Saturday, September 27, 2008

ಬನ್ನಿ ಸ್ವಾಭಿಮಾನಿ ಕರ್ನಾಟಕ ಕಟ್ಟೋಣ (ಮೋದಿಗೆ ಸಲಾಂ)



ಬೆಂಗಳೂರು ಸೆಪ್ಟೆಂಬರ್ ೨೭: ಮಂಗಳೂರಿನಲ್ಲಿ ನಡೆದ ಗಲಭೆಗೆ ಹಿಂದೂಗಳ ವಿರುದ್ಧ ಕ್ರಿಶ್ಚಿಯನ್ನರ ಪರ ಏಕಪಕ್ಷೀಯವಾಗಿ ಕೇಂದ್ರದ ತಂಡ ತನ್ನ ಬೆಂಬಲ ಸಾರಿ ಕೇಂದ್ರ ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆದರೆ ಕೇವಲ ಮತಾಂತರ ಕೇಂದ್ರಗಳ ಮೇಲೆ ಆಕ್ರಮಣವಾಯಿತೇ ಹೊರತು ಯಾವುದೇ ಪ್ರಾಣಹಾನಿಯಾಗಲೀ,ಹಲ್ಲೆಯಾಗಲೀ ಮಾಡದೆ ತನ್ನ ಪ್ರತಿಭಟನೆಯನ್ನು ಸಲ್ಲಿಸಿದ ಹಿಂದುಗಳ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕೇಂದ್ರಸರಕಾರ ಉದ್ದೇಶಪೂರ್ವಕವಾಗಿಯೇ ಮಾಡಿದೆ.
ಬೆಂಗಳೂರಿನ ಆರ್ಚ್ ಬಿಷಪ್ ಆದ ಮೊರಾಸ್ ಎಂಬ ವ್ಯಕ್ತಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಗೌರವ ತೋರಿಸಿದ್ದು ಅವನ ನಿಜವಾದ ಬಣ್ಣವನ್ನು ತೋರಿಸುತ್ತದೆ. ಒಬ್ಬ ಮುಖ್ಯಮಂತ್ರಿಗೆ ಅಗೌರವ ಸೂಚಿಸುವ ಇಂತಹ ರಾಜ್ಯದ್ರೋಹಿಗಳನ್ನು ಕರ್ನಾಟಕದಿಂದ ಹೊರಗಟ್ಟಬೇಕು. ಇದೇ ಘಟನೆ ಗುಜರಾತಿನಲ್ಲಿ ನಡೆದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಮಾನವೀಯ ದೃಷ್ಟಿಯಿಂದ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಅವನನ್ನು ಭೇಟಿ ಮಾಡಲು ಹೋಗಿದ್ದರೇ ವಿನಹ ರಾಜಕೀಯ ಫೋಸ್ ಕೊಡಲು ಅಲ್ಲ ಎಂಬುದನ್ನು ಅವನು ಮನಗಣಬೇಕಾಗಿದೆ. ಅಲ್ಲದೆ ಸಾಂಗ್ಲಿಯಾನ ಎಂಬ ಬಾಯ್ಬಡುಕ ಈಗ ಮತಾಂತರದ ಪರವಾಗಿ ಮಾತನಾಡುತ್ತಿರುವುದು ಅವನ ಬಗ್ಗೆ ಅಸಹ್ಯ ಹುಟ್ಟಿಸಿದೆ.
ಬನ್ನಿ....ಗುಜರಾತ್ ಎಂಬ ಸ್ವಾಭಿಮಾನೀ ರಾಜ್ಯದ ಬಗ್ಗೆ ನಾವು ಹೆಮ್ಮೆ ಪಡಬೇಕಾದ್ದು ನಿಜ. ಏಕೆಂದರೆ ಕೆಲವು ದಶಕಗಳ ಕಾಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಸರಕಾರವನ್ನು ಕಂಡಿದ್ದ ಜನತೆ ಕೊನೆಗೂ ಎಚ್ಚೆತ್ತು ಒಬ್ಬ ರಾಷ್ಟ್ರೀಯ ಹರಿಕಾರ, ಹಿಂದೂ ರಕ್ಷಕ, ಜನಪ್ರೇಮಿ ಸರಕಾರದ ಹುಟ್ಟಿಗೆ ಕಾರಣರಾದರು. ಈಗ ಎಲ್ಲಿ ಹೋದರೂ ಗುಜರಾತ್ ಜನತೆ ತಮ್ಮ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಾರೆ. ಅಲ್ಲದೆ ತಮ್ಮ ರಾಜ್ಯವನ್ನು ಸ್ವಾಭಿಮಾನೀ ರಾಜ್ಯವನ್ನಾಗಿ ಮಾಡಿದ ಈ ಹರಿಕಾರನನ್ನು ಕೊಂಡಾಡುತ್ತಾರೆ. ಕೇಂದ್ರದ ಯವುದೇ ಸಹಾಯವಿಲ್ಲದೆಯೂ ತಾನು ಸರಕಾರ ನಡೆಸಬಲ್ಲೆ, ತನ್ನ ರಾಜ್ಯದ ಜನರನ್ನು ಸ್ವಾಭಿಮಾನಿಯಾಗಿ ಮಾಡಬಲ್ಲೆ ಎಂಬುದನ್ನು ಬಹಿರಂಗವಾಗಿಯೇ ಸಾರಿ ಅದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವೇ?. ಸದಾ ಕಾಲೆಳೆಯುವ ಪಕ್ಷವಾದ ಕಾಂಗ್ರೆಸ್ ತನ್ನ ಸ್ವಹಿತಕ್ಕಾಗಿ ಕರ್ನಾಟಕದ ಜನರನ್ನು ಬಲಿಗೊಡಲೂ ಸಿದ್ಧ ಎಂಬ ಸಿದ್ಧಾಂತಕ್ಕೆ ಕಟ್ಟುಬಿದ್ದಿದೆ.
ನರೇಂದ್ರ ಮೋದಿಯಂತಹ ಒಬ್ಬ ಸ್ವಾಭಿಮಾನೀ ಮುಖ್ಯಮಂತ್ರಿ ನಮ್ಮ ಕರ್ನಾಟಕಕ್ಕೆ ಇನ್ನೂ ಸಿಗದಿರುವುದು ನಮ್ಮ ದುರ್ದೈವ. ಆದರೆ ಯೆಡಿಯೂರಪ್ಪ ಈ ನಿಟ್ಟಿನಲ್ಲಿ ತುಂಬಾ ಹಿಂದುಳಿದಿದ್ದಾರೆ. ಏಕೆಂದರೆ ಅವರಿಗೆ ತಮ್ಮದೇ ಪಕ್ಷದಲ್ಲಿ ಹಿಡಿತವಿಲ್ಲದ ಕಾರಣ ಹಾಗೂ ಬಹುಮತವಿಲ್ಲದ ಕಾರಣ ಈಗ ಹೊರಗಿನಿಂದ ಪಕ್ಷಕ್ಕೆ ಬಂದಿರುವ ಅವಕಾಶವಾದೀ ರಾಜಕಾರಣಿಗಳ ವಿರುದ್ಧ ಏಗಬೇಕಾಗಿರುವುದರಿಂದ ಅವರ ಪರಿಸ್ಥಿತಿಯನ್ನು ನರೇಂದ್ರ ಮೋದಿಯವರಿಗೆ ಹೋಲಿಸಲಾಗದು.
"ಬನ್ನಿ ಸ್ವಾಭಿಮಾನೀ ಕರ್ನಾಟಕ ಕಟ್ಟೋಣ.....ಕೇಂದ್ರ ಸರಕಾರ ಮತಾಂತರಕ್ಕೆ ಕುಮ್ಮಕ್ಕು ಕೊಟ್ಟರೂ ನಾವು ಸ್ವಾಭಿಮಾನಿಯಾಗಿ ಅದನ್ನು ಹಿಮ್ಮೆಟ್ಟಿಸಬೇಕು."

