Tuesday, March 24, 2009

ಕರ್ನಾಟಕದ ದುರಾದೃಷ್ಟ...ಎಲ್ಲರೂ ಕೀಚಕರೇ...

ಬೆಂಗಳೂರು ಮಾರ್ಚ್ ೨೨: ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಎಂಬವರು ಕನ್ನಡದ್ರೋಹದ ಕೆಲಸವನ್ನು ಮಾಡಿರುವುದು ಕಳವಳಕಾರಿ ಘಟನೆಯಾಗಿದೆ. ಇದನ್ನು ಸಮರ್ಥಿಸಿಕೊಂಡ ಮಾನ್ಯ ಮುಖ್ಯಮಂತ್ರಿಗಳ ವೈಖರಿ ನೋಡಿದರೆ ಬಿ.ಜೆ.ಪಿ.ಯ ಕರ್ನಾಟಕ ದ್ರೋಹ ನಿಧಾನವಾಗಿ ಬಯಲಾಗುತ್ತಿದೆ.

ಕರ್ನಾಟಕದಲ್ಲಿ ಸದಾ ಅಧಿಕಾರ ಸವಿ ಸವಿದು ಖಜಾನೆ ಲೂಟಿ ಹೊಡೆದು ಚಿಕ್ಕಾಸಿನ ಕೆಲಸ ಮಾಡದ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷಕ್ಕೆ ಸಡ್ಡು ಹೊಡೆಯುವ ಮತ್ತೊಂದು ಪಕ್ಷ ಇಲ್ಲದಿದ್ದುದು ನಮ್ಮ ಕನ್ನಡಿಗರಿಗೆ ಒಂದು ನಿರಾಸೆಯ ವಿಷಯವಾಗಿತ್ತು. ಆದರೆ ಭಾರತೀಯ ಜನತಾ ಪಾರ್ಟಿ ಮರೀಚಿಕೆಯಂತೆ ಮೈಕೊಡವಿ ಎದ್ದು ಬಂದು ರಾಜ್ಯದ ಗದ್ದುಗೆ ಹಿಡಿದಾಗ ಎಲ್ಲರಿಗಿಂತ ಸಂತಸ ಪಟ್ಟವ ನಾನು. ಸದ್ಯ ಈಗಲಾದರೂ ಕರ್ನಾಟಕದ, ಕನ್ನಡದ ಅಭಿವೃದ್ದಿ ಖಂಡಿತಾ ಸಾಧ್ಯವಾಗುತ್ತದೆ ಎಂಬ ನನ್ನ ಕನಸು ಇತ್ತೀಚೆಗೆ ಸುಳ್ಳಾಗತೊಡಗಿದೆ. ಏಕೆಂದರೆ ಇತ್ತೀಚೆಗೆ ಬಿ.ಜೆ.ಪಿ. ಮಂದಿ ರಾಷ್ಟ್ರೀಯ ದೃಷ್ಟಿಕೋನದ ನೆಪದಲ್ಲಿ ಕರ್ನಾಟಕ ಹಾಗೂ ಕನ್ನಡವನ್ನು ಮರೆತು ಈ ರಾಜ್ಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಕಳವಳಕಾರಿಯಾಗಿದೆ.

ಬಳ್ಳಾರಿಯಲ್ಲಿ ಆಂಧ್ರದ ಪ್ರಖ್ಯಾತ ಖದೀಮರಾದ ರೆಡ್ಡಿ ಸಹೋದರರು ಗಣಿ ಲೂಟಿ ಮಾಡಿ, ಕನ್ನಡದ ನೆಲವನ್ನು ಆಂಧ್ರಕ್ಕೆ ಮಾರುವಷ್ಟರ ಮಟ್ಟಿಗೆ ಬೆಳೆದಿರುವುದು ಹಾಗೂ ಜನರ ಹಿತಕ್ಕೆ ವಿರುದ್ಧವಾದ ಕೆಲಸ ( ಇಂಜಿನಿಯರಿಂಗ್ ಕಾಲೇಜನ್ನು ಸ್ಥಳಾಂತರ ಮಾಡಿದ್ದು ಮೊದಲಾದ) ಮಾಡುತ್ತಿರುವುದು ಇದರಲ್ಲಿ ಪ್ರಮುಖವಾಗಿದೆ. ಹಾಗೂ ಬೆಳಗಾವಿಯಲ್ಲಿ ಕೇವಲ ಪುಟಗೋಸಿ ಮರಾಠಿ ವೋಟಿಗಾಗಿ ಅವರ ಕಾಲು ನೆಕ್ಕಿ ಬೆಳಗಾವಿ ನಗರಪಾಲಿಕೆಯಲ್ಲಿ ಮರಾಠಿ ಧ್ವಜ ಹಾರುವಂತೆ ಮಾಡಿದ ಬಿ.ಜೆ.ಪಿ. ಸಂಸದ, ಕನ್ನಡ ದ್ರೋಹಿ, ಕರ್ನಾಟಕ ದ್ರೋಹಿ ಸುರೇಶ್ ಅಂಗಡಿ ಹಾಗೂ ಸಂಜಯ ಪಾಟೀಲ್ ಎಂಬ ದುಷ್ಟರಿಗೆ ಮುಖ್ಯಮಂತ್ರಿಗಳೇ ಬೆಂಬಲದ ಮಾತಾಡಿದರೆ ವೀರ ಕನ್ನಡಿಗರ ರಕ್ತ ಕುದಿಯದಿರುತ್ತದೆಯೇ?.

ರಾಷ್ಟ್ರೀಯವಾಗಿ ಚಿಂತನೆ ಮಾಡಬೇಕೆಂಬ ಕೆಲವರ ವಾದ ನಿಜವಾಗಿರಬಹುದು, ಆದರೆ ಇಂದು ಎನ್.ಸಿ.ಪಿ ಹಾಗೂ ಶಿವಸೇನೆ ಮಾಡುತ್ತಿರುವುದು ಏನು?. ಕೇವಲ ಪ್ರಾದೇಶಿಕ ಚಿಂತನೆಯ ಮಟ್ಟಕ್ಕೆ ಈ ಪಕ್ಷಗಳು ಇಳಿದಿರುವುದು ಅವುಗಳ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ, ಹಾಗೂ ಅವುಗಳ ಜನಪ್ರಿಯತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಈಗ ಕರ್ನಾಟಕದ ಬಿ.ಜೆ.ಪಿ.ಯೂ ಅದೇ ಹಾದಿಯನ್ನು ಹಿಡಿದಿರುವುದು, ಓಟು ಕೊಟ್ಟು ಗೆಲ್ಲಿಸಿದ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಲ್ಲದೆ ಮತ್ತೇನು?. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ......ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಬಿ.ಜೆ.ಪಿ. ಮಂದಿ ಕನ್ನಡಿಗರಿಗೆ ಅನ್ಯಾಯ ಮಾಡುವುದಿಲ್ಲ ಎಂಬುದು ಯಾವ ಖಾತರಿ?. ಈ ಮುಖ್ಯಮಂತ್ರಿಯಂತೂ ತನ್ನ ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಸುರಿಯುತ್ತಿರುವುದು, ತನ್ನ ಬುಡ ಗಟ್ಟಿ ಮಾಡಿಕೊಳ್ಳುವ ತಂತ್ರವಲ್ಲದೇ ಮತ್ತೇನು?.

ಇತ್ತೀಚೆಗೆ ಬಿ.ಜೆ.ಪಿ ಮಂದಿ ಪದ್ಮನಾಭನಗರ ಕ್ಷೇತ್ರದಲ್ಲಿ "ಜನಪದ ಜಾತ್ರೆ" ನಡೆಸಿದ್ದರು. ಅಲ್ಲಿ ಎಲ್ಲ ಬಿ.ಜೆ.ಪಿ. ಮಂದಿ ತಾವು ಮಾತ್ರ ರಾಷ್ಟ್ರ ಭಕ್ತರೆಂದು ತೋರಿಸಿಕೊಳ್ಳುತ್ತಾ, ಮೊದಲು ದೇಶ..ಆಮೇಲೆ ಕರ್ನಾಟಕ ಎಂಬ "ತಿಕ್ಕಲು" ಮಾತು ಆಡಿದರು. ಮೊದಲು ರಾಜ್ಯ, ಆಮೇಲೆ ದೇಶ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದ ಈ ಮಂದಿಯಿಂದ ಕನ್ನಡದ, ಕರ್ನಾಟಕದ ಉದ್ದಾರ ಹೇಗೆ ಸಾಧ್ಯ?. ಜನರಲ್ಲಿ ಪ್ರಾದೇಶಿಕ ಭಾವನೆ ಬಲವಾಗಿ ಬೇರೂರಿದಾಗಲೇ ಆ ರಾಜ್ಯದ ಅಭಿವೃದ್ದಿ ಆಗಲು ಸಾಧ್ಯ. ನೆರೆಯ ತಮಿಳುನಾಡು, ಆಂಧ್ರದಲ್ಲಿ ಆದಂತೆ ನಮ್ಮ ರಾಜ್ಯದಲ್ಲಿ ಕೂಡಾ ಪ್ರಾದೇಶಿಕ ಮಟ್ಟದಲ್ಲಿ ಚಿಂತನೆ ನಡೆಯಬೇಕಾದ ಅಗತ್ಯವಿದೆ. ಹಾಗಾಗಿ ಬಿ.ಜೆ.ಪಿ. ಮಂದಿ ಇದೇ ಥರಾ ಮುಂದುವರಿದರೆ ಮುಂದೆ ಮತ್ತೆ ಕಾಂಗ್ರೆಸ್‌ಗೆ ಅಧಿಕಾರವನ್ನು ಬೆಳ್ಳಿತಟ್ಟೆಯಲ್ಲಿ ಇಟ್ಟು ಕೊಟ್ಟ ಹಾಗಾಗುತ್ತದೆ. ಅಲ್ಲದೆ ಸದ್ಯಕ್ಕೆ ಪ್ರಾದೇಶಿಕ ಪಕ್ಷವೆಂದೇ ಗುರುತಿಸಿಕೊಂಡಿರುವ ಜೆ.ಡಿ.ಎಸ್. ಎಂಬ ಪಕ್ಷ ಅಪ್ಪ-ಮಕ್ಕಳ ಪಕ್ಷವಾಗಿ...ಸರಿಯಾದ ಗುರಿ ಇಲ್ಲದೆ ಕೇವಲ ಸ್ವಂತ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಗುರುತಿಸಿಕೊಂಡಿದೆ.

ಈ ಬಿ.ಜೆ.ಪಿ. ತನ್ನ ಕೈಯಾರೆ ತನ್ನ ಪಕ್ಷವನ್ನು ಕಿಚ್ಚಿಟ್ಟು ಸಾಯಿಸುತ್ತಿದೆ. ಮುಖ್ಯಮಂತ್ರಿಯ ಗೊತ್ತುಗುರಿಯಿಲ್ಲದ ಕೆಲವು ನಿರ್ಧಾರಗಳು, ಹೊಗೇನಕಲ್ ವಿವಾದದಲ್ಲಿ ತೋರಿಸಲಾಗದ ಕಠೋರತೆ, ಗಣಿ ಲೂಟಿಯನ್ನು ತಡೆಯಲಾಗದ ನಾಮರ್ದತೆ, ನಗರದಲ್ಲಿ ಭಯೋತ್ಪಾದನೆ ಪರ ತಮಿಳರ ಜಾಥಾಗೆ ಅವಕಾಶ ಮಾಡಿಕೊಟ್ಟು ನಗರದಲ್ಲಿ ತಮಿಳರ ಪ್ರಭಾವ ಹೆಚ್ಚುವಂತೆ ಮಾಡಿದ್ದು...ಈ ಸರಕಾರದ ನಿರ್ವೀರ್ಯತೆಯನ್ನು ತೋರಿಸುತ್ತದೆ. ಇದೇ ರೀತಿ ಕರ್ನಾಟಕದ ವಿರುದ್ದ ಈ ಮಂದಿ ಕಾರ್ಯ ಕೈಗೊಂಡರೆ ಮುಂದೊಂದು ದಿನ ಕರ್ನಾಟಕದಲ್ಲಿ ಬಿ.ಜೆ.ಪಿ. ಇತ್ತು ಎನ್ನುವುದು ಇತಿಹಾಸವಾಗಬೇಕಾಗುತ್ತದೆ.

