Thursday, April 24, 2008

ಮಂಗಗಳನ್ನು ಚುನಾಯಿಸದಿರಿ!!!!!!!!!!!

ಬೆಂಗಳೂರು ಎಪ್ರಿಲ್ ೨೪ :

ಬೆಂಗಳೂರಿನಲ್ಲಿ ಇತ್ತೀಚೆಗೆ ಮಂಗಗಳ ಹಾವಳಿ ಜಾಸ್ತಿ ಆಗುತ್ತಿದೆ. ಮರದಿಂದ ಮರಕ್ಕೆ ಹಾರುವ ಮಂಗಗಳಿಗೇ ಪೈಪೋಟಿ ನೀಡುವಷ್ಟರ ಮಟ್ಟಿಗೆ ಈ ಮಂಗಗಳೂ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿವೆ. ತಮಗೆ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಅವರ ನಿಷ್ಟೆಯೂ ಬೇರೆ ಪಕ್ಷಕ್ಕೆ ಉಚಿತವಾಗುತ್ತಿದೆ.

ಇಂತಹ ವಾನರರಿಂದ ನಾವು ಎಷ್ಟರ ಮಟ್ಟಿಗೆ ಉತ್ತಮ ಆಡಳಿತ ನಿರೀಕ್ಷಿಸಬಹುದು?. ಇವರನ್ನು ಬರಮಾಡಿಕೊಳ್ಳುವ ಪಕ್ಷಕ್ಕಾದರೂ ಒಂದು ನೀತಿ ಸಂಹಿತೆ ಬೇಡವಾ?. ಇವರು ಅಧಿಕಾರಕ್ಕಾಗಿ ಏನು ಮಾಡಲೂ ಸಿದ್ದ ಇರುವ ಮಂದಿ. ನಾಳೆ ಟಿಕೆಟ್ ಕೊಟ್ಟ ಪಕ್ಷವೇನಾದರೂ ಅಧಿಕಾರಕ್ಕೆ ಬರದಿದ್ದಲ್ಲಿ ಮತ್ತೆ ಯಾವ ಪಕ್ಷ ಅಧಿಕಾರ ಹಿಡಿಯುತ್ತದೋ ಅದೇ ಪಕ್ಷಕ್ಕೆ ತಮ್ಮ ನಿಷ್ಟೆ ಬದಲಾಯಿಸಿ, ಆ ಪಕ್ಷ ಮತ್ತೆ ಸೇರಿ ಅಧಿಕಾರದ ರುಚಿ ಸವಿಯುತ್ತಾರೆ.

ಇಂತಹ ಮಂಗಗಳ ನಿರ್ಮೂಲನೆಯನ್ನು ಮೊದಲು ಮಾಡಬೇಕಾಗಿದೆ. ಪ್ರಜಾತಂತ್ರಕ್ಕೆ ನಿಜವಾದ ಕಂಟಕವಿರುವುದು ಇಂತಹ ಜನರಿಂದಲೇ. ಇದು ಪ್ರತೀ ವಿದ್ಯಾವಂತ ಮತದಾರನ ಕರ್ತವ್ಯವಾಗಿದೆ. ನೀವು ಪಕ್ಷ ನೋಡಿ ಖಂಡಿತಾ ಮತ ನೀಡಬೇಡಿ. ಅಭ್ಯರ್ಥಿಯನ್ನು ನೋಡಿ ಆರಿಸಿ. ಯಾವ ಪಕ್ಷ ಬಂದರೂ ಕರ್ನಾಟಕದ ಉದ್ದಾರವಂತೂ ಕನಸಿನ ಮಾತೇ ಸರಿ. ಅವರು ಕೇವಲ ಅವರ ಜೇಬು ತುಂಬಿಸಿಕೊಳ್ಳುವುದರಲ್ಲಿ ಮಗ್ನರಾಗಿರುತ್ತಾರೆಯೇ ಹೊರತು, ಕಾವೇರಿ, ಹೊಗೇನಕಲ್ ತಮಿಳುನಾಡಿಗೆ ಹೋದರೂ ಸರಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋದರೂ ಸರಿ......ಕುಂಭಕರ್ಣನ ತರಹ ನಿದ್ದೆಯಲ್ಲಿರುತ್ತಾರೆ.

ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕಕ್ಕೆ ಹಾನಿಯೇ ಹೊರತು..ಖಂಡಿತಾ ಲಾಭ ಕನಸಿನ ಮಾತು. ಆದ್ದರಿಂದ ಮತದಾರರೇ ನಿಮ್ಮ ಮತ ಕರ್ನಾಟಕದ ಉಳಿವಿಗಿರಲಿ, ನಿಮ್ಮ ಮತ ಕನ್ನಡಿಗರ ರಕ್ಷಣೆಗಿರಲಿ, ನಿಮ್ಮ ಮತ ವಿದ್ಯಾವಂತ, ವಿನಯವಂತ ಅಭ್ಯರ್ಥಿಗಿರಲಿ............

"ಜೈ ಕರ್ನಾಟಕ ಮಾತೆ"

Tuesday, April 08, 2008

ದುಷ್ಟ ಮನೆ ಮಾಲೀಕರು ಇದ್ದಾರೆ ಎಚ್ಚರ!!!!!!!!!

