Saturday, April 05, 2008

ಅಹಮದಾಬಾದ್ ಸೋಲು...ಅನಿಲ್ ಕುಂಬ್ಳೆಗೆ ಎಚ್ಚರಿಕೆ

ಬೆಂಗಳೂರು ಎಪ್ರಿಲ್ ೬.: ಅಹಮದಾಬಾದ್ ನಲ್ಲಿ ಭಾರತ ಕ್ರಿಕೆಟ್ ತಂಡದ ಸೋಲಿಗೆ ಯಾರನ್ನು ದೂಷಿಸುವುದು ಎಂಬುವುದು ಎಲ್ಲರೂ ಯೋಚಿಸಬೇಕಾದ ವಿಚಾರ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕುಂಬ್ಳೆ ಮೊದಲ ತಪ್ಪು ಮಾಡಿದರು. ಇರ್ಫಾನ್ ಪಠಾಣ್ ಅಯ್ಕೆಯಂತೂ ಇನ್ನೊಂದು ತಪ್ಪು. ಅಲ್ಲದೆ ಫಾರ್ಮ್ ನಲ್ಲಿ ಇಲ್ಲದ ಅರ್.ಪಿ ಸಿಂಗ್ ಹಾಗೂ ಶ್ರೀಶಾಂತ್ ಆಯ್ಕೆ ಮತ್ತೊಂದು ತಪ್ಪು. ಹೀಗೆ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿದಲ್ಲಿ ಭಾರತ ಸೋಲದೆ ಇರುತ್ತದೆಯೇ?.
ವೀರೆಂದ್ರ ಸೆಹ್ವಾಗ್ ಕೇವಲ ಒಂದು ಇನ್ನಿಂಗ್ಸ್ ನಲ್ಲಿ ತ್ರಿಶತಕ ದಾಖಲಿಸಿ ಮುಂದಿನ ಪಂದ್ಯಗಳಿಗೆ ತನ್ನ ಆಯ್ಕೆಯನ್ನು ದಾಖಲಿಸಿಕೊಂಡರು. ಆದರೆ ದ್ರಾವಿಡ್, ಲಕ್ಷ್ಮಣ್ ಹಾಗೂ ಧೋನಿ ಆಯ್ಕೆ ಮಾತ್ರ ಅಚ್ಚರಿ ತಂದಿದೆ. ರೀ.....ಆಯ್ಕೆದಾರರೇ...ಭಾರತ ತಂಡಕ್ಕೆ ಬೇಕಾಗಿರುವುದು ಹಳೇ ತಲೆಗಳಲ್ಲ, ಫಾರ್ಮ್ ನಲ್ಲಿ ಇರುವಂತಹ ಹೊಸ ಮುಖಗಳು. ಗಂಭೀರ್, ದಿನೇಶ್ ಕಾರ್ತಿಕ್ ಮುಂತಾದ ಪ್ರತಿಭೆಗಳು, ದ್ರಾವಿಡ್, ಧೋನಿ, ಲಕ್ಷ್ಮಣ್ ಗಾಗಿ ತಮ್ಮ ಆಯ್ಕೆಗಾಗಿ ಕಾಯಬೇಕಾಗಿದೆ. ದ್ರಾವಿಡ್ ಈಗ ಪಂದ್ಯ ಗೆಲ್ಲಿಸುವ ಆಟಗಾರನಾಗಿ ಉಳಿದಿಲ್ಲ. ಧೋನಿ ಕೇವಲ ೨೦-೨೦ ಪಂದ್ಯಗಳಿಗೆ ಫಿಟ್. ಲಕ್ಷ್ಮಣ್ ತನ್ನ ಜೀವಮಾನದಲ್ಲಿ ಆಸ್ಟ್ರೇಲಿಯ ಎದುರು ಆಡಿದ ಒಂದು ಉತ್ತಮ ಇನ್ನಿಂಗ್ಸ್ ಗಾಗಿ ಮತ್ತೆ, ಮತ್ತೆ ಸ್ಥಾನ ಗಳಿಸುತ್ತಿದ್ದಾರೆ.
ಈ ತರದ ಆಯ್ಕೆ ಭಾರತ ತಂಡದ ಭವಿಷ್ಯಕ್ಕೆ ಮುಳುವಾಗಲಿದೆ. ಹಳೇ ತಲೆಗಳನ್ನು ಕಿತ್ತು ಹಾಕಿ, ಹೊಸಬರಿಗೆ ಮಣೆ ಹಾಕಬೇಕು. ಅಯ್ಕೆದಾರರೇ...ದಕ್ಷಿಣ ಅಫ್ರಿಕಾ ಪಂದ್ಯ ಗೆದ್ದಿದ್ದು ಹೊಸಬರಿಂದ ಹೊರತು, ಹಳೇ ತಲೆಗಳಿಂದಲ್ಲ.....ಗೊತ್ತಾಯ್ತಾ?....

No comments: