ಬೆಂಗಳೂರು ಸೆಪ್ಟೆಂಬರ್ ೧೪: ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ "ಅಕ್ಕ" ಸಮ್ಮೇಳನ ಎಲ್ಲ ಕನ್ನಡಿಗರಿಗೆ ಒಂದು ಸಂತೋಷದಾಯಕ ವಿಚಾರ. ಅಮೆರಿಕಾದಲ್ಲಿ ನೆಲೆಸಿದ್ದರೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಈ ಮಂದಿಗೆ ನನ್ನ ಸಲಾಂ.
ಆದರೆ ಇನ್ನೊಂದು ತಲೆತಗ್ಗಿಸುವ ವಿಚಾರ ಇಲ್ಲಿ ನಮ್ಮ ಗ್ರೇಟ್ ರಾಜಕಾರಣಿಗಳು ಮಾಡಿದ್ದಾರೆ. "ಜನಾರ್ಧನ ರೆಡ್ಡಿ ಕೃಪಾಪೋಷಿತ ನಾಟಕ ಮಂಡಳಿ"ಯ ಕೆಲ ರಾಜಕಾರಣಿಗಳು ಈ ಅಕ್ಕ ಸಮ್ಮೇಳನ ನೆಪದಲ್ಲಿ ಸರಕಾರೀ ಖರ್ಚಿನಲ್ಲಿ ಒಂದು ವಾರ ಮಜಾ ಮಾಡಿ ಬಂದಿದ್ದು, ಇವರಿಗೆ ತಮ್ಮ ತಾಯಿನಾಡಿನ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಇದೂ ಅಲ್ಲದೆ "ಕನ್ನಡ"ದ ವಿಚಾರದಲ್ಲಿ ಗೋಮುಖ ವ್ಯಾಘ್ರನಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಕೂಡಾ ಏನೂ ಮಾಡದ ಅಸಹಾಯ ಪರಿಸ್ಥಿತಿಯಲ್ಲಿರುವುದು ಅತ್ಯಂತ ಹೀನ ಸ್ಥಿತಿಯಾಗಿದೆ. ಪ್ರಧಾನಿ ಮನಮೋಹನ ಸಿಂಗ್ ಯಾವ ರೀತಿ ರಿಮೋಟ್ ಕಂಟ್ರೋಲ್‌ನಿಂದ (ಸೋನಿಯಾ) ಕೆಲಸ ಮಾಡುತ್ತಿರುವರೋ ಅದೇರೀತಿ ಇಲ್ಲಿ ಯೆಡಿಯೂರಪ್ಪ ಕೂಡಾ ಕನ್ನಡ ವಿರೋಧಿಗಳಾದ, ಗಣಿ ಲೂಟಿಕೋರರಾದ ರೆಡ್ಡಿ ಸಹೋದರರಿಂದ ರಿಮೋಟ್ ಕಂಟ್ರೋಲ್‍ನಿಂದ ಆಡಿಸಲ್ಪಡುತ್ತಿದ್ದಾರೆ. ಅಯ್ಯೋ ಪಾಪ ನಮ್ಮ ಕರ್ನಾಟಕಕ್ಕೆ ಇಂಥಹ ದೈನೇಸಿ ಪರಿಸ್ಥಿತಿ ಬರಬಾರದಿತ್ತು.
ಅನೇಕ ಮಂದಿ ಕನ್ನಡದ್ರೋಹಿ, ಕನ್ನಡವಿರೋಧಿ ಐ.ಎ.ಎಸ್ ಅಧಿಕಾರಿಗಳು, ರಾಜಕಾರಣಿಗಳು ಕನ್ನಡ ಸಮ್ಮೆಳನದ ನೆಪದಲ್ಲಿ ಭರ್ಜರಿಯಾಗಿಯೇ ಖಜಾನೆ ಲೂಟಿ ಮಾಡಿದ್ದಾರೆ. ಅಲ್ಲಾರೀ...ಕನ್ನಡ ಬರೆಯಲು, ಓದಲು, ಮಾತನಾಡಲು ಬಾರದ ಈ ಮಂದಿಗೆ ಕನ್ನಡ ಸಮ್ಮೇಳನದಲ್ಲಿ ಏನು ಕೆಲಸ?. ಕರ್ನಾಟಕದಲ್ಲಿ ನೆಲೆಸದ, ಇಲ್ಲಿನ ಭಾಷೆ, ಸಂಸ್ಕೃತಿಯ ಗಂಧ ಗಾಳಿಯಿಲ್ಲದ ಕೆಲ ಮಂದಿ ಈ ರೆಡ್ಡಿ ಸಹೋದರರ ಮಸಲತ್ತಿನಿಂದ ಭರ್ಜರಿಯಾಗಿಯೇ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಒಂದು ಲೆಕ್ಕದಲ್ಲಿ ಮಜಾ ಮಾಡಿ ಬಂದಿದ್ದಾರೆ. ಇಂಥ ಮಂದಿಗೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದರೂ ಕಮ್ಮಿಯೇ.
ಆದರೆ ನಮ್ಮ ಮುಖ್ಯಮಂತ್ರಿಗೆ ಬುದ್ದಿ ಇಲ್ಲವೆ?. ಬುದ್ದಿ ಇದೆ ಆದರೆ ತನ್ನ ಕೈಯಲ್ಲಿ ಇಲ್ಲ ಅಂತ ಕಾಣುತ್ತದೆ. ಎಲ್ಲ ರೆಡ್ಡಿ ಸಹೋದರರಿಗೆ ಮಾರಿಕೊಂಡಿದ್ದಾರೆ. ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಮಂದಿ ಅಮೆರಿಕಾದಲ್ಲಿ ನಮ್ಮ ಸಹೋದರರು ಆಚರುತ್ತಿರುವ ಅಕ್ಕ ಸಮ್ಮೇಳನದಲ್ಲಿ ಹೇಸಿಗೆ ಚೆಲ್ಲಿ ಬಂದಿದ್ದಾರೆ. ಕೇವಲ ಮಜಾ ಮಾಡುವ ನೆಪದಲ್ಲಿ ನಮ್ಮ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಅಸಹ್ಯ ಭಾವನೆ ಉಂಟುಮಾಡಿದ್ದಾರೆ.
ಅಕ್ಕ ಸಮ್ಮೇಳನದ ರೂವಾರಿಗಳಲ್ಲಿ ನನ್ನ ಕಳಕಳಿಯ ವಿನಂತಿ.....ದಯವಿಟ್ಟು ಇನ್ನು ಮುಂದೆ ನಮ್ಮ ರಾಜ್ಯದ ಯಾವುದೇ ರಾಜಕಾರಣಿಗಳನ್ನು ನಿಮ್ಮ ಸಮ್ಮೇಳನಕ್ಕೆ ಕರೆಯಬೇಡಿ. ಕನ್ನಡದ ಬಗ್ಗೆ ಕಾಳಜಿ ಇರುವ ಒಬ್ಬ ಸಾಮಾನ್ಯ ಮನುಷ್ಯನನ್ನು ಈ ಸಮ್ಮೆಳನಕ್ಕೆ ಕರೆಯಿರಿ. ಪ್ರತೀ ಬಾರಿ ಈ ಹೇಸಿಗೆ ರಾಜಕಾರಣಿಗಳಿಂದ ಸಮ್ಮೇಳನ ಮಲಿನ ಮಾಡುವುದಕ್ಕಿಂತ ಕನ್ನಡದ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಮಂದಿಗೆ ಸನ್ಮಾನ ಮಾಡಿ. ಈ ರಾಜಕಾರಣಿಗಳಿಂದ ದಯವಿಟ್ಟು ಚಂದಾ ಮಾತ್ರ ವಸೂಲು ಮಾಡಿ. ಈ ರಾಜಕಾರಣಿಗಳು ಬರದಿದ್ದಲ್ಲಿ ಸಮ್ಮೇಳನಕ್ಕೆ ಯಾವುದೇ ಚ್ಯುತಿ ಇರಲಾರದು.
"ಮಾನ್ಯ ಯೆಡಿಯೂರಪ್ಪನವರೇ ಎಲ್ಲಿ ಹೋಯಿತು ನಿಮ್ಮ ಕನ್ನಡದ ಕಾಳಜಿ?. ಅಧಿಕಾರ ಬಂದರೆ ಎಲ್ಲರೂ ಒಂದೇ ಎಂಬುದನ್ನು ಸಾಬೀತು ಮಾಡಿ ಬಿಟ್ಟಿರಿ" ಕನ್ನಡ ತಾಯಿಗೆ, ಕನ್ನಡಿಗರಿಗೆ ಅವಮಾನ ಮಾಡುವ ನಿಮ್ಮಂತಹ ಮುಖ್ಯಮಂತ್ರಿಗಳು ನಮಗೆ ಬೇಕಾಗಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಿಸುವ ನಿಮ್ಮ ಜವಾಬ್ದಾರಿ ಏನಾಯಿತು?. ಹೊಗೇನಕಲ್ ವಿವಾದದ ಬಗ್ಗೆ ಯಾಕೆ ಮೌನ?. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾಕೆ ಕಣ್ಣು ಮುಚ್ಚಿದ್ದೀರಿ?. ಐದು ವರ್ಷ ಶಿಖಂಡಿ ತರಹ ಅಧಿಕಾರ ಮಾಡುವುದಕ್ಕಿಂತ ಒಂದು ದಿನ ವೀರ ಪುರುಷನ ತರಹ ಅಧಿಕಾರ ನಡೆಸಿ. ನಿಮ್ಮ ಗೌರವ ಹೆಚ್ಚಾಗುತ್ತದೆ. ಇಲ್ಲಾ, ಮುಂದೆ ಧರಂ ಸಿಂಗ್ ಮೂಲೆಗುಂಪಾದ ಗತಿಯೇ ನಿಮಗೆ ಕಾದಿದೆ.
Subscribe to:
Post Comments (Atom)
1 comment:
ಇಂಥಹ ರಾಜಕಾರಣಿಗಳನ್ನು ಎಡಗಾಲಲ್ಲಿ ಒದ್ದು, ಕರ್ನಾಟಕದಿಂದ ಹೊರಹಾಕಬೇಕು. ಕಾಂಗ್ರೆಸ್ ಏಜೆಂಟರಾದ ಈ ರೆಡ್ಡಿ ಸಹೋದರರನ್ನು ಬಿ.ಜೆ.ಪಿ. ಇಂದು ನೆಚ್ಚಿಕೊಂಡಿರುವುದು ಅದರ ಶಿಖಂಡಿತನವನ್ನು ತೋರಿಸುತ್ತದೆ. ಈ ಸರಕಾರ ಐದು ವರ್ಷ ಬಾಳಿದರೂ, ಜನ ಮಾತ್ರ ಭ್ರಮನಿರಸನ ಹೊಂದುವುದನ್ನು ತಪ್ಪಿಸಲು ಸಾಧ್ಯವಿಲ್ಲ.
Post a Comment