ಬೆಂಗಳೂರು ಎಪ್ರಿಲ್ ೨೦: ಬಾಡಿಗೆದಾರರನ್ನು ಸುಲಿಯುವ ಮಾಲೀಕರು ಬೆಂಗಳೂರಿನಲ್ಲಿ ಬಹಳ ಜನ ಇದ್ದಾರೆ. ನೀವು ಯಾವುದೇ ಮನೆ ಬಾಡಿಗೆಗೆ ಪಡೆಯಲು ಹೋದಾಗ ಹಲ್ಲು ಗಿಂಜಿಕೊಂಡು ನಾಯಿ ತರಹ ಬಾಲ ಅಲ್ಲಾಡಿಸಿಕೊಂಡು ಬಂದು , ತಾನು ಹೇಳಿದ ರೇಟಿಗೆ ಒಪ್ಪಿಕೊಂಡ ಎಂದಾಗ "ಬಕ್ರಾ ಬಲೆಗೆ ಬಿತ್ತು" ಎಂದು ಮಂಡಿಗೆ ತಿನ್ನುವ ಮಾಲೀಕರು....ಮನೆ ಖಾಲಿ ಮಾಡುವಾಗ ಇಲ್ಲ ಸಲ್ಲದ ಅರೋಪ ಮಾಡಿ ನಿಮ್ಮ ಮುಂಗಡ ಠೇವಣಿಯಿಂದ ಎಷ್ಟು ಕಡಿತ ಮಾಡಲಾಗುತ್ತದೋ ಅಷ್ಟು ಕಡಿತ ಮಾಡಿ ಉಳಿದ ಹಣವನ್ನು, ಕೆಕ್ಕರಿಸಿ ನೋಡಿ ನಿಮ್ಮ ಕೈಯಲ್ಲಿಡುತ್ತಾರೆ.
ನೀರಿನ ಬಾಬ್ತು ರೂ.೧೫೦.೦೦ನ್ನು ಪ್ರತೀ ತಿಂಗಳು ಪಡೆಯುವ ಈ ಪ್ರಾಣಿಗಳು, ನೀರು ಮಾತ್ರ ದಿನಕ್ಕೆ ಒಂದೇ ಸಲ ಹಾಕುತ್ತಾರೆ(ಐದು ಮನೆ ಇದ್ದರೂ ಸಹ). ಇವರಿಂದಾಗಿ ನಾನು ಬೆಂಗಳೂರಿನಲ್ಲಿ ಅನುಭವಿಸಿದ ಫಜೀತಿ ದೇವರಿಗೇ ಪ್ರೀತಿ. ಇತ್ತೀಚೆಗೆ ನಾನು ಬನಶಂಕರಿಯ ಒಂದು ಮನೆ ಖಾಲಿ ಮಾಡಬೇಕಾಗಿ ಬಂತು. ಅಂದರೆ ನಾನು ಅದೇ ಮನೆಯಲ್ಲಿ ಕಳೆದ ೪ ವರ್ಷಗಳಿಂದ ಯಾವುದೇ ರೀತಿಯ ತೊಂದರೆ ಇಲ್ಲದೆ ಇದ್ದೆ. ಅಂದರೆ ಪ್ರತೀ ತಿಂಗಳೂ ತಪ್ಪದೆ ನೀರಿನ ಬಿಲ್, ಬಾಡಿಗೆ, ವಿದ್ಯುತ್ ಬಿಲ್ ದಿನಾಂಕದ ಒಳಗೇ ತುಂಬುತ್ತಿದ್ದೆ. ಆದರೆ ಪ್ರತೀ ಎರಡು ವರ್ಷಕ್ಕೊಮ್ಮೆ ಪ್ರತಿಶತ ೧೦ರಂತೆ ಬಾಡಿಗೆ ಜಾಸ್ತಿ ಕೂಡಾ ಕೊಡುತ್ತಿದ್ದೆ. ಆದರೆ ಸುತ್ತ ಮುತ್ತಲಿನ ಕೆಲವು ಮನೆಗಳ ಬಾಡಿಗೆ ನಮ್ಮ ಮನೆ ಬಾಡಿಗೆಗಿಂತ ಹೆಚ್ಚು ಇದ್ದದ್ದರಿಂದ ಮನೆ ಮಾಲೀಕ ಮನೆಯನ್ನು ಖಾಲಿ ಮಾಡಲು ಹೇಳಿದ.
ನಾನು ಕೂಡಲೇ ಬೇರೆ ಮನೆ ನೋಡಿ ಮನೆ ಖಾಲಿ ಮಾಡಿದೆ. ಖಾಲಿ ಮಾಡುವಾಗ ಮಾಲೀಕ, ಭೂತ ಕನ್ನಡಿ ಹಿಡಿದು ಏನೇನು ಡ್ಯಾಮೇಜ್ ಆಗಿದೆ...ಅದು ಇದು..ಎಂದು ರಾಗ ಎಳೆಯ ತೊಡಗಿದ. ಅಲ್ಲ ಸ್ವಾಮೀ, ೪ ವರ್ಷ ಬಳಸಿದರೆ ಚಿನ್ನ ಕೂಡಾ ಸವೆಯುತ್ತದೆ, ಅದು ಈ ಮಾಲೀಕರಿಗೆ ಅರ್ಥವಾಗುವುದಿಲ್ಲವಲ್ಲ?. ಆದರೆ ನನ್ನ ಎಚ್ಚರಿಕೆಯಿಂದ ಅವನು ಜಾಸ್ತಿ ಹಣವನ್ನು ಪಡೆಯಲಾಗಲಿಲ್ಲ. ಕೇವಲ ರೂ.೨೦೦ ಮಾತ್ರ ಹಿಡಿದುಕೊಂಡ. ಅದೂ ಎರಡು ನಲ್ಲಿ ಡ್ಯಾಮೇಜ್ ಆಗಿದೆ ಎಂಬುದಕ್ಕೆ.
ನಾಲ್ಕು ವರ್ಷ ಬಳಸಿದರೆ ಯಾವುದೇ ವಸ್ತು ಸವೆಯುತ್ತದೆ. ಅದನ್ನೂ ಬಾಡಿಗೆದಾರನ ಮೇಲೆ ಹೊರಿಸುವುದು ಎಷ್ಟು ಸರಿ?. ಇಂತಹ ಖದೀಮರಿಂದಾಗಿಯೇ ಬೆಂಗಳೂರಿನಲ್ಲಿ ಮನೆ ಬಾಡಿಗೆ ಜಾಸ್ತಿ ಆಗಿರುವುದು.
"ಬಾಡಿಗೆದಾರರಿಗೆ ಒಂದು ಕಾನೂನು ರೂಪಿಸುವ ಅಗತ್ಯವಿದೆ. ಈಗ ಕಾನೂನು ಪೂರ್ತಿ ಮಾಲಿಕರ ಪರವಾಗಿದೆ."

ಹಗಲು ದರೋಡೆಕೋರರು ( ಎ.ಪಿ.ಸಿ. ಸರ್ವಿಸ್ ಸೆಂಟರ್ ಗಳು)

