Sunday, April 04, 2010

ದೇಶದ್ರೋಹಿ ಬಾಳ ಥಾಕ್ರೆ ಮತ್ತು ಭಯೋತ್ಪಾದಕ ಸಂಘಟನೆಗಳು

ಇತ್ತೀಚೆಗೆ ಬಾಳಥಾಕ್ರೆ ಎಂಬ ದೇಶದ್ರೋಹಿ (ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ) ಬಹಳ ನಿಗುರುತ್ತಿದ್ದಾನೆ. ಎಲ್ಲರೂ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಂದರೆ ಇವನದ್ದು ಉಲ್ಟಾ ಕೇಸು, ರಾಷ್ಟ್ರ ರಾಜಕಾರಣದಿಂದ ರಾಜ್ಯರಾಜಕಾರಣಕ್ಕೆ ಬರುತ್ತಿದ್ದಾನೆ. ಇವನ ಸಂಕುಚಿತ ಮನಸ್ಸು ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಸತ್ಯ.
ಇತ್ತೀಚೆಗೆ ತನ್ನ ದೇಶವಿರೋಧಿ ಪತ್ರಿಕೆ ’ಸಾಮ್ನಾ’ ದಲ್ಲಿ ಕರ್ನಾಟಕದ ಮುಖ್ಯಮಂತ್ರಿಯನ್ನು ಹುಚ್ಚ ಎಂದು ಸಂಬೋಧಿಸಿರುವುದು ಇವನ ಮೆದುಳಿನಲ್ಲಿ ತುಂಬಿರುವುದು ಸೆಗಣಿ ಏಮ್ಬುದನ್ನು ಸಾಬೀತುಪಡಿಸುತ್ತದೆ. ಇಂತಹಾ ಲುಚ್ಚಾಗಳನ್ನು ಈ ದೇಶದಿಂದಲೇ ಒದ್ದು ಹೊರಗೋಡಿಸದಿದ್ದಲ್ಲಿ ನಮ್ಮ ಭಾರತದ ಒಕ್ಕೂಟ ವ್ಯವಸ್ಥೆಗೆ ಅಪಾಯ. ಒಬ್ಬ ನಾಮರ್ದ ಮುಂಬೈನಲ್ಲಿ ಕೂತು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವನ ಜನ್ಮಕ್ಕೇ ಕಳಂಕ. ಅವನಿಗೆ ತಾಕತ್ತಿದ್ದರೆ ಬೆಂಗಳೂರಿಗೆ ಬಂದು ಅದೇ ರೀತಿಯ ಹೇಳಿಕೆ ಕೊಡಲಿ, ಕನ್ನಡಿಗರು ದೇಶದ್ರೋಹಿಗಳಿಗೆ ಯಾವ ರೀತಿಯ ಉತ್ತರ ಕೊಡುತ್ತಾರೆ ಎಂಬುದನ್ನು ಅವನು ತನ್ನ ಮುಂದಿನ ನಾರಾರು ಜನ್ಮಕ್ಕೆ ಅರಿತುಕೊಳ್ಳಬೇಕು.
ತನ್ನ ಕುಟುಂಬವನ್ನೇ ಸರಿಯಾದ ಹಾದಿಯಲ್ಲಿ ನಡೆಸಲು ಸಾಧ್ಯವಿಲ್ಲದ ಈ ಶಿಖಂಡಿ, ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹಗಲುಗನಸು ಕಾಣುತ್ತಿದ್ದಾನೆ. ಅದಕ್ಕಾಗಿ ಅವನು ತನ್ನ ಭಯೋತ್ಪಾದಕ ಸಂಘಟನೆಗಳಾದ ಶಿವಸೇನೆ, ಎಂ.ಇ.ಎಸ್.ಗಳನ್ನು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲು ಛೂ ಬಿಟ್ಟಿದ್ದಾನೆ. ಕಾಶ್ಮೀರ ವಿಷಯದಲ್ಲಿ ಹೇಗೆ ಪಾಕಿಸ್ತಾನ ಮೂಗು ತೂರಿಸುತ್ತದೋ ಅದೇ ರೀತಿ ಬೆಳಗಾವಿ ವಿಷಯದಲ್ಲಿ ಕಾಶ್ಮೀರಿ ಭಯೋತ್ಪಾದಕನಂತೆ ವರ್ತಿಸುತ್ತಿರುವುದು ನಮ್ಮ ದೇಶದ ದುರಂತ ಸಂಗತಿ. ಇದಕ್ಕಾಗಿ ಇವನನ್ನು ಬಂಧಿಸಿ ಜೈಲಿಗೆ ತಳ್ಳುವುದನ್ನು ಬಿಟ್ಟು ಮತ್ತಷ್ಟು ಬೊಗಳಲು ಅವಕಾಶ ಮಾಡಿಕೊಡುತ್ತಿರುವುದು ಮಹಾರಾಷ್ಟ್ರ ಸರಕಾರದ ದೊಡ್ಡ ತಪ್ಪು.
ಇಂತಹ ದೇಶದ್ರೋಹಿಗಳಿಗೆ ಮೆಟ್ಟಲ್ಲಿ ಹೊಡೆದು, ಸಾರ್ವಜನಿಕವಾಗಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿ ನೇಣಿಗೆ ಹಾಕಬೇಕು. ನಮ್ಮೊಳಗೇ ಭಯೋತ್ಪಾದಕ ಸಂಘಟನೆಗಳನ್ನಿಟ್ಟುಕೊಂಡು ಪಾಕಿಸ್ತಾನೀಯರಿಗೆ ಬುದ್ದಿ ಹೇಳಲು ನಮ್ಮ ಸರಕಾರಕ್ಕೆ ನಾಚಿಕೆಯಾಗಬೇಕು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಕೆಳಗಿನ ಸಂಘಟನೆಗಳನ್ನು ನಿಷೇಧಿಸಿ ಆ ಸಂಘಟನೆಗಳ ಮುಖ್ಯಸ್ಥರನ್ನು ನೇಣಿಗೆ ಹಾಕಿ ಭಯೋತ್ಪಾದಕತೆಯ ಮೂಲೋಚ್ಚಾಟನೆಗೆ ಕಟಿಬದ್ದರಾಗಿ.
೧. ಶಿವಸೇನೆ.
೨. ಎಂ.ಇ.ಎಸ್.
೩. ನಕ್ಸಲೀಯರು
೪. ಡಿ.ಎಂ.ಕೆ.
೫. ಎ.ಐ.ಡಿ.ಎಂ.ಕೆ.
೬. ಪಿ.ಎಂ.ಕೆ.
೭. ಎಲ್.ಟಿ.ಟಿ.ಇ.
೮. ಕೇರಳದ ಎಲ್.ಡಿ.ಎಫ್.

ಇನ್ನೂ ಹಲವು ಸಂಘಟನೆಗಳು ದಕ್ಷಿಣ ಭಾರತದಲ್ಲಿ ಕಾರ್ಯನಿರತವಾಗಿದ್ದು, ಅವುಗಳು ಬೆಳೆಯುವ ಮೊದಲೇ ಚಿವುಟಿ ಹಾಕಿ, ಇಲ್ಲ ಅವುಗಳು ಈ ದೇಶವನ್ನೇ ಬಲಿತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.