ಸಂಸ್ಕೃತದ ನಂತರದ ಅತೀ ಪುರಾತನ ಭಾಷೆಯಾದ ನಮ್ಮ ಕನ್ನಡ ಭಾಷೆಯ ಏಳಿಗೆಗಾಗಿ ಹೋರಾಡೋಣ. ಗುಜರಾತ್ ಮಾದರಿಯಲ್ಲಿ ನಮ್ಮ ಕರ್ನಾಟಕ ರಾಜ್ಯವನ್ನು ಸ್ವಾಭಿಮಾನೀ ರಾಜ್ಯವಾಗಿ ಕಟ್ಟೋಣ.

Friday, September 19, 2008

ನ್ಯೂ ಲೈಫ್ ಮತ್ತು ಕ್ರಿಶ್ಚಿಯನ್ ಭಯೋತ್ಪಾದಕರು

ಬೆಂಗಳೂರು ಸೆಪ್ಟೆಂಬರ್ ೧೯ : ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ಧಾಳಿ..ಇದು ಇತ್ತೀಚಿನ ಕೆಲವು ಪತ್ರಿಕೆಗಳ ಮುಖಪುಟ ವರದಿ. ಆದರೆ ಇದೆಲ್ಲಾ ಬೊಗಳೆ. ಈ ಮಾಧ್ಯಮದ ಮಂದಿಗೆ ಚರ್ಚ್ ಯಾವುದು, ಮತಾಂತರ ಕೇಂದ್ರ ಯಾವುದು ಎಂಬುದು ಇನ್ನೂ ತಿಳಿಯದಿರುವುದು ಅವರ ಜರ್ನಲಿಸಂ ವೃತ್ತಿಯ ಜ್ಞಾನವನ್ನು ಎತ್ತಿ ತೋರಿಸುತ್ತದೆ. ಆದರೆ ಧಾಳಿಯಾದದ್ದು ಚರ್ಚ್ ಮೇಲಲ್ಲ...ನ್ಯೂ ಲೈಫ್ ಎಂಬ ಕ್ರಿಶ್ಚಿಯನ್ ಭಯೋತ್ಪಾದಕ ಕೇಂದ್ರಗಳ ಮೇಲೆ.
ನಾನು ಒಬ್ಬ ಹಿಂದುವಾಗಿ ಎದೆ ತಟ್ಟಿಕೊಂಡು ಹೇಳಬಲ್ಲೆ, ಇವತ್ತು ಮಂಗಳೂರಿನಲ್ಲಿ ಹಿಂದುಗಳು ನೆಮ್ಮದಿಯಿಂದ ಬಾಳುತ್ತಿದ್ದಾರೆ ಎಂದರೆ ಅದು ಹಿಂದೂ ಸಂಘಟನೆಗಳಾದ ಆರ್.ಎಸ್.ಎಸ್, ಭಜರಂಗದಳ, ವಿ.ಎಚ್.ಪಿ ಯಿಂದ. ಇಲ್ಲದಿದ್ದಲ್ಲಿ ಈ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರು ಅಲ್ಲಿ ಹಿಂದುಗಳನ್ನು ಅರೆದು ಕುಡಿದುಬಿಡುತ್ತಿದ್ದರು. ನಾನು ಆರು ತಿಂಗಳು ಆರ್.ಎಸ್.ಎಸ್‌ನಲ್ಲಿ ಪೂರ್ಣಾವಧಿಯಲ್ಲಿ ಕೆಲಸ ಮಾಡಿದ ಅನುಭವದಿಂದ ಹೇಳುತ್ತಿದ್ದೇನೆ. ಈ ಜನಾರ್ಧನ ಫೂಜಾರಿ, ವೀರಪ್ಪ ಮೊಯಿಲಿ ಮುಂತಾದ ಕಾಂಗ್ರೆಸ್ ಮುಖಂಡರಿಂದಲೇ ಇವತ್ತು ಮಂಗಳೂರು ಹೊತ್ತಿ ಉರಿಯುತ್ತಿದೆ. ಕೇವಲ ಓಟಿಗಾಗಿ ಅಲ್ಪಸಂಖ್ಯಾತರ ಕಾಲು ನೆಕ್ಕಲೂ ಹೇಸದ ಈ ಮಂದಿ ಇವತ್ತು ಚರ್ಚ್‌ಗಳ ಮೇಲೆ ಧಾಳಿ ಎಂದು ಬೊಬ್ಬಿರಿಯುತ್ತಿದ್ದಾರೆ. ಆದರೆ ಹಿಂದೂ ದೇವಳವನ್ನು ಉಲ್ಲಾಳದಲ್ಲಿ ಜಖಂಗೊಳಿಸಿದಾಗ, ಉಲ್ಲಾಳದಲ್ಲಿ ಹಿಂದುಗಳ ಮಾರಣ ಹೋಮವಾದಾಗ ಈ ಮಂದಿ ತುಟಿ ಪಿಟಿಕ್ ಎನ್ನುವುದಿಲ್ಲ.
ನೆರೆಯ ಪಾಕಿಸ್ಥಾನದಲ್ಲಿ ಒಬ್ಬ ಹಿಂದುವನ್ನು ಮುಸ್ಲಿಮ್ ಧರ್ಮದ ಅವಹೇಳನ ಮಾಡಿದ್ದಕ್ಕಾಗಿ ಹಾಡುಹಗಲೇ ಕೊಲೆಗೈಯಲಾಯಿತು. ಆದರೆ ಇಂದು ಭಾರತದಲ್ಲಿ ಧರ್ಮದ ಅವಹೇಳನೆಯ ಅಧಿಕಾರವನ್ನು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮುಂತಾದ ಹಿಂದೂ ವಿರೋಧಿ ಪಕ್ಷಗಳು ಚಿನ್ನದ ತಟ್ಟೆಯಲ್ಲಿ ದಾನ ಮಾಡಿವೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಕೂಡಾ ವಸ್ತು ಸ್ಥಿತಿ ಅರಿಯದೆ ಹಿಂದುಗಳ ವಿರುದ್ಧವೇ ಮಾತಾಡುತ್ತಿರುವುದು ಹಿಂದುಗಳೇ ಹಿಂದುಗಳಿಗೆ ವಿರೋಧವಾಗಿರುವುದನ್ನು ಸೂಚಿಸುತ್ತದೆ.