ಬೆಂಗಳೂರು ಎಪ್ರಿಲ್ ೧೮ : ಹೆಲೋ ಬಳಕೆದಾರರೇ ಎಚ್ಚರ......ಎ.ಪಿ.ಸಿ. ಕಂಪೆನಿಯ ಯು.ಪಿ.ಎಸ್ ನಿಮ್ಮಲ್ಲಿದ್ದರೆ ಭಾರೀ ಎಚ್ಚರ....ಅದೇನಾದರೂ ಕೆಟ್ಟು ಹೋದಲ್ಲಿ ಅದನ್ನು ಕಂಪೆನಿಯ ಸರ್ವಿಸ್ ಕೇಂದ್ರಕ್ಕೆ ಕೊಂಡೊಯ್ದಿರೋ ನಿಮ್ಮ ಕತೆ ಅಷ್ಟೆ.
ಭಾರೀ ಮೋಸಗಾರರು ಸ್ವಾಮೀ......ನಿಮ್ಮ ಯು.ಪಿ.ಎಸ್.ನ ತಪಾಸಣೆಗೇ ಅವರು ನೂರ ಐವತ್ತು ರುಪಾಯಿ ಜಡಿಯುತ್ತಾರೆ. ಅಕಸ್ಮಾತ್ ನಿಮ್ಮ ಯುಯ್.ಪಿ.ಎಸ್. ಏನಾದರೂ ಕೆಟ್ಟು ಹೋದಲ್ಲಿ ಅದನ್ನು ಬಿಸಾಕಬೇಕಷ್ಟೆ, ಬಿಸಾಕಲೂ ನೂರಾ ಐವತ್ತು ರೂಪಾಯಿ ಕೊಟ್ಟು ಬಿಸಾಕಬೇಕು. ಇದು ಯಾವ ನ್ಯಾಯ ಸ್ವಾಮಿ?.
ಜಯನಗರದಲ್ಲಿರುವ ಎ.ಪಿ.ಸಿ. ಕಂಪೆನಿಯ ಯು.ಪಿ.ಎಸ್. ಸೆರ್ವಿಸ್ ಸೆಂಟರ್ ನಲ್ಲಿ ಇದು ನನಗಾದ ಅನುಭವ. ಇಂಥಾ ಡಬ್ಬಾ ಕಂಪೆನಿಗಳ ಬಗ್ಗೆ ಎಚ್ಚರ. ನಿಮ್ಮ ಯು.ಪಿ.ಎಸ್.ನ ಬ್ಯಾಟರಿಯನ್ನು ಅನಾಮತ್ತಾಗಿ ಎತ್ತಿ, ಕೆಟ್ಟುಹೋದ ಬ್ಯಾಟರಿಯನ್ನು ಹಾಕಿ ಅದನ್ನು ರಿಪೇರಿಮಾಡಲಾಗದ ವಸ್ತುವನ್ನಾಗಿ ಮಾಡಿ, ಬ್ಯಾಟರಿಯೊಂದಿಗೆ ನೂರಾ ಐವತ್ತು ರೂಪಾಯಿಯನ್ನು ಅನಾಮತ್ತಾಗಿ ಜೋಬಿಗೆ ಇಳಿಸುತ್ತಾರೆ. ಇಂಥಹಾ ಹಗಲು ದರೋಡೆಕೋರರ ಬಗ್ಗೆ ಎಚ್ಚರದಿಂದಿರಿ. ಬರೇ ತಪಾಸಣೆಗೆ ನೂರಾ ಐವತ್ತು ತೆರಲು ಇದೇನು ಹುಚ್ಚರ ಸಂತೆಯಾ?.
ಇಂಥಹ ದರಿದ್ರ ಕಂಪೆನಿಗಳ ಯಾವುದೇ ವಸ್ತುವನ್ನೂ ಖರೀದಿಸುವಾಗ ಸಾವಿರ ಸಲ ಯೋಚಿಸಿ. ನಿಮ್ಮ ಹಣಕ್ಕೆ ಬೆಲೆಯೇ ಇಲ್ಲ.
ಎ.ಪಿ.ಸಿ. ಕಂಪೆನಿಯ ಸರ್ವಿಸ್ ಸೆಂಟರ್ ಗಳಿಗೆ ಧಿಕ್ಕಾರ.....ಇವರು ದುಡ್ಡಿಗಾಗಿ ಏನು ಮಾಡಲೂ ತಯಾರು. ಇವರು ಪಕ್ಕಾ ಹಗಲು ದರೋಡೆಕೋರರು. ಇವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.
"ನಾನು ಮೋಸ ಹೋದೆ...ನೀವು ಮೋಸಹೋಗಬೇಡಿ....."
"ಎ.ಪಿ.ಸಿ ಕಂಪೆನಿಯ ಯು.ಪಿ.ಎಸ್. ದಯವಿಟ್ಟು ಖರೀದಿಸಬೇಡಿ"

