Thursday, June 19, 2008

ಮೀಸಲಾತಿಗೆ ಕೊನೆ ಇಲ್ಲವೇ?ಎಲ್ಲಿದೆ ಸ್ವಾತಂತ್ರ್ಯ??????


ಬೆಂಗಳೂರು ಜೂನ್ 19: ಮೀಸಲಾತಿ ಎನ್ನುವುದು ನಮ್ಮ ದೇಶವನ್ನು ಪೆಡಂಭೂತದ ಹಾಗೆ ಕಾಡುತ್ತಿದೆ. ಇದೊಂದು ರಾಷ್ಟ್ರೀಯ ದುರಂತ.ರಾಜಸ್ಥಾನದಲ್ಲಿ ನಡೆದ ಗುಜ್ಜರ್ ಸಮುದಾಯದ ಪ್ರತಿಭಟನೆ, ಹಿಂಸಾಕೃತ್ಯ ನಮ್ಮ ದೇಶ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆ.
ಎಲ್ಲಾ ಸರಕಾರೀ ನೌಕರಿಯಲ್ಲಿ ದಲಿತರು, ಹಿಂದುಳಿದ ಜನ, ಬುಡಕಟ್ಟಿನ ಜನರಿಗೆ ಗರಿಷ್ಟ ಮೀಸಲಾತಿ ನೀಡಿ ಸರಕಾರಿ ನೌಕರಿಯನ್ನು ಕೆಲಸಕ್ಕೆ ಬಾರದ ಉದ್ಯೋಗವಾಗಿ ಮಾಡಿಹಾಕಿದ್ದಾರೆ ಈ ರಾಜಕಾರಣಿಗಳು. ಇಲ್ಲಿ ನಮಗೆ ಆಯ್ಕೆಯ ಸ್ವಾತಂತ್ರ್ಯ ಇಲ್ಲ.
ಚುನಾವಣೆಯಲ್ಲಿ ಸ್ಪರ್ಧಿಸೋಣವೆಂದರೆ ಇಲ್ಲೂ ಮೀಸಲಾತಿ, ಅನೇಕ ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳೆಂದು ಘೋಷಿಸಿ ಇಲ್ಲಿ ಯಾವುದೇ ಮುಂದುವರಿದ ವರ್ಗದ ಜನ ಸ್ಪರ್ಧಿಸದಂತೆ ನಿಷೇಧ ಹೇರಲಾಗಿದೆ. ಎಲ್ಲಿದೆ ನಮಗೆ ಸ್ವಾತಂತ್ರ್ಯ?
ಇನ್ನು ವಿದ್ಯಾಭಾಸದಲ್ಲೂ ಸ್ವಾತಂತ್ರ್ಯ ಇಲ್ಲ. ನಮ್ಮ ಆಯ್ಕೆಯ ಶಿಕ್ಷಣ ಸ್ವಾತಂತ್ರ್ಯವನ್ನು ಕೂಡ ಇಲ್ಲಿ ಕಸಿದುಕೊಳ್ಳಲಾಗಿದೆ. ನೀವು ಇ಼ಚ್ಚೆ ಪಟ್ಟ ವಿಷಯವನ್ನು ಆರಿಸಿಕೊಳ್ಳುವಂತಿಲ್ಲ. ನಿಮಗೆ ಸಿಕ್ಕಿದರೆ ಅದು ಪುಣ್ಯ. ಎಲ್ಲಿದೆ ಆಯ್ಕೆ ಸ್ವಾತಂತ್ರ್ಯ?
ನಮಗೆ ಬೇಡವಾದ, ನಾಲಾಯಕ್ ವ್ಯಕ್ತಿಗಳು ಇಂದು ರಾಷ್ಟ್ರಪತಿ, ಪ್ರಧಾನಿ ಹುದ್ದೆಯಲ್ಲಿ ಇದ್ದಾರೆ. ಅವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿಲ್ಲ. ಇವರಿಬ್ಬರಿಂದ ನಮ್ಮ ದೇಶದ ಮಾನ ಹರಾಜಾಗುತ್ತಿದೆ. ಎಲ್ಲಿದೆ ನಮಗೆ ಸ್ವಾತಂತ್ರ್ಯ?
ಯಾವುದೇ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ (ನಿಜ ಸಂಗತಿ)ಬರೆಯಲು ಸ್ವಾತಂತ್ರ್ಯವಿಲ್ಲ, ಹೇಳಲು ಸ್ವಾತಂತ್ರ್ಯವಿಲ್ಲ. ಇದಕ್ಕೆ ಮಾನನಷ್ಟ ಮೊಕದ್ದಮೆ ಎಂಬ ಬ್ರಹ್ಮಾಸ್ತ್ರ ಬೇರೆ. ಎಲ್ಲಿದೆ ಸ್ವಾತಂತ್ರ್ಯ?
