Sunday, October 05, 2008

ಮಂಗಳೂರಿನ ಲಜ್ಜೆಗೇಡಿ ರಾಜಕಾರಣಿಗಳು ಮತ್ತು ಭಯೋತ್ಪಾದಕರು

ಬೆಂಗಳೂರು ಅಕ್ಟೋಬರ್ ೦೫ : ಇತ್ತೀಚೆಗೆ ಮಂಗಳೂರಿನಲ್ಲಿ ಭಯೋತ್ಪಾದಕರು ಸಿಕ್ಕಿಬಿದ್ದಿರುವುದು ಕರ್ನಾಟಕಕ್ಕೆ ಒಂದು ಕಪ್ಪುಚುಕ್ಕೆಯಾಗಿದೆ. ಇದರ ಹಿಂದೆ ಒಂದು ಭಯಂಕರ ಷಡ್ಯಂತ್ರವೇ ಇರುವ ಸಂಭವವಿದೆ.
ಈ ವಿಷಯದಲ್ಲಿ ಸರಕಾರವು ಖಡಕ್ ನಿರ್ಧಾರ ತೆಗೆದುಕೊಂಡು, ಇದರ ಹಿಂದೆ ಇರುವ ರಾಜಕೀಯ ಶಕ್ತಿಗಳನ್ನು ಪತ್ತೆ ಹಚ್ಚಿ, ಅವರನ್ನು ಗಲ್ಲಿಗೇರಿಸಲು ಪಣತೊಡಬೇಕಾಗಿದೆ. ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಈ ಭಯೋತ್ಪಾದಕರು ಮಂಗಳೂರಿನಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ತಾವು ಅಲ್ಪಸಂಖ್ಯಾತರ ಪ್ರತಿನಿಧಿಗಳು, ಅವರ ರಕ್ಷಕರು ಎಂದು ಬಹಿರಂಗವಾಗಿ ಫೋಸು ಕೊಡುವ ರಾಜಕಾರಣಿಗಳ ಮೇಲೆ ರಾಜ್ಯದ ಗುಪ್ತದಳ ಖಂಡಿತಾ ಒಂದು ಕಣ್ಣಿಡಬೇಕಾಗಿದೆ. ಏಕೆಂದರೆ ಭಯೋತ್ಪಾದಕರಿಗಿಂತ ಈ ದೇಶದ್ರೋಹಿಗಳೇ ನಮ್ಮ ದೇಶದ ಅಖಂಡತೆಗೆ ಸವಾಲಾಗಿ ಪರಿಣಮಿಸಿದ್ದಾರೆ.
ಇನ್ನೊಂದು ಘಟನೆ ಕಣ್ಣಮುಂದೆ ನಡೆದರೂ ಪೋಲೀಸರು ಏನೂ ಗೊತ್ತಿಲ್ಲದವರಂತೆ ಇದ್ದದ್ದು ಅಪಾಯದ ಮುನ್ಸೂಚನೆಯಾಗಿದೆ. ಏಕೆಂದರೆ ಪೋಲಿಸರು ಭಯೋತ್ಪಾದಕರನ್ನು ಬಂಧಿಸಿ ಕರೆತಂದಾಗ ಅವರಿಗೆ ಪ್ರತಿರೋಧವಾಗಿ ರಸ್ತೆಯಲ್ಲಿ ಟೈರ್ ಸುಟ್ಟು, ಅವರನ್ನು ಅಡ್ಡಹಾಕಿ ಬಂಧನಕ್ಕೆ ತಡೆಯೊಡ್ಡಿದ ಕೆಲವು ಮತಾಂಧ ದೇಶದ್ರೋಹಿಗಳನ್ನು ಬಂಧಿಸದೆ ಬಿಟ್ಟಿದ್ದು ಘೋರ ಅಪರಾಧವಾಗಿದೆ. ಇದೇ ಕಿಡಿಗೇಡಿಗಳನ್ನು ಹಾಗೆಯೇ ಬಿಟ್ಟಿದ್ದು ಈ ಭಯೋತ್ಪಾದಕತೆಯನ್ನು ಅವರು ಮತ್ತೆ ಮುಂದುವರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರು ಮುಸ್ಲಿಮರು ಎಂಬ ಒಂದು ಕಾರಣಕ್ಕಾಗಿ ಅವರನ್ನು ಬಂಧಿಸದೆ ಬಿಟ್ಟದ್ದು ಈ ಪೋಲಿಸರ ಷಂಡತನವನ್ನು ತೋರಿಸುತ್ತದೆ. ಇದು ರಾಜಕೀಯ ಪಕ್ಷಗಳ ಒತ್ತಡದಿಂದ ನಡೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಮಂಗಳೂರಿನಲ್ಲಿ ಕಾಂಗ್ರೆಸ್‌ನ ರಾಜಕಾರಣಿಗಳು ಹಿಂದಿನಿಂದಲೂ ಮುಸ್ಲಿಮರಿಗೆ ಹಾಗೂ ಕ್ರಿಸ್ಚಿಯನ್ನರಿಗೆ ಮೊದಲ ಮಣೆ ಹಾಕಿ ಅವರನ್ನು ತಮ್ಮ ದೇವರೆಂದು ತಿಳಿದು ಅವರ ಕಾಲು ನೆಕ್ಕುವ ಒಂದು ಹೀನ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಕೇವಲ ಬಿ.ಜೆ.ಪಿ.ಯ ಪ್ರಬಲತೆಯನ್ನು ಸಹಿಸದೆ ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುವಷ್ಟರ ಮಟ್ಟಿಗೆ ಈ ಕಾಂಗ್ರೆಸ್‍ನ ಕೆಲವು ರಾಜಕಾರಣಿಗಳು ಮುಂದುವರಿದಿದ್ದಾರೆ ಎಂದರೆ ನಮ್ಮ ದೇಶದ ಬಗ್ಗೆ ಇವರಿಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದನ್ನು ತಿಳಿಯಬಹುದು.
