Monday, September 10, 2012
ಕನ್ನಡ ದ್ರೋಹಿಗಳು
ಕರ್ನಾಟಕದಲ್ಲಿ ಕನ್ನಡ ಬಡವಾಗುತ್ತಿದೆಯಾ?. ಇಂತಹ ಒಂದು ಪ್ರಶ್ನೆ ಈಗ ಎಲ್ಲರಿಗೂ ಮೂಡದೇ ಇರದು....ಏಕೆಂದರೆ ನಮ್ಮ ಬೆಂಗಳೂರಿನ ಎಲ್ಲಾ ಶಾಲೆಗಳಲ್ಲಿ ಕನ್ನಡ ಕಲಿಸುವ ಗುರುಗಳು ಇವತ್ತು ಒಬ್ಬ ಐದನೇ ತರಗತಿ ಓದಿದ ವಿದ್ಯಾರ್ಥಿಗಿಂತಲೂ ಕಡೆಯಾಗಿದ್ದಾರೆ.
ಖಂಡಿತಾ ಇವತ್ತು ಒಂದು ಸಮೀಕ್ಷೆ ನಡೆಸಿದರೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇವತ್ತು ಕನ್ನಡ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ತಪ್ಪು ತಪ್ಪಾದ ಕನ್ನಡವನ್ನು ಕಲಿಸುತ್ತಿರುವುದು, ಮುಂದಿನ ದಿನಗಳಲ್ಲಿ ಕನ್ನಡದ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹೆ ಮಾಡಬಹುದು. ಇಂದಿನ ಪೋಷಕರ ಆಂಗ್ಲ ವ್ಯಾಮೋಹ ಕೂಡ ಇವತ್ತು ಕನ್ನಡದ ಅವನತಿಗೆ ಕಾರಣವಾಗಿದೆ.ಕನ್ನಡವನ್ನು ಮೊದಲನೇ ಭಾಷೆಯನ್ನಾಗಿ ತೆಗೆದುಕೊಳ್ಳುವ ಬದಲು ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ತೆಗೆದುಕೊಳ್ಳುತ್ತಿರುವ ಇಂದಿನ ವಿದ್ಯಾರ್ಥಿಗಳು, ಒತ್ತಡ ತರುವ ಪೋಷಕರು ಕೂಡಾ ಇದಕ್ಕೆ ಕಾರಣರಾಗಿದ್ದಾರೆ.
ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಕೆಗಾಗಿ ಸಂಸ್ಕೃತ, ಹಿಂದಿ, ಆಂಗ್ಲ ಭಾಷೆಗಳನ್ನು ಮೊದಲ ಭಾಷೆಯನ್ನಾಗಿ ತೆಗೆದುಕೊಳ್ಳುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಬೇಕಾಗಿದೆ. ನಾವು ಸ್ವಾವಲಂಬಿಗಳಾಗಿ ಬದುಕಲು ಇದೂ ಒಂದು ದಾರಿ, ಇಲ್ಲದಿದ್ದಲ್ಲಿ ಪರಾವಲಂಬಿಗಳಾಗಿ ಬದುಕಬೇಕಾಗುತ್ತದೆ. ಮಾತೃಭಾಷೆಗೆ ಬೆಲೆ ಕೊಡದವ ಕನ್ನಡಿಗನೇ ಅಲ್ಲ.... ಅವ ಕನ್ನಡದ್ರೋಹಿ, ರಾಜ್ಯದ್ರೋಹಿ.... ಮಾತೃ ದ್ರೋಹಿ.... ಧಿಕ್ಕಾರವಿರಲಿ ಈ ವಿದ್ಯಾರ್ಥಿಗಳಿಗೆ, ಧಿಕ್ಕಾರವಿರಲಿ ಈ ಪೋಷಕರಿಗೆ....ಧಿಕ್ಕಾರವಿರಲಿ ಈ ಶಾಲೆಗಳಿಗೆ, ಧಿಕ್ಕಾರವಿರಲಿ ಈ ಸರಕಾರಕ್ಕೆ....
ಕನ್ನಡವನ್ನು ಹತ್ತನೇ ತರಗತಿವರೆಗೆ ಕಡ್ಡಾಯ ಮಾಡಲು ಹಿಂಜರಿಯುತ್ತಿರುವ ಈ ನಪುಂಸಕ ಕರ್ನಾಟಕ ಸರಕಾರ ಇವತ್ತು ತನ್ನ ಖದರ್ ಕಳೆದುಕೊಂಡಿದೆ.
Subscribe to:
Posts (Atom)