Friday, February 12, 2010

ಮುತಾಲಿಕ್ ಮೇಲಿನ ಹಲ್ಲೆ- ಹಿಂದೂ ವಿರೋಧಿಗಳ ಅಟ್ಟಹಾಸ

ಕೆಲ ದಿನಗಳ ಹಿಂದೆ ಮಾನ್ಯ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಕೆಲ ಹಿಂದೂ ವಿರೋಧಿಗಳು ಮಸಿ ಬಳಿದು ಕೆಲ ಹಿಂದೂವಿರೋಧಿ ಕುನ್ನಿಗಳು ಭಾರತದ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ.

ಕಸ್ತೂರಿ ಚಾನಲ್‌ನಲ್ಲಿ ನಡೆಯುತ್ತಿದ್ದ ಈ ವ್ಯಾ(ಕ್)ಲೈಂಟೈನ್ಸ್ ಡೇ ವಿರುದ್ದ ಹಾಗೂ ಪರ ವಾಕ್ಸಮರದ ಅಂತಿಮ ಘಳಿಗೆಯಲ್ಲಿ ವೇದಿಕೆ ಏರಿ ಬಂದ ಕೆಲ ದುಷ್ಕರ್ಮಿಗಳು (ಇವರ ವಿಚಾರಣೆ ನಡೆಸುವುದೊಳಿತು, ಏಕೆಂದರೆ ಐ.ಎಸ್.ಐಗೆ ಇವರ ಸಂಬಂಧ ಇರಲೂ ಸಾಕು) ಮಾನ್ಯ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದು ಎಲ್ಲ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ.

ಅಲ್ಲರೀ...ಮುತಾಲಿಕ್ ಹೇಳುವುದರಲ್ಲಿ ಏನಿದೆ ತಪ್ಪು?. ಮದುವೆಯಾಗದ ಇಬ್ಬರು ಜೋಡಿಗಳು ಪರಸ್ಪರ ಕೈ ಹಿಡಿದುಕೊಂಡು, ಪಾರ್ಕ್‌ನಲ್ಲಿ ಕತ್ತಲಲ್ಲಿ ಪ್ರೀತಿ ಮಾಡುವುದನ್ನು ಈ ದುಷ್ಕರ್ಮಿಗಳು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?. ಇದು ಖಂಡಿತಾ ಸೂಳೆಗಾರಿಕೆಯ ಇನ್ನೊಂದು ಮುಖ. ಒಬ್ಬ ಹೆಣ್ಣು ಒಬ್ಬ ಗಂಡಸಿಗಿಂತ ಹೆಚ್ಚಿನ ಸಂಬಂಧ ಇಟ್ಟುಕೊಡರೆ ಸಮಾಜದಲ್ಲಿ ಏನು ಹೇಳುತ್ತಾರೆ ಎಂಬುದನ್ನು ಒಬ್ಬ ಸಾಮಾನ್ಯ ಪ್ರಜೆ ಕೂಡಾ ಹೇಳಬಲ್ಲ. ಈಗ ನೀವು ಪ್ರತೀ ಪಾರ್ಕ್‌ನಲ್ಲಿ ಹೋಗಿ ನೋಡಿ, ಪ್ರೀತಿಯ ಹೆಸರಿನಲ್ಲಿ ಲೈಂಗಿಕ ತೀಟೆ ತೀರಿಸಿಕೊಳ್ಳುವುದನ್ನು. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ಜಯನಗರದ ಪಾರ್ಕ್, ಹೆಬ್ಬಾಳದ ಪಾರ್ಕ್, ಬಸವನಗುಡಿಯ ಪಾರ್ಕ್, ಕಬ್ಬನ್ ಪಾರ್ಕ ಮುಂತಾದ ಕಡೆ ಮರ್ಯಾದಸ್ಥರು ಓಡಾದುವುದಕ್ಕೆ ಆಗುತ್ತಾ?. ಈಗ ನಿಜವಾಗಿ ಪ್ರೀತಿಸುವವರು ಎಷ್ಟು ಜನ ಇದ್ದಾರೆ?. ಈ ಪ್ರೀತಿ ಎನ್ನುವುದು ಗಂಡಸಿನ ಕೈಯಲ್ಲಿ ಹಣ ಇರುವ ತನಕ ಮಾತ್ರ, ನಿಮ್ಮ ಕೈಯಲ್ಲಿ ಹಣ, ಕಾರು ಇದ್ದರೆ ಎಂಥಹ ಹೆಣ್ಣು ಕೂಡಾ ಬಾಯಿ ಬಿಡುವ ಕಾಲ. ಅಂದರೆ ಹಣಕ್ಕೆ ಬೆಲೆ ಕೊಡುವ ಕಾಲ.

