Sunday, May 04, 2008

ಪ್ರಾದೇಶಿಕ ಭೀತಿವಾದಿಗಳಿಂದ ರಕ್ಷಿಸಿ

ಬೆಂಗಳೂರು ಮೇ ೪: ಇತ್ತೀಚಿನ ಕೆಲ ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದರೆ ಭಾರತವು ಇಂದು ಪ್ರಾದೇಶಿಕ ಭೀತಿವಾದವನ್ನು ಎದುರಿಸುತ್ತಿದೆ ಎಂದೆನಿಸುತ್ತದೆ. ಉದಾಹರಣೆಗೆ ಶಿವಸೇನೆಯ ನಾಯಕ ಬಾಳ್ ಠಾಕ್ರೆ ತನ್ನ ಪತ್ರಿಕೆಯ ಮುಖವಾಣಿಯಲ್ಲಿ ಕನ್ನಡಿಗರ ವಿರುದ್ದ ತನ್ನ ಹೇಳಿಕೆ ನೀಡಿದ್ದಾನೆ. ಇದರಿಂದಲೇ ಶಿವಸೇನೆಯ ನಿಜ ಮುಖವಾಡ ಬಯಲಾಗಿದೆ. ಅದು ತನ್ನ ಹಿಂದುತ್ವದ ಕಿಚ್ಚನ್ನು ಕಳೆದುಕೊಂಡು ಈಗ ಪ್ರಾದೇಶಿಕ ಭೀತಿವಾದವನ್ನು ಹುಟ್ಟುಹಾಕುವತ್ತ ತನ್ನ ಹೆಜ್ಜೆ ಇಟ್ಟಿದೆ. ಕನ್ನಡಿಗರು ಇಂದು ಮಹಾರಾಷ್ಟ್ರದಲ್ಲಿ ಹೋಟೆಲ್ ಉದ್ಯಮದಲ್ಲಿ ತಮ್ಮ ಅಧಿಪತ್ಯವನ್ನು ಉಳಿಸಿಕೊಂಡಿದ್ದಾರೆ.
ಮೊದಲು ಶಿವಸೇನೆಯು ಈ ಹೋಟೆಲ್ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಲಾರಂಭಿಸಿದಾಗ, ಮಂಗಳೂರಿನ ಕೆಲ ಹೋಟೆಲ್ ಉದ್ಯಮಿಗಳು ಒಂದಾಗಿ ಪ್ರತಿಭಟಿಸಿದರು. ಆಗ ಶಿವಸೇನೆಯು ಮುಂಬೈನಲ್ಲಿ ಮೊದಲು ರೌಡಿಯಿಸಂ ಶುರು ಮಾಡಿತು. ತನ್ನ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಹಣವನ್ನು ಈ ತರಹದ ರೌಡಿಯಿಸಂ ನಿಂದ ಪಡೆಯಲಾರಂಭಿಸಿತು. ನಂತರ ಅದಕ್ಕೆ ಪ್ರತಿಯಾಗಿ ಕೆಲ ಮಂಗಳೂರಿನ ಉದ್ಯಮಿಗಳು ಪ್ರತಿ ರೌಡಿಯಿಸಂ ಮಾಡಿದಾಗ ಶಿವಸೇನೆ ಬೆದರಿತು. ಇಲ್ಲಿಂದಲೇ ಮುಂಬೈನಲ್ಲಿ ಮೊದಲು ಭೂಗತ ಲೋಕದ ಹುಟ್ಟಿಗೆ ಶಿವಸೇನೆ ಕಾರಣವಾಯಿತು. ಮತ್ತೆ ತನ್ನ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹಿಂದುತ್ವದ ಮೊರೆ ಹೋಯಿತು. ಈಗ ಅದನ್ನು ಬಿಟ್ಟು ಪ್ರಾದೇಶಿಕ ಭೀತಿವಾದವನ್ನು ಉಂಟುಮಾಡುತ್ತಿದೆ. ಈಗ ಶಿವಸೇನೆಯು ತನ್ನ ನಿಜವಾದ ಬಣ್ಣವನ್ನು ತೋರಿಸುತ್ತಿದೆ. ಅದು ಖಂಡಿತಾ ಭಾರತದ ಸಾರ್ವಭೌಮತೆಯನ್ನು ಬೆಂಬಲಿಸುವುದಿಲ್ಲ. ಅದು ಕೇವಲ ಮರಾಠಿಗರಿಗಾಗಿಯೇ ಇರುವ ಪಕ್ಷ. ತನ್ನ ಸಂಕುಚಿತ ಮನಸ್ಥಿತಿಯಿಂದ ಅದು ಹೊರಬರಲಾಗುತ್ತಿಲ್ಲ. ಈಗ ಪ್ರಾದೇಶಿಕ ಭೀತಿವಾದ ಉಂಟುಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ತನ್ನ ಮಗ ರಾಜ್ ಥಾಕ್ರೆಗೆ ಭಯ ಪಟ್ಟು, ಈ ಥಾಕ್ರೆ ತನ್ನ ಶಿವಸೇನೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಥರ ಹೊಸ ನಾಟಕ ಶುರು ಮಾಡಿದೆ. ಈ ಪ್ರಾದೇಶಿಕ ಭೀತಿವಾದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾಗಳಲ್ಲಿ ಈಗ ಚಲಾವಣೆಯಲ್ಲಿದೆ. ಇಂತಹ ಭೀತಿವಾದಿಗಳ ವಿರುದ್ದ ಜನ ಒಂದಾಗಿ, ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಂತಾಗಬೇಕು. ಈ ಭಾಳ್ ಥಾಕ್ರೆ, ಕರುಣಾನಿಧಿ, ಜಯಲಲಿತ,ವೈಕೋ, ಚಂದ್ರಬಾಬು ನಾಯ್ಡು ಮುಂತಾದ ಪ್ರಾದೇಶಿಕ ಭೀತಿವಾದಿಗಳ ವಿರುದ್ದ ಭಾರತ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಇದು ಕರ್ನಾಟಕವಲ್ಲದೆ ಇತರ ಎಲ್ಲಾ ರಾಜ್ಯಗಳಲ್ಲೂ ಹಬ್ಬಿ, ಏಕತೆಗೆ ಭಂಗ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

