Sunday, November 16, 2008

ಅಡಿಗನ ಬಿಳಿ ಹುಲಿ

ಬೆಂಗಳೂರು ನವೆಂಬರ್ ೧೬: ಇತ್ತೀಚೆಗೆ ೨೦೦೮ರ ಬೂಕರ್ ಪ್ರಶಸ್ತಿ ಪಡೆದ "ಕನ್ನ"ಡಿಗ ಅರವಿಂದ ಅಡಿಗ ಎಂಬ ಭಾರತ ವಿರೋಧಿಗೆ ಧಿಕ್ಕಾರ ಹೇಳುತ್ತಾ ಮುಂದುವರಿಯೋಣ. ಈ ಬೂಕರ್ ಪ್ರಶಸ್ತಿ ಎಂದರೆ Commonwealth Nation ಹಾಗೂ Ireland ವಾಸಿಯ ಆಂಗ್ಲ ಪ್ರಬಂಧಕ್ಕೆ ಸಿಗುವ ಪ್ರಶಸ್ತಿ. ಆದರೆ ಇದರ ಮಾನದಂಡದ ಬಗ್ಗೆ ಅನೇಕ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತದೆ.
ಅಂದರೆ ಇತ್ತೀಚೆಗೆ ಭಾರತಕ್ಕೆ ಬಂದಿರುವ ಬೂಕರ್ ಪ್ರಶಸ್ತಿಗಳ ಪ್ರಬಂಧಗಳನ್ನು ಗಮನಿಸಿದಾಗ ಅದರ ಅಂತರಾಳ ಭಾರತ ವಿರೋಧಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಅಂದ ಮೇಲೆ ಈ ಅರವಿಂದ ಅಡಿಗ ಎಂಬ ತರ್ಲೆ ಭಾರತ ವಿರೋಧಿ ಲೇಖನ ಬರೆದು ಪ್ರಶಸ್ತಿ ಗಿಟ್ಟಿಸಿರುವುದು ಆಶ್ಚರ್ಯದ ವಿಷಯವೇನಲ್ಲ. ನಾಳೆ ಯಾವ ತಿರುಕನೂ ಪ್ರಬಲ ಭಾರತ ವಿರೋಧಿ ಲೇಖನ ಬರೆದು ಈ ಪ್ರಶಸ್ತಿ ತನ್ನದಾಗಿಸಿಕೊಳ್ಳಬಹುದು. ಆದರೆ ಪ್ರಶಸ್ತಿ ಸಿಕ್ಕಿದಾಗ ಎಲ್ಲರೂ ಬಹಳ ಖುಶಿಯಿಂದ ಕುಣಿದಿದ್ದರು...ಒಬ್ಬ ಕನ್ನಡಿಗನಿಗೆ ಈ ಪ್ರಶಸ್ತಿ ಬಂದಿದೆ ಎಂದು. ಆದರೆ ಈಗ ಎಲ್ಲ ಕನ್ನಡಿಗರೂ ತಲೆತಗ್ಗಿಸುವಂತಾಗಿರುವುದು ನಮ್ಮ ದುರ್ದೈವ. ಒಬ್ಬ ಮಂಗಳೂರಿನ ಬ್ರಾಹ್ಮಣನಾಗಿ ಈ ಥರಾ ಭಾರತದ ವಿರುದ್ಧ ಲೇಖನ ಬರೆದಿರುವ ಇವನ ದೇಶಭಕ್ತಿ(????)ಯನ್ನು ಮೆಚ್ಚಬೇಕಾದ್ದೇ. ಅರುಂಧತಿರಾಯ್ ಅವರ The God of small Things ಇರಬಹುದು, ಈ ಅಡಿಗನ The White Tiger ಇರಬಹುದು ಇವುಗಳ ಜೀವಾಳವೇ ಭಾರತ ವಿರೋಧದಿಂದ ತುಂಬಿ ತುಳುಕಾಡುತ್ತಿದೆ. ಇಂತಹ ಪ್ರಬಂಧಗಳಿಗೆ ಪ್ರಶಸ್ತಿ ಕೊಡುವವರು ಭಾರತ ವಿರೋಧಿಗಳೇ ಅಗಿದ್ದಾರೆ. ಅಂದರೆ ಅದರ ಮೂಲ ಬ್ರಿಟನ್ (ಒಂದು ಕಾಲದ ನಮ್ಮನ್ನು ಆಳಿದವರು).
ಅದೂ ಅಲ್ಲದೆ ಈ ಅಡಿಗ ತನಗೆ ಸಿಕ್ಕಿದ ಪ್ರಶಸ್ತಿಯ ಹಣವನ್ನು ತಾನು ಕಲಿತ ಶಾಲೆಗೆ ದಾನ ಮಾಡಿದ್ದು ಮತ್ತೊಂದು ತಪ್ಪು ಹೆಜ್ಜೆ. ಅಂದರೆ ಮತಾಂತರಕ್ಕೆ ಕುಮ್ಮಕ್ಕು ನೀಡುವ ಕ್ರಿಶ್ಚಿಯನ್ ಶಾಲೆಗೆ ಈ ಹಣವನ್ನು ದಾನ ಮಾಡಿ ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾನೆ. ಇದೇ ಹಣವನ್ನು ತಾನು ತೆಗಳಿದ ಭಾರತದ ಭಿಕ್ಷುಕರಿರಬಹುದು ಅಥವಾ ಬಡವ ಬಲ್ಲಿದರಿರಬಹುದು, ಅವರಿಗೆ ದಾನ ಮಾಡಬಹುದಿತ್ತಲ್ಲ?.

1 comment:

Anonymous said...

ಬುದ್ದಿಜೀವಿಗಳಾಗುವ ಹಂಬಲದಲ್ಲಿ ದೇಶದ್ರೋಹಿಯಾದರೂ ಪರವಾಗಿಲ್ಲ...ಪ್ರಶಸ್ತಿ ಪಡೆದು..ಅಂತರ್‌ರಾಷ್ಟ್ರೀಯ ಭಯೋತ್ಪಾದಕನಾಗುವ ಆಸೆ....ಇವರಿಗೆಲ್ಲ