Sunday, November 30, 2008

ಇಂದು ನಿರ್ಧಾರ ತೆಗೆದುಕೊಳ್ಳದಿದ್ದರೆ…ಮುಂದಿಲ್ಲ



ಬೆಂಗಳೂರು ನವೆಂಬರ್ ೩೦: ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸ ಖಂಡನಾರ್ಹ ಮಾತ್ರವಲ್ಲ ಶಿಕ್ಷಾರ್ಹ ಕೂಡಾ. ಇದು ಭಾರದಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಉತ್ತಮ ನಿದರ್ಶನ. ಈ ರೀತಿಯ ಘಟನೆಗಳು ಪುನರಾವರ್ತಿಸುತ್ತಿದ್ದರೂ ಭಾರತ ಸರಕಾರ(ಕಾಂಗ್ರೆಸ್) ಪದೇ ಪದೇ ಹಳೇ ಹೇಳಿಕೆಗಳನ್ನು ಬಾಯಿಪಾಠ ಮಾಡಿದಂತೆ ಕೊಡುತ್ತಿರುವುದು ಭಾರತೀಯರ ಪಾಲಿನ ದುರ್ದೈವ. ಒಬ್ಬ ಅಯೋಗ್ಯ ಪ್ರಧಾನಿ (ದುರ್ಬಲ) ಹಾಗೂ ನಾಲಾಯಕ್ ಗೃಹಸಚಿವ ಈ ಹುದ್ದೆಯಲ್ಲಿ ಮುಂದುವರಿಯಲು ತಮ್ಮ ಅರ್ಹತೆಗಳನ್ನು ಕಳೆದುಕೊಂಡಿದ್ದಾರೆ ಎನ್ನಬಹುದು.

ಕೆಲವು ತಿಂಗಳುಗಳ ಹಿಂದೆಯೇ ಈ ಘಟನೆ ನಡೆಯುವ ಬಗ್ಗೆ ನಾರಾಯಣ್‌ರವರು ಎಚ್ಚರಿಸಿದ್ದರೂ, ಕೇಂದ್ರವಾಗಲೀ, ರಾಜ್ಯ ಸರಕಾರವಾಗಲೀ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸಂಶಯಕ್ಕೆಡೆಮಾಡುತ್ತಿದೆ. ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿತೋ ಎನ್ನುವ ಸಂಶಯ ಬರುವುದು ಸಹಜ. ಏಕೆಂದರೆ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂ ಸಂಘಟನೆಗಳ ಕೆಲವರನ್ನು ಭಯೋತ್ಪಾದಕರೆಂದು ಬಿಂಬಿಸಿ ಅವರನ್ನು ಚಿತ್ರಹಿಂಸೆ ಕೊಟ್ಟು ತಪ್ಪನ್ನು ಒಪ್ಪಿಕೊಳ್ಳುವಂತೆ ಎ.ಟಿ.ಎಸ್. (ಭಯೋತ್ಪಾದನಾ ನಿಗ್ರಹ ದಳ) ಮೇಲೆ ಒತ್ತಡ ಹಾಕಿದ ಕೇಂದ್ರ ಸರಕಾರ, ಇವತ್ತು ಷಂಡನಂತೆ ಹೇಳಿಕೆಗಳನ್ನು ಕೊಡುತ್ತಿರುವುದು ಭಾರತ ತನ್ನ ಜಾತ್ಯಾತೀತತೆಯ ಉಚ್ಛ್ರಾಯ ಸ್ಥಿತಿಯಲ್ಲಿದೆ ಎನ್ನಲಡ್ಡಿಯಿಲ್ಲ. ಏಕೆಂದರೆ ಕಾಂಗ್ರೆಸ್‌ನ ರಾಜಕೀಯಕ್ಕೆ ನಾವು ಇಂದು ಹತ್ತಾರು ದಕ್ಷ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ.

ಅಮೆರಿಕಾ, ಇಸ್ರೇಲ್, ರಶ್ಯಾ ಅಥವಾ ಬ್ರಿಟನ್‌ನಲ್ಲಿ ಈ ಥರದ ಘಟನೆಗಳೇನಾದರೂ ನಡೆದಿದ್ದರೆ ಇವತ್ತು ಪಾಕಿಸ್ತಾನದಂತಹ ಭಯೋತ್ಪಾದಕ ರಾಷ್ಟ್ರ ನಮ್ಮ ಭೂಪಟದಲ್ಲಿ ಕಾಣಸಿಗುತ್ತಿರಲಿಲ್ಲ. ಭಾರತದಲ್ಲಿ ಮಾತ್ರ ಏಕೆ ಹೀಗೆ?. ನಾವು ದೇಶದ ರಕ್ಷಣೆಗಾಗಿ, ಇಂತಹ ಭಯೋತ್ಪಾದಕ ಘಟನೆಗಳನ್ನು ನಿಭಾಯಿಸುವುದಕ್ಕಾಗಿ ಪ್ರತೀ ಸಲ ಹಣ ವ್ಯಯಿಸುವ ಬದಲು, ಭಯೋತ್ಪಾದನೆಯ ಮೂಲವಾದ ಪಾಕಿಸ್ತಾನದ ಮೇಲೆ ದಾಳಿ ಮಾಡಿ, ಅಲ್ಲಿನ ಎಲ್ಲ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿ ಒಂದೇ ಸಲ ಹಣ ವ್ಯಯಿಸುವುದು ಸೂಕ್ತವೆನಿಸುತ್ತದೆ. ಈ ಥರದ ಭಯೋತ್ಪಾದನೆಗಳನ್ನು ತಡೆಯಲು, ನಿಲ್ಲಿಸಲು ಭಾರತ ಇನ್ನೆಷ್ಟು ಬಲಿ ನೀಡಬೇಕಾಗುವುದೋ?.