ಇಷ್ಟಕ್ಕೂ "ನ್ಯೂ ಲೈಫ್" ಎಂಬ ಭಯೊತ್ಪಾದಕ ಹಾಗೂ ಮತಾಂತರ ಕೇಂದ್ರಗಳ ಬಗ್ಗೆ ನಿಮಗೆ ಎಷ್ಟು ಗೊತ್ತು?.....ಈ ಕೇಂದ್ರಗಳು ಹಂಚುತ್ತಿರುವ "ಸತ್ಯದರ್ಶಿನಿ" ಎಂಬ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಪುಸ್ತಕವೇ ಈ ಮಂಗಳೂರು ಘಟನೆಗೆ ಕಾರಣ. ಇದರ ಕರ್ನಾಟಕದ ರೂವಾರಿ ನಮ್ಮ ಹೆಮ್ಮೆಯ ಮಾಜಿ ಪೋಲಿಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ. ಕರ್ನಾಟಕದಲ್ಲಿ ಈ ನ್ಯೂ ಲೈಫ್ ಕೇಂದ್ರಗಳ ಉಸ್ತುವಾರಿ ಹಾಗೂ ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವುದು ಎಲ್ಲ ಬಿ.ಜೆ.ಪಿ ನಾಯಕರಿಗೆ ತಿಳಿದಿದ್ದು, ಅವನನ್ನು ಅದೇ ವಿಷಯಕ್ಕಾಗಿ ಮೂಲೆಗುಂಪು ಮಾಡಲಾಯಿತು. ಇದಕ್ಕೆ ಪ್ರತೀಕಾರವಾಗಿ ಈ ನ್ಯೂ ಲೈಫ್ ಕೇಂದ್ರಗಳನ್ನು ಅತೀ ಶೀಘ್ರವಾಗಿ ಬೆಳೆಸಿ ಹಿಂದುಗಳ ವಿರುದ್ಧ ಸೇಡು ತೀರಿಸಿಕೊಂಡ.
ಈ "ಸತ್ಯ ದರ್ಶಿನಿ" ಪುಸ್ತಕದಲ್ಲಿ ಕೆಳಗೆ ಇರುವ ವಿಷಯಗಳು ಕ್ರಿಶ್ಚಿಯನ್ನರ ದೇಶದ್ರೋಹಿತನವನ್ನು ಸಾರುತ್ತವೆ. ಧರ್ಮ ನಿಂದನೆಗೆ ಯಾವ ಶಿಕ್ಷೆ ಕೊಡಬೇಕು?.

೧. ಇದರಲ್ಲಿ ಶ್ರೀ ರಾಮ, ಕೃಷ್ಣ, ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಬ್ರಾಹ್ಮಣರನ್ನು ಹೀನಾಯವಾಗಿ ಚಿತ್ರಿಸಲಾಗಿದೆ.
೨. ತ್ರಿಮೂರ್ತಿಗಳು ಕಾಮ ಕ್ರೋಧಗಳಿಗೆ ಒಳಗಾಗಿ ಪಾಪವನ್ನು ಮಾಡಿದ್ದಾರೆ. ಹಾಗಾಗಿ ಅವರು ದೇವರಲ್ಲ.
೩. ತ್ರಿಮೂರ್ತಿಗಳು ಲೋಕವನ್ನು ಪ್ರೀತಿಸಿ, ಸ್ತ್ರೀಯರನ್ನು ಮೋಹಿಸಿದ್ದಾರೆ, ಹಾಗಾಗಿ ಅವರಿಗೆ ಮನುಷ್ಯರಿಗೆ ಬುದ್ದಿ ಹೇಳುವ ಹಕ್ಕಿಲ್ಲ.
೪. ಬ್ರಾಹ್ಮಣರಿಗೆ ಮೂಲಪುರುಷನಾದ ವಸಿಷ್ಠ ಮಹರ್ಷಿ ವೇಶ್ಯೆಯ ಗರ್ಭದಲ್ಲಿ ಹುಟ್ಟಿದವನು ಎಂದಿದೆ.
೫. ಬ್ರಾಹ್ಮನರು ಆಕಳ ಕೊಬ್ಬನ್ನು ತಿನ್ನುತ್ತಾರೆ, ಇದು ಮಾಂಸವನ್ನು ತಿಂದಂತೆ ಎಂದಿದೆ.
೬. ಹಿಂದೂಗಳ ಎಲ್ಲ ದೇವರುಗಳನ್ನು ಅಸಹ್ಯವಾಗಿ ಚಿತ್ರಿಸಲಾಗಿದೆ.ಇನ್ನೂ ಅನೇಕ ವಿಷಯಗಳಿವೆ.

