Saturday, September 27, 2008
ಬನ್ನಿ ಸ್ವಾಭಿಮಾನಿ ಕರ್ನಾಟಕ ಕಟ್ಟೋಣ (ಮೋದಿಗೆ ಸಲಾಂ)
ಬೆಂಗಳೂರು ಸೆಪ್ಟೆಂಬರ್ ೨೭: ಮಂಗಳೂರಿನಲ್ಲಿ ನಡೆದ ಗಲಭೆಗೆ ಹಿಂದೂಗಳ ವಿರುದ್ಧ ಕ್ರಿಶ್ಚಿಯನ್ನರ ಪರ ಏಕಪಕ್ಷೀಯವಾಗಿ ಕೇಂದ್ರದ ತಂಡ ತನ್ನ ಬೆಂಬಲ ಸಾರಿ ಕೇಂದ್ರ ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆದರೆ ಕೇವಲ ಮತಾಂತರ ಕೇಂದ್ರಗಳ ಮೇಲೆ ಆಕ್ರಮಣವಾಯಿತೇ ಹೊರತು ಯಾವುದೇ ಪ್ರಾಣಹಾನಿಯಾಗಲೀ,ಹಲ್ಲೆಯಾಗಲೀ ಮಾಡದೆ ತನ್ನ ಪ್ರತಿಭಟನೆಯನ್ನು ಸಲ್ಲಿಸಿದ ಹಿಂದುಗಳ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕೇಂದ್ರಸರಕಾರ ಉದ್ದೇಶಪೂರ್ವಕವಾಗಿಯೇ ಮಾಡಿದೆ.
ಬೆಂಗಳೂರಿನ ಆರ್ಚ್ ಬಿಷಪ್ ಆದ ಮೊರಾಸ್ ಎಂಬ ವ್ಯಕ್ತಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಗೌರವ ತೋರಿಸಿದ್ದು ಅವನ ನಿಜವಾದ ಬಣ್ಣವನ್ನು ತೋರಿಸುತ್ತದೆ. ಒಬ್ಬ ಮುಖ್ಯಮಂತ್ರಿಗೆ ಅಗೌರವ ಸೂಚಿಸುವ ಇಂತಹ ರಾಜ್ಯದ್ರೋಹಿಗಳನ್ನು ಕರ್ನಾಟಕದಿಂದ ಹೊರಗಟ್ಟಬೇಕು. ಇದೇ ಘಟನೆ ಗುಜರಾತಿನಲ್ಲಿ ನಡೆದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಮಾನವೀಯ ದೃಷ್ಟಿಯಿಂದ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಅವನನ್ನು ಭೇಟಿ ಮಾಡಲು ಹೋಗಿದ್ದರೇ ವಿನಹ ರಾಜಕೀಯ ಫೋಸ್ ಕೊಡಲು ಅಲ್ಲ ಎಂಬುದನ್ನು ಅವನು ಮನಗಣಬೇಕಾಗಿದೆ. ಅಲ್ಲದೆ ಸಾಂಗ್ಲಿಯಾನ ಎಂಬ ಬಾಯ್ಬಡುಕ ಈಗ ಮತಾಂತರದ ಪರವಾಗಿ ಮಾತನಾಡುತ್ತಿರುವುದು ಅವನ ಬಗ್ಗೆ ಅಸಹ್ಯ ಹುಟ್ಟಿಸಿದೆ.
ಬನ್ನಿ....ಗುಜರಾತ್ ಎಂಬ ಸ್ವಾಭಿಮಾನೀ ರಾಜ್ಯದ ಬಗ್ಗೆ ನಾವು ಹೆಮ್ಮೆ ಪಡಬೇಕಾದ್ದು ನಿಜ. ಏಕೆಂದರೆ ಕೆಲವು ದಶಕಗಳ ಕಾಲ ಕಾಂಗ್ರೆಸ್ನ ಹಿಂದೂ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಸರಕಾರವನ್ನು ಕಂಡಿದ್ದ ಜನತೆ ಕೊನೆಗೂ ಎಚ್ಚೆತ್ತು ಒಬ್ಬ ರಾಷ್ಟ್ರೀಯ ಹರಿಕಾರ, ಹಿಂದೂ ರಕ್ಷಕ, ಜನಪ್ರೇಮಿ ಸರಕಾರದ ಹುಟ್ಟಿಗೆ ಕಾರಣರಾದರು. ಈಗ ಎಲ್ಲಿ ಹೋದರೂ ಗುಜರಾತ್ ಜನತೆ ತಮ್ಮ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಾರೆ. ಅಲ್ಲದೆ ತಮ್ಮ ರಾಜ್ಯವನ್ನು ಸ್ವಾಭಿಮಾನೀ ರಾಜ್ಯವನ್ನಾಗಿ ಮಾಡಿದ ಈ ಹರಿಕಾರನನ್ನು ಕೊಂಡಾಡುತ್ತಾರೆ. ಕೇಂದ್ರದ ಯವುದೇ ಸಹಾಯವಿಲ್ಲದೆಯೂ ತಾನು ಸರಕಾರ ನಡೆಸಬಲ್ಲೆ, ತನ್ನ ರಾಜ್ಯದ ಜನರನ್ನು ಸ್ವಾಭಿಮಾನಿಯಾಗಿ ಮಾಡಬಲ್ಲೆ ಎಂಬುದನ್ನು ಬಹಿರಂಗವಾಗಿಯೇ ಸಾರಿ ಅದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವೇ?. ಸದಾ ಕಾಲೆಳೆಯುವ ಪಕ್ಷವಾದ ಕಾಂಗ್ರೆಸ್ ತನ್ನ ಸ್ವಹಿತಕ್ಕಾಗಿ ಕರ್ನಾಟಕದ ಜನರನ್ನು ಬಲಿಗೊಡಲೂ ಸಿದ್ಧ ಎಂಬ ಸಿದ್ಧಾಂತಕ್ಕೆ ಕಟ್ಟುಬಿದ್ದಿದೆ.