ಮಧ್ಯಮ ವರ್ಗದವರೇ...ಎರಡು ಬಾರಿ ಯೋಚಿಸಿ ಮತ ನೀಡಿ

ಬೆಂಗಳೂರು ಎಪ್ರಿಲ್ ೧೫: ಮತದಾರರೇ ಈಗ ಎಚ್ಚರದಿಂದಿರಿ.....ನೀವು ಮತ ಹಾಕುವ ಮುನ್ನ ತಮ್ಮ ಅತ್ಮ ಸಾಕ್ಷಿಯಿಂದ ಅಭ್ಯರ್ಥಿಯನ್ನು ಚುನಾಯಿಸಿ. ಇಲ್ಲದಿದ್ದಲ್ಲಿ ನೀವು ಟೋಪಿ ಬೀಳುವ ಸಾಧ್ಯತೆಗಳಿವೆ. ಕಲರ್ ಟಿ.ವಿ, ೨ ರೂಗೆ ಅಕ್ಕಿ, ಎಲ್ಲರಿಗೂ ಕೆಲಸ, ಕೆಲಸ ಇಲ್ಲದಿದ್ದವರಿಗೂ ಸಂಬಳ.....ಮುಂತಾದ ಆಶ್ವಾಸನೆಗಳನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ. ಆದರೆ ಅವರಪ್ಪನ ಗಂಟು ಏನು ಹೋಗಬೇಕು?.....ಅವರು ಕಿತ್ತು ಕೊಡುವುದು ಮಧ್ಯಮವರ್ಗದ ಜನರ ರಕ್ತವನ್ನು ಮಾರಿ. ಇಲ್ಲಿ ಕೇವಲ ಉನ್ನತ ವರ್ಗ ಮತ್ತು ಕೆಳವರ್ಗದ ಜನರಿಗೆ ರಾಜಕೀಯ ಪಕ್ಷಗಳು ಸಹಾಯ ಮಾಡುತ್ತವೆ. ಕೆಳವರ್ಗದವರಿಗೆ ಆಮಿಷ, ಉನ್ನತ ವರ್ಗದವರಿಗೆ ಸಚಿವ ಸ್ಥಾನ, ಮತ್ತು ಉನ್ನತ ಹುದ್ದೆಗಳು. ಆದರೆ ಮಧ್ಯಮ ವರ್ಗದ ಜನತೆ ಕೇವಲ ಓಟು ಪಡೆಯಲು ಮಾತ್ರ. ನಂತರ ಅವರನ್ನು ಕಿತ್ತು ತಿನ್ನುವುದೇ ರಾಜಕೀಯ ಪಕ್ಷಗಳ ನಿಜ ರೂಪ.
ಕಾಂಗ್ರೆಸ್ ಪಕ್ಷದಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನ ವಿಲ್ಲದವರು, ಕೇವಲ ಅಧಿಕಾರ, ಹಣದಾಹಿಗಳಿದ್ದರೆ, ಬಿ.ಜೆ.ಪಿಯಲ್ಲಿ ಭೂಗಳ್ಳರು, ರಿಯಲ್ ಎಸ್ಟೇಟ್ ಮಾಫಿಯಾಗಳು, ರೌಡಿ, ದರೋಡೆಕೋರರು ಇದ್ದರೆ, ಜೆ.ಡಿ.ಎಸ್ ನಲ್ಲಿ ಗಣಿ ಮಾಫಿಯಾಗಳು, ರೌಡಿಗಳು, ರಿಯಲ್ ಎಸ್ಟೇಟ್ ದೊರೆಗಳು ಇದ್ದರೆ...ಇನ್ನುಳಿದ ಪಕ್ಷಗಳು ಲೆಕ್ಕಕ್ಕಿಲ್ಲದೆ ಇದ್ದಾವೆ. ಅವುಗಳೂ ಕೂಡಾ ರೌಡಿಗಳ ವಿರುದ್ದ ರೌಡಿ, ದರೋಡೆಕೋರರ ವಿರುದ್ದ ದರೋಡೆಕೋರರು, ಗಣಿಗಳ್ಳರ ವಿರುದ್ದ ಗಣಿಗಳ್ಳರು, ಭೂಗಳ್ಳರ ವಿರುದ್ದ ಭೂಗಳ್ಳರು, ಮಾಫಿಯಾ ದೊರೆಗಳ ವಿರುದ್ದ ಮಾಫಿಯಾ ದೊರೆಗಳನ್ನು ನಿಲ್ಲಿಸಿ ತಾವೂ ಎನೂ ಕಡಿಮೆ ಇಲ್ಲವೆಂಬಂತೆ ವರ್ತಿಸುತ್ತಿವೆ.
ದಯವಿಟ್ಟು ಯೋಚಿಸಿ ಮತ ನೀಡಿ. ನಿಮ್ಮ ಮತ ಪೋಲಾಗದಂತೆ ನೋಡಿಕೊಳ್ಳಿ, ಯಾವುದೇ ಪಕ್ಷಕ್ಕೆ ಮತ ನೀಡಬೇಡಿ. ಅಭ್ಯರ್ಥಿಯ ಹಿನ್ನೆಲೆ ವಿಚಾರಿಸಿ ಮತ ನೀಡಿ. ಉದಾಹರಣೆಗೆ ಕಾಂಗ್ರೆಸ್ ಪಕ್ಷದಿಂದ ಬಸವನಗುಡಿ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ.ಚಂದ್ರಶೇಖರ್ ಅಂತಹ ಜನಪ್ರೇಮಿ ನಾಯಕರನ್ನು ಆರಿಸಿ (ನಾನು ಕಾಂಗ್ರೆಸ್ ಅಥವಾ ಯಾವುದೇ ಪಕ್ಷದ ಬೆಂಬಲಿಗನಲ್ಲ). ಸೂಕ್ತ ಅಭ್ಯರ್ಥಿ ಯಾರೂ ಇಲ್ಲದಿದ್ದಲ್ಲಿ ...ಪಕ್ಷೇತರರನ್ನು ಆರಿಸಿ. ಆದರೆ ಕಳ್ಳಕಾಕರಿಗೆ ಮತ ನೀಡಬೇಡಿ.
"ದಯವಿಟ್ಟು ಯೋಚಿಸಿ ಮತನೀಡಿ....ಏನೇ ಆಮಿಷ ಒಡ್ಡಿದರೂ ತೆಗೆದುಕೊಳ್ಳಿ, ಆದರೆ ಮತ ಮಾತ್ರ ಯೋಚಿಸಿ ನೀಡಿ....ನೀವು ನೀಡುತ್ತಿರುವ ಮತ- ಕನ್ನಡಾಂಬೆಯ ಉದ್ದಾರಕ್ಕಾಗಿ, ಸುವರ್ಣ ಕರ್ನಾಟಕಕ್ಕಾಗಿ, ಕನ್ನಡಿಗರ ಉಳಿವಿಗಾಗಿ"

ಕನ್ನಡಿಗರೇ ಯೋಚಿಸಿ ಮತದಾನ ಮಾಡಿ

 1. ಬೆಂಗಳೂರು ಎಪ್ರಿಲ್ ೧೧:
  ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ನಡುಕ ಶುರುವಾಗಿದೆ. ಮತದಾರರೇ ಎಚ್ಚರ, ಕಳ್ಳರಿದ್ದಾರೆ, ದರೋಡೆಕೋರರಿದ್ದಾರೆ, ರೌಡಿಗಳಿದ್ದಾರೆ, ರಿಯಲ್ ಎಸ್ಟೇಟ್ ಉದ್ಯಮಿಗಳಿದ್ದಾರೆ, ಅನಕ್ಷರಸ್ಥರಿದ್ದಾರೆ...ಇವರನ್ನೆಲ್ಲಾ ತಿರಸ್ಕರಿಸಿ.
  ಅಭ್ಯರ್ಥಿಯ ಕನಿಷ್ಠ ವಿದ್ಯಾಭ್ಯಾಸ ಪದವಿ ಆಗಿರಬೇಕು.
  ಕನ್ನಡಿಗನಾಗಿರಬೇಕು, ಕನ್ನಡ ಸ್ಪಷ್ಠವಾಗಿ ಮಾತಾಡುವವನಾಗಿರಬೇಕು.
  ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಅಭಿಮಾನ ಹೊಂದಿರಬೇಕು.
  ರೌಡಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿರಬಾರದು.
  ಅವನ ಅಸ್ತಿ ಒಬ್ಬ ಸಾಮನ್ಯ ಮಧ್ಯಮ ಪ್ರಜೆಯ ಅಸ್ತಿಗೆ ಸಮನಾಗಿರಬೇಕು.
  ಕನ್ನಡದ ಪ್ರಶ್ನೆ, ನಾಡಿನ ಉಳಿವಿನ ಪ್ರಶ್ನೆ ಬಂದಾಗ ಕರ್ನಾಟಕದ ಪರ ದನಿ ಎತ್ತುವವನಾಗಿರಬೇಕು.
  ಹಿಂದೆ ಯಾವುದೇ ಸರಕಾರಿ ಹುದ್ದೆಯಲ್ಲಿದ್ದು, ಈಗ ರಾಜಕೀಯ ಪಕ್ಷ ಸೇರಿ ಸ್ಪರ್ಧಿಸುವವರನ್ನು ಮೊದಲು ಸೋಲಿಸಿ, ಏಕೆಂದರೆ ಅವರೇ ಮುಂದಿನ ದೊಡ್ಡ ಭ್ರಷ್ಟಾಚಾರಿಗಳು.
  ಕಾವೇರಿ, ಹೊಗೆನಕಲ್, ಬೆಳಗಾವಿ ವಿಷಯ ಬಂದಾಗ ತನ್ನ ಸ್ಥಾನ ಹೋದರೂ ನಾಡಿನ ಜನತೆ ಪರ ಇರಬೇಕು.
  ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾವುದೇ ಪಕ್ಷಕ್ಕೆ ಸೇರಿರಲಿ, ಅವನು ಈ ಮೇಲೆ ಹೇಳಿದ ಗುಣ ಹೊಂದಿಲ್ಲವಾದಲ್ಲಿ, ನಿಮ್ಮ ಮತವನ್ನು ಪಕ್ಷೇತರ ಅಭ್ಯರ್ಥಿಗೆ ನೀಡಿ.
  ವಿಧಾನ ಸಭೆಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯನ್ನು ಚುನಾಯಿಸಬೇಡಿ. ಅವರಿಂದ ನಮ್ಮ ನಾಡಿನ ಹಿತ ಕಾಯಲು ಸಾಧ್ಯವಿಲ್ಲ.
  ಹೊಗೇನಕಲ್,ಕಾವೇರಿ, ಬೆಳಗಾವಿ ವಿಷಯದಲ್ಲಿ ಈ ಹಿಂದೆ ತಟಸ್ಥವಾಗಿದ್ದವರನ್ನು ಈ ಬಾರಿ ದಯವಿಟ್ಟು ಚುನಾಯಿಸಬೇಡಿ.
  "ಕನ್ನಡಿಗರೇ ಎದ್ದೇಳಿ..ನಿಮ್ಮ ಸ್ವಾಭಿಮಾನದ ನಾಡು ಕಟ್ಟಲು ತಯಾರಾಗಿ"
  "ಜೈ ಭುವನೇಶ್ವರಿ.....ಜೈ ಕರ್ನಾಟಕ ಮಾತೆ"