ಕೇಂದ್ರ ಸರಕಾರ ಇವತ್ತು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಮತಾಂಧರ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವುದು ಈ ಎಲ್ಲಾ ಘಟನೆಗಳಿಗೆ ಕಾರಣ. ಮುಂಬೈ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ತಳ್ಳಿಹಾಕುವಂತಿಲ್ಲ. ಏಕೆಂದರೆ ದಾವೂದ್ ಇಬ್ರಾಹಿಂ ಎಂಬ ಭಯೋತ್ಪಾದಕ ಕರಾಚಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಇದ್ದರೂ, ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳು ಇರುವ ಮಾಹಿತಿ ಇದ್ದರೂ, ಭಾರತದ ಪೋಲಿಸ್, ಸಾಫ್ಟ್‌ವೇರ್ ಕಂಪೆನಿ, ಪೋಲಿಸ್ ಇಲಾಖೆ, ಮಿಲಿಟರಿಯಲ್ಲಿ ಭಯೋತ್ಪಾದಕರು ಕೆಲಸ ಮಾಡುತ್ತಿದ್ದರೂ, ಅವರು ಮುಸಲ್ಮಾನರೆಂಬ ಒಂದೇ ಕಾರಣಕ್ಕೆ ಕ್ರಮ ತೆಗೆದುಕೊಳ್ಳದಿರುವುದು ಈ ಕಾಂಗ್ರೆಸ್ ಸರಕಾರದ ದೇಶದ್ರೋಹಿತನವನ್ನು ಸೂಚಿಸುತ್ತದೆ. ನಾನು ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಮಾತ್ರ ದೂರುತ್ತಿಲ್ಲ, ಈ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಕಮ್ಯೂನಿಷ್ಟರು, ಬುದ್ದಿಜೀವಿಗಳು ಹಾಗೂ ಜಾತ್ಯಾತೀತ ಸೋಗಿನ ರಾಜಕಾರಣಿಗಳನ್ನು ಕೂಡಾ ಇದೇ ಸಾಲಿನಲ್ಲಿ ಸೇರಿಸಬಹುದು.

ಈಗ ನಾವು ಕಠಿನ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ಇಂತಹ ಅನೇಕ ಘಟನೆಗಳು ನಡೆಯುವುದರಲ್ಲಿ ಸಂಶಯವಿಲ್ಲ. ಈಗ ಭಯೋತ್ಪಾದಕ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶಗಳ ಮೇಲೆ ಧಾಳಿ ಮಾಡಿ, ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮಟ್ಟ ಹಾಕಿ, ಅಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಕೆಲಸ ಆಗಬೇಕು. ಈ ಎರಡೂ ರಾಷ್ಟ್ರಗಳ ಪ್ರಧಾನಿಗಳಿಗೆ, ಅಧ್ಯಕ್ಷರಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಬೇಕು. “ನೀವು ಮಾಡಿ…..ಇಲ್ಲಾ ನಾವು ಮಾಡುತ್ತೇವೆ”. ಇದು ನಮ್ಮ ಅತೀ ಬಲಹೀನ ಪ್ರಧಾನಿಗೆ ಸಾಧ್ಯವೇ?.

ಸಾಕು……ಇವತ್ತಿಗೆ…..ಇಂದೇ ನಿರ್ಧಾರ ತೆಗೆದುಕೊಳ್ಳಿ…ಇಂದಿಲ್ಲದಿದ್ದರೆ ಮುಂದಿಲ್ಲ……..ಇದು ಭಾರತ ಸರಕಾರಕ್ಕೆ ಎಚ್ಚರಿಕೆ, ಸಕಲ ಭಾರತೀಯರಿಗೆ ಎಚ್ಚರಿಕೆ….ಮುಂದಿನ ಮತದಾನದಲ್ಲಿ ಭಯೋತ್ಪಾದಕರನ್ನು ಚುನಾಯಿಸಬೇಡಿ. ದೇಶದ್ರೋಹಿ ರಾಜಕಾರಣಿಗಳನ್ನು ಚುನಾಯಿಸದಿರಿ. ಮತ್ತೆ ನೀವು ಈ ಮಿಥ್ಯ ಜಾತ್ಯಾತೀತರನ್ನು ಚುನಾಯಿಸಿದರೆ, ಇವತ್ತು ಮುಂಬೈನಲ್ಲಿ ನಡೆದದ್ದು ನಾಳೆ ದೇಶದ ಎಲ್ಲ ನಗರಗಳಲ್ಲಿ ನಡೆಯುವುದರಲ್ಲಿ ಯಾವ ಸಂಶಯವಿಲ್ಲ.
ಧಿಕ್ಕಾರವಿರಲಿ ಈ ರಾಜಕಾರಣಿಗಳಿಗೆ…..ದೇಶದ್ರೋಹಿಗಳಿಗೆ…..ಭಯೋತ್ಪಾದಕರಿಗೆ…….

Monday, November 24, 2008

"ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ"