Sunday, March 15, 2009

ಸರಕಾರೀ ಆಸ್ಪತ್ರೆಗಳು ಎಷ್ಟು ಅಸ(ಹ್ಯ)ಹಕಾರಿ?

ಬೆಂಗಳೂರು ಮಾರ್ಚ್ ೧೫: ನಮ್ಮ ಮಹಾ ಘನ ಸರಕಾರವು ಸರಕಾರೀ ಆಸ್ಪತ್ರೆಗಳಿಂದ ಜನ ಸಾಮಾನ್ಯರಿಗೆ ಸಹಾಯವಾಗಲೆಂದು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಎಷ್ಟರ ಮಟ್ಟಿಗೆ ಇದು ಜನಸಾಮಾನ್ಯರನ್ನು ಮುಟ್ಟಿದೆ ಎನ್ನುವುದು ಸಂದೇಹವಾಗಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ನಾನು ಸರಕಾರೀ ಆಸ್ಪತ್ರೆಯಾದ ಹೆಸರುವಾಸಿ ’ವಿಕ್ಟೋರಿಯ ಆಸ್ಪತ್ರೆ’ ಯನ್ನು ಸಂದರ್ಶಿಸಿದೆ. ನನ್ನ ಮಗನ ಕಾಲಿನ ಚರ್ಮ ಒಡೆದು ಹೋಗಿತ್ತು, ಹೇಗೂ ಚರ್ಮ ವೈದ್ಯರೂ ಇರುತ್ತಾರೆಂದು ಒಳಗೆ ಕಾಲಿಟ್ಟಾಗಲೇ, ಒಂಥರಾ ಅಸಹ್ಯ ಅನುಭವ ಎದುರಾಯಿತು.
ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಸ್ವಚ್ಚತೆ ಎನ್ನುವುದನ್ನು ಭೂತಕನ್ನಡಿ ಹಿಡಿದು ಹುಡುಕಬೇಕು. ಧೂಳು ತುಂಬಿರುವ ಕಡತಗಳು, ಬಂಗಲೆ ನೋಡಿದರೇನೆ ಭೂತ ಬಂಗಲೆ ಥರಾ ಅನುಭವ....

ಹೇಗೂ ಒಳನುಗ್ಗಿದ್ದಾಯಿತು ಅಂತ ರೂ.೧೦ ಕೊಟ್ಟು ಒಂದು ಚೀಟಿ ತೆಗೆದುಕೊಂಡೆ. ಮೊದಲನೇ ಮಹಡಿಯಲ್ಲಿ ಚರ್ಮವೈದ್ಯರಿದ್ದಾರೆ ಎಂದು ತಿಳಿದಾಗ, ಮಹಡಿ ಹತ್ತಿದೆ.....ಭೂತ ಬಂಗಲೆಯಾದರೂ ಸ್ವಲ್ಪ ಸ್ವಚ್ಚ ಇರುತ್ತಿತ್ತೇನೋ....ಭಯದಿಂದಲೇ ಒಳನುಗ್ಗಿದಾಗ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಕೂತಿದ್ದರು...ಬಹುಶಃ ಅವರು ತರಬೇತಿಗೆಂದು ಬಂದಿರಬೇಕು. ನಾನು ನನ್ನ ಮಗನ ಕಾಲು ತೋರಿಸಿದೆ. ಅವರು ತಮ್ಮ ತಮ್ಮಲ್ಲೇ ಚರ್ಚಿಸಿ...ಸ್ವಲ್ಪ ಹೊತ್ತಾದ ಮೇಲೆ ...ಇದು crack heal ಇದಕ್ಕೆ ನೀವು ದಿನಾ ಕಾಲನ್ನು ತೊಳೆದು CRACK Cream ಹಚ್ಚಿರಿ ಎಂದಾಗ ನನಗೆ ನಾನೆಲ್ಲಾದರೂ CRACK ಆಸ್ಪತ್ರೆಗೆ ಬಂದೆನಾ ಎಂದು ಸಂದೇಹವಾಯಿತು. ಅಲ್ಲರೀ ಇವರ ಹತ್ರ ಈ CRACK Cream ಹಚ್ಚಿ ಅಂತ ಹೇಳಿಸಿಕೊಳ್ಳಲು ನಾನು ಬೈಕ್‌ನ ಪೆಟ್ರೋಲ್ ಸುಟ್ಟುಕೊಂಡು, ಪಾರ್ಕಿಂಗ್ ಚಾರ್ಜ್ ಕೊಟ್ಟು, ಚೀಟಿಗೆ ಹತ್ತು ರೂ. ಕೊಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಹೋಗಬೇಕಿತ್ತಾ?.