ಇಂದು ಹಿಂದುಗಳು ಎಷ್ಟರ ಮಟ್ಟಿಗೆ ಮಂಗಳೂರಿನಲ್ಲಿ ಅಭದ್ರತೆಯನ್ನು ಹೊಂದಿದ್ದಾರೆ ಎಂದರೆ, ಈ ಲಜ್ಜೆಗೇಡಿ ರಾಜಕಾರಣಿಗಳು ಬಹಿರಂಗವಾಗಿಯೇ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುತ್ತಿರುವುದನ್ನು ನೋಡಿಯೂ ಏನೂ ಹೇಳದ ಸ್ಥಿತಿಯಲ್ಲಿದ್ದಾರೆ. ಟೆಂಪೋದಲ್ಲಿ ದನಕರುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಅಪರಾಧವಲ್ಲ, ಅದನ್ನು ತಡೆಯುವುದು ಅಪರಾಧವಾಗಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಮೆರವಣಿಗೆಯನ್ನು ಅಬ್ಬರದಿಂದ ಮಾಡುವಂತಿಲ್ಲ, ಆದರೆ ಮದರಸಾಗಳಲ್ಲಿ ದಿನಾಲೂ ಗಟ್ಟಿಯಾಗಿ ಮೈಕ್ ಹಾಕಿ ಜನಗಳಿಗೆ ತೊಂದರೆ ಕೊಡುವುದು ಅಪರಾಧವಲ್ಲ. ಬಲವಂತದ, ಆಮಿಷದ ಮತಾಂತರ ಮಾಡುವುದು ತಪ್ಪಲ್ಲ, ಅದನ್ನು ವಿರೋಧಿಸುವುದು ತಪ್ಪು. ಮಠಾಧೀಶರುಗಳು ಹಿಂದೂಗಳ ರಕ್ಷಣೆಗೆ ಮೆರವಣಿಗೆ ಮಾಡಿದರೆ ತಪ್ಪು, ಆದರೆ ಮುಸ್ಲಿಮರ, ಕ್ರಿಶ್ಚಿಯನ್ನರು ಬೀದಿಗಿಳಿದು ಹಿಂಸಾಚಾರದ ಮೂಲಕ ಪ್ರತಿಭಟಿಸಿದರೆ ತಪ್ಪಿಲ್ಲ. ಹಿಂದೂಗಳು ಪ್ರತಿಭಟಿಸಿದರೆ ಕೋಮುವಾದ, ಅಲ್ಪಸಂಖ್ಯಾತರು ಪ್ರತಿಭಟಿಸಿದರೆ ದೇಶಪ್ರೇಮ. ಹೇಗಿದೆ ನೋಡಿ ನಮ್ಮ ದೇಶದ ಸಂವಿಧಾನ, ನಮ್ಮ ದೇಶದ ರಾಜಕಾರಣಿಗಳ ರೌದ್ರ, ಕರಾಳ, ಹೀನ ಮುಖ?. ಹಿಂದೂಗಳ ಪವಿತ್ರ ಕ್ಷೇತ್ರಗಳಿಂದ ಸಂಗ್ರಹಿಸಿದ ಹಣ ಇಂದು ಚರ್ಚ್ ನಿರ್ಮಾಣಕ್ಕೆ, ಮಸೀದಿ, ಮದರಸಾಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಆದರೆ ಶಿಥಿಲಾವಸ್ಥೆಯಲ್ಲಿರುವ ಯಾವುದೇ ಹಿಂದೂ ದೇವಳಗಳನ್ನು ಜೀರ್ಣೋದ್ದಾರ ಮಾಡಲು ಯಾವುದೇ ಸಹಾಯವಿಲ್ಲ.
ಹಿಂದೂಗಳು ಇಂದು ಭಾರತದಲ್ಲಿ ಅಭದ್ರತೆಯ ನೆರಳಲ್ಲಿ ಬದುಕುತ್ತಿದ್ದಾರೆ. ಈಗ ಅಲ್ಲಲ್ಲಿ ಇಂತಹ ಅಭದ್ರತೆಯ ಭಯದಿಂದ ಹೊರಬರಲು ಹಿಂದೂಗಳು ಬಹಿರಂಗವಾಗಿಯೇ ಪ್ರತಿಭಟನೆ ಮಾಡುತ್ತಿರುವುದು, ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಅಲ್ಲಾಡಲು ಶುರುವಾಗಿದೆ. ಇದೇ ರೀತಿ ಈ ಕಾಂಗ್ರೆಸ್‌ನ ಕೆಲ ರಾಜಕಾರಣಿಗಳ ಬೆಂಬಲ ಈ ಭಯೋತ್ಪಾದಕರಿಗೆ ಮುಂದುವರಿದರೆ, ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಧರ್ಮಯುದ್ಧದ ಘೋಷಣೆ ಮಾಡಿದರೆ ಈ ದೇಶದಲ್ಲಿ ಅರಾಜಕತೆ ಉಂಟಾಗಿ ಅಲ್ಪಸಂಖ್ಯಾತರ ರಕ್ಷಣೆ ಕಷ್ಟವಾಗಲಿದೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಹಿಂದೂಗಳ ಮನೋಭಾವನೆಯನ್ನು ಅರ್ಥಮಾಡಿಕೊಂಡು , ಅಲ್ಪಸಂಖ್ಯಾತರಿಗೆ ಮನ್ನಣೆ ಕೊಡುವುದನ್ನು ನಿಲ್ಲಿಸಿ, ಎಲ್ಲರೂ ಸಮಬಾಳ್ವೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಈಗಿನ ಸದ್ಯದ ಅವಶ್ಯಕತೆಯಾಗಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ " ಧರ್ಮೋ ರಕ್ಷತಿ ರಕ್ಷಿತಃ" - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ.
"ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್!!"- ಅಂದರೆ ಧರ್ಮವು ನಷ್ಟವಾಗಿ ಅಧರ್ಮವು ಅಭಿವೃದ್ದಿಯಾದಾಗ ನಾನು ಜನ್ಮವನ್ನು ಎತ್ತುತ್ತೇನೆ.
"ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್! ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ!!"- ಅಂದರೆ ಸಾಧುಗಳ ಸಂರಕ್ಷಣೆಗಾಗಿ-ದುಷ್ಟರ ಸಂಹಾರಕ್ಕಾಗಿ-ಧರ್ಮ ಸಂಸ್ಥಾಪನೆಗೋಸ್ಕರ ನಾನು ಯುಗಯುಗಗಳಲ್ಲಿಯೂ ಹುಟ್ಟುತ್ತೇನೆ.