ಬೆಂಗಳೂರು ನವೆಂಬರ್ ೨೪:ನವೆಂಬರ್ ೨೩ನೇ ತಾರೀಖು ಸಾಯಂಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ಇತ್ತ NMKRV ಸಭಾಂಗಣದಲ್ಲಿ ರಾಘವೇಂದ್ರ ಕಾಂಚನ್‌ರ ನಿರೂಪಣೆಯಲ್ಲಿ ಸಂಗೀತ ಸುಧೆಯೇ ಹರಿಯುತ್ತಿತ್ತು. ಅತ್ತ ಭಾರತ ತಂಡದಿಂದ ರನ್‌ಗಳ ಸುರಿಮಳೆಯಾಗುತ್ತಿದ್ದರೆ ಇತ್ತಾ ಸಭಾಂಗಣದಲ್ಲಿ ಅಭಿನಂದನ ತಂಡದಿಂದ ಜಿಟಿಜಿಟಿ ಮಳೆಯ ನಡುವೆ ಸಂಗೀತದ ಸುಧೆಯ ಸುರಿಮಳೆ.
ಹೌದು...ಅಂದು ಅಭಿನಂದನ ಬಳಗದ "ರಂಗೋಲಿ" (ಸುಶ್ರಾವ್ಯ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ), ರಂಗು ರಂಗಾಗಿ ಮೂಡಿಬಂದಿದ್ದು ಸೇರಿದ ಸಕಲ ಕನ್ನಡ ಕಲಾ ರಸಿಕರ ಕಣ್ಮನ ತಣಿಸುವಲ್ಲಿ ಸಫಲವಾಯಿತು. ಈ ಕಾರ್ಯಕ್ರಮದ ಹೆಸರೇ "ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ" ಹೇಳುವಂತೆ ಇದೊಂದು ಉದಯೋನ್ಮುಖ ಗಾಯಕರು, ಕಲಾವಿದರುಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಜನಮನಕ್ಕೆ ಪರಿಚಯಿಸುವ ಒಂದು ಯುವ ವೇದಿಕೆ. ಶ್ರೀ ವಾಸುದೇವ ಅಡಿಗರಿಂದ ಉದ್ಘಾಟನೆಗೊಂಡು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ರಾಘವೇಂದ ಕಾಂಚನ್‌ರ ನಿರೂಪಣೆ. ಚಿತ್ರ ನಿರ್ಮಾಪಕರಾದ ಬಾ.ಮ.ಹರೀಶ್, ಶ್ರೀನಿವಾಸ ರಾಯರು, ಕಬಡ್ಡಿ ವೆಂಕಟೇಶ್, ಚಿತ್ರ ನಿರ್ದೇಶಕರಾದ ನರೇಂದ್ರಬಾಬು, ಉದಯೋನ್ಮುಖ ಚಿತ್ರ ನಿರ್ದೇಶಕ ಅನೂಪ್, ಖ್ಯಾತ ಸಂಗೀತ ನಿರ್ದೇಶಕ ರಾಜನ್ ಹಾಗೂ ಉದಯ ಶೆಟ್ಟಿಯವರನ್ನು ಆತ್ಮೀಯವಾಗಿ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಎಲ್ಲ ಗಣ್ಯರನ್ನೂ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಗಾಯಕರಾದ ಸರ್ವಶ್ರೀ ಬದರಿಪ್ರಸಾದ್, ಅರವಿಂದ್, ದೀಕ್ಷಿತ್, ಮಾಸ್ಟರ್ ಧನುಷ್, ಶ್ರೀಮತಿ ಕುಶಲ ಮೊದಲಾದವರ ಸಿರಿಕಂಠದಲ್ಲಿ ಹಳೆಯ ಶ್ರೀಮಂತ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿಬಂದಿತ್ತು. ಹಳೆಯ ಕನ್ನಡ ಗೀತೆಗಳಾದ "ಮಾಮರವೆಲ್ಲೋ, ಕೋಗಿಲೆಯೆಲ್ಲೋ", "ಎಲ್ಲಿರುವೇ...ಮನವ ಕಾಡುವ ರೂಪಸಿಯೇ" ಮುಂತಾದ ಕನ್ನಡ ಗೀತೆಗಳು, "ಜಾನೇ ಕಹಾಂ ಗಯೇ ವೊ ದಿನ್", "ಜವಾನೀ ದಿವಾನಿ" ಮುಂತಾದ ಹಿಂದಿ ಹಾಡುಗಳು ನೆರೆದ ಎಲ್ಲರ ಮನಸೂರೆಗೊಂಡು ಮನತಣಿಸಿತು.
ಅಂದ ಹಾಗೆ ನಾನು ಈ ರಸಸಂಜೆಗೆ ಅಹ್ವಾನಿತನಾದದ್ದು ಒಂದು ಆಕಸ್ಮಿಕ. ಅಂದು ಭಾನುವಾರ ನಮ್ಮ ಸಂಬಂಧಿಕರ ನಿಶ್ಚಿತಾರ್ಥಕ್ಕೆ ಹೋಗಿದ್ದೆ, ಅಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ಶ್ರೀ ಕೆ.ಎನ್.ಅಡಿಗರು, ಹೀಗೆ ಮಾತನಾಡುತ್ತಾ ಅವರು "ಇವತ್ತು ಸಂಜೆ ಫ್ರೀ ಆಗಿದ್ದರೆ ಒಂದು ಕಾರ್ಯಕ್ರಮಕ್ಕೆ ಬನ್ನಿ" ಎಂದು ಅದರ ವಿವರ ನೀಡಿದರು. ನಾನೂ ನೋಡೋಣ ಎಂದು ಜಿಟಿಜಿಟಿ ಮಳೆಯನಡುವೆ, ಕ್ರಿಕೆಟ್ ಹುಚ್ಚನ್ನು ಮರೆತು ಆ ಒಂದು ಕಾರ್ಯಕ್ರಮದ ಒಬ್ಬ ಪ್ರೇಕ್ಷಕನಾಗಿ ಹೋಗಿದ್ದೆ. ಅಲ್ಲಿ ಹೋದ ಮೇಲೆ ಇನ್ನೂ ಇಂತಹ ರಸಸಂಜೆಗಳಲ್ಲಿ ಭಾಗವಹಿಸುವ ಒಂದು ಅವಕಾಶ ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ನನಗೆ ನಾನೇ ಪ್ರತಿಜ್ಞೆ ಮಾಡಿಕೊಂಡಿದ್ದೇನೆ......ಅಡಿಗರೇ...ಮತ್ತೊಮ್ಮೆ ಥ್ಯಾಂಕ್ಸ್...ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ.

