೆ ಆಗುತ್ತಿರುವ ಅವಮಾನ.
ನಿಜವಾಗಿಯೂ ಪ್ರಶಸ್ತಿ ಪಡೆಯುವ ಅರ್ಹತೆಯಿರುವವರಿಗೆ ಪ್ರಶಸ್ತಿ ಸಿಗದೆ ಕೇವಲ ರಾಜಕಾರಣಿಗಳ ಬೆಂಬಲ ಇರುವ ಹಾಗೂ ಹಣಬಲ ಇರುವ ಹಾಗೂ ಮೀಸಲು ವರ್ಗದ ಜರಿಗೆ ಮಾತ್ರ ಈ ಪ್ರಶಸ್ತಿ ಸಿಗುತ್ತಿರುವುದು ಕನ್ನಡಾಂಬೆಯ ಮುಖಕ್ಕೆ ರಾಡಿ ಎರಚಿದಂತೆ ಆಗಿದೆ. ಇಂದು ಪ್ರಶಸ್ತಿಗಳು ರಾಜಕೀಯ ಪ್ರತಿಷ್ಠೆ, ಧನಬಲ ಹಾಗೂ ಮೀಸಲಾತಿಯ ಗೊಂದಲದ ಗೂಡಾಗಿದೆ. ಈ ಪ್ರಶಸ್ತಿ ಸಿಗಲು ಒಬ್ಬ ವ್ಯಕ್ತಿ ಸಾವಿರಾರು ರೂಪಾಯಿ ಖರ್ಚು ಮಾಡಿ ಅರ್ಜಿ ಹಾಕುವಂತಹ ಕೀಳು ಮಟ್ಟಕ್ಕೆ ತಲುಪಿದೆ. ಭ್ರಷ್ಟರೇ ತುಂಬಿರುವ ರಾಜಕೀಯದ ವ್ಯಕ್ತಿಗಳಿಗೆ, ಹಿಂದೂಗಳ ವಿರುದ್ಧ ಕತ್ತಿ ಮೆಸೆಯುವ ದೇಶದ್ರೋಹಿಗಳಿಗೆ, ನಕ್ಸಲರ ಪರ ವಾದಿಗಳಿಗೆ, ಕನ್ನಡ ವಿರೋಧಿಗಳಿಗೆ,ಕರ್ನಾಟಕದ ಸಮಗ್ರತೆಗೆ ಭಂಗ ತರುವವರಿಗೆ ಇಂದು ಪ್ರಶಸ್ತಿಗಳು ಬಿಕರಿಯಾಗುತ್ತಿವೆ ಎಂದರೆ ಆ ಪ್ರಶಸ್ತಿಯ ಮೌಲ್ಯ ಎಂತಹ ಕೀಳು ಮಟ್ಟದಲ್ಲಿದೆ ಎಂದು ಎಲ್ಲರಿಗೂ ಮನದಟ್ಟಾಗಿದೆ.
ಈ ಪ್ರಶಸ್ತಿಯ ಆಯ್ಕೆಯೇ ಗೊಂದಲದ ಗೂಡಾಗಿದೆ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದವ ಶ್ರೇಷ್ಠ ಬರಹಗಾರನನ್ನು ಚುನಾಯಿಸುತ್ತಾನೆ. ಒಬ್ಬ ಪರರಾಜ್ಯದವ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ ಗಣ್ಯನನ್ನು ಈ ಪ್ರಶಸ್ತಿಗೆ ಆರಿಸುತ್ತಾನೆ. ಮಾನ್ಯ ಮುಖ್ಯಮಂತ್ರಿಗಳಲ್ಲಿ ಎಲ್ಲ ಕನ್ನಡಿಗರ ಒಕ್ಕೊರಲ ಮನವಿ ಎಂದರೆ ದಯವಿಟ್ಟು ಈ ಪ್ರಶಸ್ತಿ ಬಿಕರಿಯನ್ನು ನಿಲ್ಲಿಸಿ. ಈ ಪ್ರಶಸ್ತಿಗೆ ಮೂರುಕಾಸಿನ ಬೆಲೆ ಇಲ್ಲದಾಗಿದೆ. ಇದೇ ಹಣವನ್ನು ಬಡವರ ಉದ್ಧಾರಕ್ಕಾಗಿ ಖರ್ಚು ಮಾಡಿ, ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಖರ್ಚು ಮಾಡಿ. ಈ ತರಹ ಪೋಲು ಮಾತ್ರ ಮಾಡಬೇಡಿ.ನಮ್ಮ ರಾಜ್ಯದಲ್ಲೇ ಇರುವ,ಅನೇಕ ವರ್ಶಗಳಿಂದ ನಮ್ಮ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ಸಾಹಿತ್ಯ, ಜಾನಪದ, ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಇಂದು ಎಲೆ ಮರೆಯ ಕಾಯಿಯಾಗಿಯೇ ಇದ್ದಾರೆ. ನೆನ್ನೆ ಮೊನ್ನೆ ಈ ಕ್ಷೇತ್ರಕ್ಕೆ ಬಂದವರು ಲಾಬಿ ಮಾಡಿ ಪ್ರಶಸ್ತಿಯನ್ನು ಗಿಟ್ಟಿಸುತ್ತಾನೆ. ಈ ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಾನವನ್ನು ಬದಲಾಯಿಸಬೇಕಾಗಿದೆ. ಇದಕ್ಕೆ ಅರ್ಜಿ ಹಾಕುವ ಸಂಪ್ರದಾಯವನ್ನು ಕೈಬಿಡಬೇಕು.
ಕರ್ನಾಟಕ್ದಲ್ಲಿ ಬಿ.ಜೆ.ಪಿ ಸರಕಾರ ಈಗ ಇದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಿಂದಿನ ಜನವಿರೋಧಿ ಸರಕಾರಗಳ ದಾರಿಯೇ ತುಳಿದರೆ ಅವರಿಗೂ ಹೊಸ ಸರಕಾರಕ್ಕೂ ಏನು ವ್ಯತ್ಯಾಸ?. ಈ ಪ್ರಶಸ್ತಿ ಬಿಕರಿ ನಿಲ್ಲಿಸಿ.....ನಿಜವಾದ ಅರ್ಹರಿಗೆ ಪ್ರಶಸ್ತಿ ಕೊಡಿ....ಈವರೆಗೆ ಪ್ರಶಸ್ತಿ ಪಡೆದ ಎಲ್ಲರ ಬಗ್ಗೆ ಕೂಲಂಕುಶ ತನಿಖೆ ನಡೆಸಿ.....ಲಾಬಿ ಮಾಡಿರುವುದು ಸಾಬೀತಾದಲ್ಲಿ ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಿ...ಪ್ರಶಸ್ತಿಯ ಮಾನ ಉಳಿಸಿ..ಕರ್ನಾಟಕದ ಮಾನ ಉಳಿಸಿ...ಕನ್ನಡಿಗರ ಮಾನ ಉಳಿಸಿ....

