Sunday, June 29, 2008

ದೇಶದ್ರೋಹಿಗಳು ನಮ್ಮ ಹಿಂದುಗಳಲ್ಲೇ ಇದ್ದಾರೆ!!!!!!!!!!!!

ಬೆಂಗಳೂರು ಜೂನ್ ೩೦: ಅಣುಬಂಧದ ವಿಚಾರದಲ್ಲಿ ಇಂದು ಲೋಕಸಭೆಯಲ್ಲಿ ಕೋಲಾಹಲವಾಗುತ್ತಿರುವುದು ಕಳವಳದ ವಿಷಯ. ಆದರೆ ಎಡಬಿಡಂಗಿಪಕ್ಷಗಳು ಈ ವಿಷಯದಲ್ಲಿ ದೇಶವಿರೋಧಿ ಭಾವನೆ ತಾಳಿರುವುದು ಶೋಚನೀಯ ಹಾಗೂ ಇದು ಅವುಗಳ ದೇಶಪ್ರೇಮವನ್ನು ಪ್ರಶ್ನಿಸುವ ಒಂದು ಹೆಜ್ಜೆಯಾಗಿದೆ.
ಸದಾ ಚೀನಾ ನಾಯಕರ ಕಾಲು ನೆಕ್ಕುತ್ತಿರುವ ಎಡಬಿಡಂಗಿ ಪಕ್ಷಗಳು ಇಂದು ನಮ್ಮ ದೇಶದ ಆಂತರಿಕ ಭದ್ರತೆಗೇ ಅಪಾಯ ತಂದೊಡ್ಡುತ್ತಿರುವುದು ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಚುನಾವಣಾ ಆಯೋಗ ಈ ಎಡಬಿಡಂಗಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಹಿಡಿಯಬೇಕು. ಏಕೆಂದರೆ ಇವು ರಾಷ್ಟ್ರೀಯ ಪಕ್ಷಗಳಲ್ಲ, ಅಂತರರಾಷ್ಟ್ರೀಯ ಪಕ್ಷಗಳು. ಈ ಎಡಬಿಡಂಗಿ ಪಕ್ಷಗಳು ನಮ್ಮ ರಾಷ್ಟ್ರೀಯ ನಾಯಕರ ಜನ್ಮ ದಿನದಂದು ಅವರಿಗೆ ಕಿಂಚಿತ್ ಗೌರವ ಸಲ್ಲಿಸುವ ಪರಿಪಾಠ ಇಟ್ಟುಕೊಂಡಿಲ್ಲ, ಆದರೆ ತಮ್ಮ ನಾಯಕರಾದ, ಭಾರತದವರೇ ಅಲ್ಲದ ಲೆನಿನ್, ಮಾರ್ಕ್ಸ್ ಮೊದಲಾದ ನಾಯಕರ ಜನ್ಮ ದಿನವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿವೆ.
ಇಂತಹ ದೇಶವಿರೋಧಿ ಶಕ್ತಿಗಳನ್ನು ನಾವು ಇಂದು ಮೊದಲು ಗುಡಿಸಿ ಸಾರಿಸಬೇಕಾಗಿದೆ. ಅಣುಬಂಧ ಜಾರಿಯಾದಲ್ಲಿ ನಮ್ಮ ದೇಶ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಲಿದೆ. ಆದರೆ ಇದನ್ನು ಬೇರೆಯೇ ರೀತಿ ಅರ್ಥೈಸಿಕೊಂಡಿರುವ ಎಡಬಿಡಂಗಿಗಳು ಇದು ಚೀನಾದ ಭದ್ರತೆ ಅಪಾಯ ತಂದೊಡ್ಡಲಿದೆ ಎಂಬ ದೇಶವಿರೋಧಿ ಹೇಳಿಕೆ ನೀಡಿದ್ದಾರೆ. ಇಂತಹವರನ್ನು ನಮ್ಮ ದೇಶದಿಂದ ಒದ್ದೋಡಿಸಬೇಕಾಗಿದೆ.
NRI ಎಂದರೆ Non Resident Indian ಇವರು ದೇಶಪ್ರೇಮಿಗಳು........ಆದರೆ
RNI ಎಂದರೆ Resident Non Indians ಇವರು ದೇಶದ್ರೋಹಿಗಳು...(ಈ ಜಾತಿಗೆ ಸೇರಿದವರು ಈ ಎಡಬಿಡಂಗಿ ಪಕ್ಷದವರು).

ಇಂತಹ ಖದೀಮರನ್ನು ಯಾಕೆ ದೇಶದ್ರೋಹದ ಆಪಾದನೆ ಮೇಲೆ ಬಂಧಿಸಬಾರದು?

