ಬೆಂಗಳೂರು ಎಪ್ರಿಲ್ ೨೦: ಬಾಡಿಗೆದಾರರನ್ನು ಸುಲಿಯುವ ಮಾಲೀಕರು ಬೆಂಗಳೂರಿನಲ್ಲಿ ಬಹಳ ಜನ ಇದ್ದಾರೆ. ನೀವು ಯಾವುದೇ ಮನೆ ಬಾಡಿಗೆಗೆ ಪಡೆಯಲು ಹೋದಾಗ ಹಲ್ಲು ಗಿಂಜಿಕೊಂಡು ನಾಯಿ ತರಹ ಬಾಲ ಅಲ್ಲಾಡಿಸಿಕೊಂಡು ಬಂದು , ತಾನು ಹೇಳಿದ ರೇಟಿಗೆ ಒಪ್ಪಿಕೊಂಡ ಎಂದಾಗ "ಬಕ್ರಾ ಬಲೆಗೆ ಬಿತ್ತು" ಎಂದು ಮಂಡಿಗೆ ತಿನ್ನುವ ಮಾಲೀಕರು....ಮನೆ ಖಾಲಿ ಮಾಡುವಾಗ ಇಲ್ಲ ಸಲ್ಲದ ಅರೋಪ ಮಾಡಿ ನಿಮ್ಮ ಮುಂಗಡ ಠೇವಣಿಯಿಂದ ಎಷ್ಟು ಕಡಿತ ಮಾಡಲಾಗುತ್ತದೋ ಅಷ್ಟು ಕಡಿತ ಮಾಡಿ ಉಳಿದ ಹಣವನ್ನು, ಕೆಕ್ಕರಿಸಿ ನೋಡಿ ನಿಮ್ಮ ಕೈಯಲ್ಲಿಡುತ್ತಾರೆ.
ನೀರಿನ ಬಾಬ್ತು ರೂ.೧೫೦.೦೦ನ್ನು ಪ್ರತೀ ತಿಂಗಳು ಪಡೆಯುವ ಈ ಪ್ರಾಣಿಗಳು, ನೀರು ಮಾತ್ರ ದಿನಕ್ಕೆ ಒಂದೇ ಸಲ ಹಾಕುತ್ತಾರೆ(ಐದು ಮನೆ ಇದ್ದರೂ ಸಹ). ಇವರಿಂದಾಗಿ ನಾನು ಬೆಂಗಳೂರಿನಲ್ಲಿ ಅನುಭವಿಸಿದ ಫಜೀತಿ ದೇವರಿಗೇ ಪ್ರೀತಿ. ಇತ್ತೀಚೆಗೆ ನಾನು ಬನಶಂಕರಿಯ ಒಂದು ಮನೆ ಖಾಲಿ ಮಾಡಬೇಕಾಗಿ ಬಂತು. ಅಂದರೆ ನಾನು ಅದೇ ಮನೆಯಲ್ಲಿ ಕಳೆದ ೪ ವರ್ಷಗಳಿಂದ ಯಾವುದೇ ರೀತಿಯ ತೊಂದರೆ ಇಲ್ಲದೆ ಇದ್ದೆ. ಅಂದರೆ ಪ್ರತೀ ತಿಂಗಳೂ ತಪ್ಪದೆ ನೀರಿನ ಬಿಲ್, ಬಾಡಿಗೆ, ವಿದ್ಯುತ್ ಬಿಲ್ ದಿನಾಂಕದ ಒಳಗೇ ತುಂಬುತ್ತಿದ್ದೆ. ಆದರೆ ಪ್ರತೀ ಎರಡು ವರ್ಷಕ್ಕೊಮ್ಮೆ ಪ್ರತಿಶತ ೧೦ರಂತೆ ಬಾಡಿಗೆ ಜಾಸ್ತಿ ಕೂಡಾ ಕೊಡುತ್ತಿದ್ದೆ. ಆದರೆ ಸುತ್ತ ಮುತ್ತಲಿನ ಕೆಲವು ಮನೆಗಳ ಬಾಡಿಗೆ ನಮ್ಮ ಮನೆ ಬಾಡಿಗೆಗಿಂತ ಹೆಚ್ಚು ಇದ್ದದ್ದರಿಂದ ಮನೆ ಮಾಲೀಕ ಮನೆಯನ್ನು ಖಾಲಿ ಮಾಡಲು ಹೇಳಿದ.
ನಾನು ಕೂಡಲೇ ಬೇರೆ ಮನೆ ನೋಡಿ ಮನೆ ಖಾಲಿ ಮಾಡಿದೆ. ಖಾಲಿ ಮಾಡುವಾಗ ಮಾಲೀಕ, ಭೂತ ಕನ್ನಡಿ ಹಿಡಿದು ಏನೇನು ಡ್ಯಾಮೇಜ್ ಆಗಿದೆ...ಅದು ಇದು..ಎಂದು ರಾಗ ಎಳೆಯ ತೊಡಗಿದ. ಅಲ್ಲ ಸ್ವಾಮೀ, ೪ ವರ್ಷ ಬಳಸಿದರೆ ಚಿನ್ನ ಕೂಡಾ ಸವೆಯುತ್ತದೆ, ಅದು ಈ ಮಾಲೀಕರಿಗೆ ಅರ್ಥವಾಗುವುದಿಲ್ಲವಲ್ಲ?. ಆದರೆ ನನ್ನ ಎಚ್ಚರಿಕೆಯಿಂದ ಅವನು ಜಾಸ್ತಿ ಹಣವನ್ನು ಪಡೆಯಲಾಗಲಿಲ್ಲ. ಕೇವಲ ರೂ.೨೦೦ ಮಾತ್ರ ಹಿಡಿದುಕೊಂಡ. ಅದೂ ಎರಡು ನಲ್ಲಿ ಡ್ಯಾಮೇಜ್ ಆಗಿದೆ ಎಂಬುದಕ್ಕೆ.
ನಾಲ್ಕು ವರ್ಷ ಬಳಸಿದರೆ ಯಾವುದೇ ವಸ್ತು ಸವೆಯುತ್ತದೆ. ಅದನ್ನೂ ಬಾಡಿಗೆದಾರನ ಮೇಲೆ ಹೊರಿಸುವುದು ಎಷ್ಟು ಸರಿ?. ಇಂತಹ ಖದೀಮರಿಂದಾಗಿಯೇ ಬೆಂಗಳೂರಿನಲ್ಲಿ ಮನೆ ಬಾಡಿಗೆ ಜಾಸ್ತಿ ಆಗಿರುವುದು.
"ಬಾಡಿಗೆದಾರರಿಗೆ ಒಂದು ಕಾನೂನು ರೂಪಿಸುವ ಅಗತ್ಯವಿದೆ. ಈಗ ಕಾನೂನು ಪೂರ್ತಿ ಮಾಲಿಕರ ಪರವಾಗಿದೆ."
No comments:
Post a Comment