Sunday, December 14, 2008

ನಮ್ಮ ಸಂಸದರ ಬಯಲಾದ ಬಣ್ಣ

ಬೆಂಗಳೂರು ದಶಂಬರ ೧೪: ಇತ್ತೀಚೆಗೆ ಮುಂಬೈನಲ್ಲಿ ನಡೆದ ದಾಳಿಯ ವೇಳೆ ಕೆಲವು ದೇಶದ್ರೋಹಿ ಸಂಸದರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದರೂ, ಒಗ್ಗಟ್ಟಾಗಿ ಇದನ್ನು ಖಂಡಿಸಿದ್ದು ಎಲ್ಲಾ ದೇಶಪ್ರೇಮಿಗಳಿಗೆ ಸ್ವಲ್ಪ ನೆಮ್ಮದಿ ತಂದಿತ್ತು. ಆದರೆ ಇದೇ ದಶಂಬರ ತಿಂಗಳ ೧೩ನೇ ದಿನಾಂಕದಂದು ಏಳು ವರ್ಷದ ಹಿಂದೆ ಇದೇ ದಿನ ಸಂಸತ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಕೇವಲ ೧೨ ಮಂದಿ ಹಾಜರಿದ್ದುದು ನಮ್ಮ ಸಂಸದರ ದೇಶಪ್ರೇಮವನ್ನು ಪ್ರಶ್ನಿಸುವಂತಾಗಿದೆ.
ಕೇವಲ ಮತಗಳಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡು, ಜುಜುಬಿ ಮತಕ್ಕಾಗಿ ದೇಶದ್ರೋಹದ ಕೆಲಸ ಮಾಡಲೂ ಹಿಂಜರಿಯದ ಈ ಸಂಸದರ ನಿಜ ಬಣ್ಣ ನೋಡಿ ಎಲ್ಲರೂ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಶ್ರೀಲಂಕಾದಲ್ಲಿ ತಮಿಳು ಉಗ್ರಗಾಮಿಗಳು ಅಲ್ಲಿನ ಜನರನ್ನು ಕೊಂದು, ಅಲ್ಲಿ ತಮ್ಮ ಆಳ್ವಿಕೆ ಸ್ಥಾಪಿಸಲು ಪ್ರಯತ್ನಪಡುತ್ತಿರುವ ಸಂದರ್ಭದಲ್ಲಿ ನಮ್ಮ ತಮಿಳುನಾಡಿನಲ್ಲಿ ಕರುಣಾನಿಧಿ ಎಂಬ ದೇಶದ್ರೋಹಿಯ ಮುಂದಾಳುತ್ವದಲ್ಲಿ ತಮಿಳು ಚಲನಚಿತ್ರ ನಟರು ಒಂದು ದಿನದ ಉಪವಾಸ ಕೈಗೊಂಡಾಗ ಯಾರೂ ಖಂಡಿಸಲಿಲ್ಲ. ಇವರೆಲ್ಲ ಬಹಿರಂಗವಾಗಿಯೇ ಭಯೋತ್ಪಾದಕರಿಗೆ ಬೆಂಬಲ ಸಾರಿದರೂ ತುಟಿ ಪಿಟಿಕ್ ಎನ್ನದ ಕೇಂದ್ರ ಸರಕಾರದ ದೇಶನಿಷ್ಠೆ ಬಗ್ಗೆ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತವೆ. ಆದರೆ ಅನ್ಯದೇಶದ ತಮಿಳು ಉಗ್ರಗಾಮಿಗಳಿಗೆ ಮರುಗುವ ಈ ಮಂದಿ, ಮುಂಬೈ ದಾಳಿಯಲ್ಲಿ ಮಡಿದವರಿಗೆ ಅದೇ ರೀತಿಯ ಮರುಕ ತೋರಿಸಲಿಲ್ಲ. ಏಕೆಂದರೆ ಅವರು ತಮಿಳರಲ್ಲವಲ್ಲ?. ಇಂತಹ ದೇಶದ್ರೋಹಿಗಳನ್ನು ಮೊದಲು ಬಂಧಿಸಿ ನೇಣಿಗೆ ಹಾಕಬೇಕು.