2 comments:

Anonymous said...

ದಯವಿಟ್ಟು ಎಲ್ಲ ಕನ್ನಡಿಗರೂ ಒಂದಾಗಿ...ಈ ಪ್ರಶಸ್ತಿಗಳ ಬಿಕರಿ ತಡೆಯಿರಿ...ಒಬ್ಬ ಅನರ್ಹನಿಗೆ ಪ್ರಶಸ್ತಿ ಸಿಗುವುದಕ್ಕಿಂತಲೂ ಅರ್ಹನಿಗೆ ಪ್ರಶಸ್ತಿ ಸಿಗದಿರುವುದು ನೋವುಂಟುಮಾಡುತ್ತದೆ. ಅನರ್ಹರಿಗೆ ಪ್ರಶಸ್ತಿ ಸಿಗುವಂತೆ ಮಾಡುವ ಶ್ವಾನಪುತ್ರರಿಗೆ ’ಕೆರ’ ಸೇವೆ ಮಾಡಬೇಕು.

Anonymous said...

Rajyotsava Avards for sale!!!!! Deepavali Dhamaka!!!!!Rajyotsava Dhamaakaa!!!!
Just Pay Rs.50,000/- to any politician and get your Rajyotsava Award!!!! But Demand is more....Awards Sold out today..... All Kannada haters getting the awards....This is a gambling yaar...This Yeddi also become like all old Cheap Ministers...Uselessfellow....