Thursday, May 08, 2008

ರಾಷ್ತ್ರಪತಿ ಹುದ್ದೆಯ ತಿಪ್ಪರಲಾಗ ಪ್ರಸಂಗ!!!!!!!!!!!!!!!!!!!!!!!!!

ಬೆಂಗಳೂರು ಮೇ ೦೮: ನಮ್ಮ ದೇಶದ ಅತೀ ದೊಡ್ಡ ದುರವಸ್ಥೆ ನಮ್ಮ ದೇಶದ ರಾಷ್ಟ್ರಪತಿ ಎಂಬ ಹುದ್ದೆ. ಕಿಲುಬು ಕಾಸಿನ ಬೆಲೆ ಇಲ್ಲದ ಈ ಹುದ್ದೆ ನಮ್ಮ ದೇಶಕ್ಕೆ ಏಕೆ ಬೇಕು?.

ಇದ್ದಿದ್ದರಲ್ಲಿ ಡಾ.ಕಲಾಂ ಅವಧಿಯಲ್ಲಿ ಮಾತ್ರ ರಾಷ್ಟ್ರಪತಿ ಎಂಬ ಹುದ್ದೆಗೆ ಸ್ವಲ್ಪ ಬೆಲೆ ಬಂದಿತ್ತು. ಅದೇ ಅವರು ಎರಡನೇ ಬಾರಿಗೆ ಚುನಾಯಿತರಾಗಿದ್ದಲ್ಲಿ ಆ ಹುದ್ದೆಯ ಬೆಲೆ ಇಂದು ಈ ಮಟ್ಟಕ್ಕೆ ಬರುತ್ತಿರಲಿಲ್ಲ. ನಿಜವಾಗಿ ಈ ಪ್ರತಿಭಾ ಪಾಟಿಲ್ (ಬಹಳಷ್ಟು ಮಂದಿಗೆ ಇವರು ಯಾರೆಂದು ಗೊತ್ತಿಲ್ಲ??????) ಬಂದ ಮೇಲೆ ಈ ಸ್ಥಾನದ ಬೆಲೆ ಪಾತಾಳಕ್ಕೆ ಇಳಿಯಿತು. ಒಬ್ಬ ಕೆಲಸಕ್ಕೆ ಬಾರದ ಹೆಂಗಸನ್ನು ನಮ್ಮ ದೇಶದ ಪ್ರಥಮ ಮಹಿಳೆ ಎಂದು ಹೇಗೆ ತಾನೆ ನಮ್ಮ ದೇಶಪ್ರೇಮಿಗಳು ಒಪ್ಪಲು ಸಾಧ್ಯ?.

ಭೇಟಿ ನೆಪದಲ್ಲಿ ಸಂಸಾರ ಸಮೇತರಾಗಿ, ಭಾರತದ ಬಡಜನರ ಹಣದಲ್ಲಿ ವಿದೇಶ ಪರ್ಯಟನೆ ಮಾಡುತ್ತಿರುವ ಈ ನಾಲಾಯಕ್ ಮಹಿಳೆಗೆ ಕಿಂಚಿತ್ತಾದರೂ ನಮ್ಮ ದೇಶದ ಬಗ್ಗೆ , ಜನರ ಬಗ್ಗೆ, ಗೌರವದ ಬಗ್ಗೆ ಕಾಳಜಿ ಇದೆಯೇ?. ತನ್ನ ಜತೆ ನಾಲಾಯಕ್ ಗಂಡ ಹಾಗೂ ಮಗನನ್ನೂ ಜೊತೆಗೆ ಕರೆದುಕೊಂಡು ಹೋಗಿ,(ಅವನು ತನ್ನ ಸ್ವಂತ ಕೆಲಸಕ್ಕಾಗಿ ಸರಕಾರದ ಹಣದಲ್ಲಿ ಹೋಗಿದ್ದ) ದೇಶದ ಖಜಾನೆಯನ್ನು ಖಾಲಿ ಮಾಡುವ ಆಲೋಚನೆಯಲ್ಲಿದ್ದಾಳೆ ಈ ಮಹಿಳೆ.

ಇಂತಹ ಜನರ ವಿರುದ್ದ ಸುಪ್ರೀಂಕೋರ್ಟ್ ಯಾಕೆ ಗಪ್-ಚಿಪ್ ಆಗಿದೆ?......ಮೊದಲೇ ಭ್ರಷ್ಟಾಚಾರಿ ಮಹಿಳೆ.......ಯಾವುದೋ ಆಶ್ರಮ ಕಟ್ಟಲೆಂದು ಜನರಿಂದ ಸಂಗ್ರಹಿಸಿದ ಹಣವನ್ನು ತನ್ನ ಸ್ವಂತ ಕೆಲಸಕ್ಕೆ ಬಳಸಿರುವ ಈ ಮಹಿಳೆಗೆ ಧಿಕ್ಕಾರವಿರಲಿ. ಇವಳಿಗೆ ಬೆಂಬಲ ನೀಡುತ್ತಿರುವ ರಾಜಕಾರಣಿಗಳಿಗೆ ಧಿಕ್ಕಾರವಿರಲಿ. ಆದಷ್ಟು ಬೇಗ ಈ ಬೇಕಾರ್ ಹುದ್ದೆಯನ್ನು ಇಲ್ಲವಾಗಿಸುವುದು ಸೂಕ್ತ.

3 comments:

Anonymous said...

ನಿಮ್ಮ ಅಭಿಪ್ರಾಯ ಒಪ್ಪತಕ್ಕಂಥದ್ದೇ. ಆದರೆ, ನೀವು ಬಳಸಿದ ಭಾಷೆ ಒಗ್ಗಿ ಬರಲಿಲ್ಲ. ಇನ್ನೂ ಪೊಲೈಟ್ ಆಗಿ ಹೇಳಬಹುದಿತ್ತೇನೋ.

ಗಣೇಶ್.ಕೆ

ಗುರು [Guru] said...

ಅದೇ...ಹೇಳಿದ್ನಲ್ಲಾ..ನಾನು ಸ್ವಲ್ಪ ಖಡಕ್ ಮನುಷ್ಯ. ನನಗೆ ಇಷ್ಟವಾದದ್ದನ್ನು ಬರೆಯುತ್ತೇನೆ....ಇನ್ನೊಬ್ಬರ ಇಷ್ಟ ನನಗೆ ಬೇಕಾಗಿಲ್ಲ. ನಾನು ರಾಜಕಾರಣಿಯಲ್ಲ.ಇಂತಹ ರಾಜಕಾರಣಿಗಳ ಹುದ್ದೆಗಳಿಗೆ(ಮುಖ್ಯವಾಗಿ ಸರಕಾರಿ ಹುದ್ದೆಗಳಿಗೆ) ನಾನು ನನ್ನ ಚಪ್ಪಲಿಗೆ ಕೊಡುವ ಬೆಲೆಯನ್ನೂ ಕೊಡುವುದಿಲ್ಲ. ನಿಮ್ಮ ಮನಸ್ಸಿಗೆ ಬೇಸರವಾಗಿರಬಹುದು. ಆದರೆ ನಾನಿರುವುದೇ ಹಾಗೆ....

Anonymous said...

guru avare,

neevu baLasida bhAShe sari ide. lAyakkillada vyaktiyannu nAlAyak ennabahudu. "polite" aagi hELuvudu nAchike, mAna, maryAde iddavarige mAtra. bhraShTa rAjakAraNigalige adellirutte, adara bele Enu annOdu elli gottiratte?

nooru saari uguLidarU mukha orsikoMDu matte mata kELalikke baruttAre ee jana..