Friday, December 19, 2008

ಮಾರ್ವಾಡಿಗಳ ಹೊಸ ವ್ಯಾಪಾರ ತಂತ್ರ



ಬೆಂಗಳೂರು ದಶಂಬರ ೧೯: ಮಾರ್ವಾಡಿ ವ್ಯಾಪಾರಿಗಳು ಇತ್ತೀಚೆಗೆ ಹೊಸ ವ್ಯಾಪಾರ ತಂತ್ರವನ್ನು ಶುರುಮಾಡಿಕೊಂಡಿದ್ದಾರೆ. ಅದು ಈ ಮುಗ್ದ ಜನರನ್ನು ಮರುಳು ಮಾಡುವ ಹೊಸ ವ್ಯಾಪಾರ ತಂತ್ರ.

ಈ ವ್ಯಾಪಾರ ತಂತ್ರಕ್ಕೆ ಜನ ಮುಗಿಬಿದ್ದು ಮರುಳಾಗುತ್ತಿರುವುದು ನಮ್ಮ ಜನರ ಕೊಳ್ಳುವಿಕೆ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅದು ಮಿಕ್ಸಿ (Mixer Grider) ನ ವ್ಯಾಪಾರ. ನಿಮ್ಮ ಹಳೆಯ ಮಿಕ್ಸಿ ಕೊಟ್ಟು ಹೊಚ್ಚ ಹೊಸ ಮಿಕ್ಸಿ ಕೊಳ್ಳುವ ವ್ಯಾಪಾರ, ಅಲ್ಲದೆ ಹಳೆಯ ಮಿಕ್ಸಿಗೆ ರೂ.600 ರಿಂದ ಸಾವಿರ ರೂಪಾಯಿವರೆಗೆ ಕೊಡುತ್ತಾರೆ. ಆದರೆ ಹೊಸ ಮಿಕ್ಸಿ ಕೊಂಡರೆ ಮಾತ್ರ.

ಇಲ್ಲಿದೆ ಅದಕ್ಕೆ ಪೂರಕವಾದ ಲೆಕ್ಕ.

ಹೊಸ ಮಿಕ್ಸಿಯ ಬೆಲೆ MRP Rs.2880 ಎಂದಿಟ್ಟುಕೊಳ್ಳಿ
ಹಳೆಯ ಮಿಕ್ಸಿಯ ಬೆಲೆ Rs. 600
ನೀವು ಕೊಡುವ ಬೆಲೆ Rs.2280

ಇಲ್ಲಿ ಅವರು ಮಿಕ್ಸಿಯ ಮುಖಬೆಲೆಯ ಮೇಲೆ ನಿಮ್ಮ ಹಳೆಯ ಮಿಕ್ಸಿಯ ಬೆಲೆಯನ್ನು ಕಳೆಯುತ್ತಾರೆ. ಆದರೆ ಮುಖಬೆಲೆಯೇ ನಿಜವದ ಬೆಲೆ ಅಲ್ಲ ಎಂಬುದು ನಮ್ಮ ಮುಗ್ದ ಜನರಿಗೆ ಹೇಗೆ ತಿಳಿಯುತ್ತದೆ?. ಮೊದಲು ಬಿಗ್ ಬಜಾರ್ ಶುರುವಾದ ಸಮಯ ಒಂದು ಕಂಪೆನಿಯ ಮಿಕ್ಸಿಯನ್ನು MRPಗಿಂತ ಕಡಿಮೆಗೆ ಅಂದರೆ ಅದರ MRP Rs.1900 ಇತ್ತು, ಅದನ್ನು ಕೇವಲ Rs.600ಕ್ಕೆ ಕೊಡುತ್ತಿದ್ದರು. ಅಂದರೆ ಮುಖಬೆಲೆಯ ಮೂರನೇ ಒಂದು ಬೆಲೆಗೆ...?. ಹಾಗಾದರೆ ಆ ಮಿಕ್ಸಿಯ ನಿಜವಾದ ಬೆಲೆ ಎಷ್ಟು?.

ಹಾಗೆಯೇ ನಮ್ಮ ಪಕ್ಕದ ಮನೆಯವರೊಬ್ಬರು ಇದೇ ಥರಾ ಹಳೆಯ ಮಿಕ್ಸಿ ಕೊಟ್ಟು ಹೊಸ ಮಿಕ್ಸಿ ಕೊಂಡ ಸಂಭ್ರಮದಲ್ಲಿ ನಮ್ಮೆದುರು ಹೇಳಿ ಹೆಮ್ಮೆ ಪಡುತ್ತಿದ್ದರು. ನಾನು ಅವರಿಗೆ ತಿಳಿಹೇಳಿದೆ.ಅವರು Rs.3480 ಮುಖಬೆಲೆಯ ಮಿಕ್ಸಿಯನ್ನು ಹಳೆಯ ಮಿಕ್ಸಿ ಕೊಟ್ಟು Rs.2880 ಕ್ಕೆ ಕೊಂಡಿದ್ದರು. ಆದರೆ ಅದೇ ಮಿಕ್ಸಿಯ ಬೆಲೆ ಬಿಗ್ ಬಜಾರ್‌ನಲ್ಲಿ ವಿಚಾರಿಸಿದಾಗ ಅದರ ಬೆಲೆ Rs.2880 ಎಂದು ತಿಳಿಯಿತು. ಆಗಲೇ ನನಗೆ ಗೊತ್ತಾಗಿದ್ದು ಈ ಮಾರ್ವಾಡಿಗಳ ಮೋಸದ ವ್ಯಾಪಾರ. ಅಂದರೆ ನೀವು ಕೊಡುವ ಹಳೆಯ ಮಿಕ್ಸಿಯ ಬೆಲೆ ಇಲ್ಲಿ ಶೂನ್ಯ. ಆದರೆ ನಾವು ವ್ಯತ್ಯಾಸದ ಮೌಲ್ಯ ಶೂನ್ಯ ಎಂದು ತಿಳಿಯದೆ ಟೋಪಿ ಹಾಕಿಸಿಕೊಳ್ಳುತ್ತಿದ್ದೇವೆ.

"ನಿಮ್ಮಲ್ಲಿ ಯಾರಾದರೂ ಟೋಪಿ ಹಾಕಿಸಿಕೊಂಡಿದ್ದೀರಾ?" ಇದ್ದರೆ ತಿಳಿಸಿ...ಇಲ್ಲದಿದ್ದರೆ ಹುಶಾರಾಗಿರಿ.

1 comment:

Anonymous said...

ಟೋಪಿ ಹಾಕಿಸಿಕೊಳ್ಳುವುದು ನಮ್ಗೆ ಹೊಸದಲ್ಲ ಬಿಡಿ. ಈ ದರಿದ್ರ ಮಾರ್ವಾಡಿಗಳ ಸಹವಾಸದಿಂದ ನಮ್ಮ ಜನರೂ ಈಗ ಟೋಪಿ ಹಾಕುತ್ತಿದ್ದಾರೆ.