ಇಂತಹ ಹಿಂದೂ ವಿರೋಧಿ ಹೇಳಿಕೆಗಳು ಈ ಪುಸ್ತಕದಲ್ಲಿದ್ದರೂ ನಮ್ಮ ತಿಪ್ಪೆ ರಾಜಕಾರಣಿಗಳು ಯಾಕೆ ಇನ್ನೂ ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ?. ಮಂಗಳೂರು ಜಿಲ್ಲೆಯೊಂದರಲ್ಲೇ ೧೫ ನ್ಯೂಲೈಫ್(ಮತಾಂತರ) ಕೇಂದ್ರಗಳಿವೆ. ಈ ಕೇಂದ್ರಗಳು ಆಮಿಷದ, ಬಲವಂತದ ಮತಾಂತರ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಇದರ ಬಗ್ಗೆ ಮಂಗಳೂರಿನ ಭಜರಂಗ ದಳ, ವಿ.ಎಚ್.ಪಿ ಮೊದಲಾದ ಸಂಘಟನೆಗಳು ಅನೇಕ ಬಾರಿ ದೂರು ನೀಡಿದ್ದರೂ ಕ್ರಮ ಯಾಕೆ ಕೈಗೊಂಡಿಲ್ಲ?. ಇದಕ್ಕೆ ನೇರಹೊಣೆ ಹಿಂದಿನ ಸರಕಾರಗಳು, ಅಲ್ಪಸಂಖ್ಯಾತರನ್ನು ಪೋಷಿಸುತ್ತಿರುವ ಜೆ.ಡಿ.ಎಸ್. ಹಾಗೂ ಅಲ್ಪ ಸಂಖ್ಯಾತರ ಪ್ರತಿನಿಧಿಯಾದ ಕೇಂದ್ರ ಸರಕಾರಗಳು.
ಒಬ್ಬ ರಾಜಕಾರಣಿಗಾದರೂ ಈ ಭಯೋತ್ಪಾದಕರ ವಿರುದ್ಧ, ಈ ಮತಾಂತರಿಗಳ ವಿರುದ್ಧ ಮಾತನಾಡಲು ಗಂಡಸ್ತನವಿದೆಯೇ?. ಇಂದು ಹಿಂದುಗಳ ರಕ್ಷಣೆಯನ್ನು ಹಿಂದು ಸಂಘಟನೆಗಳೇ ಮಾಡಬೇಕಾಗಿದೆ. ಯಾವ ಪೋಲಿಸ್, ಕಾನೂನು, ಸರಕಾರಗಳೂ ಹಿಂದುಗಳ ರಕ್ಷಣೆಗೆ ಬರಲಾರದು.

ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಇದಕ್ಕೆ ಪರಿಹಾರ ಇದೆ. ಇದ್ದರೆ ಅದು ಕೇವಲ ಏಕರೂಪ ನಾಗರಿಕ ಸಂಹಿತೆಯಿಂದ ಮಾತ್ರ ಸಾಧ್ಯ. ಅಲ್ಪಸಂಖ್ಯಾತರ ತುಷ್ಟೀಕರಣವೇ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳಿಗೆ ಕಾರಣ. ಮಂಗಳೂರಿನಲ್ಲಿ ಹಿಂದುಗಳು ಈ ನ್ಯೂಲೈಫ್ ಕೇಂದ್ರಗಳ ಮೇಲೆ ಹಲ್ಲೆ ಮಾಡಿರಬಹುದು ಆದರೆ ಈ ಕ್ರಿಶ್ಚಿಯನ್ನರು ಸಮಸ್ತ ಹಿಂದುಗಳ ಹೃದಯವನ್ನು ಒಡೆದಿದ್ದಾರೆ, ಹಿಂದೂ ಕ್ರಿಷ್ಚಿಯನ್ನರ ಮಧ್ಯೆ ಸೇರಿಸಲಾಗದ ಕಂದಕ ಸೃಷ್ಟಿಸಿದ್ದಾರೆ. ಇದಕ್ಕೆ ಯಾರು ಹೊಣೆ?

ಹೊಣೆಗೇಡಿಗಳಾದ ಕಾಂಗ್ರೆಸ್ ಹಾಗೂ ಜೆ.ಡಿ.ಏಸ್.ಗಳೆ ಈ ಪರಿಸ್ಥಿತಿಗೆ ಮೂಲ ಕಾರಣ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಎರಡೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಹಿಂದೂಗಳೇ ಒಗ್ಗಟ್ಟಾಗಿ, ಈ ಹಿಂದೂ ವಿರೋಧಿಗಳನ್ನು ಸೋಲಿಸೋಣ.

Sunday, September 14, 2008

ಹೇಸಿಗೆ ರಾಜಕಾರಣಿಗಳು ಮತ್ತು ಅಕ್ಕ ಸಮ್ಮೇಳನ

ಬೆಂಗಳೂರು ಸೆಪ್ಟೆಂಬರ್ ೧೪: ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ "ಅಕ್ಕ" ಸಮ್ಮೇಳನ ಎಲ್ಲ ಕನ್ನಡಿಗರಿಗೆ ಒಂದು ಸಂತೋಷದಾಯಕ ವಿಚಾರ. ಅಮೆರಿಕಾದಲ್ಲಿ ನೆಲೆಸಿದ್ದರೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಈ ಮಂದಿಗೆ ನನ್ನ ಸಲಾಂ.
ಆದರೆ ಇನ್ನೊಂದು ತಲೆತಗ್ಗಿಸುವ ವಿಚಾರ ಇಲ್ಲಿ ನಮ್ಮ ಗ್ರೇಟ್ ರಾಜಕಾರಣಿಗಳು ಮಾಡಿದ್ದಾರೆ. "ಜನಾರ್ಧನ ರೆಡ್ಡಿ ಕೃಪಾಪೋಷಿತ ನಾಟಕ ಮಂಡಳಿ"ಯ ಕೆಲ ರಾಜಕಾರಣಿಗಳು ಈ ಅಕ್ಕ ಸಮ್ಮೇಳನ ನೆಪದಲ್ಲಿ ಸರಕಾರೀ ಖರ್ಚಿನಲ್ಲಿ ಒಂದು ವಾರ ಮಜಾ ಮಾಡಿ ಬಂದಿದ್ದು, ಇವರಿಗೆ ತಮ್ಮ ತಾಯಿನಾಡಿನ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಇದೂ ಅಲ್ಲದೆ "ಕನ್ನಡ"ದ ವಿಚಾರದಲ್ಲಿ ಗೋಮುಖ ವ್ಯಾಘ್ರನಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಕೂಡಾ ಏನೂ ಮಾಡದ ಅಸಹಾಯ ಪರಿಸ್ಥಿತಿಯಲ್ಲಿರುವುದು ಅತ್ಯಂತ ಹೀನ ಸ್ಥಿತಿಯಾಗಿದೆ. ಪ್ರಧಾನಿ ಮನಮೋಹನ ಸಿಂಗ್ ಯಾವ ರೀತಿ ರಿಮೋಟ್ ಕಂಟ್ರೋಲ್‌ನಿಂದ (ಸೋನಿಯಾ) ಕೆಲಸ ಮಾಡುತ್ತಿರುವರೋ ಅದೇರೀತಿ ಇಲ್ಲಿ ಯೆಡಿಯೂರಪ್ಪ ಕೂಡಾ ಕನ್ನಡ ವಿರೋಧಿಗಳಾದ, ಗಣಿ ಲೂಟಿಕೋರರಾದ ರೆಡ್ಡಿ ಸಹೋದರರಿಂದ ರಿಮೋಟ್ ಕಂಟ್ರೋಲ್‍ನಿಂದ ಆಡಿಸಲ್ಪಡುತ್ತಿದ್ದಾರೆ. ಅಯ್ಯೋ ಪಾಪ ನಮ್ಮ ಕರ್ನಾಟಕಕ್ಕೆ ಇಂಥಹ ದೈನೇಸಿ ಪರಿಸ್ಥಿತಿ ಬರಬಾರದಿತ್ತು.
ಅನೇಕ ಮಂದಿ ಕನ್ನಡದ್ರೋಹಿ, ಕನ್ನಡವಿರೋಧಿ ಐ.ಎ.ಎಸ್ ಅಧಿಕಾರಿಗಳು, ರಾಜಕಾರಣಿಗಳು ಕನ್ನಡ ಸಮ್ಮೆಳನದ ನೆಪದಲ್ಲಿ ಭರ್ಜರಿಯಾಗಿಯೇ ಖಜಾನೆ ಲೂಟಿ ಮಾಡಿದ್ದಾರೆ. ಅಲ್ಲಾರೀ...ಕನ್ನಡ ಬರೆಯಲು, ಓದಲು, ಮಾತನಾಡಲು ಬಾರದ ಈ ಮಂದಿಗೆ ಕನ್ನಡ ಸಮ್ಮೇಳನದಲ್ಲಿ ಏನು ಕೆಲಸ?. ಕರ್ನಾಟಕದಲ್ಲಿ ನೆಲೆಸದ, ಇಲ್ಲಿನ ಭಾಷೆ, ಸಂಸ್ಕೃತಿಯ ಗಂಧ ಗಾಳಿಯಿಲ್ಲದ ಕೆಲ ಮಂದಿ ಈ ರೆಡ್ಡಿ ಸಹೋದರರ ಮಸಲತ್ತಿನಿಂದ ಭರ್ಜರಿಯಾಗಿಯೇ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಒಂದು ಲೆಕ್ಕದಲ್ಲಿ ಮಜಾ ಮಾಡಿ ಬಂದಿದ್ದಾರೆ. ಇಂಥ ಮಂದಿಗೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದರೂ ಕಮ್ಮಿಯೇ.
ಆದರೆ ನಮ್ಮ ಮುಖ್ಯಮಂತ್ರಿಗೆ ಬುದ್ದಿ ಇಲ್ಲವೆ?. ಬುದ್ದಿ ಇದೆ ಆದರೆ ತನ್ನ ಕೈಯಲ್ಲಿ ಇಲ್ಲ ಅಂತ ಕಾಣುತ್ತದೆ. ಎಲ್ಲ ರೆಡ್ಡಿ ಸಹೋದರರಿಗೆ ಮಾರಿಕೊಂಡಿದ್ದಾರೆ. ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಮಂದಿ ಅಮೆರಿಕಾದಲ್ಲಿ ನಮ್ಮ ಸಹೋದರರು ಆಚರುತ್ತಿರುವ ಅಕ್ಕ ಸಮ್ಮೇಳನದಲ್ಲಿ ಹೇಸಿಗೆ ಚೆಲ್ಲಿ ಬಂದಿದ್ದಾರೆ. ಕೇವಲ ಮಜಾ ಮಾಡುವ ನೆಪದಲ್ಲಿ ನಮ್ಮ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಅಸಹ್ಯ ಭಾವನೆ ಉಂಟುಮಾಡಿದ್ದಾರೆ.
ಅಕ್ಕ ಸಮ್ಮೇಳನದ ರೂವಾರಿಗಳಲ್ಲಿ ನನ್ನ ಕಳಕಳಿಯ ವಿನಂತಿ.....ದಯವಿಟ್ಟು ಇನ್ನು ಮುಂದೆ ನಮ್ಮ ರಾಜ್ಯದ ಯಾವುದೇ ರಾಜಕಾರಣಿಗಳನ್ನು ನಿಮ್ಮ ಸಮ್ಮೇಳನಕ್ಕೆ ಕರೆಯಬೇಡಿ. ಕನ್ನಡದ ಬಗ್ಗೆ ಕಾಳಜಿ ಇರುವ ಒಬ್ಬ ಸಾಮಾನ್ಯ ಮನುಷ್ಯನನ್ನು ಈ ಸಮ್ಮೆಳನಕ್ಕೆ ಕರೆಯಿರಿ. ಪ್ರತೀ ಬಾರಿ ಈ ಹೇಸಿಗೆ ರಾಜಕಾರಣಿಗಳಿಂದ ಸಮ್ಮೇಳನ ಮಲಿನ ಮಾಡುವುದಕ್ಕಿಂತ ಕನ್ನಡದ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಮಂದಿಗೆ ಸನ್ಮಾನ ಮಾಡಿ. ಈ ರಾಜಕಾರಣಿಗಳಿಂದ ದಯವಿಟ್ಟು ಚಂದಾ ಮಾತ್ರ ವಸೂಲು ಮಾಡಿ. ಈ ರಾಜಕಾರಣಿಗಳು ಬರದಿದ್ದಲ್ಲಿ ಸಮ್ಮೇಳನಕ್ಕೆ ಯಾವುದೇ ಚ್ಯುತಿ ಇರಲಾರದು.