ನರೇಂದ್ರ ಮೋದಿಯಂತಹ ಒಬ್ಬ ಸ್ವಾಭಿಮಾನೀ ಮುಖ್ಯಮಂತ್ರಿ ನಮ್ಮ ಕರ್ನಾಟಕಕ್ಕೆ ಇನ್ನೂ ಸಿಗದಿರುವುದು ನಮ್ಮ ದುರ್ದೈವ. ಆದರೆ ಯೆಡಿಯೂರಪ್ಪ ಈ ನಿಟ್ಟಿನಲ್ಲಿ ತುಂಬಾ ಹಿಂದುಳಿದಿದ್ದಾರೆ. ಏಕೆಂದರೆ ಅವರಿಗೆ ತಮ್ಮದೇ ಪಕ್ಷದಲ್ಲಿ ಹಿಡಿತವಿಲ್ಲದ ಕಾರಣ ಹಾಗೂ ಬಹುಮತವಿಲ್ಲದ ಕಾರಣ ಈಗ ಹೊರಗಿನಿಂದ ಪಕ್ಷಕ್ಕೆ ಬಂದಿರುವ ಅವಕಾಶವಾದೀ ರಾಜಕಾರಣಿಗಳ ವಿರುದ್ಧ ಏಗಬೇಕಾಗಿರುವುದರಿಂದ ಅವರ ಪರಿಸ್ಥಿತಿಯನ್ನು ನರೇಂದ್ರ ಮೋದಿಯವರಿಗೆ ಹೋಲಿಸಲಾಗದು.
"ಬನ್ನಿ ಸ್ವಾಭಿಮಾನೀ ಕರ್ನಾಟಕ ಕಟ್ಟೋಣ.....ಕೇಂದ್ರ ಸರಕಾರ ಮತಾಂತರಕ್ಕೆ ಕುಮ್ಮಕ್ಕು ಕೊಟ್ಟರೂ ನಾವು ಸ್ವಾಭಿಮಾನಿಯಾಗಿ ಅದನ್ನು ಹಿಮ್ಮೆಟ್ಟಿಸಬೇಕು."
ಸಂಸ್ಕೃತದ ನಂತರದ ಅತೀ ಪುರಾತನ ಭಾಷೆಯಾದ ನಮ್ಮ ಕನ್ನಡ ಭಾಷೆಯ ಏಳಿಗೆಗಾಗಿ ಹೋರಾಡೋಣ. ಗುಜರಾತ್ ಮಾದರಿಯಲ್ಲಿ ನಮ್ಮ ಕರ್ನಾಟಕ ರಾಜ್ಯವನ್ನು ಸ್ವಾಭಿಮಾನೀ ರಾಜ್ಯವಾಗಿ ಕಟ್ಟೋಣ.
Subscribe to:
Post Comments (Atom)
1 comment:
ಮೋದಿಗೆ ಇರುವ ಗಂಡಸುತನ ನಮ್ಮ ಕರ್ನಾಟಕದ ಯಾವ ರಾಜಕಾರಣಿಗೆ ಇದೆ ಹೇಳಿ?. ಇಲ್ಲಿರುವ ಕಾಂಗ್ರೆಸಿಗರು ಕ್ರಿಶ್ಚಿಯನ್ನರಿಗೆ, ಜೆ.ಡಿ.ಎಸ್.- ಮುಸ್ಲಿಮರಿಗೆ ಹಾಗೂ ಬಿ.ಜೆ.ಪಿ. ಹಿಂದುಗಳಿಗೆ ಪ್ರಾಶಸ್ತ್ಯಕೊಡುತ್ತಾರೆ. ನಮ್ಮ ಹಿಂದೂಗಳಿಗೆ ಕನಿಷ್ಠ ಒಂದು ಪಕ್ಷವಾದರೂ ಬೆಂಬಲ ನೀಡುತ್ತಿದೆಯಲ್ಲ, ಅದಕ್ಕೆ ಬಿ.ಜೆ.ಪಿಗೆ ಥ್ಯಾಂಕ್ಸ್ ಹೇಳಬೇಕು.
Post a Comment