ಬೆಂಗಳೂರು ಜುಲೈ ೨೫: ಕೇಂದ್ರ ಸರಕಾರದ ತಾರತಮ್ಯದ ನೀತಿ ಕರ್ನಾಟಕದ ವಿರುದ್ಧ ನಿರಂತರ ನಡೆಯುತ್ತಿರುವುದಕ್ಕೆ ಈಗ ಕರ್ನಾಟಕ ಸರಕಾರ ಎದುರಿಸುತ್ತಿರುವ ಭೀಕರತೆಯೇ ಸಾಕ್ಷಿ:
೧) ಕೇಂದ್ರ ಸರಕಾರದಿಂದ ರೈತರಿಗೆ ರಸಗೊಬ್ಬರ ಪೂರೈಕೆಯನ್ನು ತಡೆಹಿಡಿದದ್ದು
೨) ಕೇಂದ್ರ ಸರಕಾರದಿಂದ ವಿದ್ಯುತ್ ಪೂರೈಕೆ ಸ್ಥಗಿತ (ಕರ್ನಾಟಕದ ಪಾಲಿನ ವಿದ್ಯುತ್ ಆಂಧ್ರಕ್ಕೆ ಪೂರೈಕೆ)
೩) ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲು ಒಪ್ಪದಿರುವುದು
೪) ಹೊಗೆನಕಲ್ ವಿವಾದದಲ್ಲಿ ತಮಿಳುನಾಡಿನ ಪರ ವಕಾಲತ್ತು
೫) ಕರ್ನಾಟಕಕ್ಕೆ ಇಂಧನ ಪೂರೈಕೆ ಸ್ಥಗಿತ
ಇವು ಕೇವಲ ಕೆಲವು ಉದಾಹರಣೆಗಳಷ್ಟೆ.....ಇನ್ನೂ ಪಟ್ಟಿ ಮಾಡಿದರೆ ಕೇಂದ್ರ ಸರಕಾರದ ರಾಜ್ಯದ್ರೋಹ ಮುಗಿಲು ಮುಟ್ಟಲಿದೆ. ಇದು ಕೇವಲ ರಾಜ್ಯ ಸರಕಾರವನ್ನು ಅಸ್ಥಿರ ಮಾಡುವ ಹುನ್ನಾರ.
ಇಂತಹ ಜನದ್ರೋಹಿ ಸರಕಾರವನ್ನು, ಅವರಿಗೆ ಬೆಂಬಲ ನೀಡುತ್ತಿರುವ ನಮ್ಮ ರಾಜ್ಯದ ಕಾಂಗ್ರೆಸ್ ರಾಜಕಾರಣಿಗಳು ಯಾಕೆ ಬೆಂಬಲಿಸುತ್ತಿದಾರೆ ಎಂಬುದು ತಿಳಿಯದಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಹೊಡೆದುಕೊಳ್ಳುವ ದಿನ ದೂರವಿಲ್ಲ (ಅದೀಗಲೇ ಆರಂಭವಾಗಿದೆ).ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಈ ಕಾಂಗ್ರೆಸಿಗರು, ಈಗ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ರಾಜ್ಯದ ಕಾಂಗ್ರೆಸಿಗರ ರಾಜ್ಯನಿಷ್ಠೆಯನ್ನು ಈಗ ಸಂಶಯಿಸುವಂತಾಗಿದೆ.
ಈ ಜನದ್ರೋಹಿ, ಕರ್ನಾಟಕ ದ್ರೋಹಿ , ಕನ್ನಡಿಗರ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯಲು, ಕಾಂಗ್ರೆಸ್ಸನ್ನು ಈ ರಾಜ್ಯದಿಂದಲೇ ನಿರ್ನಾಮ ಮಾಡಲು ಈ ರಾಜ್ಯದ ಜನ ಪಣತೊಡಬೇಕಾಗಿದೆ.
ಕನ್ನಡಿಗರೇ ಎದ್ದೇಳಿ........ಕನ್ನಡಿಗರ ಮೇಲಿನ ದೌರ್ಜನ್ಯಕ್ಕೆ ಸೂಕ್ತ ಉತ್ತರ ಕೊಡೋಣ....ಮುಂದಿನ ಮತದಾನದಲ್ಲಿ ...ಕಾಂಗ್ರೆಸ್‌ಗೆ ಒಂದೂ ಸ್ಥಾನ ಗಳಿಸಲು ಅವಕಾಶ ಕೊಡದೆ ನಮ್ಮ ಸೇಡು ತೀರಿಸಿಕೊಳ್ಳಬೇಕಾಗಿದೆ.
Subscribe to:
Post Comments (Atom)
No comments:
Post a Comment