Thursday, June 19, 2008

ಮೀಸಲಾತಿಗೆ ಕೊನೆ ಇಲ್ಲವೇ?ಎಲ್ಲಿದೆ ಸ್ವಾತಂತ್ರ್ಯ??????


ಬೆಂಗಳೂರು ಜೂನ್ 19: ಮೀಸಲಾತಿ ಎನ್ನುವುದು ನಮ್ಮ ದೇಶವನ್ನು ಪೆಡಂಭೂತದ ಹಾಗೆ ಕಾಡುತ್ತಿದೆ. ಇದೊಂದು ರಾಷ್ಟ್ರೀಯ ದುರಂತ.ರಾಜಸ್ಥಾನದಲ್ಲಿ ನಡೆದ ಗುಜ್ಜರ್ ಸಮುದಾಯದ ಪ್ರತಿಭಟನೆ, ಹಿಂಸಾಕೃತ್ಯ ನಮ್ಮ ದೇಶ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆ.
ಎಲ್ಲಾ ಸರಕಾರೀ ನೌಕರಿಯಲ್ಲಿ ದಲಿತರು, ಹಿಂದುಳಿದ ಜನ, ಬುಡಕಟ್ಟಿನ ಜನರಿಗೆ ಗರಿಷ್ಟ ಮೀಸಲಾತಿ ನೀಡಿ ಸರಕಾರಿ ನೌಕರಿಯನ್ನು ಕೆಲಸಕ್ಕೆ ಬಾರದ ಉದ್ಯೋಗವಾಗಿ ಮಾಡಿಹಾಕಿದ್ದಾರೆ ಈ ರಾಜಕಾರಣಿಗಳು. ಇಲ್ಲಿ ನಮಗೆ ಆಯ್ಕೆಯ ಸ್ವಾತಂತ್ರ್ಯ ಇಲ್ಲ.
ಚುನಾವಣೆಯಲ್ಲಿ ಸ್ಪರ್ಧಿಸೋಣವೆಂದರೆ ಇಲ್ಲೂ ಮೀಸಲಾತಿ, ಅನೇಕ ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳೆಂದು ಘೋಷಿಸಿ ಇಲ್ಲಿ ಯಾವುದೇ ಮುಂದುವರಿದ ವರ್ಗದ ಜನ ಸ್ಪರ್ಧಿಸದಂತೆ ನಿಷೇಧ ಹೇರಲಾಗಿದೆ. ಎಲ್ಲಿದೆ ನಮಗೆ ಸ್ವಾತಂತ್ರ್ಯ?
ಇನ್ನು ವಿದ್ಯಾಭಾಸದಲ್ಲೂ ಸ್ವಾತಂತ್ರ್ಯ ಇಲ್ಲ. ನಮ್ಮ ಆಯ್ಕೆಯ ಶಿಕ್ಷಣ ಸ್ವಾತಂತ್ರ್ಯವನ್ನು ಕೂಡ ಇಲ್ಲಿ ಕಸಿದುಕೊಳ್ಳಲಾಗಿದೆ. ನೀವು ಇ಼ಚ್ಚೆ ಪಟ್ಟ ವಿಷಯವನ್ನು ಆರಿಸಿಕೊಳ್ಳುವಂತಿಲ್ಲ. ನಿಮಗೆ ಸಿಕ್ಕಿದರೆ ಅದು ಪುಣ್ಯ. ಎಲ್ಲಿದೆ ಆಯ್ಕೆ ಸ್ವಾತಂತ್ರ್ಯ?
ನಮಗೆ ಬೇಡವಾದ, ನಾಲಾಯಕ್ ವ್ಯಕ್ತಿಗಳು ಇಂದು ರಾಷ್ಟ್ರಪತಿ, ಪ್ರಧಾನಿ ಹುದ್ದೆಯಲ್ಲಿ ಇದ್ದಾರೆ. ಅವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿಲ್ಲ. ಇವರಿಬ್ಬರಿಂದ ನಮ್ಮ ದೇಶದ ಮಾನ ಹರಾಜಾಗುತ್ತಿದೆ. ಎಲ್ಲಿದೆ ನಮಗೆ ಸ್ವಾತಂತ್ರ್ಯ?
ಯಾವುದೇ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ (ನಿಜ ಸಂಗತಿ)ಬರೆಯಲು ಸ್ವಾತಂತ್ರ್ಯವಿಲ್ಲ, ಹೇಳಲು ಸ್ವಾತಂತ್ರ್ಯವಿಲ್ಲ. ಇದಕ್ಕೆ ಮಾನನಷ್ಟ ಮೊಕದ್ದಮೆ ಎಂಬ ಬ್ರಹ್ಮಾಸ್ತ್ರ ಬೇರೆ. ಎಲ್ಲಿದೆ ಸ್ವಾತಂತ್ರ್ಯ?