5 comments:

ವಿ.ರಾ.ಹೆ. said...

saar namaste, neevu illi ka.ra.ve yannu bembalistira aadre alli shivasene athava MNS na yaake baitidira? navu illi hege KannaDigaru chennagirbeku anta aase paDtivo alli adE tara avaru MaraTiyavru chenagirli anta aase patre tappenu?

ಗುರು [Guru] said...

ಹಲೋ...ಸಾರ್...ಏನ್ ಹೇಳ್ತಿದ್ದೀರಾ?. ನಾವೇನೂ ಶಿವಸೇನೆಯವರ ತರಹ ಕನ್ನಡಿಗರಿಗೆ, ಉತ್ತರ ಭಾರತದವರಿಗೆ ತೊಂದರೆ ಕೊಟ್ಟಿಲ್ಲ. ದೇಶವಿರೋಧಿ ಸಂಘಟನೆಯಾದ ಶಿವಸೇನೆಯನ್ನು ಕರ್ನಾಟಕ ರಕ್ಷಣಾವೇದಿಕೆಗೆ ಹೋಲಿಸಬೇಡಿ. ಕನ್ನಡಿಗರು ತಮ್ಮ ಹಕ್ಕಿಗೆ ಹೋರಾಡುತ್ತೇವೆ ಹೊರತು ಇತರರ ವಿರುದ್ದವಲ್ಲ. ನೀವು ಮರಾಠಿಯವರೇ ಇರಬಹುದು...ಆದರೆ ನಾನು ಕನ್ನಡಿಗ...ವೀರ ಕನ್ನಡಿಗ..ಯಾರಿಗೂ ತಲೆ ತಗ್ಗಿಸುವವನಲ್ಲ...ನಿಮ್ಮ ತಪ್ಪು ಕಲ್ಪನೆಗೆ ನನ್ನ ವಿಷಾದವಿದೆ...

ವಿ.ರಾ.ಹೆ. said...