ಆದರೆ ಕಲಿಯುಗದಲ್ಲಿ ಭಗವಂತ ಕಲ್ಕಿ ಅವತಾರ ತಾಳುತ್ತಾನೆ ಹಾಗೂ ದುಷ್ಟರನ್ನು ಸಂಹರಿಸುತ್ತಾನೆ. ಅಂದರೆ ಅವನು ಧರ್ಮ ಸಂರಕ್ಷಕ ಯೋಧರ ದೇಹದಲ್ಲಿ ಹೊಕ್ಕು ದುಷ್ಟರ ಸಂಹಾರ ಮಾಡುತ್ತಾನೆ. ಇದನ್ನು ಈ ದುಷ್ಟ ರಾಜಕಾರಣಿಗಳು ಅರ್ಥ ಮಾಡಿಕೊಂಡರೆ ಸಾಕು.

3 comments:

Anonymous said...

ಇಂತಹ ಲಜ್ಜೆಗೇಡಿ ರಾಜಕಾರಣಿಗಳೇ ಈ ಚರ್ಚ್ ಧಾಳಿಯ ಕಾರಣಕರ್ತರಾಗಿದ್ದಾರೆ. ಮೊದಲು ಇವರುಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಸತ್ಯ ಹೊರಬರಬಹುದು.

Kishore said...

ನಿಮ್ಮ ಬರಹ ಬಹಳ ಚೆನ್ನಾಗಿ ಮೂಡಿಬ೦ದಿದೆ. ಹೀಗೆ ನೀವು ಕರ್ನಾಟಕದ, ಕನ್ನಡಿಗರ ಬಗ್ಗೆ ಬರೆಯುತ್ತಿರಿ ಎ೦ದು ಕೋರುತ್ತೇನೆ. ನೀವು ಹೊಸ ಬರಹ ಬರೆದಾಗಲೆಲ್ಲ ನನಗೆ ಮಿ೦ಚೆ ಮಾಡಲು ಸಾಧ್ಯಾನಾ? kishoreyc at gmail dot com

ಗುರು [Guru] said...

ಕಿಶೋರ್ ಅವರೇ, ನಿಮ್ಮಂತಹ ಕನ್ನಡಿಗರ ಅಭಿನಂದನೆಯೇ ನನಗೆ ಬರೆಯಲು ಸ್ಪೂರ್ತಿ. ಹೀಗೇ ಭೇಟಿ ಕೊಡುತ್ತಿರಿ.