Tuesday, November 18, 2008

ಅಮರ್ ಸಿಂಗ್ ಎಂಬ ಭಯೋತ್ಪಾದಕ

ಬೆಂಗಳೂರು ನವೆಂಬರ್ ೧೮: ಮತ್ತೊಬ್ಬ ರಾಜಕಾರಣಿ ಬಹಿರಂಗವಾಗಿಯೇ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಒಂದು ಆತಂಕಕಾರಿ ಸುದ್ದಿ ನೈಜ ಭಾರತೀಯರಿಗೆ ಬರಸಿಡಿಲು ಎರಗುವಂತೆ ಬಂದೆರಗಿದೆ. ತಮಿಳುನಾಡಿನ, ಆಂಧ್ರದ ರಾಜಕಾರಣಿಗಳ ನಂತರ ಈಗ ಉತ್ತರಪ್ರದೇಶದ ರಾಜಕಾರಣಿಗಳು ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ಸಾರಿದ್ದಾರೆ.
ಜಾಮಿಯಾ ಹತ್ಯಾಕಾಂಡದ ಇಬ್ಬರು ಸಿಮಿ ಎಂಬ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದಾಗ ಅಮರ್ ಸಿಂಗ್ ಎಂಬ ರಾಜಕಾರಣಿಯ ಕಣ್ಣು ಕೆಂಪಾಯಿತು. ಈ ಇಬ್ಬರು ಉಗ್ರರು ಸಮಾಜವಾದಿ ಪಾರ್ಟಿಯ ಬೆಂಬಲಿಗರು. ಈಗ ಇವರ ಬಂಧನದಿಂದ ತನ್ನ ದೇಶದ್ರೋಹಿತನ ಬಯಲಾಗಬಹುದೆಂಬ ಭೀತಿಯಿಂದ ಅಮರ್ ಸಿಂಗ್ ಕೂಡಲೇ ಪತ್ರಿಕಾ ಪ್ರಕಟಣೆ ಹೊರಡಿಸಿ, ಈಗ ಬಂಧನದಲ್ಲಿರುವವರು ಭಯೋತ್ಪಾದಕರಲ್ಲ- ಅವರು ಸಾಮಾನ್ಯ ವಿದ್ಯಾರ್ಥಿಗಳು ಎಂಬುದಾಗಿ ಹೇಳಿ ಅವರಿಗೆ ಹಣ ಸಹಾಯ ಹಾಗೂ ನ್ಯಾಯಾಲಯದಲ್ಲಿ ಅವರ ಪರ ವಾದಿಸಲು ವಕೀಲರನ್ನು ಏರ್ಪಾಡು ಮಾಡಿದ. ಇದು ಕೇವಲ ಮುಸ್ಲಿಮರ ಮತ ಸೆಳೆಯುವ ತಂತ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ತನ್ನ ಪಕ್ಷದ ವರ್ಚಸ್ಸು ಹೆಚ್ಚಿಸಲು ಇದು ಸಹಾಯಮಾಡಬಹುದೆಂಬ ಭಂಡತನ. ಅಲ್ಲದೆ ರಾಜಕೀಯದಲ್ಲಿ ದೇಶ ಮಾರಿಯಾದರೂ ಪಕ್ಷದ ಗೆಲುವಿಗೆ ಶ್ರಮವಹಿಸುವ ಇಂಥಹಾ ದೇಶದ್ರೋಹಿ ರಾಜಕಾರಣಿಗಳಿರುವವರೆಗೂ ನಮ್ಮ ದೇಶದಲ್ಲಿ ಭಯೋತ್ಪಾದನೆ, ಮತಾಂತರಗಳು ಹೆಚ್ಚಾಗುತ್ತಲೇ ಇರುತ್ತದೆ.
ಕೇವಲ ಅಲ್ಪಸಂಖ್ಯಾತ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರು ಭಯೋತ್ಪಾದಕರೆಂದು ಸಾಬೀತಾದರೂ ಕೂಡಾ ಅವರಿಗೆ ಬೆಂಬಲ ನೀಡಿದ ಈ ದೇಶದ್ರೋಹಿಯ ಮುಂದಿನ ನಡೆ ಹೇಗಿರಬಹುದು?. ಮಾಲೆಗಾಂವ್ ಸ್ಪೋಟದ ಪ್ರಕರಣದಲ್ಲಿ ಅನ್ಯಾಯವಾಗಿ ಬಂಧನಕ್ಕೊಳಗಾದ ಹಿಂದೂ ಸಂತರ ಪರವಾಗಿ ಒಂದೂ ಹೇಳಿಕೆ ಕೊಡದ ಈ ದೇಶದ್ರೋಹಿ ಈಗ ಕೇವಲ ಜುಜುಬಿ, ಪುಟಗೋಸಿ ಮುಸ್ಲಿಮ್ ಮತಗಳಿಗಾಗಿ ಅವರ ಕಾಲು ನೆಕ್ಕಿ, ಅವರ ಉಚ್ಚೆ ಕುಡಿಯಲೂ ಹೇಸದ ಕಾಂಗ್ರೆಸ್ ಸಂಸ್ಕೃತಿ ಇನ್ನೂ ತನ್ನ ರಕ್ತದಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಅಯೊಧ್ಯೆಯಲ್ಲಿ ಕರಸೇವಕರಿಂದ ರಾಮಜನ್ಮಭೂಮಿ ಯಜ್ಞ್ನ ನಡೆಯುತ್ತಿರುವಾಗ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸಾವಿರಾರು ದೇವಳಗಳು ನೆಲಸಮವಾದಾಗ ತುಟಿ ಪಿಟಿಕ್ ಎನ್ನದ ಈ ಷಂಡ ರಾಜಕಾರಣಿಗಳು, ಭಾರತದಲ್ಲಿ ಒಬ್ಬ ಮುಸ್ಲಿಮನ ಮೇಲೆ ಹಲ್ಲೆಯಾದರೂ ಅದನ್ನು ಒಂದು Breaking News ಎಂಬಂತೆ ಬಿಂಬಿಸುತ್ತಿರುವುದು ನಮ್ಮ ದೇಶದ ದುರಂತ.
ಮಾಜಿಪ್ರಧಾನಿಯಾದ ದೇವೇಗೌಡ ತಾನು ಪ್ರಧಾನಿಯಾಗಿದ್ದಿದ್ದರೆ ವಿ.ಎಚ್.ಪಿ, ಭಜರಂಗ ದಳ, ಆರ್.ಎಸ್.ಎಸ್ ನಿಷೇಧ ಮಾಡುತ್ತಿದ್ದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇವನಿಗೆ ಸಿಮಿ, ಲಷ್ಕರ್ ಎ ತೋಯ್ಬಾ, ಎಲ್.ಟಿ.ಟಿ.ಇ, ನಕ್ಸಲೈಟ್ ಸಂಘಟನೆಗಳು, ಮುಸ್ಲಿಮ್ ಲೀಗ್, ಇಂಡಿಯನ್ ಮುಜಾಹಿದ್, ಕ್ರಿಶ್ಚಿಯನ್ ಸಂಘಟನೆಗಳು, ನ್ಯೂ ಲೈಫ್ ಮುಂತಾದವು ದೇಶಪ್ರೇಮಿ ಸಂಘಟನೆಗಳ ತರ ಕಾಣುತ್ತಿವೆ. ಇವರ ವಿರುದ್ಧ ಮಾತನಾಡುವ ಗಂಡಸುತನವನ್ನು ಪೂರ್ತಿ ಕಳೆದುಕೊಂಡಿರುವ ಇಂಥಹಾ ನಾಮರ್ದ ರಾಜಕಾರಣಿಗಳನ್ನು ಚುನಾಯಿಸುವ ಮುಠ್ಠಾಳ ಜನ ಇವತ್ತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ನೀಡುತ್ತಿರುವ ಈ ರಾಜಕಾರಣಿಗಳನ್ನು ದೇಶದ್ರೋಹದ ಆರೋಪದ ಮೇಲೆ ಯಾಕೆ ಬಂಧಿಸುವುದಿಲ್ಲ?. ಇದಕ್ಕೆ ಕಾರಣ ಕೇಂದ್ರದಲ್ಲಿರುವ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕೇಂದ್ರ ಸರಕಾರವೇ ಹೊರತು ಇನ್ನಾರೂ ಅಲ್ಲ. ಒಬ್ಬ ನಾಲಯಕ್ ಪ್ರಧಾನಿ, ಮತಿಹೀನ ರಕ್ಷಾಮಂತ್ರಿ, ಗೃಹಮಂತ್ರಿ ಹಾಗೂ Waste Body (Useless) ರಾಷ್ಟ್ರಾಧ್ಯಕ್ಷ.....ಇವು ನಮ್ಮ ದೇಶದ ಮಹಾ ದುರಂತ. ಇವರಲ್ಲಿ ಯಾರಿಗೂ ಸ್ವಂತ ನಿರ್ಧಾರ, ಭಾರತದ ಪರ ನಿರ್ಧಾರ ತೆಗೆದುಕೊಳ್ಳುವ ಒಂದು ಅಧಿಕಾರವೇ ಇಲ್ಲವೆಂದಾದಲ್ಲಿ, ಇವರು ಆ ಸ್ಥಾನದಲ್ಲಿ ಇದ್ದೂ ಏನು ಪ್ರಯೋಜನ?. ಈ ಹುದ್ದೆಗಳು ಕೇವಲ ಸುಮ್ಮನೆ ಕುಳಿತು ಸಂಬಳ ಎಣಿಸುವ ಒಬ್ಬ ನೌಕರನಂತೆ ಆಗಿರುವುದು ಒಂದು ಹಾಸ್ಯಾಸ್ಪದ.
"ಧಿಕ್ಕಾರವಿರಲಿ ಈ ದೇಶದ್ರೋಹಿ ರಾಜಕಾರಣಿಗಳಿಗೆ....ಧಿಕ್ಕಾರವಿರಲಿ ಈ ಹುದ್ದೆಗಳಿಗೆ....ಕಿತ್ತೊಗೆಯಿರಿ ಈ ದೇಶದ್ರೋಹಿ ಸರಕಾರವನ್ನು...ಹಿಂದೂ ವಿರೋಧಿ ಸರಕಾರವನ್ನು....ನಿರ್ಧಾರ ಇವತ್ತು ಸ್ವಾಭಿಮಾನಿ ಹಿಂದೂಗಳ ಕೈಯಲ್ಲಿದೆ...ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ..."