"ಮಾನ್ಯ ಯೆಡಿಯೂರಪ್ಪನವರೇ ಎಲ್ಲಿ ಹೋಯಿತು ನಿಮ್ಮ ಕನ್ನಡದ ಕಾಳಜಿ?. ಅಧಿಕಾರ ಬಂದರೆ ಎಲ್ಲರೂ ಒಂದೇ ಎಂಬುದನ್ನು ಸಾಬೀತು ಮಾಡಿ ಬಿಟ್ಟಿರಿ" ಕನ್ನಡ ತಾಯಿಗೆ, ಕನ್ನಡಿಗರಿಗೆ ಅವಮಾನ ಮಾಡುವ ನಿಮ್ಮಂತಹ ಮುಖ್ಯಮಂತ್ರಿಗಳು ನಮಗೆ ಬೇಕಾಗಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಿಸುವ ನಿಮ್ಮ ಜವಾಬ್ದಾರಿ ಏನಾಯಿತು?. ಹೊಗೇನಕಲ್ ವಿವಾದದ ಬಗ್ಗೆ ಯಾಕೆ ಮೌನ?. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾಕೆ ಕಣ್ಣು ಮುಚ್ಚಿದ್ದೀರಿ?. ಐದು ವರ್ಷ ಶಿಖಂಡಿ ತರಹ ಅಧಿಕಾರ ಮಾಡುವುದಕ್ಕಿಂತ ಒಂದು ದಿನ ವೀರ ಪುರುಷನ ತರಹ ಅಧಿಕಾರ ನಡೆಸಿ. ನಿಮ್ಮ ಗೌರವ ಹೆಚ್ಚಾಗುತ್ತದೆ. ಇಲ್ಲಾ, ಮುಂದೆ ಧರಂ ಸಿಂಗ್‌ ಮೂಲೆಗುಂಪಾದ ಗತಿಯೇ ನಿಮಗೆ ಕಾದಿದೆ.

Sunday, September 07, 2008

ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು

ಬೆಂಗಳೂರು ಸೆಪ್ಟೆಂಬರ್ ೦೭:
ಒಂದು ದಿನ ಭಾನುವಾರ ಹೀಗೆ...ಒಂದು ಸಣ್ಣ ಯಾತ್ರೆ ಹೊರಟಿದ್ದೆವು. ಆಗ ನನ್ನ ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಬಿದ್ದದ್ದು ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಸನಿಹವಿರುವ ಈ ಡಾ.ರಾಜ್‌ಕುಮಾರ್ ಉದ್ಯ್ನಾನವನ. ಇಲ್ಲಿ ನೀವು ಬಂದು ಸ್ವಲ್ಪ ಹೊತ್ತು ವಿರಮಿಸಿದರೆ ಒಂದು ಥರಾ ಮಜಾ ಎನಿಸುತ್ತದೆ. ಆದರೆ ಇದು ಇನ್ನೂ ಪ್ರಾರಂಭವಾಗಿ ವರ್ಷವೂ ಕಳೆದಿಲ್ಲ. ಇಲ್ಲಿ ನಿಮಗೆ ಡೈನೋಸಾರ್ ಪ್ರತಿರೂಪ, ಮಮ್ಮಿಯ ಪ್ರತಿರೂಪ ಆಕರ್ಷಿಸುವ ಅಂಶಗಳು. ಅಲ್ಲದೆ ಇಲ್ಲಿ ಟ್ರೈನ್ ಕೂಡಾ ಇದೆ. ಅಲ್ಲದೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳು ಕವಿಗಳ ಪ್ರತಿಮೆಗಳು ಅವರ ವಿಅವರಗಳ ಸಹಿತ ನಿಮ್ಮ ಗಮನ ಸೆಳೆಯುತ್ತದೆ. ಅಲ್ಲದೆ ಸನಿಹದಲ್ಲಿಯೇ ಚಾಮರಾಜಪೇಟೆಯ ರುದ್ರಭೂಮಿ ಕೂಡಾ ಇರುವುದು ರಾತ್ರಿ ವೇಳೆಯಲ್ಲಿ ಕೆಲವರಿಗೆ ಇಲ್ಲಿ ಬರಲು ಭಯ ತರಿಸಬಹುದು. ಇದು ಶ್ರೀನಗರ ಹಾಗೂ ಹನುಮಂತನಗರದ ಮಧ್ಯಭಾಗದಲ್ಲಿ ಇದೆ. ಒಂದು ಸಲ ಭೇಟಿ ನೀಡಿ ಮಜಾ ಅನುಭವಿಸಿ.








