Saturday, January 17, 2009

ಮರಾಠಿ ಪುಂಡರ ಸದ್ದಡಗಿಸಿ

ಬೆಂಗಳೂರು ಜನವರಿ ೧೭: ಬೆಳಗಾವಿಯಲ್ಲಿ ಕರ್ನಾಟಕ ಸರಕಾರ ತನ್ನ ಅಧಿವೇಶನವನ್ನು ನಡೆಸುತ್ತಿರುವುದು ಬೆಳಗಾವಿಯ ಸಕಲ ಕನ್ನಡಿಗರಿಗೆ ಹೆಮ್ಮೆ ತರುವ ವಿಚಾರ. ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ದಿಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕೂಗಿಗೆ ಸರಕಾರ ಸ್ಪಂದಿಸುತ್ತಿದೆ.

ಆದರೆ ಬೆಳಗಾವಿಯಲ್ಲಿ ಈ ಸರಕಾರದ ಅಧಿವೇಶನದ ವಿರುದ್ದವಾಗಿ ಮರಾಠಿ ಪುಂಡು ಪೋಕರಿಗಳು "ಮಹಾ ಮೇಳಾವ" ಎಂಬ ಸಮ್ಮೇಳನ ನಡೆಸುವುದಾಗಿ ಹೇಳಿ ತನ್ನ ರಾಜ್ಯದ್ರೋಹಿತನವನ್ನು ಸಾರಿದೆ. ಅಲ್ಲದೆ ಈಗ ಮಹಾರಾಷ್ಟ್ರದಲ್ಲಿ ಬೆಂಬಲ ಕಳೆದುಕೊಂಡಿರುವ, ರಾಷ್ಟ್ರೀಯವಾಗಿ ಚಿಂತನೆ ಮಾಡುವುದನ್ನು ಬಿಟ್ಟು ಈಗ ಕೇವಲ ಪ್ರಾದೇಶಿಕ ಸಂಕುಚಿತ ಭಾವನೆಯನ್ನು ತೋರ್ಪಡಿಸುತ್ತಿರುವ ಶಿವಸೇನೆ ಎಂಬ ಸಂಘಟನೆಯನ್ನು ಕೂಡಾ ಈ ಸಮ್ಮೇಳನಕ್ಕೆ ಆಮಂತ್ರಿಸಿರುವುದು ಕಳವಳಕಾರಿಯಾಗಿದೆ. ಶಿವಸೇನೆಯ ಬಾಳ್‌ಠಾಕ್ರೆ ಕೂಡಾ ಈಗ ಪ್ರಾದೇಶಿಕವಾಗಿ ಚಿಂತನೆ ಮಾಡುತ್ತಿರುವುದು ಶಿವಸೇನೆಯ ಅಧಃಪತನಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಎಂ.ಇ.ಎಸ್. ಎಂಬ ರಾಜ್ಯದ್ರೋಹಿ ಸಂಘಟನೆ ಬೆಳಗಾವಿಯಲ್ಲಿ ತನ್ನ ನೆಲೆ ಕಳೆದುಕೊಂಡಿದ್ದು, ತನ್ನ ಇರವನ್ನು ತೋರ್ಪಡಿಸುವುದಕ್ಕೋಸ್ಕರ ಪುಂಡಾಟಿಕೆಯನ್ನು ನಡೆಸುತ್ತಿರುವುದು ಅದರ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ.

