Friday, October 10, 2008

ಭಜರಂಗ ದಳ ಮಾತ್ರ ನಿಷೇಧ ಏಕೆ? ಸಿಮಿ ಏಕಿಲ್ಲ?

ಬೆಂಗಳೂರು ಅಕ್ಟೋಬರ್ ೧೦: ಕೇಂದ್ರ ಸರಕಾರದ ಕೆಲವು ಅಲ್ಪಸಂಖ್ಯಾತರ ಏಜೆಂಟ್‌ಗಳು ಹಿಂದೂ ಸಂಘಟನೆಗಳಾದ , ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತುಗಳನ್ನು ನಿಷೇಧ ಮಾಡುವ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರುತ್ತಿರುವುದು ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಕಳವಳಕಾರಿಯಾಗಿದೆ.
ಇದು ನಿಜಕ್ಕೂ ಹಿಂದೂಗಳ ಏಕತೆಯನ್ನು, ಸಮಗ್ರತೆಯನ್ನು ಪ್ರಶ್ನಿಸುವ ಒಂದು ಸವಾಲಾಗಿದೆ. ಕೇವಲ ಜುಜುಬಿ, ಪುಡಿ ಮತಗಳ ಆಸೆಗೆ ಸಮಗ್ರ ಹಿಂದೂಗಳ ಏಕತೆಯನ್ನೇ ಒಡೆಯುವ ಈ ಹುನ್ನಾರವನ್ನು ಎಲ್ಲರೂ ಖಂಡಿಸಲೇಬೇಕು. ಲಾಲೂಪ್ರಸಾದ್ ಯಾದವ್,ದೇವೇಗೌಡ, ಅರ್ಜುನ್ ಸಿಂಗ್, ಅಮರ್ ಸಿಂಗ್‌ರಂತಹ ಕೆಲ ಕುಟಿಲ ನೀತಿಯ ರಾಜಕಾರಣಿಗಳು ಇಂದು ದೇಶದ ಸಮಗ್ರತೆಗೆ ಸವಾಲಾಗಿದ್ದಾರೆ.
ದೇಶದೆಲ್ಲೆಡೆ ಬಾಂಬ್ ಸ್ಪೋಟವಾಗಿ ನೂರಾರು ಜನ ಪ್ರಾಣ ತೆತ್ತಾಗ, ಅದರ ಬಗ್ಗೆ ಕವಡೆ ಕಿಮ್ಮತ್ತು ಪ್ರದರ್ಶಿಸದ ಈ ರಾಜಕಾರಣಿಗಳು ಚರ್ಚ್ ಮೇಲೆ ಧಾಳಿಯಾದಾಗ ಬಾಯಿ ಬಡಿದುಕೊಳ್ಳಲು ಶುರುಮಾಡುತ್ತವೆ. ಆದರೆ ದೇವಾಲಯಗಳ ಮೇಲೆ ಧಾಳಿಯಾದಾಗ ಈ ತಿಪ್ಪೆ ರಾಜಕಾರಣಿಗಳು ಬಾಯಿಗೆ ಬೀಗ ಹಾಕಿಕೊಂಡಿರುತ್ತವೆ. ಬಾಂಬ್ ಸ್ಪೋಟಕ್ಕೆ ಕಾರಣವಾದ ಸಿಮಿ, ಲಷ್ಕರ್ ಎ ತೋಯ್ಬಾ ಮುಂತಾದ ಮುಸ್ಲಿಮ್ ಸಂಘಟನೆಗಳೇ ಕಾರಣವೆಂದು ಎಲ್ಲರಿಗೂ ತಿಳಿದಿದ್ದರೂ ಕೂಡಾ ಅವರ ವಿರುದ್ದ ದನಿಯೆತ್ತುವ ತಾಕತ್ತು ಈ ರಾಜಕಾರಣಿಗಳಿಗಿಲ್ಲ. ಎಕೆಂದರೆ ಅದನ್ನು ಮಾಡಿದ್ದು ಅಲ್ಪ ಸಂಖ್ಯಾತರು. ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕ್ರಿಶ್ಚಿಯನ್ ಭಯೋತ್ಪಾದಕರು ಹತ್ಯೆ ಮಾಡಿರುವುದು ಸಾಬೀತಾದರೂ ಕೂಡಾ ಅಲ್ಲಿ ನಡೆಯುವ ಗಲಭೆಗೆ ಕೇವಲ ಭಜರಂಗದಳ ಹಾಗೂ ವಿ.ಎಚ್.ಪಿ.ಯನ್ನು ಹೊಣೆಮಾಡುವುದು ಎಷ್ಟು ಸಮಂಜಸ?. ನಮ್ಮ ದೇಶದ ಎಲ್ಲ್ಲ ರಾಜ್ಯಗಳನ್ನು ಒಂದೊಂದಾಗಿ ಕ್ರಿಶ್ಚಿಯನ್ ರಾಜ್ಯವನ್ನಾಗಿ ಮಾಡಲು ಪಣತೊಟ್ಟಿರುವ ಈ ಕ್ರಿಶ್ಚಿಯನ್ ಮತಾಂಧರು ಈಗ ಇದುವರೆಗೂ ಶಾಂತವಾಗಿದ್ದ ದಕ್ಷಿಣ ಭಾರತದತ್ತ ಕಣ್ಣು ಹಾಯಿಸಿರುವುದು ಕಳವಳಕಾರಿ. ಇದಕ್ಕೆ ಕೇಂದ್ರದ ಕೆಲವು ರಾಜಕಾರಣಿಗಳ ಕುಮ್ಮಕ್ಕು ಇರುವುದು ಎಲ್ಲರಿಗೂ ತಿಳಿದ ವಿಷಯ.
ಹಿಂದೂಗಳೇ ಒಗ್ಗಟ್ಟಾಗಿ.....ನಿಮ್ಮ ಧರ್ಮವನ್ನು ನೀವೇ ರಕ್ಷಿಸಬೇಕು.....

3 comments:

Anonymous said...

ಇದು ಕೇಂದ್ರ ಸರಕಾರದಲ್ಲಿ ಕೆಲವು ಪಾಕಿಸ್ತಾನೀ ಏಜೆಂಟರ ಇರುವಿಕೆಯನ್ನು ಸೂಚಿಸುತ್ತದೆ. ಇಂದು ದೇಶದ ಎಲ್ಲ ಸರಕಾರೀ ಅಂದರೆ ಪೋಲಿಸ್ ಹಾಗೂ ಮಿಲಿಟರಿಯಲ್ಲಿ ಈ ಪಾಕಿಸ್ತಾನೀ ಬೆಂಬಲಿಗರ ಸಂಖ್ಯೆ, ಈ ಕಾಂಗ್ರೆಸ್ ಸರಕಾರ ಬಂದ ಮೇಲೆ ಜಾಸ್ತಿಯಾಗಿದೆ. ಇದಕ್ಕೆ ಅಲ್ಪಸಂಖ್ಯಾತರ ತುಷ್ಟೀಕರಣವೇ ಕಾರಣ.

Anonymous said...

ondalla ondu dina ee alpasankyatare busankyatarago sannivesha untagabahudu, komugalbege kummakku brashata rajakaranigale yembudaralli 2 matilla...

Harisha - ಹರೀಶ said...

ಈಗಿರುವುದು ಭ್ರಷ್ಟ ಸರ್ಕಾರ