Tuesday, September 02, 2008

"ಮಾಲ್‌ಗಳ-ಹಗಲು ದರೋಡೆ" ಹಾಗೂ ಐಟಿ-ಬಿಟಿಗಳ ಪರ್ಯಾಯ ಕರೆನ್ಸಿ





ಬೆಂಗಳೂರು ಸೆಪ್ಟೆಂಬರ್ ೨ : ಇಂದು ಎಲ್ಲಾ ಪ್ರಮುಖ ನಗರಗಳಲ್ಲಿ ಮಾಲ್ ಸಂಸ್ಕೃತಿ ತಲೆ ಎತ್ತಿರುವುದು ಒಂದು ದೊಡ್ಡ ಆತಂಕದ ಸಂಗತಿಯಾಗಿದೆ. ಏಕೆಂದರೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಮೂರ್ಖರಿಗೆ ಮಾತ್ರ ಇದು ಸಿಹಿಯಾದ ಸುದ್ದಿಯಾಗಿದೆ.

ನಾನು ಏಕೆ ಈ ವಿಷಯ ಹೇಳುತ್ತಿದ್ದೇನೆ ಎಂದರೆ, ಮೊನ್ನೆ ಖುದ್ದಾಗಿ ಬಿಗ್‌ಬಜಾರಿನಲ್ಲಿ ನನಗೆ ಅನುಭವವಾಯಿತು. ಎಲ್ಲ ಆಹಾರೋತ್ಪನ್ನಗಳಲ್ಲಿ ಈ ತರಹದ ಮಾಲ್‌ಗಳು ಯಾವತರಹ ಗ್ರಾಹಕರನ್ನು ಹಗಲುದರೋಡೆ ಮಾಡುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.


೧ ಕೆ.ಜಿ ಸಕ್ಕರೆ ೨೫ ರೂ.(ಬಿಗ್ ಬಜಾರ್ ಬೆಲೆ) ೨೨ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೨ ಕೆ.ಜಿ ಸಕ್ಕರೆ ೫೪ ರೂ.(ಬಿಗ್ ಬಜಾರ್ ಬೆಲೆ) ೪೪ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೫ ಕೆ.ಜಿ. ಸಕ್ಕರೆ ೧೧೩ ರೂ.ಬಿಗ್ ಬಜಾರ್ ಬೆಲೆ) ೧೦೫ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೫೦೦ ಮಿ.ಲೀ. ಎಳ್ಳೆಣ್ಣೆ ೮೦ ರೂ.(ಬಿಗ್ ಬಜಾರ್ ಬೆಲೆ) ೩೬ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)

ಇದು ಕೇವಲ ಉದಾಹರಣೆಯಷ್ಟೇ....ಬಿಗ್‌ಬಜಾರ್, ರಿಲಯನ್ಸ್ ಫ್ರೆಶ್, ಫೇರ್ ಪ್ರೈಸ್, ಮೋರ್ ಮುಂತಾದ ಮಳಿಗೆಗಳಲ್ಲಿ ಸಾಮಾನ್ಯವಾಗಿ ಜನರನ್ನು ಹಾಡುಹಗಲೇ ದೋಚಲಾಗುತ್ತದೆ. ಆದರೆ ಮಧ್ಯಮವರ್ಗದ ಜನ ಲೆಕ್ಕಾಚಾರದಲ್ಲಿ ಬದುಕುವುದರಿಂದ ಅವರಿಗೆ ಬೆಲೆಗಳ ವ್ಯತ್ಯಾಸ ಗೊತ್ತಾಗುತ್ತದೆ. ನಾನೂ ಒಬ್ಬ ಲೆಕ್ಕಾಚಾರದ ಮನುಷ್ಯ, ಅಂದರೆ ಎಲ್ಲ ಕಡೆ ಬೆಲೆ ವಿಚಾರಿಸಿ ಎಲ್ಲಿ ಕಡಿಮೆ ಬೆಲೆಗೆ ಉತ್ತಮ ಪದಾರ್ಥಗಳು ದೊರೆಯುತ್ತವೆಯೋ ಅಲ್ಲೇ ನನ್ನ ಖರೀದಿ. ಆದರೆ ನಮ್ಮಂತಹ ಮಧ್ಯಮವರ್ಗದ ಜನರಿಗೆ ಟೋಪಿ ಹಾಕುವ ಇಂತಹ "ಟೋಪಿ ಮಳಿಗೆ"ಗಳ ಬಗ್ಗೆ ಎಲ್ಲರೂ ಎಚ್ಚರವಾಗಿರಬೇಕು.

ಇವುಗಳು ಕೇವಲ ಶೋಕಿ ಜನರ ಮಾಲ್‌ಗಳಾಗಿದ್ದು, ಐಟಿ-ಬಿಟಿಯಲ್ಲಿ ಕೆಲಸಮಾಡುತ್ತಿರುವ ಜನರಿಗೆ ಇಂತಹ ಮಾಲ್‌ಗಳಲ್ಲಿ ಖರೀದಿ ಮಾಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುವುದು ಖೇದಕರ. ಸಾಮಾನ್ಯವಾಗಿ ಇಂತಹ ಜನರೇ ಮೊದಲು ಬಕ್ರಾಗಳಾಗುತ್ತಾರೆ. ಅವರಿಗೆ ದುಡ್ಡಿನ ಬೆಲೆ ಗೊತ್ತಿರುವುದಿಲ್ಲ, ಐದು ದಿನ ಓತ್ಲ ಕೆಲಸ ಮಾಡಿ, ಎರಡು ದಿನ ಮಜಾ ಉಡಾಯಿಸುವ ಬಾಹ್ಯ ಸಂಸ್ಕೃತಿಗೆ ಒಗ್ಗಿಕೊಂಡಿರುವ ಈ ಮೊದ್ದು ಜನಗಳು ಆಹಾರ ಪದಾರ್ಥಗಳ ಬೆಲೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಎಷ್ಟು ಬೆಲೆ ತೆತ್ತಾದರೂ ಕೊಳ್ಳುವ ಅಧಮರಾಗಿರುವುದರಿಂದ, ನಮ್ಮಂತಹ ಮಧ್ಯಮವರ್ಗದ ಜನ ಯಾವ ಪದಾರ್ಥ ಕಡಿಮೆಬೆಲೆಗೆ ಇಂತಹ ಮಾಲ್‌ಗಳಲ್ಲಿ ಸಿಗುತ್ತದೋ ಅದನ್ನು ಮಾತ್ರ ಕೊಳ್ಳಬೇಕಾದ ಪರಿಸ್ಥಿತಿ, ಇಲ್ಲದಿದ್ದರೆ ಸುಮ್ಮನೇ ಎಲ್ಲವಸ್ತುಗಳನ್ನು ನೋಡಿ ಬರಿಗೈಲಿ ಬಂದು ದಿನಸಿ ಅಂಗಡಿಯಲ್ಲಿ ಕೊಳ್ಳಬೇಕಾದ ಪರಿಸ್ಥಿತಿ.