ಹೊಗೆನಕರ್ ನಲ್ಲಿ ಹೊಗೆ ಹಾಕಿಸಿಕೊಂಡ ಕಚಡಾನಿಧಿ

ಬೆಂಗಳೂರು ಎಪ್ರಿಲ್ ೮:

ಹೊಗೆನಕಲ್ ವಿವಾದ ಹಸಿಯಾಗಿರುವಾಗಲೇ ಇತ್ತ ಗಿಮಿಳುನಾಡಿನ ಮುಖ್ಯಕಂತ್ರಿ ಕಚಡಾನಿಧಿ ಈ ವಿವಾದ ಮುಗಿಯುವ ಮೊದಲೇಹೊಗೆ ಹಾಕಿಸಿಕೊಳ್ಳುವ ಆಲೋಚನೆಯಲ್ಲಿದ್ದಾನೆ. ಅಲುಗಾದುತ್ತಿರುವ ತನ್ನ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ಸಲುವಾಗಿಕನ್ನಡ ಹಾಗೂ ತಮಿಳರ ಮಧ್ಯೆ ಕಲಹ ಉಂಟುಮಾಡಿ, ಎರಡೂ ಕಡೆ ಭಯೋತ್ಪಾದಕತೆ ಉಂಟುಮಾಡಿ ಹುಚ್ಚು ನಾಯಿ ತರಹಮರೆಯಲ್ಲಿ ಗಹ ಗಹಿಸಿ ನಗುತ್ತಿದ್ದಾನೆ. ಅದೂ ಅಲ್ಲದೆ ಮಜನೀಕಾಂತ ಎಂಬ ಮತ್ತೊಬ್ಬ ವಿಲನ್ ತಾನು "ಬಾಬಾ" ಚಿತ್ರದಲ್ಲಿ ನಟಿಸಿದ ಮಾತ್ರಕ್ಕೆ ತಾನೊಬ್ಬ ಭಾರತದಸುಪರ್ ಸ್ಟಾರ್ ಎಂದುಕೊಂಡು ತನ್ನ ನಾಲಿಗೆಯನ್ನು ಕೊಚ್ಚೆಯಲ್ಲಿ ಆಡಿಸುತ್ತಿದ್ದಾನೆ. ಆದರೆ ನಿಜವಾಗಲೂ ತಾನೊಬ್ಬ "ಗೂಬಾ"ಎಂಬುದನ್ನು ಇವ ಮರೆತಂತಿದೆ. ಇನ್ನೊಬ್ಬ ಖಳ "ಬಾಲು" ಎಂಬವ ತಾನೇನು "ಲಾಲೂ"ಗಿಂತ ಕಡಿಮೆ ಇಲ್ಲ ಎಂಬಂತೆ ದಿನಕ್ಕೆ ಹತ್ತು ಬಾರಿ ಚೆನ್ನೈ-ದೆಹಲಿ ವಿಮಾನ ಹತ್ತಿದೇಶದ ಖಜಾನೆ ಖಾಲಿ ಮಾಡುವ ಯೋಚನೆಯಲ್ಲಿದ್ದಾನೆ. ತಾನೊಬ್ಬನೇ ತಮಿಳರ ನಾಯಕ ಎಂಬಂತೆ ವರ್ತಿಸುತ್ತಿರುವ ಇವದಿನಾ ಹೋಗಿ ಪ್ರಧಾನಿಯ ಕಾಲಿಗೆ ಬಿದ್ದು, ಸೋನಿಯಾ ಗೆ ಬಹುಪರಾಕ್ ಹೇಳುತ್ತಿದ್ದಾನೆ. ಅಂದ ಹಾಗೆ ತಮಿಳುನಾಡಿನಲ್ಲಿ ಬಿದಿರಿನ ಬೆಲೆ ಗಗನಕ್ಕೆ ಏರಿದೆ. ಕಾರಣ.....ಸದ್ಯಕ್ಕೆ....ಹೊಗೇನಕಲ್ ವಿವಾದ ಮುಗಿಯುವುದರಒಳಗೆ ಅನೇಕರು ಹೊಗೆ ಹಾಕಿಸಿಕೊಳ್ಳುವ ಲಿಸ್ಟಿನಲ್ಲಿ ಇದ್ದಾರೆ. "ಬಂಬೂ ಸವಾರಿ"ಗೆ ಎಲ್ಲರೂ ರೆಡಿಯಾಗಿ ಕೂತಿರುವಂತಿದೆ.

Saturday, April 05, 2008

ಕರ್ನಾಟಕದ ರಾಜಧಾನಿಯಲ್ಲಿಯೇ ಮತ್ತೊಂದು ಅವಮಾನ!!!!!!!!!