ಯಾವ ಒಬ್ಬ ಹೆಣ್ಣು ಹೆತ್ತ ತಂದೆ, ತಾಯಿಗಳು ತಮ್ಮ ಮಗಳು ಈ ಥರಾ ಅನ್ಯ ಹುಡುಗನ ಜೊತೆ ಶಾಲೆ-ಕಾಲೆಜ್‌ಗೆ ಚಕ್ಕರ್ ಹೊಡೆದು ಪಾರ್ಕ್‌ನಲ್ಲಿ ಮೋಜು ಮಾಡುವುದನ್ನು ಸಮರ್ಥಿಸಿಕೊಳ್ಳುತ್ತಾರೆ?. ಆದರೆ ಇದನ್ನೆಲ್ಲ ಕಾಮನ್ ಎನ್ನುವ ರೀತಿಯಲ್ಲಿ ನೋಡುವ ಹೆತ್ತವರೂ ಇದ್ದಾರೆ. ಆದರೆ ಅದೇ ಮೋಜು-ಮಸ್ತಿ ತಮ್ಮ ಮಗಳ ಬಾಳನ್ನು ಹಾಳು ಮಾಡಿದಾಗ ಇವರು ಎಚ್ಚೆತ್ತುಕೊಳ್ಳುತ್ತಾರೆ. ಹಾಗಂತ ನಾನು ಈ ಪಡ್ಡೆ ಹುಡುಗರಿಗೆ ಬೆಂಬಲ ನೀಡುತ್ತಿಲ್ಲ. ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ-ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ. ಆದ್ದರಿಂದ ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ನಿಜವಾಗಿ ಜಾಗರೂಕರಾಗಿರಬೇಕು.

ಈಗಿನ ಕಾಲೆಜ್ ಜೀವನದಲ್ಲಿ ಈ ಪ್ರೀತಿ ಎನ್ನುವುದು ಫ್ಯಾಶನ್ ಆಗಿಬಿಟ್ಟಿದೆ. ಒಬ್ಬ ಹುಡುಗಿಗೆ-ಒಬ್ಬ ಹುಡುಗ ಜೋಡಿ ಇರಲೇ ಬೇಕು. ಆದರೆ ಇದು ಸಮರ್ಥನೀಯವೇ?. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಎನ್ನುವ ಮುತಾಲಿಕ್ ವಾದ ತಪ್ಪೇ?.

Sunday, February 07, 2010

ಕರ್ನಾಟಕದ ಭಯೋತ್ಪಾದಕರು

ಕರ್ನಾಟಕದ ನೆಲದಲ್ಲಿ ಭಯೋತ್ಪಾದಕರ ಹಾವಳಿ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದಕ್ಕೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕ ಸಂಘಟನೆಯಾದ ಎಂ.ಇ.ಎಸ್. ಎಂಬ ತಿಕ್ಕಲು ಸಂಘಟನೆ ನಡೆಸಿದ ಸೀಮಾ ಪರಿಷತ್ ಎನ್ನುವ ಕಾರ್ಯಕ್ರಮವೇ ಸಾಕ್ಷಿ.
ಮುಂಬೈನಲ್ಲಿ ರೌಡಿಯಿಸಂ ಹುಟ್ಟಲು ಕಾರಣವಾದ ಶಿವಸೇನಾ ಎಂಬ ಸಂಘಟನೆಯೇ ಇದಕ್ಕೆ ಕಾರಣ. ಪ್ರಾದೇಶಿಕತೆಯ ಹೆಸರಿನಲ್ಲಿ ದೇಶದೆಲ್ಲೆಡೆ ಭಯೋತ್ಪಾದಕತೆಯನ್ನು ಹಬ್ಬಿಸುತ್ತಿರುವ ಈ ಸಂಘಟನೆಯನ್ನು ಅಲ್ಲಿನ ಕಾಂಗ್ರೆಸ್ ಸರಕಾರ ಯಾಕೆ ನಿಷೇಧಿಸುತ್ತಿಲ್ಲ?. ಮುಂಬೈ ಕೇವಲ ಮಹಾರಾಷ್ಟ್ರಿಗರಿಗೆ ಮಾತ್ರ ಎಂಬ ತಿಕ್ಕಲು ವಾದವನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಸಂಘಟನೆ ಶಿವಾಜಿಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಉತ್ತರಭಾರತೀಯರನ್ನು ಮುಂಬೈನಿಂದ ಹೊರಗಟ್ಟುವಂತೆ ಕರೆ ನೀಡಿದ ಈ ಭಯೋತ್ಪಾದಕ ಸಂಘಟನೆಗೂ ಕಾಶ್ಮೀರದಲ್ಲಿ ಭಯೋತ್ಪಾದಕತೆಯನ್ನು ಸೃಷ್ಟಿಸುತ್ತಿರುವ ಮುಸ್ಲಿಂ ಭಯೋತ್ಪಾದಕರಿಗೂ ಯಾವ ವ್ಯತ್ಯಾಸವೂ ಇಲ್ಲ. ಏಕೆಂದರೆ ಈ ಎರಡೂ ಸಂಘಟನೆಗಳು ದೇಶವನ್ನು ಛಿದ್ರಮಾಡುವತ್ತ ತಮ್ಮ ಗುರಿ ಹೊಂದಿವೆ.
ಅದರಲ್ಲೂ ಬೆಳಗಾವಿಯ ಎಂ.ಇ.ಎಸ್. ಎಂಬ ಭಯೋತ್ಪಾದಕ ಸಂಘಟನೆಯಂತೂ ಕರ್ನಾಟಕದ ಅನ್ನ ತಿಂದು, ಇಲ್ಲಿನ ನೀರು ಕುಡಿದು, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹುಂಬ ವಾದವನ್ನು ಮಂಡಿಸಿ ತನ್ನ ದೇಶದ್ರೋಹಿತನವನ್ನು ತೋರಿಸಿದೆ. ಈ ಸೀಮಾ ಪರಿಷತ್ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತನ್ನ ಕನ್ನಡದ್ರೋಹಿತನವನ್ನು, ಕರ್ನಾಟಕ ವಿರೋಧಿ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕರ್ನಾಟಕ ದ್ರೋಹಿ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅಲ್ಲಿನ ಮರಾಠಿ ಪುಂಡರು ಥಳಿಸಿದಾಗಲೂ ತುಟಿ ಪಿಟಿಕ್ ಎನ್ನದ ಈ ಮುಖ್ಯಮಂತ್ರಿಗಳು ಮರಾಠಿ ಪುಂಡರಿಗೆ ಹೆದರಿ ಬಚ್ಚಿಟ್ಟುಕೊಂಡದ್ದು ನಮ್ಮ ದುರ್ದೈವ.
ಇದನ್ನು ಹೀಗೆಯೇ ಬಿಟ್ಟರೆ ಮುಂದೆ ಅಖಂಡ ಕರ್ನಾಟಕವು ಛಿದ್ರ ಛಿದ್ರವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಕರ್ನಾಟಕದ ಅತ್ಯಂತ ಬಲಹೀನ, ದುರ್ಬಲ ಮುಖ್ಯಮಂತ್ರಿಗೆ ಈ ಬಗ್ಗೆ ಕಾಳಜಿಯಿಲ್ಲದಿರುವುದು ಕರ್ನಾಟಕದ ದುರ್ದೈವ. ಕೇವಲ ಗಣಿಧಣಿಗಳ ಪಾದ ಪೂಜೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿರುವ ಯಡಿಯೂರಪ್ಪನವರಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲದೆ ಕೇವಲ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲೇ ಕಾಲ ಹರಣಮಾಡುತ್ತಿರುವುದು ಸೋಜಿಗ.
ಈ ಮರಾಠಿ ಭಯೋತ್ಪಾದಕರನ್ನ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕದಿದ್ದಲ್ಲಿ, ಈವರೆಗೆ ದಕ್ಷಿಣದಲ್ಲಿ ಇರದ ಭಯೋತ್ಪಾದಕತೆ ತಲೆ ಎತ್ತುವುದರಲ್ಲಿ ಸಂಶಯವಿಲ್ಲ.