ಈ ಐಟಿ-ಬಿಟಿ ಜನಗಳಿಂದಾಗಿ ಸಾಮಾನ್ಯ ಜನರಿಗೆ ತುಂಬಾ ತೊಂದರೆಯಾಗಿದೆ ಈ ಬೆಂಗಳೂರಿನಲ್ಲಿ. ಇವರ ವೀಕೆಂಡ್ ಪಾರ್ಟಿಗಳಲ್ಲಿ ನಡೆಯುವ ಮಾದಕ ವಸ್ತುಗಳ ಬಳಕೆ, ವೇಶ್ಯಾವಾಟಿಕೆ ದಂಧೆ, ದರಿದ್ರ ಸಂಗೀತ ಹಾಕಿಕೊಂಡು ಶನಿವಾರದ ದಿನಗಳಲ್ಲಿ ಅಸಹ್ಯಕರ ನರ್ತನ. ಇವುಗಳಿಂದ ಆನಂದ ಪಡುವ ಈ ಮೂರ್ಖ ಜನ, ಬೇರೆ ದಿನಗಳಲ್ಲಿ ಸಾಚಾಗಳಂತೆ ಮಾಲ್‌ಗಳಲ್ಲಿ ಭಿಕಾರಿಗಳ ತರಹ ವೇಷ ಹಾಕಿಕೊಂಡು (ಒಂದು ದಿನ ನೀವೇ ಭೇಟಿ ನೀಡಿ, ಎಮ್.ಜಿ. ರಸ್ತೆ ಅಥವಾ ಬ್ರಿಗೇಡ್ ರಸ್ತೆಗಳಿಗೆ- ಅವರ ವೇಷ ಯಾವ ಭಿಕ್ಷುಕನಿಗೂ ಕಮ್ಮಿ ಇಲ್ಲ...ಹರಿದು ಹೋಗಿರುವ ಪ್ಯಾಂಟ್, ಹರಿದ ಬನಿಯನ್ ಅಥವಾ ಹರಿದ ಅರ್ಧ ಚಡ್ಡಿ) ಖರೀದಿಗೆ ಬರುವುದನ್ನು ನೋಡಲೇ ಒಂದು ಮಜಾ.....

ಪರ್ಯಾಯ ಕರೆನ್ಸಿ?:
ಬೆಂಗಳೂರಿನಲ್ಲಿ ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಲು ಇಂತಹ ಕೊಳ್ಳುಬಾಕರೇ ನೇರ ಕಾರಣ. ಯಾವುದೇ ವಸ್ತುವಾಗಲೀ ಅದರ ಬೆಲೆ ಎಷ್ಟೇ ಆಗಿರಲಿ ಯಾವುದೇ ಚರ್ಚೆ ಮಾಡದೆ, ಮುದ್ರಿತ ಬೆಲೆ ಕೂಡಾ ನೋಡದೆ ಕೊಳ್ಳುವ ಈ ಮಂದಿ ಇಂದು ಈ ಶಾಪಿಂಗ್ ಮಾಲ್‌ಗಳ ಮೊದಲ ಬಕ್ರಾಗಳು. ಅಲ್ಲದೆ ತಾವು ಕೆಲಸ ಮಾಡುವ ಸಂಸ್ಥೆ ಊಟಕ್ಕೆ ಕೊಡಮಾಡಿದ ಚೀಟಿಗಳನ್ನೇ ಈ ಮಾಲ್‌ಗಳಲ್ಲಿ ಕೊಟ್ಟು ,(ಭಿಕಾರಿಗಳ ತರಹ) ಪರ್ಯಾಯ ಕರೆನ್ಸಿಯಾಗಿ ಉಪಯೋಗಿಸುತ್ತಿರುವುದು ಇವರ ಕಾನೂನು ಉಲ್ಲಂಘನೆಗೆ ಸಾಕ್ಷಿ. ಈ ಊಟದ ಚೀಟಿಗಳನ್ನು ಪರ್ಯಾಯ ಕರೆನ್ಸಿಗಳಾಗಿ ಪಡೆಯುವ ಈ ಮಾಲ್‌ಗಳು ನಮ್ಮ ದೇಶದ ಕಾನೂನಿಗೇ ಸಡ್ಡು ಹೊಡೆದು ಇಂದು ತಮ್ಮ ದೇಶದ್ರೋಹಿತನವನ್ನು ಪ್ರದರ್ಶಿಸುತ್ತಿವೆ. ಇದು ನಮ್ಮ "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ"ಗೆ ನಮ್ಮ ಈ ಐಟಿ-ಬಿಟಿಯ ಜನ ಮಾಡುತ್ತಿರುವ ಒಂದು ಸವಾಲು.

ಸವಾಲ್:
ಬೆಂಗಳೂರಿನಲ್ಲಿ ಭಿಕ್ಷುಕರು ಜಾಸ್ತಿಯಾಗಿದ್ದಾರಂತೆ?

ಈ ಐಟಿ ಬಿಟಿ ಜನಗಳಿಂದಾಗಿ, ನಿಜವಾದ ಭಿಕ್ಷುಕರು ಪರ ರಾಜ್ಯಗಳಿಗೆ ಓಡಿಹೋಗಿದ್ದಾರಂತೆ.

ಬೆಂಗಳೂರಿನಲ್ಲಿ ಐಟಿ-ಬಿಟಿ ಜನಕ್ಕೂ ಭಿಕ್ಷುಕರಿಗೂ ವ್ಯತ್ಯಾಸವೇ ಗೊತ್ತಾಗುವುದೇ ಇಲ್ಲವಂತೆ???????????????