ಬೆಂಗಳೂರು ಎಪ್ರಿಲ್ ೭: ಸೈಂಟ್ ಮಾರ್ಕ್ಸ್ ರಸ್ತೆಯ ಬೌರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಎಪ್ರಿಲ್ ೫ ಶನಿವಾರದಂದು ರಾತ್ರಿ ಅಯೋಜಿಸಿದ್ದ "ಬಾರ್ ನೈಟ್" ಕಾರ್ಯಕ್ರಮದಲ್ಲಿ ಬೌರಿಂಗ್ ಇನ್ ಸ್ಟಿಟ್ಯೂಟ್ ನ ಅಧ್ಯಕ್ಷನಾದ, ಉತ್ತರ ಭಾರತದ ಸಂದೀಪ್ ಸೂದ್ ಎಂಬ ದುರಹಂಕಾರಿ , ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ತನ್ನ ಕನ್ನಡ ನಿಷ್ಟೆಯನ್ನು ತೋರ್ಪಡಿಸಿದ್ದಾನೆ.
 • ಸದಸ್ಯರಾದ ಶ್ರೀ ಭಾಸ್ಕರ್ ಅಪ್ಪಾಜಿಯವರು " ಸರ್, ತುಂಬಾ ಜನ ಕೇಳ್ತಿದಾರೆ, ಒಂದು ಕನ್ನಡ ಹಾಡು ಹಾಡ್ಸಿ" ಎಂದಾಗ ಈ ಸೂದ್ ಎಂಬ ನಾಯಿ ಬೊಗಳತೊಡಗಿತು-"ನೋಡಿ...ಅನವಶ್ಯಕವಾಗಿ ಕ್ಯಾತೆ ತೆಗೆಯಬೇಡಿ. ಇಲ್ಲಿ ಕನ್ನಡ ಹಾಡನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಕನ್ನಡದ ಹೆಸರು ಹೇಳಿಕೊಂಡು ಕಾರ್ಯಕ್ರಮವನ್ನು ಹಾಳು ಮಾಡಬೇಡಿ."
 • ಆಗ ಅಪ್ಪಾಜಿಯವರು, "ಇದು ಕನ್ನಡದ ಪ್ರಶ್ನೆಯಲ್ಲ, ನಾವು ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿಲ್ಲ. ಈಗಾಗಲೇ ತಮಿಳು ಹಾಡು ಹಾಡಿದ್ದಾರೆ. ಜನ ಒತ್ತಾಯ ಮಾಡುತ್ತಿದ್ದಾರೆ ಎಂದು ಕೇಳುತ್ತಿದ್ದೇವೆ...ಒಂದು ಕನ್ನಡ ಹಾಡು ಹಾಡಿಸಲೇಬೇಕು."........ಆಗ ಆ ನಾಯಿ ಇನ್ನೂ ಜೋರಾಗಿ ಬೊಗಳತೊಡಗಿತು.."ಏನ್ ಬೆದರಿಕೆ ಹಾಕುತ್ತಿದ್ದೀರಾ?, ಹಾಡು ಹಾಡ್ಸಲ್ಲ, ಏನ್ ಮಾಡ್ತೀರೋ ಮಾಡಿ...ಈಗ ಪ್ಲೀಸ್ ಗೆಟ್ ಔಟ್!"

ಇದು ನಡೆದಿದ್ದು ತಮಿಳುನಾಡಲ್ಲಾದರೆ ಪರವಾಗಿಲ್ಲ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದು ನಡೆದಿದೆ ಎಂದಾದರೆ ಈ ಕನ್ನಡ ದ್ರೋಹಿಗಳಿಗೆ ಎಷ್ಟು ಪೊಗರಿರಬೇಕು?. ಈ ಬೌರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕಾನೂನಿಗೆ ವಿರುದ್ದವಾಗಿ ಕ್ಯಾಬರೆ ಡ್ಯಾನ್ಸ್, ಚಟುವಟಿಕೆಗಳನ್ನು ನಡೆಸುತ್ತಿರುವ ಸಂದೀಪ್ ಸೂದ್, ಸಂಜಯ್ ಛಾಬ್ರಿಯ, ರಾಜೇಶ್ ಬಜಾಜ್ ತಮ್ಮ ಈ ವ್ಯವಹಾರಗಳಿಗೆ ಕನ್ನಡದ ಸದಸ್ಯರ ಬೆಂಬಲ ಸಿಗದೆ ಅವರನ್ನೇ ಸದಸ್ಯತ್ವದಿಂದ ಕಿತ್ತು ಹಾಕುವ ಬೆದರಿಕೆ ಹಾಕಿದ್ದಾರೆ.

ಇಲ್ಲಿ ಕಾಟಾಚಾರಕ್ಕೆ ಕನ್ನಡ ರಾಜ್ಯೋತ್ಸವವನ್ನು ಪ್ರತೀವರ್ಷ ಆಚರಿಸುತ್ತಾರೆ. ಆದರೆ ಕ್ಯಾಬರೆಯನ್ನೂ ಮೀರಿಸುವ ಡ್ಯಾನ್ಸ್ ಗಳನ್ನು ಅನೇಕ ಸಲ ಇಲ್ಲಿ ಲಕ್ಷಗಟ್ಟಲೆ ಹಣ ಸುರಿದು ಆಯೋಜಿಸುತ್ತಾರೆ. ಇದಕ್ಕಾಗಿ ಹುಡುಗಿಯರನ್ನು ಮುಂಬಯಿ ಹಾಗೂ ಕೋಲ್ಕತ್ತದಿಂದ ಕರೆಸಲಾಗುತ್ತದೆ. ಇಲ್ಲಿ ಕೇವಲ ಹಿಂದಿ ಹಾಗೂ ತಮಿಳಿನಲ್ಲಿ ಮಾತ್ರ "ಕ್ಯಾಬರೆ ಡ್ಯಾನ್ಸ್"ಗಳು ನಡೆಯುತ್ತವೆ. ಆಂದರೆ ಅವರು ಪರೋಕ್ಷವಾಗಿ ಹಿಂದಿ ಮತ್ತು ತಮಿಳು ಭಾಷೆಗಳು ಮಾತ್ರ ಇಂತಹ ಅನೈತಿಕ ಚಟುವಟಿಕೆಗಳಿಗೆ ಉತ್ತಮ ಎಂದು ಒಪ್ಪಿಕೊಂಡಂತಾಗಿದೆ. ಕನ್ನಡಿಗ ಸದಸ್ಯರು "ಇದು ನಮ್ಮ ಸಂಸ್ಕೄತಿ ಅಲ್ಲ " ಎಂದರೆ..."ನೀವು ಇಂಥ ಕಾರ್ಯಕ್ರಮಗಳಿಗೆ ಬರಬೇಡಿ, ಇಲ್ಲಿ ಕನ್ನಡ ಯಾರಿಗೂ ಬೇಡ.." ಎಂದು ಕಡ್ಡಿ ಮುರಿದಂತೆ ಬೊಗಳುತ್ತಾರೆ. ಈ ಇನ್ ಸ್ಟಿಟ್ಯೂಟ್ ನಲ್ಲಿ ೩೪೦೦ ಸದಸ್ಯರಿದ್ದು, ಅದರಲ್ಲಿ ಸುಮಾರು ೨೦೦೦ ಮಂದಿ ಕನ್ನಡಿಗರೇ ಇದ್ದಾರೆ. ಆದರೂ ಉತ್ತರ ಭಾರತದ ಈ ನಾಯಿಗಳು ಕನ್ನಡಿಗರ ನೆಲದಲ್ಲಿ ನಿಂತು, ಇಲ್ಲಿನ ಅನ್ನ ತಿಂದು, ಕಾವೇರಿ ನೀರು ಕುಡಿದು, ಉಂಡ ಮನೆಗೇ ಎರಡು ಬಗೆಯುತ್ತಾರೆ.

ಇಂತಹ ನಾಯಿಗಳನ್ನು, ಬರೀ ಚಡ್ಡಿಯಲ್ಲಿ, ಕತ್ತೆ ಮೆರವಣಿಗೆ ಮಾಡಿಸಿ, ಹುಚ್ಚು ನಾಯಿಗೆ ಹೊಡೆದಂತೆ ಹೊಡೆದು ಉತ್ತರ ಭಾರತಕ್ಕೇ ಓಡಿಸಬೇಕು.

ಸೂಚನೆ : ಇದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ

ನಾರಾಯಣ ಗೌಡ್ರೆ.....ಈ ೩ ಜನ ಕನ್ನಡ ದ್ರೋಹಿಗಳನ್ನು ಒದ್ದೋಡಿಸುವ ಕೆಲಸ ಮೊದಲು ಆಗಬೇಕು.

"ಜೈ ಕರ್ನಾಟಕ ಮಾತೆ!!!!!ಜೈ ಭುವನೇಶ್ವರಿ!!!!!"

ಅಹಮದಾಬಾದ್ ಸೋಲು...ಅನಿಲ್ ಕುಂಬ್ಳೆಗೆ ಎಚ್ಚರಿಕೆ

ಬೆಂಗಳೂರು ಎಪ್ರಿಲ್ ೬.: ಅಹಮದಾಬಾದ್ ನಲ್ಲಿ ಭಾರತ ಕ್ರಿಕೆಟ್ ತಂಡದ ಸೋಲಿಗೆ ಯಾರನ್ನು ದೂಷಿಸುವುದು ಎಂಬುವುದು ಎಲ್ಲರೂ ಯೋಚಿಸಬೇಕಾದ ವಿಚಾರ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕುಂಬ್ಳೆ ಮೊದಲ ತಪ್ಪು ಮಾಡಿದರು. ಇರ್ಫಾನ್ ಪಠಾಣ್ ಅಯ್ಕೆಯಂತೂ ಇನ್ನೊಂದು ತಪ್ಪು. ಅಲ್ಲದೆ ಫಾರ್ಮ್ ನಲ್ಲಿ ಇಲ್ಲದ ಅರ್.ಪಿ ಸಿಂಗ್ ಹಾಗೂ ಶ್ರೀಶಾಂತ್ ಆಯ್ಕೆ ಮತ್ತೊಂದು ತಪ್ಪು. ಹೀಗೆ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿದಲ್ಲಿ ಭಾರತ ಸೋಲದೆ ಇರುತ್ತದೆಯೇ?.
ವೀರೆಂದ್ರ ಸೆಹ್ವಾಗ್ ಕೇವಲ ಒಂದು ಇನ್ನಿಂಗ್ಸ್ ನಲ್ಲಿ ತ್ರಿಶತಕ ದಾಖಲಿಸಿ ಮುಂದಿನ ಪಂದ್ಯಗಳಿಗೆ ತನ್ನ ಆಯ್ಕೆಯನ್ನು ದಾಖಲಿಸಿಕೊಂಡರು. ಆದರೆ ದ್ರಾವಿಡ್, ಲಕ್ಷ್ಮಣ್ ಹಾಗೂ ಧೋನಿ ಆಯ್ಕೆ ಮಾತ್ರ ಅಚ್ಚರಿ ತಂದಿದೆ. ರೀ.....ಆಯ್ಕೆದಾರರೇ...ಭಾರತ ತಂಡಕ್ಕೆ ಬೇಕಾಗಿರುವುದು ಹಳೇ ತಲೆಗಳಲ್ಲ, ಫಾರ್ಮ್ ನಲ್ಲಿ ಇರುವಂತಹ ಹೊಸ ಮುಖಗಳು. ಗಂಭೀರ್, ದಿನೇಶ್ ಕಾರ್ತಿಕ್ ಮುಂತಾದ ಪ್ರತಿಭೆಗಳು, ದ್ರಾವಿಡ್, ಧೋನಿ, ಲಕ್ಷ್ಮಣ್ ಗಾಗಿ ತಮ್ಮ ಆಯ್ಕೆಗಾಗಿ ಕಾಯಬೇಕಾಗಿದೆ. ದ್ರಾವಿಡ್ ಈಗ ಪಂದ್ಯ ಗೆಲ್ಲಿಸುವ ಆಟಗಾರನಾಗಿ ಉಳಿದಿಲ್ಲ. ಧೋನಿ ಕೇವಲ ೨೦-೨೦ ಪಂದ್ಯಗಳಿಗೆ ಫಿಟ್. ಲಕ್ಷ್ಮಣ್ ತನ್ನ ಜೀವಮಾನದಲ್ಲಿ ಆಸ್ಟ್ರೇಲಿಯ ಎದುರು ಆಡಿದ ಒಂದು ಉತ್ತಮ ಇನ್ನಿಂಗ್ಸ್ ಗಾಗಿ ಮತ್ತೆ, ಮತ್ತೆ ಸ್ಥಾನ ಗಳಿಸುತ್ತಿದ್ದಾರೆ.
ಈ ತರದ ಆಯ್ಕೆ ಭಾರತ ತಂಡದ ಭವಿಷ್ಯಕ್ಕೆ ಮುಳುವಾಗಲಿದೆ. ಹಳೇ ತಲೆಗಳನ್ನು ಕಿತ್ತು ಹಾಕಿ, ಹೊಸಬರಿಗೆ ಮಣೆ ಹಾಕಬೇಕು. ಅಯ್ಕೆದಾರರೇ...ದಕ್ಷಿಣ ಅಫ್ರಿಕಾ ಪಂದ್ಯ ಗೆದ್ದಿದ್ದು ಹೊಸಬರಿಂದ ಹೊರತು, ಹಳೇ ತಲೆಗಳಿಂದಲ್ಲ.....ಗೊತ್ತಾಯ್ತಾ?....

ಈ ಕರುಣಾನಿಧಿ- ಭಯೋತ್ಪಾದಕನೇ ಅಥವಾ ದೇಶದ್ರೋಹಿಯೇ?