ಹೇಳುತ್ತಾ ಹೋದರೆ...ನಮ್ಮ ಭಾರತದಲ್ಲಿ ಸ್ವಾತಂತ್ರ್ಯದ ಕೊರತೆ ಇದೆ. ಯಾವುದಕ್ಕೂ ಸ್ವಾತಂತ್ರ್ಯವಿಲ್ಲ, ಇಂತಹ ದರಿದ್ರ ದೇಶದಲ್ಲಿ ನಾವಿದ್ದೇವೆ. ನನಗನಿಸುತ್ತದೆ, ಬ್ರಿಟಿಷರ ಕಾಲದಲ್ಲೇ ನಮಗೆ ಕೆಲ ಸ್ವಾತಂತ್ರ್ಯಗಳಿದ್ದವು. ಈ ದೇಶದಲ್ಲಿ ಪ್ರತಿಭೆಗಳಿಗೆ ಗೌರವವಿಲ್ಲ, ಕೆಲಸವಿಲ್ಲ. ವಿದ್ಯಾಭ್ಯಾಸಕ್ಕೂ ಸುಮಾರು ಅಡ್ಡಿ, ಆತಂಕಗಳು....ಆದರೆ ಅಮೆರಿಕಾ, ಜಪಾನ್, ಇಂಗ್ಲೆಂಡ್ ಗಳಲ್ಲಿ ಪ್ರತಿಭೆಗೆ ಬೆಲೆ ಕೊಡುತ್ತಾರೆ. ಅಲ್ಲದೆ ಅವರ ವಿದ್ಯೆಗೆ ತಕ್ಕ ಕೆಲಸ, ಸಂಬಳ ದೊರೆಯುತ್ತದೆ. ಆದರೆ ಈ ದೇಶದಲ್ಲಿ ನೀವು ಆ ಥರಾ ಇರಬೇಕೆಂದಲ್ಲಿ ಒಂದೋ ನೀವು ಹಿಂದುಳಿದ ವರ್ಗದಲ್ಲಿ ಜನಿಸಿರಬೇಕು ಇಲ್ಲವೇ ಲಂಚ ಕೊಡಲು ರೆಡಿ ಇರಬೇಕು ಇಲ್ಲವೇ ಯಾವುದಾದರೂ ರಾಜಕಾರಣಿಗಳ ಸಂಬಂಧ ಇರಬೇಕು.ಹಾಗಾದರೆ ಮಾತ್ರ ನಿಮಗೆ ಒಳ್ಳೆಯ ಕೆಲಸ ಸಿಗಲು ಸಾಧ್ಯ ಈ ದೇಶದಲ್ಲಿ.
ಒಟ್ಟಲ್ಲಿ ಮುಂದುವರಿದ ಜಾತಿಗಳಾದ ಬ್ರಾಹ್ಮಣರಂತೂ ಈ ದೇಶದಲ್ಲಿ ಭಿಕಾರಿಗಳಾಗಿದ್ದಾರೆ. ಅವರಿಗೆ ಯಾವ ಸವಲತ್ತೂ ಈ ಸರಕಾರಗಳಿಂದ ಸಿಗುತ್ತಿಲ್ಲ. ತೆರಿಗೆ ಮಾತ್ರ ಅವರಿಂದ ಕಸಿದುಕೊಳ್ಳುವ ಸರಕಾರಗಳು ಬ್ರಾಹ್ಮಣ ಜಾತಿಯಲ್ಲೂ ಬಡ ಜನರಿದ್ದರೂ ಅವರ ಉದ್ದಾರಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಈ ದೇಶಕ್ಕೆ ಖಂಡಿತಾ ಭವಿಷ್ಯವಿಲ್ಲ. ನಾನಂತೂ ಯಾವುದಾದರೂ ದೇಶಕ್ಕೆ ಹೋಗಿ ಸೆಟ್ಲ್ ಆಗುವ ನಿರ್ಧಾರ ಮಾಡಿದ್ದೇನೆ. ಆದರೆ ಅದಕ್ಕೂ ಹಣಬೇಕು. ಯಾರಾದರೂ ಸಹಾಯ ಮಾಡಿದಲ್ಲಿ ಖಂಡಿತಾ ಈ ದೇಶ ಬಿಟ್ಟು ಯಾವುದಾದರೂ ದೇಶದಲ್ಲಿ ನೆಲೆಸುವ ಹಾಗೂ ಮತ್ತೆಂದೂ ಈ ದೇಶದ ಕಡೆ ತಲೆ ಹಾಕಿ ಕೂಡಾ ನೋಡದಿರುವ ನಿರ್ಧಾರ ಮಾಡಿರುವೆ. ಇಲ್ಲಿನ ತೆರಿಗೆಗಳು, ದಿನೇ ದಿನೇ ಏರುತ್ತಿರುವ ಬೆಲೆಗಳು, ಕಡಿಮೆ ಸಂಬಳ, ಇಲ್ಲಿನ ಅಭದ್ರತೆ ಇವೆಲ್ಲಾ ನೋಡಿದರೆ ಆಸ್ಟ್ರೇಲಿಯಾದಂತಹ ರಾಷ್ಟ್ರಗಳು ಎಷ್ಟೋ ಉತ್ತಮ ಎನಿಸುತ್ತವೆ.
ಈ ದೇಶದ ದರಿದ್ರ ರಾಜಕಾರಣಿಗಳಲ್ಲಿ ಒಂದು ವಿನಂತಿ, ನೀವು ಮುಂದುವರಿದ ವರ್ಗಕ್ಕೆ ಸಹಾಯ ಮಾಡಲಾಗದಿದ್ದಲ್ಲಿ ಒಂದು ಸಹಾಯ ಮಾಡಬಹುದಲ್ಲಾ?. ಏಷ್ಟೋ ಜನ ಈ ದೇಶ ಬಿಟ್ಟು ಬೇರೆ ದೇಶದಲ್ಲಿ ನೆಲೆಸುವ ಬಗ್ಗೆ ಯೋಚನೆ ಮಾಡಿರುತ್ತಾರಲ್ಲಾ, ಅವರಿಗೆ ಕನಿಷ್ಟ ಈ ದೇಶ ಬಿಟ್ಟು ಹೋಗಿ, ಬೇರೆ ದೇಶದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟರೆ ಅದರಷ್ಟು ದೊಡ್ಡ ಉಪಕಾರ ಬೇರೆ ಇಲ್ಲವೆಂದು ತೋರುತ್ತದೆ.

No comments: