ಬೆಂಗಳೂರು ನವೆಂಬರ್ ೫ : ತಮಿಳುನಾಡಿನಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ, ಅಲ್ಲಿನ ಜನ ಪರೋಕ್ಷವಾಗಿ ಭಾರತದ ಸಂವಿಧಾನದ ಇರವನ್ನೇ ಪ್ರಶ್ನಿಸುವಂತಿದೆ. ಏಕೆಂದರೆ ಅವರು ಭಾರತದ ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ. ಭಾರತದ ಕಾನೂನಿಗೆ ಬೆಲೆ ಕೊಡುವುದಿಲ್ಲ. ಅಲ್ಲದೆ ಈ ದೇಶವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸರಕಾರವನ್ನೇ Blackmail ಮಾಡುವಷ್ಟು ಕೊಬ್ಬು, ದುರಹಂಕಾರ. ತನ್ನ ಬೇಳೆ ಬೇಯಿಸಿಕೊಳ್ಳಲು ಈ ದೇಶದ ಹಿತವನ್ನೇ ಬೇಕಾದರೂ ಬಲಿಕೊಡಲೂ ಹಿಂಜರಿಯದ ಸಂಕುಚಿತ ಮನಸ್ಥಿತಿ.
ಇತ್ತೀಚೆಗೆ ಮಲೇಶ್ಯಾದಲ್ಲಿ ಅಲ್ಲಿನ ಸರಕಾರ ಅನಧಿಕೃತವಾಗಿ ನಿರ್ಮಿಸಿದ ಕೆಲ ಹಿಂದೂ ದೇವಾಲಯಗಳನ್ನು ಕೆಡವಿದಾಗ, ಅಲ್ಲಿನ ಎಲ್ಲಾ ಜನಾಂಗದ (ಕನ್ನಡಿಗರು, ತೆಲುಗು, ಮರಾಠಿ ಎಂಬ ಬೇಧಭಾವವಿಲ್ಲದೆ) ಮಂದಿ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಆದರೆ ಇಲ್ಲಿ ಕರುಣಾನಿಧಿ ಎಂಬ ಅಧಮ ಮತ್ತು ಇಲ್ಲಿನ ತಮಿಳು ಜನ ಮಾತ್ರ, ಮಲೇಶ್ಯಾದಲ್ಲಿ ತಮಿಳರ ಮೇಲೆ ಹಲ್ಲೆ, ತಮಿಳರ ದೇವಳ ಕೆಡವಿದರು ಎಂಬುದಾಗಿ ಬೊಬ್ಬಿರಿದರು. ನೋಡಿ...ಇವರು ಹಿಂದೂಗಳು, ಭಾರತೀಯರೆಂದು ಒಪ್ಪಿಕೊಳ್ಳಲು ತಯಾರಿಲ್ಲ.
ಶ್ರೀಲಂಕಾದಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿರುವ ಅಲ್ಲಿನ ದೇಶದ್ರೋಹಿ ತಮಿಳು ಸಂಘಟನೆಯಾದ ಎಲ್.ಟಿ.ಟಿ.ಇ. ವಿರುದ್ಧ ಅಲ್ಲಿನ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಾಗ ಇಲ್ಲಿನ ಕೆಲವು (ಬಹುತೇಕ) ತಮಿಳರು ಅದನ್ನು ಪ್ರಬಲವಾಗಿ ವಿರೋಧಿಸಿ, ತಮಿಳರ ವಿರುದ್ಧ ಹಲ್ಲೆ ಎಂಬುದಾಗಿ ಬೊಬ್ಬಿರಿದರು. ಅದೂ ಸಾಲದೆಂಬಂತೆ ಜನರಿಂದ ಆರಿಸಲ್ಪಟ್ಟ ಜನಪ್ರತಿನಿಧಿಗಳೇ ಬಹಿರಂಗವಾಗಿ ಭಯೋತ್ಪಾದಕರ ಪರ ದನಿಯೆತ್ತಿದಾಗ ಯಾರೂ ಅದನ್ನು ವಿರೋಧಿಸದಿದ್ದುದು ನಮ್ಮ ದೇಶದ ದೊಡ್ಡ ದುರಂತ. ಅದೂ ಸಾಲದೆಂಬಂತೆ ಅಲ್ಲಿನ ಚಿತ್ರರಂಗದ ಮಂದಿ ಕೂಡಾ ಈ ಭಯೋತ್ಪಾದಕ ಸಂಘಟನೆಗೆ ಬೆಂಬಲ ಸಾರಿ ಒಂದು ದಿನದ ಉಪವಾಸ ಮುಷ್ಕರ ನಡೆಸಿದ್ದು ಅವರ ದೇಶದ್ರೋಹಿತನವನ್ನು ತೋರಿಸುತ್ತದೆ. ಶ್ರೀಲಂಕಾದ ಜನರ ನೆಮ್ಮದಿಯನ್ನು ಕೆಡಿಸಿರುವ ಈ ಎಲ್.ಟಿ.ಟಿ.ಇ. ಸಂಘಟನೆಗೆ ಬೆಂಬಲ ನೀಡಿದ ಈ ಮಂದಿಗೆ ಸ್ವಲ್ಪವಾದರೂ ಪರಿಜ್ಞಾನ ಇಲ್ಲದಿರುವುದು ಖೇದಕರ.
ಭಾರತದಲ್ಲಿ ಬಾಂಬ್ ಸ್ಪೋಟ ಮಾಡಿ ಸಾವಿರಾರು ಜನರ ಬಲಿತೆಗೆದುಕೊಂಡಿರುವ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೋಯ್ಬಾ ಮುಂತಾದ ಉಗ್ರವಾದಿಗಳಿಗೆ ಪಾಕಿಸ್ತಾನದ ಜನ ಬೆಂಬಲ ನೀಡಿದರೆ ನಮ್ಮ ಮನಸ್ಸಿಗೆ ಎಷ್ಟು ಘಾಸಿಯಾಗುತ್ತದೋ, ಅದೇ ರೀತಿ ಇಲ್ಲಿನ ಈ ತಮಿಳು ಜನ ಅಲ್ಲಿನ ಭಯೋತ್ಪಾದಕರಿಗೆ ಬೆಂಬಲನೀಡಿದರೆ, ಶ್ರೀಲಂಕಾದ ಜನತೆ ಭಾರತೀಯರನ್ನು ಕ್ಷಮಿಸಿಯಾರೇ?.
Wednesday, November 05, 2008
Subscribe to:
Post Comments (Atom)
1 comment:
ತಮಿಳರು ಯಾವತ್ತೂ ಈ ದೇಶದ ಪ್ರಜೆಗಳೆಂದು ಒಪ್ಪಿಕೊಂಡವರಲ್ಲ. ಅವರು ಒಂಥರಾ ಭಾರತಕ್ಕೆ ಪಾಕಿಸ್ತಾನ ಹೇಗೆಯೋ - ಹಾಗೆ ನಮ್ಮ ಕರ್ನಾಟಕಕ್ಕೆ. ಎಲ್ಲಾ ರೀತಿಯಿಂದಲೂ ತೊಂದರೆಕೊಡುವುದನ್ನೇ ತಮ್ಮ ಚಾಳಿಯಾಗಿಸಿಕೊಂಡಿದ್ದಾರೆ.
Post a Comment