ಹೇಳುತ್ತಾ ಹೋದರೆ...ನಮ್ಮ ಭಾರತದಲ್ಲಿ ಸ್ವಾತಂತ್ರ್ಯದ ಕೊರತೆ ಇದೆ. ಯಾವುದಕ್ಕೂ ಸ್ವಾತಂತ್ರ್ಯವಿಲ್ಲ, ಇಂತಹ ದರಿದ್ರ ದೇಶದಲ್ಲಿ ನಾವಿದ್ದೇವೆ. ನನಗನಿಸುತ್ತದೆ, ಬ್ರಿಟಿಷರ ಕಾಲದಲ್ಲೇ ನಮಗೆ ಕೆಲ ಸ್ವಾತಂತ್ರ್ಯಗಳಿದ್ದವು. ಈ ದೇಶದಲ್ಲಿ ಪ್ರತಿಭೆಗಳಿಗೆ ಗೌರವವಿಲ್ಲ, ಕೆಲಸವಿಲ್ಲ. ವಿದ್ಯಾಭ್ಯಾಸಕ್ಕೂ ಸುಮಾರು ಅಡ್ಡಿ, ಆತಂಕಗಳು....ಆದರೆ ಅಮೆರಿಕಾ, ಜಪಾನ್, ಇಂಗ್ಲೆಂಡ್ ಗಳಲ್ಲಿ ಪ್ರತಿಭೆಗೆ ಬೆಲೆ ಕೊಡುತ್ತಾರೆ. ಅಲ್ಲದೆ ಅವರ ವಿದ್ಯೆಗೆ ತಕ್ಕ ಕೆಲಸ, ಸಂಬಳ ದೊರೆಯುತ್ತದೆ. ಆದರೆ ಈ ದೇಶದಲ್ಲಿ ನೀವು ಆ ಥರಾ ಇರಬೇಕೆಂದಲ್ಲಿ ಒಂದೋ ನೀವು ಹಿಂದುಳಿದ ವರ್ಗದಲ್ಲಿ ಜನಿಸಿರಬೇಕು ಇಲ್ಲವೇ ಲಂಚ ಕೊಡಲು ರೆಡಿ ಇರಬೇಕು ಇಲ್ಲವೇ ಯಾವುದಾದರೂ ರಾಜಕಾರಣಿಗಳ ಸಂಬಂಧ ಇರಬೇಕು.ಹಾಗಾದರೆ ಮಾತ್ರ ನಿಮಗೆ ಒಳ್ಳೆಯ ಕೆಲಸ ಸಿಗಲು ಸಾಧ್ಯ ಈ ದೇಶದಲ್ಲಿ.
ಒಟ್ಟಲ್ಲಿ ಮುಂದುವರಿದ ಜಾತಿಗಳಾದ ಬ್ರಾಹ್ಮಣರಂತೂ ಈ ದೇಶದಲ್ಲಿ ಭಿಕಾರಿಗಳಾಗಿದ್ದಾರೆ. ಅವರಿಗೆ ಯಾವ ಸವಲತ್ತೂ ಈ ಸರಕಾರಗಳಿಂದ ಸಿಗುತ್ತಿಲ್ಲ. ತೆರಿಗೆ ಮಾತ್ರ ಅವರಿಂದ ಕಸಿದುಕೊಳ್ಳುವ ಸರಕಾರಗಳು ಬ್ರಾಹ್ಮಣ ಜಾತಿಯಲ್ಲೂ ಬಡ ಜನರಿದ್ದರೂ ಅವರ ಉದ್ದಾರಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಈ ದೇಶಕ್ಕೆ ಖಂಡಿತಾ ಭವಿಷ್ಯವಿಲ್ಲ. ನಾನಂತೂ ಯಾವುದಾದರೂ ದೇಶಕ್ಕೆ ಹೋಗಿ ಸೆಟ್ಲ್ ಆಗುವ ನಿರ್ಧಾರ ಮಾಡಿದ್ದೇನೆ. ಆದರೆ ಅದಕ್ಕೂ ಹಣಬೇಕು. ಯಾರಾದರೂ ಸಹಾಯ ಮಾಡಿದಲ್ಲಿ ಖಂಡಿತಾ ಈ ದೇಶ ಬಿಟ್ಟು ಯಾವುದಾದರೂ ದೇಶದಲ್ಲಿ ನೆಲೆಸುವ ಹಾಗೂ ಮತ್ತೆಂದೂ ಈ ದೇಶದ ಕಡೆ ತಲೆ ಹಾಕಿ ಕೂಡಾ ನೋಡದಿರುವ ನಿರ್ಧಾರ ಮಾಡಿರುವೆ. ಇಲ್ಲಿನ ತೆರಿಗೆಗಳು, ದಿನೇ ದಿನೇ ಏರುತ್ತಿರುವ ಬೆಲೆಗಳು, ಕಡಿಮೆ ಸಂಬಳ, ಇಲ್ಲಿನ ಅಭದ್ರತೆ ಇವೆಲ್ಲಾ ನೋಡಿದರೆ ಆಸ್ಟ್ರೇಲಿಯಾದಂತಹ ರಾಷ್ಟ್ರಗಳು ಎಷ್ಟೋ ಉತ್ತಮ ಎನಿಸುತ್ತವೆ.
ಈ ದೇಶದ ದರಿದ್ರ ರಾಜಕಾರಣಿಗಳಲ್ಲಿ ಒಂದು ವಿನಂತಿ, ನೀವು ಮುಂದುವರಿದ ವರ್ಗಕ್ಕೆ ಸಹಾಯ ಮಾಡಲಾಗದಿದ್ದಲ್ಲಿ ಒಂದು ಸಹಾಯ ಮಾಡಬಹುದಲ್ಲಾ?. ಏಷ್ಟೋ ಜನ ಈ ದೇಶ ಬಿಟ್ಟು ಬೇರೆ ದೇಶದಲ್ಲಿ ನೆಲೆಸುವ ಬಗ್ಗೆ ಯೋಚನೆ ಮಾಡಿರುತ್ತಾರಲ್ಲಾ, ಅವರಿಗೆ ಕನಿಷ್ಟ ಈ ದೇಶ ಬಿಟ್ಟು ಹೋಗಿ, ಬೇರೆ ದೇಶದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟರೆ ಅದರಷ್ಟು ದೊಡ್ಡ ಉಪಕಾರ ಬೇರೆ ಇಲ್ಲವೆಂದು ತೋರುತ್ತದೆ.

Sunday, June 15, 2008

ಬೆಂಗಳೂರಿನ್ ಪಾರ್ಕುಗಳಲ್ಲಿ ೪೦ ವರ್ಷದ ಮಕ್ಕಳು ಆಡುವ ಮಜಾ ನೋಡಬೇಕೇ?

ಬೆಂಗಳೂರು ಜೂನ್ ೧೬: ಬೆಂಗಳೂರಿನ ಎಲ್ಲಾ ಪಾರ್ಕುಗಳಲ್ಲಿ ನಾವು ಇತ್ತೀಚೆಗೆ ಕಾಣಬಹುದಾದ ದೃಶ್ಯಗಳು ಮನಕಲುಕಿಸುವಂತಿವೆ. ಅಂದರೆ ಚಿಕ್ಕ ಮಕ್ಕಳು ಮಳ್ಳೆಗಣ್ಣು ಬಿಟ್ಟು ನೋಡುತ್ತಿರುತ್ತವೆ, ಆದರೆ ಉಯ್ಯಾಲೆಯಲ್ಲಿ ಕುಳಿತ ೪೦ವರ್ಷ ವಯಸ್ಸಿನ ಮಕ್ಕಳು ಜಾಗ ಬಿಡಲೊಲ್ಲರು.
ಅಂದರೆ ಮಕ್ಕಳಿಗಿಂತಲೂ ಬುದ್ದಿ ಕಡಿಮೆ ಇರುವ ಈ (ಎರಡು-ಮೂರು )ಹೆತ್ತ ಜೀವಗಳಿಗೆ ಇನ್ನೂ ತಲೆಯಲ್ಲಿ ಸೆಗಣಿ ತುಂಬಿರುವುದು ಬೆಂಗಳೂರಿಗೇ ಕಳಂಕ. ಇದು ನನಗಾದ ಸ್ವಂತ ಅನುಭವ. ಬೆಂಗಳೂರಿನ ರಾಮಾಂಜನೇಯ ಪಾರ್ಕಿನಲ್ಲಿರುವ ಆಟದ ಮೈದಾನದಲ್ಲಿ ಇದು ಪ್ರತಿನಿತ್ಯದ ಗೋಳು. ನಾನು ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದೆ ಒಂದು ದಿನ, ನನ್ನ ಮಗಳು ಉಯ್ಯಾಲೆಯಲ್ಲಿ ಕುಳಿತುಕೊಳ್ಳಬೇಕೆಂದು ಹಠಹಿಡಿದಾಗ ಏನೂ ಮಾಡಲೂ ತೋಚದೆ ಉಯ್ಯಾಲೆಯ ಹತ್ತಿರ ಹೋಗಿ ನಿಂತೆ. ಆಗಲೇ ಎರಡು ಧಡೂತಿ ದೇಹಗಳು ಉಯ್ಯಾಲೆಯನ್ನು ಅತಿಕ್ರಮಿಸಿಕೊಂಡಿದ್ದವು. ಅವು ಮಾತಾಡುವ ಭಾಷೆ ನೋಡಿದಾಗ ಅವು ಕರುಣಾನಿಧಿ,ರೆಡ್ಡಿ,ನಾಯ್ಡು ವಂಶದವೆಂದು ಅರಿವಾಯಿತು. ಹತ್ತಿರ ಹೋಗಿ ನಿಂತರೂ, ತಮ್ಮ ಪಾಡಿಗೆ ತಾವು ಏನೂ ತಿಳಿಯದವರಂತೆ ಉಯ್ಯಾಲೆಯಲ್ಲಿ ತೂಗತೊಡಗಿದವು. ಹತ್ತು ನಿಮಿಷವಾಯಿತು, ಅರ್ಧಘಂಟೆಯಾಯಿತು, ಉಹುಂ...ಏಳುವ ಸೂಚನೆಯೇ ಕಾಣದಾಗ, ಅವರನ್ನು ಉಯ್ಯಾಲೆ ಬಿಟ್ಟುಕೊಡುವಂತೆ ಕೇಳಿಕೊಳ್ಳಬೇಕಾಯಿತು.ಕೂಡಲೇ ಆ ಪಿಶಾಚಿಗಳು ಗುರಾಯಿಸತೊಡಗಿದವು. "ನಾ ಪಿಂಡಮು, ನನ್ನಮನ ಪಿಂಡಮು" "ಪೋಡಾ...ತಮಿಳು ಕುನ್ನಿ ನಾ" ಎಂದು ಗೊಣಗುತ್ತಾ ಜಾಗ ಖಾಲಿ ಮಾಡಿದವು. ಆದರೂ ದೂರದಿಂದ ಮತ್ತೆ ಗುರಾಯಿಸಿದವು. ನಾನು ಅದಕ್ಕೆ ಕ್ಯಾರೇ ಎನ್ನದೆ ನನ್ನ ಪಾಡಿಗೆ ಮಗಳನ್ನು ಉಯ್ಯಾಲೆಯಲ್ಲಿ ಹತ್ತಿಸಿದೆ.
