Thursday, January 20, 2011

ಮಧ್ಯಮ ವರ್ಗದವರ ವಿರೋಧಿ ಸರಕಾರಗಳು


ಕೇಂದ್ರದ ಕಾಂಗ್ರೆಸ್ ಹಾಗೂ ರಾಜ್ಯದ ಬಿ.ಜೆ.ಪಿ. ಸರಕಾರಗಳು ಕೇವಲ ದುಡ್ಡು ಮಾಡಿಕೊಳ್ಳುವ ಭರದಲ್ಲಿ ಮಧ್ಯಮ ವರ್ಗದವರನ್ನು ಮರೆತೇ ಹೋಗಿದೆ. ಏಕೆಂದರೆ ದಿನದಿಂದ ದಿನಕ್ಕೆ ಎಲ್ಲಾ ಬೆಲೆಗಳು ಗಗನಕ್ಕೇರಿರುವುದರಿಂದ ಮಧ್ಯಮ ವರ್ಗದ ಜನ ಇವತ್ತು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದನ್ನು ಅರ್ಥಮಾಡಿಕೊಳ್ಳದ ಎರಡೂ ಸರಕಾರಗಳು ಇವತ್ತು ಕಣ್ಣು ಮುಚ್ಚಿ ಕುಳಿತಿವೆ.
ನಮ್ಮ ದೇಶದ ಒಬ್ಬ ನಾಲಾಯಕ್ ಪ್ರಧಾನಿ ಹಾಗೂ ಒಬ್ಬ ನಾಲಾಯಕ್ ಮುಖ್ಯಮಂತ್ರಿಯಿಂದಾಗಿ ಸಾಮಾನ್ಯ ಜನ ಇವತ್ತು ಬವಣೆ ಪಡುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲ. ಇವರಿಬ್ಬರೂ ಜನರ ಕಣ್ಣಿಗೆ ಮಣ್ಣೆರಚಿ ದುಡ್ಡು ಮಾಡಿಕೊಳ್ಳುವುದು ಹೇಗೆ, ಭೂಮಿ ಕಬಳಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿಂದ ಬೆಲೆ ಏರಿಕೆ ಎಂಬುದು ಸಾಮಾನ್ಯ ವಿಷಯವಾಗಿದೆ. ಇದನ್ನು ತಡೆಗಟ್ಟಲು ಕೇಂದ್ರ, ರಾಜ್ಯ ಸರಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜನ ಸತ್ತರೆ ಸಾಯಲಿ ನಾವು ಮಾತ್ರ ನೆಮ್ಮದಿಯಿಂದ ಬದುಕಬೇಕು ಎಂಬ ದುರಾಲೋಚನೆ ಸರಕಾರಗಳದ್ದು.
ಗಣಿಲೂಟಿ, ಭೂಗಳ್ಳತನ, ಮರಳು ಮಾಫಿಯಾ ಮುಂತಾದ ರಾಜ್ಯದ್ರೋಹಿ, ಜನದ್ರೋಹಿ ಕೆಲಸದಲ್ಲಿ ಮಗ್ನವಾಗಿರುವ ಈ ಮೂರನೇ ದರ್ಜೆ ಕರ್ನಾಟಕ ಸರಕಾರ ಅತೀಭ್ರಷ್ಟ ರಾಜ್ಯಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ. ಈ ಯೆಡಿಯೂರಪ್ಪ ಎಂಬ ಮನುಷ್ಯನಿಗೆ ಸ್ವಲ್ಪವಾದರೂ ರೈತರ ಬಗ್ಗೆ, ಮಧ್ಯಮ ವರ್ಗದವರ ಬಗ್ಗೆ, ಬಡವರ ಬಗ್ಗೆ ಕನಿಕರ ಇದೆಯಾ?. ಪ್ರಧಾನಿ ಬಿಡಿ ಅವನೊಬ್ಬ ವಿದೇಶೀ ಮಹಿಳೆಯ ಬಂಟ. ಅವನಿಗೆಲ್ಲಿದೆ ಜನಸಾಮಾನ್ಯರ ಬವಣೆ ಬಗ್ಗೆ ಚಿಂತೆ?.
ಎದ್ದೇಳಿ ಜನರೇ....ಇಂತಹ ಭ್ರಷ್ಟ, ಜನದ್ರೋಹಿ, ದೇಶದ್ರೋಹಿಗಳ ವಿರುದ್ದ ತೊಡೆ ತಟ್ಟಿ...ಇಂತಹವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ.....ಈ ಮನೆಹಾಳರನ್ನು ಶಾಶ್ವತವಾಗಿ ಮನೆಗೆ ಕಳಿಸಿ.