ಬೆಂಗಳೂರು ಮೇ ೧೬: ಬೆಂಗಳೂರು ಐಟಿ ಸಿಟಿ, ಸಿಲಿಕಾನ್ ಹಬ್..........ಮುಂತಾದ ಹೆಸರಿನಿಂದ ಕರೆಯುವವರು ಇನ್ನೊಂದು ಹೆಸರೂ ಸೇರಿಸಿಕೊಳ್ಳುವುದು ಒಳ್ಳೆಯದು, ಅದು ಹಗಲುದರೋಡೆಕೋರರ ನಗರ.
ಇದಕ್ಕೆ ಕಾರಣ ಇದೆ. ಇಲ್ಲೇ ವಾಸವಾಗಿರುವವರಿಗೆ ಇದರ ಅನುಭವ ಈಗಾಗಲೇ ಆಗಿರಬಹುದು. ಇಲ್ಲಿದ್ದಾರೆ ದರೋಡೆಕೋರರು
- ಬೆಳಗ್ಗೆ ಎದ್ದಕೂಡಲೇ ಮನೆ ಬಾಗಿಲಿಗೆ ಕಸ ಒಯ್ಯುವ ವ್ಯಾನ್ ಬರುತ್ತದೆ. ತಿಂಗಳ ಮೊದಲ ದಿನವೇ..."ಸಾರ್ ಕಾಫಿಗೆ ಕಾಸ್ ಕೊಡಿ.." ಎಂದು ಅಂಗಾಲಾಚುತ್ತಾರೆ. "ಇಲ್ಲ" ಎಂದರೆ "ನಾಳೆಯಿಂದ ಕಸ ಹಾಕಬೇಡಿ" ಎಂದು ಮುಖಕ್ಕೆ ಹೊಡೆವ ಹಾಗೆ ಹೇಳುತ್ತಾರೆ. ಸರಕಾರಿ ಸಂಬಳ ಅಲ್ಲದೆ ಪ್ರತೀ ಮನೆಯಿಂದ ತಿಂಗಳಿಗೆ ಹತ್ತು ರೂಪಾಯಿ ಹಫ್ತಾ ವಸೂಲಿ ಮಾಡುತ್ತಾರೆ. ಮಾಡುವುದು ಮಾತ್ರ ಕಸ ಸಂಗ್ರಹಿಸುವ ಕೆಲಸ, ಆದರೆ ಎಲ್ಲರಿಗು ಬೆಂಗಳೂರಿನಲ್ಲಿ ಸ್ವಂತ ಮನೆ, ಕಾರು, ಸೈಟು ಎಲ್ಲ ಇದೆ. ನಮಗೇ ಇದೆಲ್ಲ ಇಲ್ಲ.ಇವರೆಲ್ಲ ಮಾಜಿ ಮುಖ್ಯಮಂತ್ರಿ S.M Krishna ನಿಂದ ತಯಾರಾದ ದರೋಡೆಕೋರರು. ಮಂಗಳೂರಿನ ಒಬ್ಬ ಕೈಗಾರಿಕೋದ್ಯಮಿ ಉಚಿತವಾಗಿ ಕಸ ಸಂಗ್ರಹಿಸುವ ಬಗ್ಗೆ ಇದೇ ಮುಖ್ಯಮಂತ್ರಿಗೆ ಮನವಿ ಮಾಡಿದಾಗ ಅವರಿಗೆ ಕೈಕೊಟ್ಟು ಈ ದರೋಡೆಕೋರರ ಕೈಗೆ ಕಸ ಸಂಗ್ರಹಿಸುವ ಕೆಲಸ ಕೊಟ್ಟು ಬೆಂಗಳೂರಿನಲ್ಲಿ ಮತ್ತೊಂದು ದರೋಡೆಕೋರರ ಹುಟ್ಟಿಗೆ ಕಾರಣರಾದರು.
- ಬೆಂಗಳೂರಿನ ಟ್ರಾಫಿಕ್ ಪೋಲಿಸರು ಮತ್ತೊಂದು ರೀತಿಯ ಹಗಲು ದರೋಡೆ. ಸುಮ್ಮನೆ ಸಿಗ್ನಲ್ ಜಂಪ್, ಅದು ಇದು ಒನ್ ವೇ ಎಂದು ಪ್ರತೀ ದಿನಾ ಜನರ ದರೋಡೆ ಮಾಡುವುದೇ ಇವರ ಕಾಯಕವಾಗಿದೆ.
- ಪ್ರತೀ ತಿಂಗಳೂ ಮನೆಗೆ ಒಬ್ಬ ಗೂರ್ಖಾ ಬರುತ್ತಾನೆ. ಕೈಯಲ್ಲಿ ಪ್ರತೀ ಮನೆಯಿಂದ ಸಂಗ್ರಹಿಸಿದ ಹತ್ತು, ಇಪ್ಪತ್ತರ ನೋಟು ತೋರಿಸುತ್ತಾ..."ಸಾಬ್! ಮಾಮೂಲಿ ದೇದೋ...." ಎಂದು ಅರಚುತ್ತಾನೆ. ಇಲ್ಲ ಎಂದರೆ ಗೊಣಗುತ್ತಾ ಹೋಗುತ್ತಾನೆ.
- ಇನ್ನು ಟ್ರಾಫಿಕ್ ಸಿಗ್ನಲ್ ಬಂದರೆ ಈ ಶಿಖಂಡಿ( ಖೋಜಾ)ಗಳ ಕಾಟ. ಕೆಂಪು ಸಿಗ್ನಲ್ ಬರುವುದನ್ನೇ ಕಾಯುತ್ತಿರುವ ಇವರು ಕೂಡಲೇ ದ್ವಿಚಕ್ರ ವಾಹನದವರ ದರೋಡೆಗಿಳಿಯುತ್ತಾರೆ. ಕೊಡದಿದ್ದಲ್ಲಿ, ಮುಖಕ್ಕೆ ಉಗುಳುವುದು, ಶಾಪ ಹಾಕುವುದು, ಕೆಟ್ಟ ಪದ ಉಪಯೋಗಿಸುವುದು...ಮಾಡಿ ಹಣ ಕೀಳುತ್ತಾರೆ.
- ರೇಶನ್ ಅಂಗಡಿಗೆ ಹೋದರೆ ಎಲ್ಲ ಮಿಕ್ಸಿಂಗ್....ಅಕ್ಕಿಯಲ್ಲಿ ಕಲ್ಲು, ತೂಕದಲ್ಲಿ ಮೋಸ, ಬಾಯಿಗೆ ಬಂದ ಬೆಲೆ ಹೇಳಿ ನಮ್ಮನ್ನು ಹಗಲು ದರೋಡೆ ಮಾಡುವುದೇ ಇವರ ಕಾಯಕ.
ಇದಷ್ಟೇ ಅಲ್ಲ......ಇನ್ನೆಷ್ಟೋ ಬಿಟ್ಟು ಹೋಗಿವೆ. ಈ ದರೋಡೆಕೋರರಿಂದ ನಮ್ಮನ್ನು...ಮುಖ್ಯವಾಗಿ ಮಧ್ಯಮವರ್ಗದವರನ್ನು ರಕ್ಷಿಸುವವರಾರು?.........ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ, ನಮ್ಮ ಗೋಳು ಕೇಳುವವರಾರು?.
No comments:
Post a Comment