Tuesday, July 08, 2008

ಮಂಗನಿಂದ ಮಾನವ ಅಥವಾ ಮಾನವನಿಂದ ಮಂಗ?








ಬೆಂಗಳೂರು ಜುಲೈ 8 : ಇಲ್ಲಿ ಕೊಟ್ಟಿರುವ ಕೆಲವು ಫೋಟೋ ನೋಡಿದರೆ ನಿಮಗೆ ಏನನ್ನಿಸುತ್ತೆ?. ಈಗ ಇರುವ ಸನ್ನಿವೇಶದಲ್ಲಿ ಎಲ್ಲರೂ ಮಂಗನಿಂದ ಮಾನವ ಎಂಬ ಇತಿಹಾಸ ಬಲ್ಲವರಾಗಿದ್ದಾರೆ. ಆದರೆ ಈಗ ಮಾನವ ತನ್ನ ಮೂಲ ರೂಪ ಕಳೆದುಕೊಂಡು ಮಂಗನ ರೂಪ ಹೊಂದುತ್ತಿದ್ದಾನೆ. ಇದು ಕೆಲ ವಿಜ್ಞಾನಿಗಳ ಖಚಿತ ಅಭಿಪ್ರಾಯ.
ಮನುಷ್ಯ ತಾನು ತಿನ್ನುವ ಪ್ರತಿ ಆಹಾರದ ಕಣದಲ್ಲಿಯೂ ವಿಷಕರ ಅಂಶಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆ ವಿಷ ಮಾನವನ ಅಸ್ಥಿ, ಕ್ರೋಮೋಜೋಮ್ ಗಳ ಒಳಗೆ ನಿಧಾನವಾಗಿ ಸೇರಿಕೊಂಡು ಪ್ರತಿ ತಲೆಮಾರಿಗೂ ಬದಲಾಗುತ್ತಿರುತ್ತದೆ. ಆದ್ದರಿಂದ ನಿಧಾನವಾಗಿ ಮಾನವ ತನ್ನ ನಿಜ ರೂಪವನ್ನು ಕಳೆದುಕೊಂಡು ತನ್ನ ಪೂರ್ವಜ ಮಂಗನ ರೂಪ ತಾಳುತ್ತಿದ್ದಾನೆ. ಅಂದರೆ ಇದು ನೂರಿನ್ನೂರು ವರ್ಷಗಳಲ್ಲಿ ಆಗುವುದಲ್ಲ.....ಕ್ರಮೇಣ ಮನುಷ್ಯನ ಆಕಾರ ತಲೆಮಾರಿನಿಂದ ತಲೆಮಾರಿಗೆ ಬದಲಾಗಿ ಮಂಗನ ರೂಪ ಅಥವಾ ವಿಚಿತ್ರ ರೂಪ ಹೊಂದಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಲಿದ್ದಾನೆ. ತದನಂತರ ಮಾನವನ ಅಧಿಪತ್ಯ ಈ ಜಗತ್ತಿನಲ್ಲಿ ಕೊನೆಗಾಣಲಿದೆ.
ಕೆಲವು ಪೂರ್ವಜರು ಈ ಬಗ್ಗೆ ಆಗಲೇ ಭವಿಷ್ಯ ನುಡಿದಿದ್ದಾರೆ. ಅಂದರೆ ಕಾಲಕ್ರಮೇಣ ಮನುಷ್ಯ ತನ್ನ ಅಧಿಪತ್ಯವನ್ನು ಕಳೆದುಕೊಳ್ಳಲಿದ್ದಾನೆ. ಮನುಷ್ಯನ ಜಾಗದಲ್ಲಿ ಇನ್ನೊಂದು ಪ್ರಾಣಿ ತನ್ನ ಅಧಿಪತ್ಯವನ್ನು ಸಾಧಿಸಲಿದೆ. ಆಗ ಈ ಭೂಮಿಯ ರೂಪವೇ ಬದಲಾಗಲಿದೆ. ಭೂಮಿ ತನ್ನ ಇರವನ್ನು ಬದಲಿಸಲಿದೆ, ಕೆಲವು ದೇಶಗಳು ಮಾಯವಾಗಲಿವೆ.
ಕೆಲವು ಶಾಸ್ತ್ರಜ್ಞರ ಪ್ರಕಾರ ಭಾರತವು ಮೊದಲು ಈಗ ಆಸ್ಟ್ರೇಲಿಯಾ ಖಂಡದ ಜಾಗದಲ್ಲಿ ಇತ್ತು. ಅದು ಕ್ರಮೇಣ ಚಲಿಸಿ, ಚಲಿಸಿ ಏಶ್ಯಾ ಖಂಡಕ್ಕೆ ಹೊಂದಿಕೊಂಡಿತು. ಅದು ಮತ್ತೆ, ಮತ್ತೆ ಚಲಿಸಿ ಹಿಮಾಲಯ ಪರ್ವತ ಉತ್ಪತ್ತಿಯಾಯಿತು.
ಭಯ ಬೀಳಬೇಡಿ...ಇದು ನಡೆಯಲು ಇನ್ನೂ ಕೆಲ ಶತಮಾನಗಳು ಇವೆ. ಈಗಲೇ ಗಾಬರಿ ಬೀಳದಿರಿ.

No comments: