Sunday, October 31, 2010

ಪ್ರಾರ್ಥನಾ ಶಾಲೆ ಮತ್ತು ಟ್ರಾಫಿಕ್ ಕಿರಿಕ್ಕು






ಬೆಂಗಳೂರಿನ ಪದ್ಮನಾಭನಗರದ ಹತ್ತಿರ ಇರುವ ಪ್ರಾರ್ಥನಾ ಶಾಲೆಯಿಂದ ಸಾರ್ವಜನಿಕರಿಗೆ ಆ ರಸ್ತೆಯಲ್ಲಿ ಓಡಾಡಲೂ ಆಗದ ದುಸ್ತರ ಪರಿಸ್ಥಿತಿ ಎದುರಾಗಿದೆ. ಆ ಶಾಲೆಗೆ ಬರುವ ಪ್ರತೀ ಒಬ್ಬ ಮಗುವಿಗೆ ಒಂದು ಕಾರು ಆ ರಸ್ತೆಯಲ್ಲಿ ಓಡಾಡುವುದರಿಂದ ದಿನ ನಿತ್ಯ ಅಲ್ಲಿ ಸಾರ್ವಜನಿಕ ವಾಹನಗಳು, ದ್ವಿಚಕ್ರ ವಾಹನಗಳು ಓಡಾಡಲು ಅಲ್ಲದೆ ನಡೆದುಕೊಂಡು ಹೋಗಲೂ ಸಹ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ಸಂಚಾರಿ ಪೋಲಿಸರಿಗೂ ದಿನ ನಿತ್ಯ ಕಿರಿಕಿರಿ. ಅಲ್ಲದೆ ಉತ್ತರಹಳ್ಳಿಯಿಂದ ಕುಮಾರಸ್ವಾಮಿ ಬಡಾವಣೆಗೆ ಹೋಗಲು ಬಲಕ್ಕೆ ತಿರುಗುವ ಅವಕಾಶವಿಲ್ಲ. ಅದರೆ ಈ ಸಂಚಾರಿ ನಾಮಫಲಕದ ಮುಂಭಾಗವೇ ರಾಜಕೀಯ ಪಕ್ಷದ ಬ್ಯಾನರ್ ರಾರಾಜಿಸುತ್ತಿದೆ. ಇದರಿಂದ ಈ ನಾಮಫಲಕ ಕಾಣಿಸದಿರುವುದರಿಂದ ಅನೇಕರು ಬಲಕ್ಕೆ ತಿರುಗಿಸಲು ಹೋಗಿ, ಸುಮ್ಮನೇ ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಆ ಶಾಲೆಯ ಮಕ್ಕಳೂ ಕೂಡಾ ತಾವು ಅಭದ್ರತೆಯಿಂದ ಓಡಾಡುವಂತಾಗಿದೆ. ಇಲ್ಲಿ ಓಡಾಡುವ ವಾಹನಗಳಿಂದ ರಸ್ತೆ ದಾಟಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ದಾರಿಹೋಕರಿಗೆ ಹಾಗೂ ಸಾರ್ವಜನಿಕ ವಾಹನಗಳಿಗೆ ಒಡಾಡಲು ದುಸ್ತರವಾಗುವಂತೆ ಮಾಡಿದ ಈ ಪ್ರಾರ್ಥನಾ ಶಾಲೆಯನ್ನು ಆ ಜಾಗದಿಂದ ಎತ್ತಂಗಡಿ ಮಾಡಿಸದಿದ್ದರೆ ಮುಂದೆ ಆ ರಸ್ತೆಯಲ್ಲಿ ಖಂಡಿತಾ ಓಡಾಡಲು ಸಾದ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ದಯವಿಟ್ಟು ಅಲ್ಲಿನ ಜನನಾಯಕರು ಸಾರ್ವಜನಿಕ ಹಿತಾಸಕ್ತಿ ಕಾಯಿದೆಯ ಅನುಸಾರ ಆ ಶಾಲೆಯ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.

Thursday, October 28, 2010

ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ



ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ ಇವತ್ತು ನಮ್ಮ ದೇಶದ ವಿರುದ್ದವೇ ಕೆಲವು ಹೇಳಿಕೆಗಳನ್ನು ಧೈರ್ಯವಾಗಿ ಹೇಳುತ್ತಿರುವುದು ನಮ್ಮ ದೇಶದ ದುರ್ದೈವ. ಈ ದೇಶವಿರೋಧಿ ಹೇಳಿಕೆಗಳಿಗೆ ನಮ್ಮ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ನಾವು ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.

ಈ ಮಹಿಳೆ ನಕ್ಸಲೈಟ್‌ಗಳಿಗೆ ಬೆಂಬಲ, ಪಾಕಿಸ್ತಾನೀ ಉಗ್ರರಿಗೆ ಬೆಂಬಲ ನೀಡುತ್ತಿರುವುದು ನಮ್ಮ ದೇಶದಲ್ಲಿ ಭಾರತೀಯರೇ ನಮ್ಮ ದೇಶದ ವಿರುದ್ದ ಕೆಲಸ ಮಾಡುತ್ತಿರುವುದಕ್ಕೆ ಸಾಕ್ಷ್ಯವಾಗಿದೆ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ಬಹಿರಂಗವಾಗಿ ನೇಣಿಗೆ ಹಾಕಬೇಕು.

ಇಂತಹಾ ದೇಶದ್ರೋಹಿಗಳನ್ನು ಕೇಶ ಮುಂಡನ ಮಾಡಿ,ಕತ್ತೆ ಮೇಲೆ ಮೆರವಣಿಗೆ ಮಾಡಿ, ಚಪ್ಪಲಿ ಸೇವೆ ಮಾಡಿ, ಬಹಿರಂಗವಾಗಿ ನೇಣಿಗೆ ಹಾಕಬೇಕು. ಮತ್ತೆ ಯಾರೂ ದೇಶದ್ರೋಹ ಮಾಡಲು ಹಿಂಜರಿಯಬೇಕು.
ಥೂ.....ಇಂತಹ ಹೆಣ್ಣುಮಗಳನ್ನು ಹೆತ್ತ ಭಾರತ ಮಾತೆ.....ಇವತ್ತು ಸಂಕಟ ಪಡುತ್ತಿದ್ದಾಳೆ.

ಉಗೀರಿ ಅವಳ ಮುಖಕ್ಕೆ....ಧಿಕ್ಕಾರವಿರಲಿ ಅವಳ ಜನ್ಮಕ್ಕೆ......