ಬೆಂಗಳೂರು ಎಪ್ರಿಲ್ ೫: ಕರ್ನಾಟಕ ಇಂದು ಸಂಕಷ್ಟದಲ್ಲಿದೆ. ಅತ್ತ ದರಿ ಇತ್ತ ಪುಲಿ ಎಂಬ ಗಾದೆಯಂತೆ ದಿನಕ್ಕೊಂದು ಅತ್ಯಾಚಾರ ನಡೆಯುತ್ತಿದೆ, ಕೆಲವು ಭಯೋತ್ಪಾದಕರಿಂದ.
ಅಲ್ಲಾರೀ, ಕರ್ನಾಟಕಕ್ಕೆ ಎಂತಹ ದುರ್ಗತಿ ಬಂತೂರೀ......ಅತ್ತ ಮಹಾರಾಷ್ಟ್ರದ ಗಡಿ ಗಲಾಟೆ, ಇತ್ತ ಆಂಧ್ರದಿಂದ ಗಣಿ,ಗಡಿ ಗಲಾಟೆ, ಮತ್ತೊಂದೆಡೆ ತಮಿಳುನಾಡಿನ ಗಡಿ, ನೀರಿನ ಗಲಾಟೆ, ಮಗದೊಂದೆಡೆ ಕೇರಳದ ಗಡಿ, ನೀರಿನ ಗಲಾಟೆ.....ಭಾರತಕ್ಕೆ ಹೇಗೆ ನಾಲ್ಕೂ ಕಡೆಯಿಂದ ಭಯೋತ್ಪಾದಕರ ಬೆದರಿಕೆ ಇದೆಯೋ, ಅದೇ ರೀತಿ ಕರ್ನಾಟಕಕ್ಕೆ ನಾಲ್ಕೂ ದಿಕ್ಕಿನಿಂದಲೂ ಭಯೋತ್ಪಾದಕರ ದಾಳಿ ನಡೆಯುತ್ತಿದೆ. ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ತಾಕತ್ತು ಕರ್ನಾಟಕಕ್ಕೆ ಇದೆಯೇ?.....
ಖಂಡಿತಾ ಇದೆ...ಆದರೆ ಅದು ಕನ್ನಡಿಗರಿಂದ, ಕರ್ನಾಟಕ ಪ್ರೇಮಿಗಳಿಂದ, ದೇಶಪ್ರೇಮಿಗಳಿಂದ, ನಮ್ಮ ದೇಶದ ಏಕತೆಯನ್ನು ಬಯಸುವವರಿಂದ ಮಾತ್ರ. ಆದರೆ ನಮ್ಮ ಸುತ್ತ ಮುತ್ತ ಇರುವ ನಾಲ್ಕು ಭಯೋತ್ಪಾದಕ ಮುಖ್ಯಮಂತ್ರಿಗಳಿಂದ ನಮ್ಮ ದೇಶದ ಏಕತೆಗೆ ಭಂಗ ಬರುತ್ತಿದೆ. ಹಿಂದುಸ್ತಾನದಲ್ಲಿ ಹಿಂದುಗಳು ಹೇಗೆ ಅತಂತ್ರರೋ, ಹಾಗೆಯೇ ಕನ್ನಡ ನಾಡಿನಲ್ಲಿ ಕನ್ನಡಿಗರು ಅತಂತ್ರರಾಗಿದ್ದಾರೆ. ನಮ್ಮಿಂದ ಓಟು ಪಡೆದು ನಮ್ಮ ರಕ್ಷಣೆ ಮಾಡಬೇಕಾದ ಚುನಾಯಿತರಾದ ೨೮ ಮಂದಿ ನಪುಂಸಕರು ಏನೂ ಮಾಡಲಾಗದ ದೈನೇಸಿ ಪರಿಸ್ಥಿತಿ ಎದುರಿಸುತ್ತಿರುವಾಗ, ಒಬ್ಬ ಸಾಮಾನ್ಯ ಕನ್ನಡಿಗ ಏನು ತಾನೆ ಮಾಡಲು ಸಾಧ್ಯ?. "ಕರ್ನಾಟಕ ರಕ್ಷಣಾ ವೇದಿಕೆ"ಯಂತಹ ಕನ್ನಡ ಸಂಘಟನೆಗಳು ಇಲ್ಲದಿದ್ದಲ್ಲಿ ಇಂದು ನಮ್ಮ ಮಾತ್ರುಭಾಷೆಯನ್ನು ಭೂತಕನ್ನಡಿ ಹಿಡಿದು ಹುಡುಕಾಡಬೇಕಾದ ಪರಿಸ್ಥಿತಿ ಇರುತ್ತಿತ್ತು.
ಮುಷರಫ್ ಸಾಹೇಬರಿಂದ ಪ್ರಚೋದಿತನಾಗಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಕನ್ನಡ ಹಾಗೂ ತಮಿಳರ ಮಧ್ಯೆ ಗಲಭೆ ಉಂಟುಮಾಡಿ ಮತ್ತೆ ತನ್ನ ಕುರ್ಚಿಯನ್ನು ಭದ್ರಪಡಿಸುವ ಹುನ್ನಾರ ಈ ಕರುಣಾನಿಧಿಯದ್ದು. ಇವನೊಬ್ಬ ಹುಟ್ಟಾ ಭಯೋತ್ಪಾದಕ ಎಂದರೆ ತಪ್ಪಾಗಲಾರದು. ಏಕೆಂದರೆ ಇವ ಬಹಿರಂಗವಾಗಿ ಎಲ್.ಟಿ.ಟಿ.ಇ ಗೆ ಬೆಂಬಲ ಸಾರಿದ್ದ. ಇವನೊಂದಿಗಿರುವ ಚೇಲಾಗಳೂ ಸಹ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುವ ಅಹಂಕಾರ ತೋರಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಇದುವರೆಗೂ ನಮ್ಮ ದೇಶದಲ್ಲಿ ಇರಗೊಟ್ಟಿದ್ದೇ ತಪ್ಪು.
ಕನ್ನಡ ಪ್ರೇಮಿ "ನಾರಾಯಣ ಗೌಡ್ರೆ".....ವಂದನೆಗಳು. ಕನ್ನಡಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ತಮ್ಮನ್ನು ನಾನು ಮನಃಪೂರ್ವಕವಾಗಿ ಅಭಿವಂದಿಸುತ್ತೇನೆ. ನಿಮ್ಮಂತಹ ಸಾವಿರ ಜನ ಕನ್ನಡಿಗರು ಇಂದು ಜನ್ಮ ತಾಳಬೇಕಾಗಿದೆ ನಮ್ಮ ತಾಯ್ನೆಲದ ರಕ್ಷಣೆಗೆ.
" ಜೈ ಕರ್ನಾಟಕ ಮಾತೆ.....ಜೈ ಭುವನೇಶ್ವರಿ....ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ ! "