Sunday, November 16, 2008

ಅಡಿಗನ ಬಿಳಿ ಹುಲಿ

ಬೆಂಗಳೂರು ನವೆಂಬರ್ ೧೬: ಇತ್ತೀಚೆಗೆ ೨೦೦೮ರ ಬೂಕರ್ ಪ್ರಶಸ್ತಿ ಪಡೆದ "ಕನ್ನ"ಡಿಗ ಅರವಿಂದ ಅಡಿಗ ಎಂಬ ಭಾರತ ವಿರೋಧಿಗೆ ಧಿಕ್ಕಾರ ಹೇಳುತ್ತಾ ಮುಂದುವರಿಯೋಣ. ಈ ಬೂಕರ್ ಪ್ರಶಸ್ತಿ ಎಂದರೆ Commonwealth Nation ಹಾಗೂ Ireland ವಾಸಿಯ ಆಂಗ್ಲ ಪ್ರಬಂಧಕ್ಕೆ ಸಿಗುವ ಪ್ರಶಸ್ತಿ. ಆದರೆ ಇದರ ಮಾನದಂಡದ ಬಗ್ಗೆ ಅನೇಕ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತದೆ.
ಅಂದರೆ ಇತ್ತೀಚೆಗೆ ಭಾರತಕ್ಕೆ ಬಂದಿರುವ ಬೂಕರ್ ಪ್ರಶಸ್ತಿಗಳ ಪ್ರಬಂಧಗಳನ್ನು ಗಮನಿಸಿದಾಗ ಅದರ ಅಂತರಾಳ ಭಾರತ ವಿರೋಧಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಅಂದ ಮೇಲೆ ಈ ಅರವಿಂದ ಅಡಿಗ ಎಂಬ ತರ್ಲೆ ಭಾರತ ವಿರೋಧಿ ಲೇಖನ ಬರೆದು ಪ್ರಶಸ್ತಿ ಗಿಟ್ಟಿಸಿರುವುದು ಆಶ್ಚರ್ಯದ ವಿಷಯವೇನಲ್ಲ. ನಾಳೆ ಯಾವ ತಿರುಕನೂ ಪ್ರಬಲ ಭಾರತ ವಿರೋಧಿ ಲೇಖನ ಬರೆದು ಈ ಪ್ರಶಸ್ತಿ ತನ್ನದಾಗಿಸಿಕೊಳ್ಳಬಹುದು. ಆದರೆ ಪ್ರಶಸ್ತಿ ಸಿಕ್ಕಿದಾಗ ಎಲ್ಲರೂ ಬಹಳ ಖುಶಿಯಿಂದ ಕುಣಿದಿದ್ದರು...ಒಬ್ಬ ಕನ್ನಡಿಗನಿಗೆ ಈ ಪ್ರಶಸ್ತಿ ಬಂದಿದೆ ಎಂದು. ಆದರೆ ಈಗ ಎಲ್ಲ ಕನ್ನಡಿಗರೂ ತಲೆತಗ್ಗಿಸುವಂತಾಗಿರುವುದು ನಮ್ಮ ದುರ್ದೈವ. ಒಬ್ಬ ಮಂಗಳೂರಿನ ಬ್ರಾಹ್ಮಣನಾಗಿ ಈ ಥರಾ ಭಾರತದ ವಿರುದ್ಧ ಲೇಖನ ಬರೆದಿರುವ ಇವನ ದೇಶಭಕ್ತಿ(????)ಯನ್ನು ಮೆಚ್ಚಬೇಕಾದ್ದೇ. ಅರುಂಧತಿರಾಯ್ ಅವರ The God of small Things ಇರಬಹುದು, ಈ ಅಡಿಗನ The White Tiger ಇರಬಹುದು ಇವುಗಳ ಜೀವಾಳವೇ ಭಾರತ ವಿರೋಧದಿಂದ ತುಂಬಿ ತುಳುಕಾಡುತ್ತಿದೆ. ಇಂತಹ ಪ್ರಬಂಧಗಳಿಗೆ ಪ್ರಶಸ್ತಿ ಕೊಡುವವರು ಭಾರತ ವಿರೋಧಿಗಳೇ ಅಗಿದ್ದಾರೆ. ಅಂದರೆ ಅದರ ಮೂಲ ಬ್ರಿಟನ್ (ಒಂದು ಕಾಲದ ನಮ್ಮನ್ನು ಆಳಿದವರು).
ಅದೂ ಅಲ್ಲದೆ ಈ ಅಡಿಗ ತನಗೆ ಸಿಕ್ಕಿದ ಪ್ರಶಸ್ತಿಯ ಹಣವನ್ನು ತಾನು ಕಲಿತ ಶಾಲೆಗೆ ದಾನ ಮಾಡಿದ್ದು ಮತ್ತೊಂದು ತಪ್ಪು ಹೆಜ್ಜೆ. ಅಂದರೆ ಮತಾಂತರಕ್ಕೆ ಕುಮ್ಮಕ್ಕು ನೀಡುವ ಕ್ರಿಶ್ಚಿಯನ್ ಶಾಲೆಗೆ ಈ ಹಣವನ್ನು ದಾನ ಮಾಡಿ ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾನೆ. ಇದೇ ಹಣವನ್ನು ತಾನು ತೆಗಳಿದ ಭಾರತದ ಭಿಕ್ಷುಕರಿರಬಹುದು ಅಥವಾ ಬಡವ ಬಲ್ಲಿದರಿರಬಹುದು, ಅವರಿಗೆ ದಾನ ಮಾಡಬಹುದಿತ್ತಲ್ಲ?.

Sunday, November 09, 2008

ಬುದ್ಧಿಜೀವಿಗಳಾಗಲು ಹತ್ತು ಸೂತ್ರಗಳು


ಬೆಂಗಳೂರು ನವೆಂಬರ್ ೦೯ : ಇತ್ತೀಚೆಗೆ ಬುದ್ಧಿ ಜೀವಿಗಳ ಸಂಖ್ಯೆ ನಮ್ಮ ಭಾರತದಲ್ಲಿ ಹೆಚ್ಚಳವಾಗುತ್ತಿರುವುದು ಒಂಥರಾ ಭಯೋತ್ಪಾದಕತೆ ಹೆಚ್ಚಾಗುತ್ತಿರುವಂತೆ ಭಾಸವಾಗುತ್ತಿದೆ. ಏಕೆಂದರೆ ಅಲ್ಪಸಂಖ್ಯಾತರು ಹಿಂದೂಗಳ ವಿರುದ್ಧ ನಡೆಸುತ್ತಿರುವ ಭಯೋತ್ಪಾದಕತೆಯನ್ನು ಈ ಗೋಮುಖ ವ್ಯಾಘ್ರರಾದ ಬುದ್ಧಿಜೀವಿಗಳು ಬೆಂಬಲಿಸುತ್ತಿರುವುದು ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಅಲ್ಲದೆ ಬುದ್ಧಿ ಜೀವಿಗಳಾಗುವುದಕ್ಕೆ ಯಾವುದೇ ಅರ್ಹತೆ ಬೇಕಾಗಿಲ್ಲ. ಒಬ್ಬ ತಿರುಪೆ ಎತ್ತುವವನು ಕೂಡಾ ಭಾರತದಂತಹ ದೇಶದಲ್ಲಿ ಬುದ್ಧಿ ಜೀವಿಯಾಗಬಲ್ಲ ಎಂಬುದಕ್ಕೆ ಜೀವಂತ ಉದಾಹರಣೆಗಳು ಪ್ರತೀ ದಿನಾ ವೃತ್ತಪತ್ರಿಕೆಗಳಲ್ಲಿ ಬರುತ್ತಿರುವ ಅವರ ಹೇಳಿಕೆಗಳೇ ಸಾಕ್ಷಿ. ಅಂದರೆ ಇಲ್ಲಿ ಕೆಲವು ಸ್ಯಾಂಪಲ್, ಅಂದರೆ ಬುದ್ಧಿಜೀವಿಗಳಾಗಲು ಕೆಲವು ಅರ್ಹತೆಗಳು ಈ ರೀತಿ ಇದೆ.