ಆಗಲೇ ನನಗೆ ಈ ಆಸ್ಪತ್ರೆಯ ನರಕ ಸದೃಶ ದೃಶ್ಯಗಳು ಕಾಣಸಿಕ್ಕವು. ಹೊರಗಡೆ ಎಲ್ಲೆಂದರಲ್ಲಿ ಮಲಗಿದ ರೋಗಿಗಳು, ಸ್ವಚ್ಚತೆಯಿಲ್ಲದ ಆವರಣ, ಸಿಬ್ಬಂದಿಗಳಿಲ್ಲದೆ ಖಾಲಿ ಹೊಡೆಯುತ್ತಿರುವ ಕೊಠಡಿಗಳು, ರೋಗಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಲು ಇಲ್ಲದ ಜನಗಳು....ಇಂಥಹಾ ಅಸಹ್ಯ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಎಷ್ಟು ಪಾಡು ಪಡುತ್ತಿರುವುದೆಂಬುದು ತಿಳಿದು ವೇದನೆಯಾಯಿತು. ಸರಕಾರೀ ವೈದ್ಯರು ತಮ್ಮ ಕಾರ್ಯ ಬಿಟ್ಟು ಖಾಸಗಿ ವ್ಯಾಪಾರ ಮಾಡುತ್ತಿರುವುದರಿಂದ ಸರಿಯಾದ ವೈದ್ಯರ ಕೊರತೆ ಇಲ್ಲಿ ಕಾಣುತ್ತಿದೆ. ಸರಕಾರವೂ ಇತ್ತ ಗಮನ ಕೊಡದಿರುವುದು ಅದರ ಕಾರ್ಯ ದಕ್ಷತೆಯನ್ನು ಪ್ರಶ್ನಾರ್ಹವಾಗಿಸಿದೆ.
ನನಗನಿಸಿದ ಮಟ್ಟಿಗೆ ಎಲ್ಲಾ ಸರಕಾರೀ ಆಸ್ಪತ್ರೆಗಳ ಹಣೆಬರಹ ಇಷ್ಟೇ ಎಂದು ಕಾಣುತ್ತದೆ. ಸರಕಾರ ಯಾಕೆ ಇತ್ತ ಗಮನ ಕೊಡುತ್ತಿಲ್ಲ?. ಚರ್ಚು, ಮಸೀದಿ, ದೇವಳ ನಿರ್ಮಾಣಕ್ಕೆ ಕೋಟಿ, ಕೋಟಿ ಸುರಿಯುವ ಈ ಸರಕಾರಗಳು ಜನರಿಗೆ ಅತೀ ಅಗತ್ಯವಾದ ವೈದ್ಯಕೀಯ ನೆರವು, ಉತ್ತಮ ಶಿಕ್ಷಣಕ್ಕೆ ಯಾಕೆ ಹಣ ಖರ್ಚು ಮಾಡುತ್ತಿಲ್ಲ?.......

ಇದು ಒಂದು ಕೋಟಿ ಡಲರ್ ಪ್ರಶ್ನೆ....ಯಾರಾದರೂ ಉತ್ತರಿಸುವುರಾ?