ಅದೇ ಅಲ್ಲದೆ, ಕರ್ನಾಟಕದಲ್ಲಿ ಇದೇ ದಿನ ಮಾನ್ಯ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರು ನಡೆಸಿದ "ತರಬೇತಿ ಕಾರ್ಯಾಗಾರ" ದಲ್ಲಿ ೨೧೭ ಮಂದಿಯಲ್ಲಿ ಕೇವಲ ೮೩ ಮಂದಿ ಭಾಗವಹಿಸಿದ್ದರು ಎಂದರೆ ನಮ್ಮ ಜನರ,ರಾಜ್ಯದ, ದೇಶದ ಅಭಿವೃದ್ದಿ ಕಡೆಗೆ ಅವರುಗಳಿಗೆ ಎಂತಹ ಕಾಳಜಿ ಇದೆ ಎಂಬುದನ್ನು ಅರಿಯಬಹುದು. ಅಂದರೆ ಇಲ್ಲಿ ಜನಪರ ಕಾಳಜಿ ಮಾಯವಾಗಿದೆ. ಕೇವಲ ಸ್ವಹಿತ, ಸ್ವಜನ ಪಕ್ಷಪಾತ, ಮುಸ್ಲಿಂ ವೋಟ್ ಬ್ಯಾಂಕ್, ಚರ್ಚು ದಾಳಿಗೆ ವಿರೋಧ ಮೊದಲಾದುವುಗಳಲ್ಲಿ ಮುಳುಗಿರುವ ಈ ನಿಯತ್ತಿಲ್ಲದ ಮಂದಿಗೆ ವೋಟು ಕೊಡುವ ನಾವು ಮುಂದಿನ ಮತದಾನದಲ್ಲಿ ವೋಟ್ ಮಾಡುವ ಮುನ್ನ ಸಾವಿರ ಸಲ ಯೋಚನೆ ಮಾಡಬೇಕಾಗಿದೆ.
ನಮ್ಮ ದೇಶ ಇಂದು ಎಲ್ಲಾ ಕಡೆಗಳಿಂದ ನಗೆಪಾಟಾಲಿಗೆ ಒಳಗಾಗಿದೆ. ಮುಂಬೈ ದಾಳಿಯ ನಂತರ ಪಾಕಿಸ್ತಾನಕ್ಕೆ ೨೦ ಉಗ್ರರ ಪಟ್ಟಿ ಮಾಡಿ ಅವರ ಹಸ್ತಾಂತರಕ್ಕೆ ಗಡುವು ನೀಡಿ ವಾರಗಳೇ ಕಳೆದವು. ನಮ್ಮ ಕಡೆಯಿಂದ ಯಾವುದೇ ರೀತಿಯ ಒತ್ತಡ ಇಲ್ಲ. ಪಾಕಿಸ್ತಾನಕ್ಕೂ ಅದು ಮನದಟ್ಟಾಗಿದೆ. ಅವರಿಗೆ ಗೊತ್ತು, ಭಾರತದ ರಾಜಕಾರಣಿಗಳ ಹಣೆಬರಹ, ಅವರು ಖಂಡಿತಾ ಯುದ್ಧಕ್ಕೆ ಮುಂದಾಗುವುದಿಲ್ಲ, ಏಕೆಂದರೆ ಯುದ್ಧ ಘೋಷಣೆ ಮಾಡಿ ಭಾರತದ ಮುಸ್ಲಿಮರ ವಿರೋಧ ಕಟ್ಟಿಕೊಂಡರೆ ಮುಂದಿನ ಚುನಾವಣೆಯಲ್ಲಿ ಜಯಗಳಿಸುವುದು ಹೇಗೆ?.
ಈಗ ಇಲ್ಲೊಂದು ಪ್ರಸ್ತುತ ಸಂದೇಶವೆಂದರೆ " ರಾಜಕಾರಣಿಗಳಿಗಿಂತ ಭಯೋತ್ಪಾದಕರೇ ವಾಸಿ.....ಏಕೆಂದರೆ ರಾಜಕಾರಣಿಗಳು ಜನರನ್ನು ಒಡೆಯುತ್ತಾರೆ...ಆದರೆ ಭಯೋತ್ಪಾದಕರು ಜನರನ್ನು ಒಗ್ಗೂಡಿಸುತ್ತಾರೆ."

1 comment:

Anonymous said...

ಎಲ್ಲಾ ಸಂಸದರನ್ನು ಮುಲಾಜಿಲ್ಲದೆ ಮನೆಗಟ್ಟಬೇಕು. ಒಂದು ಚುನಾವಣೆಗೆ ಮಾತ್ರ ಸ್ಪರ್ದಿಸುವ ಅವಕಾಶ ಮಾತ್ರ ಇರುವಂತಹ ಕಾನೂನು ಮಾಡಬೇಕು.