Thursday, August 25, 2011

ದೇಶಕ್ಕೊಬ್ಬನೇ ಅಣ್ಣಾ....ಜನಲೋಕಪಾಲ್ ಮಸೂದೆ ಬೆಂಬಲಿಸಿ

ಅಣ್ಣಾ ಹಜಾರೆಯವರು ತಮ್ಮ ಸ್ವಾರ್ಥವನ್ನು ಬಿಟ್ಟು ದೇಶಕ್ಕಾಗಿ ನಿರಶನವನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಮ್ಮ ದೇಶದ ಒಬ್ಬ ನಾಲಾಯಕ್ ಪ್ರಧಾನಿ ಹಾಗೂ ಭ್ರಷ್ಟ ರಾಜಕಾರಣಿಗಳು ಇವತ್ತಿಗೆ ಹತ್ತು ದಿನವಾದರೂ ಈ ಬಗ್ಗೆ ಕಾಳಜಿ ವಹಿಸದಿರುವುದು ಈ ಕೇಂದ್ರ ಸರಕಾರದ ಜನಪರ ಕಾಳಜಿಯನ್ನು ತೋರಿಸುತ್ತದೆ.

ಒಬ್ಬ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರೆಷ್ಟು, ಹೋದರೆಷ್ಟು?. ಒಬ್ಬ ನಾಲಾಯಕ್ ಪ್ರಧಾನಿ ಈ ದೇಶದ ಜನರ ಬಗ್ಗೆ ಹೇಗೆ ತಾನೆ ಚಿಂತಿಸಿಯಾನು?. ಕೇಂದ್ರದ ಎಲ್ಲ ಭ್ರಷ್ಟ ಮಂತ್ರಿ ಹಾಗೂ ರಾಜಕಾರಣಿಗಳು ಇವತ್ತು ಒಬ್ಬ ಸಾಮಾನ್ಯ ಪ್ರಜೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುವಲ್ಲಿ ಮಗ್ನವಾಗಿದ್ದಾರೆ. ಎಲ್ಲ ಜನರು ಕೇಂದ್ರದ ಈ ಜನದ್ರೋಹಿ ನಡವಳಿಕೆಯನ್ನು ಖಂಡಿಸಬೇಕು. ಕೇಂದ್ರಸರಕಾರದ ಎಲ್ಲ ರಾಜಕಾರಣಿಗಳು ಇವತ್ತು ಸ್ವಿಸ್ ಬ್ಯಾಂಕ್ ನಲ್ಲಿ ತಾವು ಇಟ್ಟಿರುವ ಹಣದ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಮಾಮೂಲಿ ಜನರ ಸಮಸ್ಯೆಯನ್ನು ಆಲಿಸಲು ಅವರಿಗೆ ಸಮಯವಿಲ್ಲ.

ಅಣ್ಣಾ ಹಜಾರೆಯವರು ಹತ್ತು ದಿನದಿಂದ ಉಪವಾಸ ಹೇಗೆ ಇದ್ದಾರೆ ಎಂಬುದೇ ಅಚ್ಚರಿಯ ವಿಷಯ. ಒಂದು ದಿನ ಉಪವಾಸ ಇದ್ದರೆ ನಮಗೆ ತಡೆಯಲು ಸಾಧ್ಯವಿಲ್ಲದಿರುವಾಗ, ಅವರ ಸ್ಥೈರ್ಯವನ್ನು ಮೆಚ್ಚಲೇಬೇಕು. ಎಲ್ಲರೂ ಅಣ್ಣಾ ಹಜಾರೆಯವರನ್ನು ಬೆಂಬಲಿಸಿ. ಎಲ್ಲ ಸಂಸದರ ಮನೆಯ ಮುಂದೆ ಧರಣಿ ನಡೆಸಿ, ಪ್ರಬಲ ಜನಲೋಕಪಾಲ ಮಸೂದೆಯ ಜಾರಿಗೆ ಬೆಂಬಲಿಸಿ. ಜೈ ಹಿಂದ್....

1 comment:

Unknown said...

please visit us
http://antechno.com