Monday, July 19, 2010

ಎಂ.ಇ.ಎಸ್ ಮತ್ತು ಶಿವಸೇನೆ ಎಂಬ ದೇಶದ್ರೋಹಿ ಸಂಘಟನೆಗಳು



ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕರ (ಎಂ.ಇ.ಎಸ್ ಮತ್ತು ಶಿವಸೇನೆ) ಗಲಭೆಯಲ್ಲಿ ಅಲ್ಲಿನ ಜನರಿಗೆ ತಾವು ಕಾಶ್ಮೀರದಲ್ಲಿ ಇರುವಂತೆ ಭಾಸವಾಗಿರುವುದರಲ್ಲಿ ಸಂಶಯವಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮುಸ್ಲಿಮ್ ಭಯೋತ್ಪಾದಕರ ಹಲ್ಲೆ, ದೊಂಬಿಗೆ ಹೆದರಿ ಅಲ್ಲಿಂದ ಕಾಲ್ಕಿತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅದೇ ರೀತಿ ಈ ಶಿವಸೇನೆ ಮತ್ತು ಎಂ.ಇ.ಎಸ್ ಎಂಬ ಭಯೋತ್ಪಾದಕ ಸಂಘಟನೆಗಳ ದೊಂಬಿಗೆ ಬೆಳಗಾವಿಯ ಕನ್ನಡ ಹಾಗೂ ಮರಾಠಿ ಮಂದಿ ತತ್ತರಗೊಂಡಿದ್ದಾರೆ.
ಇದುವರೆಗೂ ಸೋದರ ಭಾವನೆಯಿಂದ, ಶಾಂತವಾಗಿದ್ದ ಬೆಳಗಾವಿ ಈ ಭಯೋತ್ಪಾದಕರ ಹಿಡಿತಕ್ಕೆ ಸಿಕ್ಕು ಇಂದು ಮತ್ತೊಂದು ಕಾಶ್ಮೀರವಾಗಿದೆ. ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆ ಕೇವಲ ಮರಾಠಿಗಳು ಮಾತ್ರ ಹಿಂದುಗಳು ಎಂಬ ಸಂಕುಚಿತ ಭಾವನೆಯನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಶಿವಸೇನೆ ಇವತ್ತು ಎಂ.ಇ.ಎಸ್ ಎಂಬ ಮತ್ತೊಂದು ಭಯೋತ್ಪಾದಕ ಸಂಘಟನೆಯ ಜತೆ ಸೇರಿ ಕನ್ನಡಿಗರ ವಿರುದ್ದ ಕತ್ತಿ ಮಸೆಯುತ್ತಿರುವುದು ಶಾಂತಿಪ್ರಿಯರಾದ ಕನ್ನಡಿಗರನ್ನು ಕೆರಳಿಸಿದೆ.
ಬೆಳಗಾವಿಯಲ್ಲಿ ವಾಸಿಸುತ್ತಿರುವ ಮರಾಠಿಗಳೇ ಈ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿರುವುದು, ಈ ಭಯೋತ್ಪಾದಕ ಸಂಘಟನೆಗಳು ಮಹಾರಾಷ್ಟ್ರದಿಂದ ರೌಡಿಗಳನ್ನು ಕರೆದುಕೊಂಡು ಬಂದು ಇಲ್ಲಿ ಗಲಭೆ ಸೃಷ್ಟಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಸಂಘಟನೆಗಳಿಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೂ ನಂಟು ಇರುವ ಬಗ್ಗೆ ಕೂಲಂಕುಶ ತನಿಖೆ ನಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ಹಿಂದೂಗಳ ವಿರುದ್ದವೇ ಗಲಭೆ, ದೊಂಬಿ ಮಾಡುತ್ತಾರೆಂದರೆ ಈ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ನಂಟು ಇಲ್ಲದಿರಲು ಸಾಧ್ಯವಿಲ್ಲ.
ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾದ ಬಾಳಥಾಕ್ರೆ ಎಂಬ ಭಯೋತ್ಪಾದಕ ಈಗ ಮುಂಬೈನಲ್ಲಿ ತನ್ನ ನೆಲೆ ಕಳೆದುಕೊಂಡು ಈಗ ಬೆಳಗಾವಿಯಲ್ಲಿ ತನ್ನ ಹೀನ ಕೃತ್ಯ ಶುರು ಮಾಡಲು ತಯಾರಾಗಿದ್ದಾನೆ. ಇದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ನೋಡುತ್ತಿರುವ ಕರ್ನಾಟಕದ ಬಿ.ಜೆ.ಪಿ ಸರಕಾರ ಕನ್ನಡಿಗರ ವಿರುದ್ದ , ಕರ್ನಾಟಕದ ವಿರುದ್ದ ತನ್ನ ಬಹಿರಂಗ ಬೆಂಬಲವನ್ನು ಈ ಭಯೋತ್ಪಾದಕ ಸಂಘಟನೆಗಳಿಗೆ ನೀಡಿರುವುದು ಖಂಡನೀಯ.