Sunday, March 08, 2009

ತಮಿಳು ಸಂಘಟನೆಗಳ ದೇಶವಿರೋಧಿ ಜಾಥಾ

ಬೆಂಗಳೂರು ಮಾರ್ಚ್ ೮: ಇತ್ತೀಚೆಗೆ ಬೆಂಗಳೂರಿನಲ್ಲಿ ತಮಿಳು ಸಂಘಟನೆಗಳು ಒಂದು ಬೃ‍ಹತ್ ಜಾಥಾ ಏರ್ಪಡಿಸಿದ್ದವು. ಇಲ್ಲಿ ವಿಷಯ ಜಾಥಾ ನಡೆಸಿದ ಬಗ್ಗೆ ಅಲ್ಲ, ಅವರು ಜಾಥಾಗೆ ಬಳಸಿದ ವಿಷಯದ ಬಗ್ಗೆ. ಅಂದರೆ ಬೆಂಗಳೂರಿನ ಸಕಲ ತಮಿಳು ಸಂಘಟನೆಗಳು ಉಗ್ರಗಾಮಿಗಳ, ಭಯೋತ್ಪಾದಕರ ಪರ ಬೆಂಬಲ ಸೂಚಿಸಿ ಈ ಜಾಥಾ ಏರ್ಪಡಿಸಿದ್ದವು.

ಅಂದರೆ ತಮಿಳರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯೇ ಪ್ರಶ್ನಾರ್ಹವಾಗಿದೆ. ಇದು ಈಗಿನಿಂದಲ್ಲ, ನಮ್ಮ ದೇಶ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆಯಾದಾಗಲೇ ಪ್ರತ್ಯೇಕತೆಯ ವಿಷಬೀಜವನ್ನು ತಮಿಳುನಾಡಿನ ನಾಯಕರುಗಳು ಆ ಜನರ ಮನದಲ್ಲಿ ಬಿತ್ತಿದ್ದರು.ಆಗ ಅದನ್ನು ಅಂದಿನ ಕಾಂಗ್ರೆಸ್ ಸರಕಾರ ಸಮರ್ಥವಾಗಿ ನಿಭಾಯಿಸಿ ತಮಿಳರಿಗೆ ತಿಳಿಹೇಳಲಾಗಿತ್ತು. ಆದರೆ ಈಗ ಅದೇ ತಪ್ಪನ್ನು ತಮಿಳುನಾಡಿನ ರಾಜಕಾರಣಿಗಳಾದ ವೈಕೋ, ಕರುಣಾನಿಧಿ, ಜಯಲಲಿತಾ ಮೊದಲಾದ ಪಾಖಂಡಿ ರಾಜಕಾರಣಿಗಳು ಮತ್ತೆ ಆ ವಿಷ ಬೀಜವನ್ನು ತಮಿಳರ ಮನದಲ್ಲಿ ಬಿತ್ತಲು ಶುರು ಮಾಡಿದ್ದಾರೆ.