ತಪ್ಪು ತಿಳ್ಕೋಬೇಡಿ ಗುರುಗಳೆ, ನಾನು ನಮ್ಮ ಕ.ರ.ವೆ ಯನ್ನ ಶಿವಸೇನೆಗೆ ಹೋಲಿಸಲಿಲ್ಲ. ಬರೇ ಪ್ರಾಂತಿವಾದಿ ಹೋರಾಟದ ಬಗ್ಗೆ ಹೋಲಿಕೆ ಮಾಡಿ ಸಂಶಯ ವ್ಯಕ್ತಪಡಿಸಿದ್ದಷ್ಟೆ. ನೀವು ಹೇಳಿದ್ದು ನಿಜ. ನಾವು ಅವರಂತೆ ಬೇರೆಯಾರಿಗೂ ತೊಂದರೆ ಮಾಡಿಲ್ಲ. ನಾನು ಮರಾಠಿಯವನು ಅಂತ ನಿಮಗೆ ಯಾಕನ್ನಿಸ್ತೋ ಏನೋ. ಇರಲಿ. ನಿಮ್ಮ ಕನ್ನಡ, ಕರ್ನಾಟಕ ಅಭಿಮಾನಕ್ಕೆ ನನ್ನಿಂದ ಮೆಚ್ಚುಗೆ, ಗೌರವವಿದೆ. ಸಿರಿಗನ್ನಡಂ ಗೆಲ್ಗೆ !

ಗುರು [Guru] said...

ಬೇಜಾರಾದ್ರೆ ಕ್ಷಮಿಸಿ..ನಾನು ಹೇಳಿದ್ನಲ್ಲಾ...ನಾನು ಸ್ವಲ್ಪ ಖಡಕ್ ಮನುಷ್ಯ ಅಂತ...ಅದಕ್ಕೇ ನನ್ನ ಯಾರೂ ಇಷ್ಟ ಪಡಲ್ಲ. ಇದ್ದಿದ್ದನ್ನು ಇದ್ದಹಾಗೆ ಹೇಳುವುದು ನನ್ನ ಅಭ್ಯಾಸ. ಅದು ಕೆಲವರಿಗೆ ಹಿಡಿಸುವುದಿಲ್ಲ.ಅದಕ್ಕೇ ಅವರು ನನ್ನ ದ್ವೇಷಿಸುತ್ತಾರೆ.....ಹೆಗಡೆಯವರೇ...ನಿಮ್ಮ ಬ್ಲಾಗ್ ಇಲ್ವಾ?...ನಿಮ್ಮ ಅಭಿಮಾನಕ್ಕೆ ವಂದನೆಗಳು.

Anonymous said...

ಗುರು ಅವರೇ,

ಇದ್ದದ್ದನ್ನ ಇದ್ದಹಾಗೆ ಹೇಳೋದು ಒಳ್ಳೇದೇ. ಆದ್ರೆ, ಹೇಳುವ ಭರಾಟೆಯಲ್ಲಿ ವ್ಯತ್ಯಾಸ ಆಗಬಾರದು ಅನ್ನುವದು ವಿಕಾಸರ ಅಬಿಪ್ರಾಯ ಅಷ್ಟೆ. ಈ ಕ.ರಾ.ವೇ. ಎಷ್ಟು ಹೊಲಸಾಗಿದೆ ಅಂದ್ರೆ, ಇವರಲ್ಲಿ ಕೆಲವರಿಗೆ ಪೂರ್ತಿ ಅಂಗ್ಲ ಭಾಷೆಯಲ್ಲಿ ಇರೋ ಬೋರ್ಡುಗಳು ಕಾಣಿಸೋದೆ ಇಲ್ಲ...!!

ಇಂಥವರು ಕ.ರಾ.ವೇ. ಸೇರಿಕೊಂಡು ಅದರ ಮೂಲ ಉದ್ದೇಶವನ್ನೇ ಹಾಳು ಮಾಡುತ್ತಾ ಇದ್ದಾರೆ. ಅವರ ಮಕ್ಕಳು ಅಂಗ್ಲ ಮಾಧ್ಯಮದಲ್ಲಿ ಓದುತ್ತ ಇದ್ದಾರೆ.. ಅಂಥವರಿಗೆ ಧಿಕ್ಕಾರ..

ಆದರೂ ನಿಮ್ಮ ಈ ಪ್ರಯತ್ನ ಸಫಲ ಆಗಲಿ ಎನ್ನುವುದೇ ನಮ್ಮ ಆಶಯ.