Sunday, June 29, 2008

ದೇಶದ್ರೋಹಿಗಳು ನಮ್ಮ ಹಿಂದುಗಳಲ್ಲೇ ಇದ್ದಾರೆ!!!!!!!!!!!!

ಬೆಂಗಳೂರು ಜೂನ್ ೩೦: ಅಣುಬಂಧದ ವಿಚಾರದಲ್ಲಿ ಇಂದು ಲೋಕಸಭೆಯಲ್ಲಿ ಕೋಲಾಹಲವಾಗುತ್ತಿರುವುದು ಕಳವಳದ ವಿಷಯ. ಆದರೆ ಎಡಬಿಡಂಗಿಪಕ್ಷಗಳು ಈ ವಿಷಯದಲ್ಲಿ ದೇಶವಿರೋಧಿ ಭಾವನೆ ತಾಳಿರುವುದು ಶೋಚನೀಯ ಹಾಗೂ ಇದು ಅವುಗಳ ದೇಶಪ್ರೇಮವನ್ನು ಪ್ರಶ್ನಿಸುವ ಒಂದು ಹೆಜ್ಜೆಯಾಗಿದೆ.
ಸದಾ ಚೀನಾ ನಾಯಕರ ಕಾಲು ನೆಕ್ಕುತ್ತಿರುವ ಎಡಬಿಡಂಗಿ ಪಕ್ಷಗಳು ಇಂದು ನಮ್ಮ ದೇಶದ ಆಂತರಿಕ ಭದ್ರತೆಗೇ ಅಪಾಯ ತಂದೊಡ್ಡುತ್ತಿರುವುದು ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಚುನಾವಣಾ ಆಯೋಗ ಈ ಎಡಬಿಡಂಗಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಹಿಡಿಯಬೇಕು. ಏಕೆಂದರೆ ಇವು ರಾಷ್ಟ್ರೀಯ ಪಕ್ಷಗಳಲ್ಲ, ಅಂತರರಾಷ್ಟ್ರೀಯ ಪಕ್ಷಗಳು. ಈ ಎಡಬಿಡಂಗಿ ಪಕ್ಷಗಳು ನಮ್ಮ ರಾಷ್ಟ್ರೀಯ ನಾಯಕರ ಜನ್ಮ ದಿನದಂದು ಅವರಿಗೆ ಕಿಂಚಿತ್ ಗೌರವ ಸಲ್ಲಿಸುವ ಪರಿಪಾಠ ಇಟ್ಟುಕೊಂಡಿಲ್ಲ, ಆದರೆ ತಮ್ಮ ನಾಯಕರಾದ, ಭಾರತದವರೇ ಅಲ್ಲದ ಲೆನಿನ್, ಮಾರ್ಕ್ಸ್ ಮೊದಲಾದ ನಾಯಕರ ಜನ್ಮ ದಿನವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿವೆ.
ಇಂತಹ ದೇಶವಿರೋಧಿ ಶಕ್ತಿಗಳನ್ನು ನಾವು ಇಂದು ಮೊದಲು ಗುಡಿಸಿ ಸಾರಿಸಬೇಕಾಗಿದೆ. ಅಣುಬಂಧ ಜಾರಿಯಾದಲ್ಲಿ ನಮ್ಮ ದೇಶ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಲಿದೆ. ಆದರೆ ಇದನ್ನು ಬೇರೆಯೇ ರೀತಿ ಅರ್ಥೈಸಿಕೊಂಡಿರುವ ಎಡಬಿಡಂಗಿಗಳು ಇದು ಚೀನಾದ ಭದ್ರತೆ ಅಪಾಯ ತಂದೊಡ್ಡಲಿದೆ ಎಂಬ ದೇಶವಿರೋಧಿ ಹೇಳಿಕೆ ನೀಡಿದ್ದಾರೆ. ಇಂತಹವರನ್ನು ನಮ್ಮ ದೇಶದಿಂದ ಒದ್ದೋಡಿಸಬೇಕಾಗಿದೆ.
NRI ಎಂದರೆ Non Resident Indian ಇವರು ದೇಶಪ್ರೇಮಿಗಳು........ಆದರೆ
RNI ಎಂದರೆ Resident Non Indians ಇವರು ದೇಶದ್ರೋಹಿಗಳು...(ಈ ಜಾತಿಗೆ ಸೇರಿದವರು ಈ ಎಡಬಿಡಂಗಿ ಪಕ್ಷದವರು).

ಇಂತಹ ಖದೀಮರನ್ನು ಯಾಕೆ ದೇಶದ್ರೋಹದ ಆಪಾದನೆ ಮೇಲೆ ಬಂಧಿಸಬಾರದು?

3 comments:

Anonymous said...

ಇಂತಹ ದೇಶದ್ರೋಹಿಗಳನ್ನು ಈ ದೇಶದಿಂದ ಒದ್ದೋಡಿಸಬೇಕು. ಇವರು ಭಾರತದಲ್ಲಿದ್ದುಕೊಂಡು ಚೀನಾದ ಏಜೆಂಟರಂತೆ ವರ್ತಿಸುವುದರ ಹಿಂದೆ ಇರುವ ರಹಸ್ಯವನ್ನು ತನಿಖೆಗೊಳಪಡಿಸಬೇಕು. ಈ ಎಡಬಿಡಂಗಿಗಳಿಂದ ನಮ್ಮ ದೇಶಕ್ಕೇ ಅಪಾಯ.

ಗುರು [Guru] said...

ಹರಿದಾಸರೇ.....ಆದರೆ ಈ ದೇಶದ್ರೋಹಿಗಳಿಗೆ ಬೆಂಬಲ ನೀಡುವ ಜನಕ್ಕೆ ಮೊದಲು ಪಾಠ ಕಲಿಸಬೇಕು. ಆ ಜನಗಳೇ ನಿಜವಾದ ದೇಶದ್ರೋಹಿಗಳು.

ಕುಕೂಊ.. said...

ಎಡಬಿಡಂಗಿಗಳ ದೇಶ ದ್ರೋಹ ಒಪ್ಪುತ್ತೇನೆ ಆದರೆ ಅಣು ಬಂಧದಿಂದ ನಾವು ಹೇಗೆ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತೇವೆ? ನನ್ನ ನೇರ ಉತ್ತರ ಅಣುಬಂಧ ಅಲ್ಲ ಅದು ಅಮೇರಿಕದಿಂದ ಭಾರತದ ಬಂಧನ. ಅಣು ಬಂಧಕ್ಕೆ ಒಪ್ಪಿಕೊಂಡರೆ ನಮ್ಮನ್ನು ನಾವು ಗುಲಾಮಿ ಸಂಕೋಲೆಗೆ ಸಿಕ್ಕಿಸಿಕೊಂಡಂತೆ. ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ ಅಷ್ಟೆಯ. ಅಮೇರಿಕದ ಬಗ್ಗೆ ನೀವು ತೋರಿರುವ ದೋರಣೆ ಖಂಡಿತ ನಮ್ಮ ಸ್ವಾಭಿಮಾನಕ್ಕೆ ಅಪಾಯಕಾರಿ. ಎಡಬಿಡಂಗಿದಳ ವಿರೋದಿ ದೋರಣೆ ಖಂಡಿತ ಕಾಕತಾಳಿಯ ಇದಂತು ಸತ್ಯ.
ಸ್ವಾಮಿ