ಆದರೆ ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕರ ಪರ ಜಾಥಾಗೆ ಪರೋಕ್ಷ ಬೆಂಬಲ ನೀಡಿದ ಬಿ.ಜೆ.ಪಿ. ಸರಕಾರ, ಮೌನವಾಗಿದ್ದ ಕಾಂಗ್ರೆಸ್, ಜೆ.ಡಿ.ಎಸ್ ಮೊದಲಾದ ರಾಜಕೀಯ ಪಕ್ಷಗಳ ಮೇಲೆ ಅನುಮಾನ ಶುರುವಾಗಿದೆ. ಮೊದಲಿನಿಂದಲೂ ಮುಸಲ್ಮಾನರನ್ನು ಓಲೈಸಿ ಅದರ ಫಲವನ್ನು ಇಂದು ಭಯೋತ್ಪಾದಕತೆಯ ರೂಪದಲ್ಲಿ ಅನುಭವಿಸುತ್ತಿರುವ ಭಾರತ, ಈಗ ಈ ತಮಿಳರ ನಡೆಯಿಂದ ಮತ್ತೊಂದು ಭಯೋತ್ಪಾದಕತೆಯನ್ನು ಎದುರು ನೋಡಲಿದೆಯೇ?. ಅಂದರೆ LTTE ಎಂಬ ಭಯೋತ್ಪಾದಕ, ಉಗ್ರಗಾಮಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡಿದ ಈ ಸಂಘಟನೆಗಳ ವಿರುದ್ಧ ಸರಕಾರ ಯಾಕೆ ಕಣ್ಣು ಮುಚ್ಚಿ ಕುಳಿತಿದೆ?. ನಮ್ಮ ಭಾರತದ ವಿರುದ್ಧ ಭಯೋತ್ಪಾದಕತೆಯನ್ನು ಮಾಡುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ಕೂಡ ಬೆಂಬಲ ಸಿಗುವುದಿಲ್ಲ. ಅಂದರೆ ಅಲ್ಲಿನ ನಾಗರಿಕರು ಇದರ ವಿರುದ್ಧ ದನಿಯೆತ್ತುತ್ತಿದ್ದಾರೆ. ಆದರೆ ಅದಕ್ಕೆ ವಿರುದ್ದವಾಗಿ ಈ ತಮಿಳರು ಪಾಕಿಸ್ತಾನೀಯರಿಗಿಂತ ಕನಿಷ್ಠವಾಗಿ ವರ್ತಿಸುತ್ತಿರುವುದು ಅವರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯನ್ನು ಪ್ರಶ್ನಾರ್ಹವಾಗಿಸಿದೆ. ಈ ತಮಿಳು ಸಂಘಟನೆಗಳು ಯಾವತ್ತಿದ್ದರೂ ಕರ್ನಾಟಕಕ್ಕೆ ಅಪಾಯಕಾರಿ ಹಾಗೂ ಭಾರತಕ್ಕೂ ಅಪಾಯಕಾರಿ. ಇತ್ತ ರಾಜ್ಯ ಸರಕಾರ ಭಯೋತ್ಪಾದನಾ ವಿರೋಧಿ ಆಂದೋಲನ ನಡೆಸುತ್ತಿದ್ದರೆ ಇತ್ತ ತಮಿಳರು ಭಯೋತ್ಪಾದಕರ ಪರ ಜಾಥಾ ಆಯೋಜಿಸಿದ್ದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈಗ ತೆಪ್ಪಗಿರುವ ರಾಜ್ಯ ಸರಕಾರ ಮುಂದೆ ಕರ್ನಾಟಕವನ್ನೂ ಮತ್ತೊಂದು ಶ್ರೀಲಂಕಾ ಆಗುವುದನ್ನು ತಪ್ಪಿಸಲು ಸಾಧ್ಯವಿರಲಾರದು.

ಅಷ್ಟಕ್ಕೂ LTTE ಎಂಬ ಭಯೋತ್ಪಾದಕ ಸಂಘಟನೆ ಶ್ರೀಲಂಕಾ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಅಲ್ಲಿನ ಜನರ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಯಾವ ನ್ಯಾಯ?. ಈ ತಮಿಳರಿಗೆ ಅಲ್ಲಿ ಪ್ರತ್ಯೇಕ ರಾಷ್ಟ್ರ ಕೇಳಲು ಯಾವ ಹಕ್ಕಿದೆ?. ಶ್ರೀಲಂಕಾ ಸರಕಾರ ಒಂದು ಉತ್ತಮ ಕ್ರಮವನ್ನೇ ತೆಗೆದುಕೊಂಡಿದೆ.

ಕೂಡಲೇ ಪೋಲಿಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಈ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವುದು ಸೂಕ್ತ. ಇಲ್ಲದಿದ್ದಲ್ಲಿ ಈಗ ಶ್ರೀಲಂಕಾದಲ್ಲಿ ಆಗುತ್ತಿರುವುದು ಮುಂದೆ ಕರ್ನಾಟಕದಲ್ಲಿ, ಇಡೀ ರಾಷ್ಟ್ರದಲ್ಲಿ ಆಗಬಹುದು.

Sunday, March 01, 2009

ಸತ್ಯ ಹೇಳಿದ್ದಕ್ಕೆ ಈ ಶಿಕ್ಷೆ?...ಇದು ಕಾಂಗ್ರೆಸ್ ನೀತಿ...