ಬೆಳಗಾವಿಯಲ್ಲಿರುವ ಎಲ್ಲ ಮರಾಠಿ ಜನ ಯಾವುದೇ ರೀತಿಯ ಸಂಕುಚಿತ ಭಾವನೆ ಇಲ್ಲದೆ ಕನ್ನಡದವರೊಂದಿಗೆ ಹೊಂದಾಣಿಕೆಯಿಂದ ಬದುಕುತ್ತಿರುವುದು ಅಲ್ಲಿನ ಮರಾಠಿ ನಾಯಕರಿಗೆ ನುಂಗಲಾರದ ತುತ್ತಾಗಿತ್ತು. ರಾಜಕೀಯವಾಗಿ ತನ್ನ ನೆಲೆ ಭದ್ರ ಪಡಿಸಿಕೊಳ್ಳಲು ಈ ಎಂ.ಇ.ಎಸ್. ಎಂಬ ಭಯೋತ್ಪಾದಕ ಸಂಘಟನೆ ಅಲ್ಲಿನ ಕನ್ನಡಿಗರಿಗೆ ತೊಂದರೆ ಕೊಡುತ್ತಿದ್ದು, ಈಗ ಕನ್ನಡಿಗರು ಮರಾಠಿ ಜನರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆಂದು ಆರೋಪಿಸಿ ತನ್ನ ನೀಚ ಬುದ್ದಿ ತೋರಿಸಿದೆ.

ಈ ಮರಾಠಿ ಬುದ್ದಿಗೇಡಿಗಳಿಗೆ ನಾವು "ದಂಡಂ ದಶಗುಣಂ" ಎಂಬಂತೆ...ಮಾತಲ್ಲಿ ಕೇಳದವನಿಗೆ ಚಾಟಿಯೇಟೇ ಸರಿ ಎಂದು ಹೊಡೆದು ಬುದ್ದಿ ಹೇಳಬೇಕಾಗಿದೆ. ಇಲ್ಲದಿದ್ದಲ್ಲಿ ಅಲ್ಲಿ ಮತ್ತೊಬ್ಬ ಕರುಣಾನಿಧಿ ಹುಟ್ಟುತ್ತಾನೆ. ನಿಮಗೆ ನಮ್ಮ ರಾಜ್ಯದ ಕಾನೂನಿನಂತೆ ನಡೆಯಲು ಆಗುವುದಿದ್ದರೆ ಇರಿ, ಇಲ್ಲವೇ ತೊಲಗಿ ಎಂದು ಹೇಳಬೇಕಾದ ಕಾಲ ಬಂದಿದೆ. ಇಲ್ಲದಿದ್ದಲ್ಲಿ ನಾಳೆ ಈ ಬಾಳಾ ಠಾಕ್ರೆ ಎಂಬ ಭಯೋತ್ಪಾದಕ ಬೆಳಗಾವಿಯಲ್ಲಿ ದಾಂಧಲೆ ನಡೆಸಲು ತನ್ನ ಶಿವಸೇನೆ ಎಂಬ ಉಗ್ರಗಾಮಿ (ಇತ್ತೀಚೆಗೆ ಪರಿವರ್ತಿತವಾದ) ಸಂಘಟನೆಗೆ ಆದೇಶ ನೀಡಿಯಾನು.

ಕನ್ನಡಿಗರೇ ಎದ್ದೇಳಿ....ಈ ಪುಂಡರಿಗೆ ಹೊಡೆದು ಬುದ್ದಿ ಹೇಳಿ...

1 comment:

Anonymous said...

ಭಾಷಾವಾರು ಪ್ರಾಂತ್ಯ ರಚನೆಯಾಗಿ ಅದಕ್ಕೆ ಸಂಸತ್ತಿನ ಅನುಮೋದನೆಯಾಗಿದ್ದರೂ ಕೂಡ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿರುವ ಈ ತಮಿಳುನಾಡು ಹಾಗೂ ಮಹಾರಾಷ್ಟ್ರ ಸರಕಾರಗಳ ವಿರುದ್ದ ದೇಶದ್ರೋಹದ ಆಪಾದನೆ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬಾರದು?. ಬಾಳ್ ಠಾಕ್ರೆ ಎಂಬ ಕುನ್ನಿ ಮತ್ತೆ ಬೊಗಳಲು ಶುರು ಮಾಡಿದೆ. ಅದಕ್ಕೆ ಒದ್ದು ಬುದ್ದಿ ಕಲಿಸಬೇಕಾಗಿದೆ.