ಬೆಂಗಳೂರು ಜುಲೈ ೨೭:
ಶುಕ್ರವಾರ ಹಾಗೂ ಶನಿವಾರ ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲಿ ನಡೆದ ಬಾಂಬ್ ಸ್ಫೋಟ ಖಂಡನೀಯ ಹಾಗೂ ಒಂದು ರಾಕ್ಷಸೀ ಕೃತ್ಯವಾಗಿದೆ. ಅದೂ ಅಲ್ಲದೆ ಭಾರತದಲ್ಲಿ ನಡೆದ ಪ್ರತೀ ಸ್ಫೋಟಗಳೂ ಶುಕ್ರವಾರ, ಶನಿವಾರದಂದೇ ಆಗಿರುವುದು ವಿಶೇಷ. ಇದರ ಹಿಂದಿನ ಕಾಣದ ಕೈಗಳ ಕೈವಾಡವನ್ನು ಪತ್ತೆ ಹಚ್ಚಿ, ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು.
ಇನ್ನೊಂದು ವಿಚಿತ್ರ ವಿಷಯವೆಂದರೆ ಬಾಂಬ್ ಸ್ಫೋಟ ನಡೆದಿರುವುದು ಕೇವಲ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ. ಇದು ಮೇಲ್ನೋಟಕ್ಕೆ ಈ ಸರಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರವೆಂದು ಯಾರು ಬೇಕಾದರೂ ಹೇಳಬಹುದು.ಇದನ್ನೂ ಕೂಡ ಕೇವಲ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಕೆಲವು ರಾಜಕಾರಣಿಗಳ ತಿಕ್ಕಲುತನವನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿ ನಡೆದಿರುವ ಸ್ಫೋಟಕ್ಕೆ ಸ್ಥಳೀಯ ರಾಜಕಾರಣಿಗಳು ಹಾಗೂ ಸ್ಥಳೀಯ ಜನರ ಬೆಂಬಲ ಇರುವುದಂತೂ ಖಂಡಿತಾ ಸತ್ಯ. ಇದು ಯು.ಪಿ.ಎ. ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಭಾರತೀಯ ಜನತಾ ಪಕ್ಷ ಜಾರಿಗೆ ತಂದಿದ್ದ ಟಾಡಾ, ಪೋಟಾ ಮುಂತಾದ ಕಾಯಿದೆಗಳನ್ನು ರದ್ದು ಮಾಡಿರುವುದು ಭಯೋತ್ಪಾದಕರ ಪರ ತನ್ನ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಈಗ ಭಯೋತ್ಪಾದಕತೆಯನ್ನು ತನ್ನ ಕೀಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಯು.ಪಿ.ಎ ಹಾಗೂ ಎಡಪಕ್ಷಗಳ ಹೀನ, ಕೀಳು ಪ್ರವೃತ್ತಿಯನ್ನು ತೋರಿಸುತ್ತದೆ. ಓಟಿಗಾಗಿ ಈ ದೇಶವನ್ನು ಮಾರಲೂ ಹಿಂಜರಿಯದ ಈ ಕಾಂಗ್ರೆಸ್ಸ್, ಎಡಪಕ್ಷಗಳು ಇಂದು ಭಾರತ ದೇಶವನ್ನು ಅಸ್ಥಿರತೆ, ಭಯೋತ್ಪಾದಕತೆ, ಅರಾಜಕತೆಯಿಂದ ಬಳಲುವಂತೆ ಮಾಡಿವೆ.
ಈ ದೇಶದ ಜನ, ರಾಜಕಾರಣಿಗಳು, ಸರಕಾರ, ನ್ಯಾಯಾಲಯಗಳು ಇಂದು ಎಚ್ಚೆತ್ತುಕೊಳ್ಳಬೇಕಾಗಿದೆ, ಇಂತಹ ಸ್ಫೊಟಗಳ ಹಿಂದಿನ ದುಷ್ಟ ಶಕ್ತಿಗಳನ್ನು ಕಂಡುಹಿಡಿದು ಅವರನ್ನು ಗಲ್ಲಿಗೇರಿಸಿದರೆ ಮಾತ್ರ ಮುಂದೆ ಇಂತಹ ಕೃತ್ಯಗಳು ಮರುಕಳಿಸಲಾರದೇನೋ. ಆದರೆ ಬರೇ ಓಟಿಗಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಜಾತ್ಯಾತೀತ(???) ಪಕ್ಷಗಳು ಇಂದು ಇದರ ಫಲವನ್ನು ಈ ರೀತಿಯಾಗಿ ಅನುಭವಿಸಬೇಕಾಗಿದೆ. ಒಂದು ನುಡಿಯೇ ಇದೆ. "All muslims are not terrorists......But All Terrorists are Muslims". (ಆದರೆ L.T.T.E ಮುಂತಾದ ಭಾರತೀಯ ಭಯೋತ್ಪಾದಕರು ಮಾತ್ರ ಇದಕ್ಕೆ ಅಪವಾದ).
ಈ ಸ್ಫೋಟಗಳು ಖಂಡಿತಾ ಬಿ.ಜೆ.ಪಿ. ಸರಕಾರವನ್ನು ಅಸ್ಥಿರಗೊಳಿಸಲು ನಡೆಸಿದ ಒಂದು ಕೃತ್ಯ ಹಾಗೂ ಇದರಲ್ಲಿ ಖಂಡಿತಾ ಕೆಲವು ದೇಶದ್ರೋಹಿ ಸಂಘಟನೆಗಳ ಕೈವಾಡ ಇರುವುದು ಸ್ಪಷ್ಟ. ಈಗ ಕರ್ನಾಟಕ ಸರಕಾರ ಎಚ್ಚೆತ್ತುಕೊಂಡು, ಕರ್ನಾಟಕದಲ್ಲಿ ಸಕ್ರಿಯವಾಗಿರುವ ಕೆಲವು ಜನದ್ರೋಹಿ, ದೇಶದ್ರೋಹಿ, ಕರ್ನಾಟಕ ದ್ರೋಹಿ ಸಂಘಟನೆಗಳ ನಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಕೆಲವು ಮಾಹಿತಿಗಳು ಸಿಗಬಹುದು. ಆದರೆ ಕರ್ನಾಟಕದಲ್ಲಿ ನಡೆದಿರುವ ಕೃತ್ಯಗಳ ಹಿಂದೆ ತಮಿಳು ಸಂಘಟನೆಗಳ ಕೈವಾಡವನ್ನು ಕೂಡಾ ತಳ್ಳಿಹಾಕುವಂತಿಲ್ಲ. ಏಕೆಂದರೆ ಈಗಾಗಲೇ ಹೊಗೆನಕಲ್ ವಿವಾದ ಹೊಗೆಯಾಡುತ್ತಿರುವುದರಿಂದ ಪೋಲಿಸರು ಇವರ ಬಗ್ಗೆಯೂ ಒಂದು ಕಣ್ಣು ಇಟ್ಟಿರುವುದು ಕ್ಷೇಮಕರ.
ಇದನ್ನು ತಡೆಗಟ್ಟಲು ಕೆಲವು ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.
೧. ಪರ ರಾಜ್ಯದಿಂದ (ಮುಖ್ಯವಾಗಿ ತಮಿಳುನಾಡಿನಿಂದ) ಬರುವ ಎಲ್ಲರಿಗೂ ಪರಿಚಯ ಪತ್ರ ಕಡ್ಡಾಯ ಮಾಡಬೇಕು.
೨. ಹೊರದೇಶದ ಯಾವುದೇ ಪ್ರಜೆ ಪೋಲಿಸ್ ಠಾಣೆಯಲ್ಲಿ ತನ್ನ ಎಲ್ಲ ದಾಖಲೆಗಳು, ಪರಿಚಯ ಪತ್ರ ನೀಡಬೇಕು.
೩. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಚೈನಾ, ಶ್ರೀಲಂಕಾ, ಅಫ್‌ಘನಿಸ್ತಾನ ದೇಶಗಳಿಂದ ಬರುವ ಎಲ್ಲ ಪ್ರಜೆಗಳನ್ನು ಕೂಲಂಕುಶವಾಗಿ ತನಿಖೆ ಮಾಡಿ, ಅವರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
೪. ಹಾಗೂ ಸ್ಥಳೀಯ ರಾಜಕಾರಣಿಗಳ, ಕೆಲ ಪಕ್ಷಗಳ ಕಾರ್ಯಕರ್ತರ ಚಲನವಲನದ ಬಗ್ಗೆ ನಿಗಾ ಇಡಬೇಕು.
೫. ಎಲ್ಲಾ ಅಲ್ಪ ಸಂಖ್ಯಾತ ಸಂಘಟನೆಗಳು, ಅನ್ಯ ಭಾಷಾ ಸಂಘಟನೆಗಳ ಕಾರ್ಯಕರ್ತರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
"ಕನ್ನಡಿಗರೇ...ನಮ್ಮ ರಾಜ್ಯವನ್ನು ನಾವೇ ರಕ್ಷಿಸಬೇಕಾಗಿದೆ....ನಮ್ಮ ದೇಶವನ್ನು ನಾವೇ ರಕ್ಷಿಸಬೇಕಾಗಿದೆ...."
Subscribe to:
Post Comments (Atom)
No comments:
Post a Comment