ಅಲ್ಲ ಬೇರೆ ರಾಜ್ಯದಿಂದ ಬಂದು, ಇಲ್ಲಿ ಸೆಟ್ಲ್ ಆಗಿ, ಇಂತಹ ಮೂಷಂಡಿ ಬುದ್ಧಿ ತೋರಿಸಲು ಇವಕ್ಕೆ ಎಷ್ಟು ಪೊಗರಿರಬೇಕು?.ಅವುಗಳ ವೇಷಭೂಷಣ ನೋಡಿದರೆ ಯಾವ ವೇಶ್ಯೆಯೂ ನಾಚಿಕೊಳ್ಳಬೇಕು, ಹಾಗಿತ್ತು. ಹಾವಭಾವಗಳು ಥೇಟ್ ಖೋಜಾಗಳನ್ನು ಹೋಲುವಂತಿದ್ದವು. ಖಂಡಿತಾ ನಾನು ಪ್ರಮಾಣ ಮಾಡಿ ಹೇಳುತ್ತೇನೆ, ನಮ್ಮ ಕನ್ನಡದ ಹೆಣ್ಣುಮಕ್ಕಳಿಗಿರುವ,ಒಂದು ತೃಣಮಾತ್ರದ ಬುದ್ದಿಯೂ ಇಲ್ಲದಿರುವುದು ಅವುಗಳ ಕಚಡಾ ಬುದ್ದಿಯನ್ನು ತೋರಿಸುತ್ತವೆ.
ಇವನ್ನೆಲ್ಲಾ ಬೆಂಗಳೂರಿನಿಂದ ಗುಡಿಸಿ ಸಾರಿಸಿದರೆ ಮಾತ್ರ ನಮ್ಮ, ಕನ್ನಡಿಗರ ಬೆಂಗಳೂರಿಗೆ ಒಂದು ಬೆಲೆ ಬರುತ್ತದೆ. ಇಲ್ಲದಿದ್ದಲ್ಲಿ ಬೇರೆ ದೇಶದಿಂದ ಬರುವವರು ಈ "ಥರ್ಡ್ ಕ್ಲಾಸ್" ಜನರ ಬುದ್ದಿ ನೋಡಿ ಎಲ್ಲಾ ಕನ್ನಡಿಗರೂ ಇದೇ ಥರ ಎಂದು ತೀರ್ಮಾನಿಸಿದರೆ ಹೋಗುವುದು ನಮ್ಮ ರಾಜ್ಯದ ಮರ್ಯಾದೆ ಮರಾಯ್ರೆ.....ಇವನ್ನು ಮೊದಲು ಒದ್ದೋಡಿಸಿ.....ಇದು ಸಾಮಾನ್ಯವಾಗಿ ಎಲ್ಲಾ ಪಾರ್ಕುಗಳ ದೈನಂದಿನ ಗೋಳು.....ಕೇಳುವವರಾರು...ಬೆಂಗಳೂರು ಈಗ "ಎನ್ನಡ" "ಏಕ್ಕಡ"ಗಳಿಂದ ತನ್ನ ಮೂಲತನವನ್ನು ಕಳೆದುಕೊಂಡು ಅವನತಿಯತ್ತ ಸಾಗುತ್ತಿದೆ. ನಮ್ಮ ಸಂಸ್ಕೃತಿ ಪೂರ್ತಿ ನಾಶ ಮಾಡುವ ಹುನ್ನಾರದಲ್ಲಿವೆ ಈ "ಎನ್ನಡ""ಎಕ್ಕಡ"ಗಳು, ಇವನ್ನು ಇಲ್ಲಿಂದ ಓಡಿಸಿದರೆ ಕನ್ನಡಿಗರು ನೆಮ್ಮದಿಯಿಂದ ಬದುಕಬಹುದು. ಅಲ್ವಾ?.....ಜೈ ಕರ್ನಾಟಕ ಮಾತೆ, ಸಿರಿಗನ್ನಡಂ ಗೆಲ್ಗೆ...

Friday, June 13, 2008

ಬೆಂಗಳೂರಿನ ದರಿದ್ರ ಖಾಸಗಿ ಶಾಲೆಗಳು

ಬೆಂಗಳೂರು ಜೂನ್ ೧೩ : ಇಂದು ಶಿಕ್ಷಣ ಎನ್ನುವುದು ವ್ಯಾಪಾರ ಆಗಿಬಿಟ್ಟಿದೆ ಎಂಬುದಕ್ಕೆ ಬೆಂಗಳೂರಿನಲ್ಲಿರುವ ಕೆಲವು ಖಾಸಗಿ ಶಾಲೆಗಳು ಉದಾಹರಣೆಯಾಗಿವೆ. ಇದು ಕೆಲವು ಪುಂಡು ಪೋಕರಿಗಳ ಜನಸೇವೆ, ಸಾಮಾಜಿಕ ಸೇವೆಯ ಇನ್ನೊಂದು ದರಿದ್ರ ಮುಖವಾಗಿಬಿಟ್ಟಿದೆ.
ಬೆಂಗಳೂರಿನಲ್ಲಿರುವ ಖಾಸಗಿ ಶಾಲೆಗಳು ಒಂದರ ಮೇಲೆ ಇನ್ನೊಂದು ಪೈಪೋಟಿ ನಡೆಸಿ, ತಮ್ಮ ಶಾಲೆ ಉತ್ತಮ ಶಿಕ್ಷಣ ಕೊಡುತ್ತಿದೆ, ಪ್ರತಿಶತ ೧೦೦ ಫಲಿತಾಂಶ ಬಂದಿದೆ ಎಂದು ಫ್ಲೆಕ್ಸ್ ಬ್ಯಾನರ್ ರಾಜಕಾರಣ ಮಾಡುತ್ತಿವೆ. ಆದರೆ ಅವುಗಳ ನಿಜವಾದ ಬಣ್ಣ ಬಯಲಾಗುವುದು ಶಾಲೆಗಳಿಗೆ ದಾಖಲಾತಿ ಪ್ರಾರಂಭವಾದಾಗಲೇ. ಇದರಿಂದ ಹೆಚ್ಚು ತೊಂದರೆ ಅನುಭವಿಸುವವರು ಮಧ್ಯಮವರ್ಗದವರೇ ಹೊರತು, ಅತೀ ಬಡವರಲ್ಲ,ಅತೀ ಶ್ರೀಮಂತರಲ್ಲ. ಸಾಮಾಜಿಕ ಸೇವೆಯ ಸೋಗಿನಲ್ಲಿ ಕೆಲವು ಪುಂಡುಪೋಕರಿಗಳು ಬೀದಿಬೀದಿಯಲ್ಲಿ ಶಾಲೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಡೊನೇಷನ್ ಹೆಸರಿನಲ್ಲಿ ಜನರನ್ನು ಹಗಲುದರೋಡೆ ಮಾಡುತ್ತಿದ್ದಾರೆ.
ಯಾವುದೇ ಶಾಲೆಯ ದಾಖಲಾತಿಗೆ ವಿಚಾರಿಸಿದರೂ, ಉದಾಹರಣೆಗೆ ಪದ್ಮನಾಭನಗರದ ಪ್ರಾರ್ಥನಾ ಶಾಲೆ ಅಥವಾ ಮೌಂಟ್ ಕಾರ್ಮೆಲ್ ಶಾಲೆಯೇ ತೆಗೆದುಕೊಳ್ಳಿ, ಇಲ್ಲಿ ಮಧ್ಯಮವರ್ಗದ ಜನ ತಮ್ಮ ಮಕ್ಕಳ ದಾಖಲಾತಿ ಮಾಡಲು ಸಾಧ್ಯವೇ ಇಲ್ಲ. ಡೊನೇಷನ್ನೇ ೨೦ರಿಂದ ೬೦ ಸಾವಿರದ ತನಕ ಕೀಳುತ್ತಾರೆ, ಅಲ್ಲದೆ ಮತ್ತೆ ತಿಂಗಳ ಫೀಸು, ವ್ಯಾನ್ ಬಾಡಿಗೆ ಎನ್ನುವುದು ಗಗನವನ್ನು ಮುಟ್ಟುತ್ತದೆ. ಅಲ್ಲದೆ ಕೆಲವು ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕಿಯರು ೧೦ನೇ ತರಗತಿ, ಪಿಯುಸಿ ಓದಿದವರಾಗಿರುತ್ತಾರೆ. ಅವರಿಗೆ ನೆಟ್ಟಗೆ ಕನ್ನಡ ಬೋಧನೆ ಮಾಡಲೂ ಬರುವುದಿಲ್ಲ, ಆಂಗ್ಲ ಅಕ್ಷರಗಳನ್ನೂ ತಪ್ಪುತಪ್ಪು ಹೇಳಿಕೊಡುತ್ತಾರೆ. ಅಲ್ಲದೆ ವ್ಯಾಕರಣದ ಗಂಧಗಾಳಿ ಅವರಿಗೆ ಇರುವುದಿಲ್ಲ.
ಅಲ್ಲದೆ ತಮ್ಮ ಎರಡನೇ ಆದಾಯಗಳಿಕೆಯ ಸಾಧನವಾದ ಮನೆಪಾಠವನ್ನು ಕೆಲವು ಶಾಲೆಗಳು ಕಡ್ಡಾಯ ಮಾಡುತ್ತಿವೆ. ಇವರು ಶಾಲೆಗಳಲ್ಲಿ ಬೋಧನೆ ಮಾಡುವುದು ಅಷ್ಟರಲ್ಲೇ ಇದೆ,ಮನೆ ಪಾಠ ಬೇರೆ ಕೇಡು. ಇಂತಹ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟುತ್ತಿವೆ. ಇವುಗಳನ್ನು ತಡೆಯಲು ಸರಕಾರ ಕಠಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಮನೆಪಾಠವನ್ನು ಕಡ್ಡಾಯ ಮಾಡುವ ಕೆಲವು ದರಿದ್ರ ಶಾಲೆಗಳನ್ನು ರದ್ದು ಮಾಡಬೇಕು. ಮನೆಪಾಠಕ್ಕೆ ಹೋಗುವ ಮಕ್ಕಳಿಗೆ ಮಾತ್ರ ಇಲ್ಲಿ ಉತ್ತಮ ಅಂಕಗಳನ್ನು ಕೊಟ್ಟು ಅವರನ್ನು ತರಗತಿಯಲ್ಲಿ ಮೊದಲನೆಯವರನ್ನಾಗಿ ಮಾಡಿ ತಮ್ಮ ತೀಟೆ ತೀರಿಸಿಕೊಳ್ಳುವ ಅನೇಕ ಸಮಾಜದ್ರೋಹಿ ಶಿಕ್ಷಕಿ, ಶಿಕ್ಷಕರ ವಿರುದ್ಧ ಕ್ರಮತೆಗೆದುಕೊಳ್ಳದಿದ್ದಲ್ಲಿ ಇಂತಹ ನೀತಿಗೆಟ್ಟ ಜನರ ಅಟ್ಟಹಾಸಕ್ಕೆ ಮಧ್ಯಮವರ್ಗದ ಮಕ್ಕಳು ಬಲಿಯಾಗುವುದರಲ್ಲಿ ಸಂಶಯವಿಲ್ಲ.

Sunday, June 08, 2008

ಬೆಂಗಳೂರು ತುಂಬಾ ಏಕಮುಖಸಂಚಾರವಾದರೂ ಈ ಗೂಬೆಗಳಿಗಿಲ್ಲ!!!

ಬೆಂಗಳೂರು ಜೂನ್ ೦೮: ಬೆಂಗಳೂರಿನಲ್ಲಿ ಈಗ ಏಕಮುಖ ಸಂಚಾರದ ಭರಾಟೆ ಹೆಚ್ಚಿದೆ. ಎಲ್ಲೆಂದರಲ್ಲಿ ಏಕಮುಖ ಸಂಚಾರ ಮಾಡಿ ಪೋಲೀಸರು ಚೆನ್ನಾಗಿ ಜೋಬಿಗಿಳಿಸುತ್ತಿದ್ದಾರೆ (ಕಳ್ಳ) ಹಣವನ್ನು. ಪೋಲಿಸರೇ ಚಾಲು ಎಂದರೆ, ಅವರಿಗಿಂತಲೂ ಚಾಲೂ ಆಗಿರುವವರು ಈಗ ಬೆಂಗಳೂರು ತುಂಬಾ ಏಕಮುಖ ಸಂಚಾರವಿದ್ದರೂ ತಮ್ಮ ವಾಹನವನ್ನು ಅಲ್ಲೇ ನುಗ್ಗಿಸುತ್ತಾರೆ.
ಏಕಮುಖ ಸಂಚಾರವಿದ್ದರೂ ಅದು ತಮಗಲ್ಲವೆಂದು ಅಂದುಕೊಳ್ಳುತ್ತಾ, ಹಣದ ಮದವಿರುವ ಈ ಕಳ್ಳಮಂದಿ, ತಮ್ಮ ವಾಹನಗಳನ್ನು ಅಲ್ಲೇ ನುಗ್ಗಿಸುತ್ತಾರೆ. ಪೋಲಿಸಣ್ಣ ಹಿಡಿದರೆ ನೂರೋ ಐವತ್ತೋ ತಳ್ಳಿದರೆ , ಹಲ್ಲುಗಿಂಜಿ, ಸೆಲ್ಯೂಟ್ ಹೊಡೆದು ಮರ್ಯಾದೆಯಿಂದ ಕಳಿಸುತ್ತಾರೆ ಎಂಬ ಭಂಡ ಧೈರ್ಯ ಈ ಗೂಬೆಗಳಿಗೆ (ಅಂದರೆ ಹಗಲು ಕಣ್ಣು ಕಾಣದ).
ಸ್ವಾಮೀ...ನೀವೇನಾದರೂ ಏಕಮುಖ ಸಂಚಾರದ ರಸ್ತೆಯಲ್ಲಿ ಸಂಚರಿಸುತ್ತಿದ್ದೀರೆಂದಿಟ್ಟುಕೊಳ್ಳಿ, ಆದರೂ ನೀವು ತುಂಬಾ ಜಾಗ್ರತೆಯಲ್ಲಿರಬೇಕು, ಎದುರಿಗೆ ಬರುವ ಕೆಲವು ವಾಹನಗಳು, ಹೈವೇನಲ್ಲಿ ಓಡಿಸುವುದಕ್ಕಿಂತ ಜೋರಾಗಿ ಬರುತ್ತಿರುತ್ತವೆ. ಆದರೆ ಅವರಿಗೆ ಇದು ಏಕಮುಖ ಸಂಚಾರ ಎಂಬ ಪರಿವೇ ಇರುವುದಿಲ್ಲ. ಬೆಂಗಳೂರಿನಲ್ಲಿ ಈ ಗೂಬೆಗಳ ಸಂತತಿ ದಿನೇ ದಿನೇ ಜಾಸ್ತಿಯಾಗುತ್ತಿರುವುದು ಕಳವಳದ ಸಂಗತಿ. ಆದರೂ ಬೆರಳೆಣಿಕೆಯ ಪೋಲಿಸರೂ ಅವರನ್ನು ಪ್ರಶ್ನಿಸುವ ಗೋಜಿಗೇ ಹೋಗದಿರುವುದು ಅನುಮಾನಕ್ಕಾಸ್ಪದ ಉಂಟುಮಾಡಿದೆ. ಈ ಗೂಬೆಗಳನ್ನು ಹಿಡಿದರೆ, ಕನಿಷ್ಟ ಪಕ್ಷ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬಹುದು.
ಉದಾಹರಣೆಗೆ ಮೈಸೂರು ರಸ್ತೆಯಿಂದ ಹೊಸಕೆರೆಹಳ್ಳಿಗೆ ಹೋಗುವ ರಸ್ತೆಯಲ್ಲಿ(ಬಾಪೂಜಿನಗರದಿಂದ) ದಿನಾ ಈ ಗೋಳು ಕಾಣಸಿಗುತ್ತದೆ. ಒಬ್ಬ ಒಂದು ಸಾರಿ ನನ್ನ ಬೈಕಿಗೇ ಗುದ್ದಿದ್ದ. ಗುದ್ದಿಯೂ ನಿಲ್ಲಿಸದೆ ಓಡಿ ಹೋಗಿದ್ದ. ಏಕಮುಖಸಂಚಾರವಾದರೂ ಅವರು ವಾಹನ ಓಡಿಸುವ ವೇಗ ನೋಡಿದರೆ ನಮಗೇ ಅನುಮಾನವಾಗುತ್ತದೆ, ಇದು ಏಕಮುಖಸಂಚಾರ ರಸ್ತೆಯೋ, ದ್ವಿಮುಖವೋ ಅಂತ. ಇಂತಹ ಮೂರನೇವರ್ಗದ ಮಂದಿ ಮೇಲೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.