ಬೆಂಗಳೂರು ದಿನಾಂಕ ೦೧-೦೩-೨೦೦೯: ಮಂಗಳೂರಿನ ಪಬ್ ಧಾಳಿಯ ತನಿಖೆಯ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ನಿರ್ಮಲಾ ವೆಂಕಟೇಶ್ ಅವರನ್ನು ಸತ್ಯ ಹೇಳಿದ್ದಕ್ಕಾಗಿ ಸದಸ್ಯ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಇಷ್ಟಾದರೂ ಅವರು ತಮ್ಮ ತನಿಖಾ ವರದಿಯಲ್ಲಿ ಹೇಳಿದ್ದಾದರೂ ಏನು?. "ಪಬ್‍ನಲ್ಲಿ ಸೂಕ್ತ ಭದ್ರತೆ ಇರಲಿಲ್ಲ ಹಾಗೂ ಪಬ್ ನಡೆಸಲು ಸೂಕ್ತ ಅನುಮತಿ ಪತ್ರ ಇರಲಿಲ್ಲ " ಎನ್ನುವುದು.
ಅದು ಈಗಾಗಲೇ ಎಲ್ಲರಿಗೂ ಬಹಿರಂಗವಾಗಿ ತಿಳಿದಿದ್ದರೂ, ರೇಣುಕಾ ಚೌಧರಿ ಎಂಬ ಭ್ರಷ್ಟ ಮಹಿಳೆ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಶ್ರೀಮತಿ ನಿರ್ಮಲಾ ಅವರನ್ನು ಕಿತ್ತೊಗೆದಿದ್ದಾಳೆ. ಅವಳು ತನ್ನ ಸ್ಥಾನದ ದುರುಪಯೋಗ ಪಡಿಸಿಕೊಂಡು ಅಧಿಕಾರದ ಅಮಲಿನಿಂದ ನಿರ್ಮಲಾ ಅವರ ವಿರುದ್ದ ಸೇಡು ತೀರಿಸಿಕೊಂಡಿದ್ದಾಳೆ.ಇವರಂಥಹ ಜನರ ಮನಸ್ಸು ಯಾವ ರೀತಿ ಇರುತ್ತದೆ ಎಂದರೆ, ತಾನೂ ಹಾಳಾಗಿರುವುದಲ್ಲದೆ-ಜಗತ್ತನ್ನೂ ಹಾಳು ಮಾಡಬೇಕು ಎನ್ನುವುದು. ಅದೂ ಅಲ್ಲದೆ ಮಂಗಳೂರಿನಲ್ಲಿ ನಡೆದ ಒಂದು ಸಣ್ಣ ಘಟನೆಯನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್‍ನ ಎಲ್ಲ ನಾಯಕರೂ ಬಿ.ಜೆ.ಪಿ.ಯನ್ನು ತುಳಿಯಲು ಒಂದು ಅಸ್ತ್ರ ಸಿಕ್ಕಿತು ಎಂದು ಕೂಗಾಡಿದ್ದೇ ಕೂಗಾಡಿದ್ದು.
ಆದರೆ ಈ ಚೌಧರಿ ಎನ್ನುವ ಮಹಿಳೆ ಇನ್ನೂ ಸ್ವಲ್ಪ ಮುಂದೆ ಹೋಗಿ- ಮಂಗಳೂರಿಗರನ್ನು ತಾಲಿಬಾನಿಗರೆಂದು ಕರೆದು ತನ್ನ ದೇಶಕ್ಕೇ ಅವಮಾನ ಮಾಡಿದ್ದಾಳೆ. ಅಂದರೆ ಯಾವುದೇ ಸುಸಂಸ್ಕೃತ ಹಾಗೂ ಸಭ್ಯ ಮನೆತನದ ಮಹಿಳೆಯೂ ಪಬ್‍ಗೆ ಹೋಗಿ ಕುಡಿಯುವ ಅಭ್ಯಾಸ ನಮ್ಮ ದೇಶದಲ್ಲಿ ರೂಢಿಸಿಕೊಂಡಿಲ್ಲ. ಪಬ್‍ಗೆ ಹೋದರೆ, ಅದೂ ಪರ ಪುರುಷನ ಜೊತೆ ಹೋದರೆ ಆ ಮಹಿಳೆಯ ಸಂಸ್ಕೃತಿ ಪ್ರಶ್ನಾರ್ಹವಾದದ್ದೇ. ಈ ರೇಣುಕಾ ಚೌಧರಿಯಂತಹ ಮಹಿಳೆಯರು ಹಿಂದೆ ಮುಂದೆ ನೋಡದೆ ಎಲ್ಲರೂ ತಮ್ಮಂತೇ ಇರುತ್ತಾರೆಂದು ತಾವೇ ನಿರ್ಧರಿಸಿ ಬಾಯಿಗೆ ಬಂದಂತೆ ಮಾತಾಡುತ್ತಾರೆ.