೧. ಪ್ರತೀದಿನ ಹಿಂದೂ ವಿರೋಧಿ ಹೇಳಿಕೆಗಳನ್ನು ಕೊಡುತ್ತಿರಬೇಕು.ಹಿಂದೂ ದೇವತೆಗಳು, ಮಠಾಧೀಶರುಗಳನ್ನು ದಿನಾಲೂ, ಹೋದಲ್ಲೆಲ್ಲಾ
ತೆಗಳುತ್ತಿರಬೇಕು.
೨. ಎಲ್ಲಾದರೂ ಬಾಂಬ್ ಸ್ಫೋಟ ಸಂಭವಿಸಿದಲ್ಲಿ ಕೂಡಲೇ ಅಲ್ಲಿಗೆ ಧಾವಿಸಿ, ಅಪರಾಧಿ ಮುಸ್ಲಿಮನಾದಲ್ಲಿ ಅಥವಾ ಯಾವುದೇ ಅಲ್ಪಸಂಖ್ಯಾತ ವರ್ಗಕ್ಕೆ
ಸೇರಿದವನಾದಲ್ಲಿ ಅವನಿಗೆ ಬೆಂಬಲ ಸೂಚಿಸಿ ಅವನನ್ನು ಬಂಧಿಸದಂತೆ ಪೋಲೀಸರಿಗೆ ಅಡ್ಡಿ ಉಂಟುಮಾಡಬೇಕು.
೩. ಆದಷ್ಟೂ ಹಿಂದೂಗಳಿಗೆ ಎರಡು ಮದುವೆ ನಿಷೇಧ, ಒಬ್ಬರಿಗಿಂತ ಹೆಚ್ಚಿನ ಮಕ್ಕಳಾಗುವುದನ್ನು ವಿರೋಧಿಸಬೇಕು. ಹೀಗೆ ಮಾಡಿ ಅಲ್ಪಸಂಖ್ಯಾತರ
ಸಂಖ್ಯೆ ಜಾಸ್ತಿ ಆಗುವಂತೆ ಪರೋಕ್ಷವಾಗಿ ಸಹಕರಿಸಬೇಕು.
೪. ಯಾವುದೇ ಚರ್ಚ್ ಅಥವಾ ಮಸೀದಿಗಳಲ್ಲಿ ಅಕಸ್ಮಾತ್ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ನಷ್ಟ ಉಂಟಾದರೆ, ಅದಕ್ಕೆ ಹಿಂದೂ ಸಂಘಟನೆಗಳನ್ನು
ಹೊಣೆಮಾಡಬೇಕು.
೫. ಯಾವುದೇ ನಗರಗಳಲ್ಲಿ ಅಶ್ಲೀಲ ನೃತ್ಯ, ಪಬ್ ಡ್ಯಾನ್ಸ್ ಮುಂತಾದುವು ಮಧ್ಯರಾತ್ರಿಯಲ್ಲಿ ಮುಂದುವರೆದಾಗ ಪೋಲಿಸರು ಬಂಧಿಸಲು ಬಂದಾಗ ಅವರ
ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಬ್ ಅಥವಾ ಬಾರ್ ಮುಚ್ಚುವ ಪ್ರಯತ್ನವನ್ನು ನಿಷ್ಕ್ರಿಯಗೊಳಿಸಬೇಕು.
೬. ಪ್ರತೀ ದಿನ ತಾನು ಭಾಗವಹಿಸುವ ಸಾರ್ವಜನಿಕ ಸಮಾರಂಭಗಳಲ್ಲಿ ಹಿಂದೂ ಸಂಘಟನೆಗಳನ್ನು ನಿಂದಿಸಬೇಕು.
೭. ಹಿಂದೂಗಳ ಭಾವನೆಗಳನ್ನು ಕೆರಳಿಸುವಂತಹ ಲೇಖನಗಳು, ಗ್ರಂಥಗಳು, ಕವನಗಳನ್ನು ಬರೆದು, ಹೀನವಾಗಿ ನಿಂದಿಸಬೇಕು.
೮. ನಕ್ಸಲ್ ಸಂಘಟನೆ, ಎಲ್.ಟಿ.ಟಿ.ಇ. ಮುಂತಾದ ದೇಶವಿರೋಧಿ ಸಂಘಟನೆಗಳನ್ನು ಬಹಿರಂಗವಾಗಿ ಬೆಂಬಲಿಸಬೇಕು.
೯. ಯಾವುದೇ ದೇವಸ್ಥಾನಗಳಿಗೆ ಭೇಟಿಕೊಡದೆ, ಕೇವಲ ಮಸೀದಿ, ಚರ್ಚ್‌ಗಳಿಗೆ ಮಾತ್ರ ಭೇಟಿ ನೀಡಬೇಕು.
೧೦.ಆದಷ್ಟೂ ಮತಾಂತರಕ್ಕೆ ಪ್ರೋತ್ಸಾಹ ನೀಡಿ, ಮತಾಂತರಕ್ಕೆ ಬೆಂಬಲ ನೀಡಬೇಕು.

Wednesday, November 05, 2008

ಈ ತಮಿಳರಿಗೇನಾಗಿದೆ?

ಬೆಂಗಳೂರು ನವೆಂಬರ್ ೫ : ತಮಿಳುನಾಡಿನಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ, ಅಲ್ಲಿನ ಜನ ಪರೋಕ್ಷವಾಗಿ ಭಾರತದ ಸಂವಿಧಾನದ ಇರವನ್ನೇ ಪ್ರಶ್ನಿಸುವಂತಿದೆ. ಏಕೆಂದರೆ ಅವರು ಭಾರತದ ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ. ಭಾರತದ ಕಾನೂನಿಗೆ ಬೆಲೆ ಕೊಡುವುದಿಲ್ಲ. ಅಲ್ಲದೆ ಈ ದೇಶವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸರಕಾರವನ್ನೇ Blackmail ಮಾಡುವಷ್ಟು ಕೊಬ್ಬು, ದುರಹಂಕಾರ. ತನ್ನ ಬೇಳೆ ಬೇಯಿಸಿಕೊಳ್ಳಲು ಈ ದೇಶದ ಹಿತವನ್ನೇ ಬೇಕಾದರೂ ಬಲಿಕೊಡಲೂ ಹಿಂಜರಿಯದ ಸಂಕುಚಿತ ಮನಸ್ಥಿತಿ.
ಇತ್ತೀಚೆಗೆ ಮಲೇಶ್ಯಾದಲ್ಲಿ ಅಲ್ಲಿನ ಸರಕಾರ ಅನಧಿಕೃತವಾಗಿ ನಿರ್ಮಿಸಿದ ಕೆಲ ಹಿಂದೂ ದೇವಾಲಯಗಳನ್ನು ಕೆಡವಿದಾಗ, ಅಲ್ಲಿನ ಎಲ್ಲಾ ಜನಾಂಗದ (ಕನ್ನಡಿಗರು, ತೆಲುಗು, ಮರಾಠಿ ಎಂಬ ಬೇಧಭಾವವಿಲ್ಲದೆ) ಮಂದಿ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಆದರೆ ಇಲ್ಲಿ ಕರುಣಾನಿಧಿ ಎಂಬ ಅಧಮ ಮತ್ತು ಇಲ್ಲಿನ ತಮಿಳು ಜನ ಮಾತ್ರ, ಮಲೇಶ್ಯಾದಲ್ಲಿ ತಮಿಳರ ಮೇಲೆ ಹಲ್ಲೆ, ತಮಿಳರ ದೇವಳ ಕೆಡವಿದರು ಎಂಬುದಾಗಿ ಬೊಬ್ಬಿರಿದರು. ನೋಡಿ...ಇವರು ಹಿಂದೂಗಳು, ಭಾರತೀಯರೆಂದು ಒಪ್ಪಿಕೊಳ್ಳಲು ತಯಾರಿಲ್ಲ.
ಶ್ರೀಲಂಕಾದಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿರುವ ಅಲ್ಲಿನ ದೇಶದ್ರೋಹಿ ತಮಿಳು ಸಂಘಟನೆಯಾದ ಎಲ್.ಟಿ.ಟಿ.ಇ. ವಿರುದ್ಧ ಅಲ್ಲಿನ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಾಗ ಇಲ್ಲಿನ ಕೆಲವು (ಬಹುತೇಕ) ತಮಿಳರು ಅದನ್ನು ಪ್ರಬಲವಾಗಿ ವಿರೋಧಿಸಿ, ತಮಿಳರ ವಿರುದ್ಧ ಹಲ್ಲೆ ಎಂಬುದಾಗಿ ಬೊಬ್ಬಿರಿದರು. ಅದೂ ಸಾಲದೆಂಬಂತೆ ಜನರಿಂದ ಆರಿಸಲ್ಪಟ್ಟ ಜನಪ್ರತಿನಿಧಿಗಳೇ ಬಹಿರಂಗವಾಗಿ ಭಯೋತ್ಪಾದಕರ ಪರ ದನಿಯೆತ್ತಿದಾಗ ಯಾರೂ ಅದನ್ನು ವಿರೋಧಿಸದಿದ್ದುದು ನಮ್ಮ ದೇಶದ ದೊಡ್ಡ ದುರಂತ. ಅದೂ ಸಾಲದೆಂಬಂತೆ ಅಲ್ಲಿನ ಚಿತ್ರರಂಗದ ಮಂದಿ ಕೂಡಾ ಈ ಭಯೋತ್ಪಾದಕ ಸಂಘಟನೆಗೆ ಬೆಂಬಲ ಸಾರಿ ಒಂದು ದಿನದ ಉಪವಾಸ ಮುಷ್ಕರ ನಡೆಸಿದ್ದು ಅವರ ದೇಶದ್ರೋಹಿತನವನ್ನು ತೋರಿಸುತ್ತದೆ. ಶ್ರೀಲಂಕಾದ ಜನರ ನೆಮ್ಮದಿಯನ್ನು ಕೆಡಿಸಿರುವ ಈ ಎಲ್.ಟಿ.ಟಿ.ಇ. ಸಂಘಟನೆಗೆ ಬೆಂಬಲ ನೀಡಿದ ಈ ಮಂದಿಗೆ ಸ್ವಲ್ಪವಾದರೂ ಪರಿಜ್ಞಾನ ಇಲ್ಲದಿರುವುದು ಖೇದಕರ.
ಭಾರತದಲ್ಲಿ ಬಾಂಬ್ ಸ್ಪೋಟ ಮಾಡಿ ಸಾವಿರಾರು ಜನರ ಬಲಿತೆಗೆದುಕೊಂಡಿರುವ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೋಯ್ಬಾ ಮುಂತಾದ ಉಗ್ರವಾದಿಗಳಿಗೆ ಪಾಕಿಸ್ತಾನದ ಜನ ಬೆಂಬಲ ನೀಡಿದರೆ ನಮ್ಮ ಮನಸ್ಸಿಗೆ ಎಷ್ಟು ಘಾಸಿಯಾಗುತ್ತದೋ, ಅದೇ ರೀತಿ ಇಲ್ಲಿನ ಈ ತಮಿಳು ಜನ ಅಲ್ಲಿನ ಭಯೋತ್ಪಾದಕರಿಗೆ ಬೆಂಬಲನೀಡಿದರೆ, ಶ್ರೀಲಂಕಾದ ಜನತೆ ಭಾರತೀಯರನ್ನು ಕ್ಷಮಿಸಿಯಾರೇ?.